ಹುಡುಕಿ

ತಮ್ಮ ಮೊದಲ ಪ್ರೇಷಿತ ಪರಿಪತ್ರ 'ದಿಲೇಶಿ ತೆ' ಗೆ ಸಹಿ ಮಾಡಿದ ಪೋಪ್ ಲಿಯೋ XIV

ವ್ಯಾಟಿಕನ್ ಮಾಧ್ಯಮ ಕಚೇರಿಯು ಪೋಪ್ ಲಿಯೋ XIV ಅವರು ತಮ್ಮ ಪ್ರಪ್ರಥಮ ಪ್ರೇಷಿತ ಪರಿಪತ್ರ 'ದಿಲೇಶಿ ತೆ' ಅನ್ನು ಪೂರ್ಣಗೊಳಿಸಿ, ಅದಕ್ಕೆ ಸಹಿ ಹಾಕಿದ್ದಾರೆ ಎಂದು ಪ್ರಕಟಿಸಿದೆ. ಗುರುವಾರ, ಅಕ್ಟೋಬರ್ 9 ರಂದು ಇದನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿಯನ್ನು ನೀಡಿದೆ.

ವರದಿ: ವ್ಯಾಟಿಕನ್ ನ್ಯೂಸ್

ವ್ಯಾಟಿಕನ್ ಮಾಧ್ಯಮ ಕಚೇರಿಯು ಪೋಪ್ ಲಿಯೋ XIV ಅವರು ತಮ್ಮ ಪ್ರಪ್ರಥಮ ಪ್ರೇಷಿತ ಪರಿಪತ್ರ 'ದಿಲೇಶಿ ತೆ' (ನಾನು ನಿಮ್ಮನ್ನು ಪ್ರೀತಿಸಿದ್ದೇನೆ) ಅನ್ನು ಪೂರ್ಣಗೊಳಿಸಿ, ಅದಕ್ಕೆ ಸಹಿ ಹಾಕಿದ್ದಾರೆ ಎಂದು ಪ್ರಕಟಿಸಿದೆ. ಗುರುವಾರ, ಅಕ್ಟೋಬರ್ 9 ರಂದು ಇದನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿಯನ್ನು ನೀಡಿದೆ.

ವ್ಯಾಟಿಕನ್ ರಾಜ್ಯ ಕಾರ್ಯದರ್ಶಿತ್ವದ ಸಾಮಾನ್ಯ ಆಡಳಿತದ ಪೂರಕ ಉಸ್ತುವಾರಿಯಾಗಿರುವ ಆರ್ಚ್'ಬಿಷಪ್ ಎಡ್ಗರ್ ಪೆನ್ಹಾ ಪರ್ರಾ ಅವರ ಸಮ್ಮುಖದಲ್ಲಿ ಪೋಪ್ ಲಿಯೋ ನೂತನ ಪ್ರೇಷಿತ ಪರಿಪತ್ರ 'ದಿಲೇಶಿ ತೆ' (ನಾನು ನಿಮ್ಮನ್ನು ಪ್ರೀತಿಸಿದ್ದೇನೆ) ಗೆ ಇಂದು ಅಸಿಸ್ಸಿಯ ಸಂತ ಫ್ರಾನ್ಸಿಸ್ ಅವರ ಹಬ್ಬದಂದು ಸಹಿಯನ್ನು ಹಾಕಿದ್ದಾರೆ.

ಗುರುವಾರ, ಅಕ್ಟೋಬರ್ 9 ರಂದು ಇದನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ಮಾಹಿತಿಯನ್ನು ನೀಡಿದೆ.

04 ಅಕ್ಟೋಬರ್ 2025, 17:33