ಸಾರ್ವಜನಿಕ ಭೇಟಿಯಲ್ಲಿ ಪೋಪ್: ಯಾವುದೇ ಕೋಪವಿಲ್ಲದೆ ದೇವರು ಕ್ಷಮಿಸುತ್ತಾರೆ

ಈ ವಾರದ ಸಾರ್ವಜನಿಕ ಭೇಟಿಯಲ್ಲಿ ಪೋಪ್ ಲಿಯೋ ಅವರು ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ದೇವರು ಯಾವುದೇ ಕೋಪವಿಲ್ಲದೆ ನಮ್ಮನ್ನು ಕ್ಷಮಿಸುತ್ತಾರೆ ಹಾಗೂ ನಮ್ಮನ್ನು ಮೇಲೆತ್ತುತ್ತಾರೆ ಎಂದು ಹೇಳಿರುವ ಅವರು ಗಾಯಗಳಿಂದ ಹೊರಬಂದು ನಾವು ಕ್ರಿಸ್ತರ ಮಾದರಿಯನ್ನು ಅನುಸರಿಸಬೇಕು ಎಂದು ಹೇಳಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಈ ವಾರದ ಸಾರ್ವಜನಿಕ ಭೇಟಿಯಲ್ಲಿ ಪೋಪ್ ಲಿಯೋ ಅವರು ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ದೇವರು ಯಾವುದೇ ಕೋಪವಿಲ್ಲದೆ ನಮ್ಮನ್ನು ಕ್ಷಮಿಸುತ್ತಾರೆ ಹಾಗೂ ನಮ್ಮನ್ನು ಮೇಲೆತ್ತುತ್ತಾರೆ ಎಂದು ಹೇಳಿರುವ ಅವರು ಗಾಯಗಳಿಂದ ಹೊರಬಂದು ನಾವು ಕ್ರಿಸ್ತರ ಮಾದರಿಯನ್ನು ಅನುಸರಿಸಬೇಕು ಎಂದು ಹೇಳಿದ್ದಾರೆ.

ಕ್ರಿಸ್ತರ ಪುನರುತ್ಥಾನವೇ ನಮ್ಮ ಭರವಸೆಯ ಮೂಲವಾಗಿದೆ ಎಂದು ಹೇಳಿದ ವಿಶ್ವಗುರು ಲಿಯೋ ಅವರು ತಮ್ಮ ವಾರದ ಸಾರ್ವಜನಿಕ ಭೇಟಿಯಲ್ಲಿ ಯೇಸುಕ್ರಿಸ್ತರು ನಮ್ಮ ಭರವಸೆ ಎಂಬ ಕುರಿತು ಧರ್ಮೋಪದೇಶವನ್ನು ಮುಂದುವರಿಸಿದರು. 

ನಮ್ಮ ವಿಶ್ವಾಸದ ಕೇಂದ್ರವು ಹಾಗೂ ನಮ್ಮ ಭರವಸೆಯ ಮೂಲವೂ ಯೇಸುಕ್ರಿಸ್ತರ ಪುನರುತ್ಥಾನದಲ್ಲಿ ನೆಲೆಗೊಂಡಿದೆ ಎಂದು ವಿಶ್ವಗುರು ಪೋಪ್ ಲಿಯೊ ಅವರು ಹೇಳಿದರು. 

ಯೇಸುಕ್ರಿಸ್ತರ ಪುನರುತ್ಥಾನ ಎಂಬುವುದು ಕೇವಲ ವಿಜಯೋತ್ಸವವಲ್ಲ ಅಥವಾ ತನ್ನ ವೈರಿಗಳ ವಿರುದ್ಧದ ದ್ವೇಷ ಸಾಧನೆ ಅಲ್ಲ ಬದಲಿಗೆ ಹೇಗೆ ನಿಜವಾದ ಪ್ರೀತಿ ಎಂಬುದು ಸಾಕಷ್ಟು ಅಡೆತಡೆಗಳ ನಡುವೆಯೂ ಸಹ ಮತ್ತೆ ಎದ್ದು ಬಂದು ತನ್ನ ಪಯಣವನ್ನು ಮುಂದುವರಿಸುತ್ತದೆ ಎಂಬುದರ ಸುಮಧುರ ಹಾಗೂ ಸುಂದರ ಪ್ರತೀಕವಾಗಿದೆ ಎಂದು ಪೋಪ್ ಹೇಳಿದರು.

ನಮ್ಮ ಮನೋಭಾವ ಹಾಗೂ ದೇವರ ಮನೋಭಾವವೆಂಬುದು ಅತ್ಯಂತ ವಿಭಿನ್ನವಾಗಿದೆ. ಯಾರಾದರೂ ನಮಗೆ ಕೆಡುಕನ್ನು ಮಾಡಿದರೆ ನಾವು ಅವರ ಮೇಲೆ ಕೋಪಗೊಳ್ಳುತ್ತೇವೆ ಹಾಗೂ ಮತ್ತೆ ಅವರಿಗೆ ಕೆಡುಕನ್ನು ಮಾಡಲು ಇಚ್ಚಿಸುತ್ತೇವೆ. ಆದರೆ ದೇವರ ಕುಮಾರರಾದ ಏಸುಕ್ರಿಸ್ತರು ಪಾತಾಳಕ್ಕೆ ಇಳಿದು ಮೇಲೆದ್ದು ಬಂದರೂ ಸಹ ಅವರು ದ್ವೇಷವನ್ನು ಸಾಧಿಸುವುದಿಲ್ಲ ಬದಲಾಗಿ ಪ್ರೀತಿಯನ್ನು ಹಾಗೂ ದಯೆಯನ್ನು ತೋರ್ಪಡಿಸುತ್ತಾರೆ ಎಂದು ವಿಶ್ವಗುರು ಪೋಪ್ ಲಿಯೋ ಹೇಳಿದರು.

ಅಂತಿಮವಾಗಿ ದೇವರು ನಮ್ಮನ್ನು ಕ್ಷಮಿಸುತ್ತಾರೆ ಮಾತ್ರವಲ್ಲದೆ ನಮ್ಮನ್ನು ಮೇಲೆ ಎತ್ತುತ್ತಾರೆ ಎಂಬ ಸಂದೇಶದ ಮೂಲಕ ವಿಶ್ವಗುರುಗಳು ತಮ್ಮ ಮಾತುಗಳನ್ನು ಮುಗಿಸಿದರು.

01 ಅಕ್ಟೋಬರ್ 2025, 15:54

ಇತ್ತೀಚಿನ ಭೇಟಿಗಳು

ಎಲ್ಲಾ ಓದಿ >