'ನನ್ನ ಸಹೋದರ' ಎನ್ನುತ್ತಾ ಅಗಲಿದ ಕಾರ್ಡಿನಲ್ ಎಡುವಾರ್ಡೋ ಮೆನಿಕೆಲ್ಲಿ ಅವರನ್ನು ಸ್ಮರಿಸಿಕೊಂಡ ಪೋಪ್ ಲಿಯೋ XIV
ಇಟಲಿಯ ಅಂಕೋನಾ-ಒಸಿಮೋ ಮಹಾಧರ್ಮಕ್ಷೇತ್ರದ ನಿವೃತ್ತ ಮಹಾಧರ್ಮಾಧ್ಯಕ್ಷರಾಗಿದ್ದ ಕಾರ್ಡಿನಲ್ ಎಡುವಾರ್ಡೋ ಮೆನಿಕೆಲ್ಲಿ ಅವರು ನಿಧನರಾಗಿರುವ ಹಿನ್ನೆಲೆ, ಪೋಪ್ ಲಿಯೋ XiV ಅವರು ಅವರನ್ನು 'ನನ್ನ ಸಹೋದರ' ಎಂದು ಹೇಳುತ್ತಾ ನೆನಪಿಸಿಕೊಂಡಿದ್ದಾರೆ.
ವರದಿ: ವ್ಯಾಟಿಕನ್ ನ್ಯೂಸ್
ಇಟಲಿಯ ಅಂಕೋನಾ-ಒಸಿಮೋ ಮಹಾಧರ್ಮಕ್ಷೇತ್ರದ ನಿವೃತ್ತ ಮಹಾಧರ್ಮಾಧ್ಯಕ್ಷರಾಗಿದ್ದ ಕಾರ್ಡಿನಲ್ ಎಡುವಾರ್ಡೋ ಮೆನಿಕೆಲ್ಲಿ ಅವರು ನಿಧನರಾಗಿರುವ ಹಿನ್ನೆಲೆ, ಪೋಪ್ ಲಿಯೋ XiV ಅವರು ಅವರನ್ನು 'ನನ್ನ ಸಹೋದರ' ಎಂದು ಹೇಳುತ್ತಾ ನೆನಪಿಸಿಕೊಂಡಿದ್ದಾರೆ.
ಪೋಪ್ ಲಿಯೋ XIV ಅವರು ತಮ್ಮ ಸಂತಾಪವನ್ನು ಸೂಚಿಸುತ್ತಾ ಪ್ರಸ್ತುತ ಅಂಕೋನಾ-ಒಸಿಮೋ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಎಂಜೆಲೋ ಸ್ಪಿನಾ ಅವರಿಗೆ ಟೆಲಿಗ್ರಾಂ ಸಂದೇಶವನ್ನು ಕಳುಹಿಸಿದ್ದಾರೆ.
ಕಾರ್ಡಿನಲ್ ಎಡುವಾರ್ಡೋ ಮೆನಿಕೆಲ್ಲಿ ಅವರ ನಿಧನವು ಧರ್ಮಸಭೆಗೆ ವಿಶೇಷವಾಗಿ ಅವರು ಪ್ರತಿನಿಧಿಸುತ್ತಿದ್ದ ಧರ್ಮಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಮ್ಮ ಟೆಲಿಗ್ರಾಂ ಸಂದೇಶದಲ್ಲಿ ಹೇಳಿದ್ದಾರೆ ಹಾಗೂ ಅವರ ಆತ್ಮಕ್ಕೆ ಶಾಂತಿಯನ್ನು ಕೋರಿದ್ದಾರೆ.
22 ಅಕ್ಟೋಬರ್ 2025, 16:57