ಬುರುಂಡಿ ಭಕ್ತಾಧಿಗಳಿಗೆ ಪೋಪ್: ಉತ್ತಮ ಜಗತ್ತಿಗಾಗಿ ಭರವಸೆಯನ್ನು ಜೀವಂತವಾಗಿರಿಸಿಕೊಳ್ಳಿ
ವರದಿ: ವ್ಯಾಟಿಕನ್ ನ್ಯೂಸ್
ಬುರುಂಡಿಯಲ್ಲಿ ೨೦೧೩ ರಲ್ಲಿ ಕೊಲೆಗೀಡಾದ ಪ್ರೇಷಿತ ರಾಯಭಾರಿ ಮೊನ್ಸಿಜ್ಞೊರ್ ಕರ್ಟ್ನಿ ಅವರ ಅಭಿಮಾನಿಗಳ ಸಂಘದ ಸದಸ್ಯರುಗಳನ್ನು ಪೋಪ್ ಲಿಯೋ XIV ಅವರು ಇಂದು ಭೇಟಿ ಮಾಡಿದ್ದಾರೆ.
ಇಂದು ತಮ್ಮ ಸಾರ್ವಜನಿಕ ಭೇಟಿಗೂ ಮುಂಚಿತವಾಗಿ ಪೋಪ್ ಲಿಯೋ XIV ಅವರು ಕೊಲೆಗೀಡಾದ ಪ್ರೇಷಿತ ರಾಯಭಾರಿ ಮೊನ್ಸಿಜ್ಞೊರ್ ಕರ್ಟ್ನಿ ಅವರ ಅಭಿಮಾನಿಗಳ ಸಂಘದ ಸದಸ್ಯರುಗಳನ್ನು ಪೋಪ್ ಲಿಯೋ XIV ಅವರು ಇಂದು ಭೇಟಿ ಮಾಡಿದ್ದಾರೆ.
ಬುರುಂಡಿಯ ರಾಷ್ಟ್ರೀಯ ಸಿವಿಲ್ ಯುದ್ಧದ ಸಂದರ್ಭದಲ್ಲಿ ಅಂದಿನ ಪ್ರೇಷಿತ ರಾಯಭಾರಿಯಾಗಿದ್ದ ಆರ್ಚ್'ಬಿಷಪ್ ಮೈಕೆಲ್ ಏಡನ್ ಕರ್ಟ್ನಿ ಅವರು ಕೊಲೆಗೀಡಾದರು. ಅವರ ನನೆನಪಿನ ನಿಮಿತ್ತ, ಅವರ ಅಭಿಮಾನಿಗಳು ರೋಮ್ ನಗರಕ್ಕೆ ಜ್ಯೂಬಿಲಿಯನ್ನು ಆಚರಿಸಿಲು ಬಂದಿದ್ದಾರೆ.
ಬುರುಂಡಿಯಲ್ಲಿ ದುರ್ಬಲರಿಗೆ ತಮ್ಮನ್ನು ಅರ್ಪಿಸಿಕೊಂಡ ಮತ್ತು "ಶಾಂತಿಗಾಗಿ ತಮ್ಮ ಪ್ರಾಣವನ್ನು ಅರ್ಪಿಸಿಕೊಂಡ" ಆರ್ಚ್‌ಬಿಷಪ್ ಕರ್ಟ್ನಿಯ ಗೌರವಾರ್ಥವಾಗಿ ಅವರು ಮಾಡಿದ ಕೆಲಸಕ್ಕಾಗಿ ಪವಿತ್ರ ತಂದೆ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು. "ನೀವು ಅವರ ಸ್ಮರಣಾರ್ಥವಾಗಿ, ಬುರುಂಡಿಯಲ್ಲಿ ಪೋಪ್‌ಗೆ ಹತ್ತಿರವಿರುವ ಕುಟುಂಬವಾಗಿದ್ದೀರಿ, ಇದು ಕ್ರಿಸ್ತನ ಹೆಸರಿನಲ್ಲಿ ಬಡವರು ಮತ್ತು ಚಿಕ್ಕವರ ನಡುವೆ ಮಿಷನ್‌ನಲ್ಲಿರಲು ಬಯಸುತ್ತದೆ." ಎಂದು ಪೋಪ್ ಅವರಿಗೆ ಹೇಳಿದರು.
