ಪೌಲಿನ್ ಭಗಿನಿಯರಿಗೆ ಪೋಪ್: ನಿಮ್ಮ ಅಮೂಲ್ಯ ಕಾರ್ಯವನ್ನು ಭಾರಗಳು ನಿಲ್ಲಿಸದಿರಲಿ
ವರದಿ: ವ್ಯಾಟಿಕನ್ ನ್ಯೂಸ್
ಡಾಟರ್ಸ್ ಆಫ್ ಸೇಂಟ್ ಪೌಲ್ ಧಾರ್ಮಿಕ ಸಭೆಯ ಭಗಿನಿಯರನ್ನು ಉದ್ದೇಶಿಸಿ ಮಾತನಾಡಿರುವ ಪೋಪ್ ಲಿಯೋ ಅವರು 'ಸಂತ ಪೌಲರ ಕಾರ್ಯ ಅತ್ಯಂತ ಅಮೂಲ್ಯವಾದುದು, ಆದುದರಿಂದ ಉತ್ಸಾಹದಿಂದ ಬಿಡುವಿಲ್ಲದೆ ಅನವರತ ಕ್ರಿಸ್ತರ ಸೇವೆಯನ್ನು ಮಾಡಿದ ಸಂತ ಪೌಲರಿಂದ ಸ್ಪೂರ್ತಿಯನ್ನು ಪಡೆದುಕೊಳ್ಳಿ' ಎಂದು ಅವರಿಗೆ ಕಿವಿಮಾತನ್ನು ಹೇಳಿದ್ದಾರೆ.
ದೇವರ ವಾಕ್ಯವನ್ನು ಘೋಷಿಸಿ ಸಾರುವುದು ಹಾಗೂ ಶುಭ ಸಂದೇಶಕ್ಕಾಗಿ ಬದ್ಧತೆಯಿಂದ ಯೇಸುಕ್ರಿಸ್ತರ ಹೆಜ್ಜೆಗಳಲ್ಲಿ ನಡೆಯುವುದು, ಶುಭ ಸಂದೇಶ ಕಾರ್ಯದಲ್ಲಿ ದೇವರ ಸಾಧನಗಳಾಗುವುದು ಹಾಗೂ ಶುಭ ಸಂದೇಶದ ಭಾಷೆಯಾಗುವುದು - ಇವೆಲ್ಲವೂ ನಿಮ್ಮ ಸೇವಾಕಾರ್ಯದ ಹೃದಯದಲ್ಲಿವೆ ಎಂದು ಡಾಟರ್ಸ್ ಆಫ್ ಸೈಂಟ್ ಪೌಲ್ ಸಭೆಯ ಧಾರ್ಮಿಕ ಭಗಿನಿಯರಿಗೆ ವಿಶ್ವಗುರು ಲಿಯೋ ಅವರು ಕಿವಿ ಮಾತನ್ನು ಹೇಳಿದ್ದಾರೆ.
ತಮ್ಮ ಸಾರ್ವತ್ರಿಕ ಸಭೆಗಾಗಿ ರೋಮ್ ನಗರಕ್ಕೆ ಆಗಮಿಸಿರುವ ಈ ಧಾರ್ಮಿಕ ಸಭೆಯ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಾ ವಿಶ್ವಗುರು ಲಿಯೋ ಅವರು ಈ ಮಾತುಗಳನ್ನು ಹೇಳಿದ್ದಾರೆ.
ಈ ಭಗಿನಿಯರ ಗುಂಪಿನಲ್ಲಿ ವಿವಿಧ ದೇಶಗಳಿಂದ ಬಂದಿರುವ ಭಗಿನಿಯರಿದ್ದು ಅವರೆಲ್ಲರೂ ವಿವಿಧ ಸಾಂಸ್ಕೃತಿಕ ಭಾಷೆಕ ಹಾಗೂ ಸಾಮಾಜಿಕ ಹಿನ್ನೆಲೆಗಳಿಂದ ಬಂದವರಾಗಿದ್ದಾರೆ.
ನಿಮ್ಮ ಕರೆ ಹಾಗೂ ಸೇವಾ ಕಾರ್ಯ ಪ್ರಭುವಿನಿಂದ ಬಂದಿದೆ ಇದನ್ನು ನಾವು ಎಂದಿಗೂ ಮರೆಯಬಾರದು ಎಂದು ಹೇಳಿದ ವಿಶ್ವಗುರು ಲಿಯೋ ಅವರು ನಾವು ನಮ್ಮೆಲ್ಲಾ ಪ್ರತಿಭೆಗಳನ್ನು ದೇವರ ವಾಕ್ಯವನ್ನು ಸಾರುವುದಕ್ಕಾಗಿ ವಿನಿಯೋಗಿಸಬೇಕು ಎಂದು ಹೇಳಿದ್ದಾರೆ. ನಮ್ಮೆಲ್ಲಾ ಸೇವಕಾರ್ಯಗಳ ಪ್ರಮುಖ ವ್ಯಕ್ತಿ ಪವಿತ್ರಾತ್ಮ ರಾಗಿದ್ದಾರೆ ಅವರೇ ನಮ್ಮನ್ನು ಮುನ್ನಡೆಸುತ್ತಾರೆ, ನಮ್ಮ ಪ್ರತಿಭೆಗಳನ್ನು ಇಮ್ಮಡಿಗೊಳಿಸುತ್ತಾರೆ ಹಾಗೂ ಸದಾ ನಮ್ಮ ಕಾರ್ಯದಲ್ಲಿ ನಮ್ಮೊಡನೆ ಇರುತ್ತಾರೆ, ನಮ್ಮ ಹೃದಯಗಳನ್ನು ಪ್ರಜ್ವಲಿಸುತ್ತಾರೆ ಎಂದು ಪೋಪ್ ಹೇಳಿದರು.
ಅಂತಿಮವಾಗಿ ವಿಶ್ವಗುರು ಲಿಯೂ ಅವರು ಭಗಿನಿಯರಿಗಾಗಿ ಪ್ರಾರ್ಥಿಸುವ ಭರವಸೆಯನ್ನಿತ್ತರು ಹಾಗೂ ಅವರ ಎಲ್ಲಾ ಕೆಲಸ ಕಾರ್ಯಗಳನ್ನು ಪ್ರೇಷಿತರ ರಾಣಿ ಮಾತೆ ಮರಿಯಮ್ಮನವರಿಗೆ ಅರ್ಪಿಸಿದರು.
