ಹುಡುಕಿ

ಸುವಾರ್ತಾ ಪ್ರಸಾರ ಕಾರ್ಯದ ದೈವಕರೆಯ ಕುರಿತು ಜಾಗೃತಿಯನ್ನು ನವೀಕರಿಸಬೇಕು

ವರದಿ: ವ್ಯಾಟಿಕನ್ ನ್ಯೂಸ್

ವಲಸಿಗರು ಹಾಗೂ ಸುವಾರ್ತಾ ಪ್ರಸಾರ ಕಾರ್ಯಗಳ ಜ್ಯೂಬಿಲಿಯ ಪ್ರಯುಕ್ತ ಇಂದು ಪೋಪ್ ಲಿಯೋ XIV ಅವರು ಬಲಿಪೂಜೆಯನ್ನು ವ್ಯಾಟಿಕನ್ ನಗರದ ಸಂತ ಪೇತ್ರರ ಚೌಕದಲ್ಲಿ ಅರ್ಪಿಸಿದ್ದಾರೆ. ಈ ಸಂದರ್ಭದಲ್ಲಿ ಶುಭಸಂದೇಶದ ಸಂತೋಷ ಹಾಗೂ ಸಮಾಧಾನವನ್ನು ಎಲ್ಲರಿಗೂ ತರುವ ಹಿನ್ನೆಲೆಯಲ್ಲಿ ಸುವಾರ್ತಾ ಪ್ರಸಾರ ಕಾರ್ಯದ ದೈವಕರೆಯನ್ನು ನವೀಕರಿಸಬೇಕು ಎಂದು ಹೇಳಿದ್ದಾರೆ. ವಿಶೇಷವಾಗಿ ಈ ಸಂದರ್ಭದಲ್ಲಿ ನಾವು ನಮ್ಮ ವಲಸಿಗ ಸಹೋದರ-ಸಹೋದರಿಯರನ್ನು ನಾವು ನೆನಪಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಸುಮಾರು 40 ಸಾವಿರ ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದ ವಿಶ್ವಗುರುಗಳು ತಮ್ಮ ಪ್ರಭುದನೆಯಲ್ಲಿ ಸುವಾರ್ತಾ ಪ್ರಸಾರ ದೈವಿಕರೇ ಹಾಗೂ ನಮ್ಮ ವಲಸಿಗ ಸಹೋದರ ಸಹೋದರಿಯರು ಎಂಬ ವಿಷಯದ ಕುರಿತು ತಮ್ಮ ಮಾತುಗಳನ್ನು ಹಂಚಿಕೊಂಡರು.

ಧರ್ಮಸಭೆ ಸುವಾರ್ತಾ ಪ್ರಸಾರ ಕಾರ್ಯಗಳನ್ನು ಕೈಗೊಳ್ಳುವುದು ಪ್ರಭುವಿನ ಶುಭ ಸಂದೇಶವನ್ನು ಎಲ್ಲರಿಗೂ ತರುವ ಮೂಲಕ ಅವರಿಗೆ ಸಂತೋಷ ಹಾಗೂ ಸಂತಾನವನ್ನು ನೀಡುವುದು ಇದರ ಉದ್ದೇಶವಾಗಿದೆ ಎಂದು ಅವರು ಹೇಳಿದರು. ಹೀಗೆ ಶುಭ ಸಂದೇಶವನ್ನು ಸಾರುವಾಗ ನಾವು ನಮ್ಮ ವಲಸಿಗ ಸಹೋದರ ಸಹೋದರಿಯರನ್ನು ಹಿಂದೆ ಬಿಡಬಾರದು ಎಂದು ಅವರು ಹೇಳಿದರು.

ಅಂತಿಮವಾಗಿ ವಿಶ್ವಗುರು ಲಿಯೋ ಅವರು ನಾವೆಲ್ಲರೂ ಒಂದೇ ಧರ್ಮಸಭೆಯಾಗಿ ಜುಬಿಲಿ ವರ್ಷದಲ್ಲಿ ಒಟ್ಟಾಗಿ ಪಯಣಿಸಬೇಕು ಹಾಗೂ ಆ ಮೂಲಕ ಪ್ರಭುವಿನ ವಾಗ್ದಾನಗಳನ್ನು ಪೂರೈಸುವ ದೈವ ಜನರಾಗಬೇಕು ಎಂದು ಹೇಳಿದರು.

05 ಅಕ್ಟೋಬರ್ 2025, 15:07