ಹುಡುಕಿ

ಉತ್ತರ ಅಮೇರಿಕಾದ ಕಥೋಲಿಕ ಪುರುಷ ಸಮ್ಮೇಳನಗಳಿಗೆ ಪೋಪ್: ಸದಾ ಬಡವರಿಗೆ ಹತ್ತಿರವಾಗಿರಿ

ಉತ್ತರ ಅಮೆರಿಕದಲ್ಲಿ ಕಥೋಲಿಕ ಪುರುಷರು ಸಮ್ಮೇಳನವನ್ನು ಹಮ್ಮಿಕೊಂಡಿರುವ ಹಿನ್ನೆಲೆ ವಿಶ್ವಗುರು ಲಿಯೋ ಅವರು ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯತ್ರೋ ಪಾರೋಲಿನ್ ಮೂಲಕ ತಮ್ಮ ಸಂದೇಶವನ್ನು ಟೆಲಿಗ್ರಾಂನಲ್ಲಿ ಕಳುಹಿಸಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಉತ್ತರ ಅಮೆರಿಕದಲ್ಲಿ ಕಥೋಲಿಕ ಪುರುಷರು ಸಮ್ಮೇಳನವನ್ನು ಹಮ್ಮಿಕೊಂಡಿರುವ ಹಿನ್ನೆಲೆ ವಿಶ್ವಗುರು ಲಿಯೋ ಅವರು ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯತ್ರೋ ಪಾರೋಲಿನ್ ಮೂಲಕ ತಮ್ಮ ಸಂದೇಶವನ್ನು ಟೆಲಿಗ್ರಾಂನಲ್ಲಿ ಕಳುಹಿಸಿದ್ದಾರೆ.

ಈ ಸಂದೇಶದಲ್ಲಿ ವಿಶ್ವಗುರುಗಳು ಇದರಲ್ಲಿ ಭಾಗವಹಿಸುತ್ತಿರುವ ಎಲ್ಲರಿಗೂ ಶುಭಾಶಯಗಳು ಹಾಗೂ ಇಲ್ಲಿ ಅವರೆಲ್ಲರೂ ಅವರ ಕುಟುಂಬಗಳಿಗೆ ಯೇಸುವಿನ ಪ್ರೀತಿಯನ್ನು ತರುವ ಅಭಿಲಾಷೆಯನ್ನು ನವೀಕರಿಸುತ್ತಿದ್ದಾರೆ ಹಾಗೂ ಐಕ್ಯತೆ ಸಹಾನುಭೂತಿ ಹಾಗೂ ಇತರರಗೆ ಇರುವ ಗೌರವದಿಂದ ವಿಶೇಷವಾಗಿ ಬಡವರನ್ನು ಹಾಗೂ ನಿರ್ಗತಿಕರನ್ನು ನೆನಪಿನಲ್ಲಿಟ್ಟುಕೊಂಡು ಇದನ್ನು ದೃಢೀಕರಿಸುತ್ತಿದ್ದಾರೆ ಎಂದು ಹೇಳಿದರು.

ಈ ಸಮ್ಮೇಳನಗಳು ಅಮೆರಿಕದದ್ಯಂತ ಪ್ರತಿ ವರ್ಷ ಹಮ್ಮಿಕೊಳ್ಳುವ ಪ್ರಾರ್ಥನೆ ಚಿಂತನೆ ಹಾಗೂ ಇನ್ನಿತರ ಆಧ್ಯಾತ್ಮಿಕ ಕೂಟಗಳು ಸಾವಿರಾರು ಜನರಿಗೆ ವಿಶೇಷವಾಗಿ ಯುವ ಜನತೆಗೆ ಒಂದು ಮಾದರಿಯಾಗಿದೆ ಎಂದು ಹೇಳುತ್ತಾರೆ. ಇದರೊಂದಿಗೆ ಯುವಜನತೆಯು ಪ್ರಭುವಿನೊಂದಿಗೆ ಒಂದು ವಿಶೇಷ ಸಂಬಂಧವನ್ನು ರೂಪಿಸಿಕೊಳ್ಳಬಹುದು ಎಂದು ಹೇಳುತ್ತಾರೆ.

ಈ ಸಮ್ಮೇಳನದಲ್ಲಿ ಬಲಿ ಪೂಜೆ ಪಾಪವಿತನೇ ಆರಾಧನೆ ಹಾಗೂ ಇನ್ನಿತರ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

18 ಅಕ್ಟೋಬರ್ 2025, 16:57