ಧಾರ್ಮಿಕ ದೌರ್ಜನ್ಯದ ಸಂತ್ರಸ್ಥರನ್ನು ಭೇಟಿ ಮಾಡಿದ ಪೋಪ್ ಲಿಯೋ XIV
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಲಿಯೋ ಅವರು ಬೆಲ್ಜಿಯಂನಲ್ಲಿ ಧಾರ್ಮಿಕ ದೌರ್ಜನ್ಯದಿಂದ ಬದುಕುಳಿದವರ ಗುಂಪನ್ನು "ಆಪ್ತತೆ, ಆಳವಾದ ಆಲಿಸುವಿಕೆ ಮತ್ತು ನೋವಿನ ಸಂಭಾಷಣೆ"ಯ ವಾತಾವರಣದಲ್ಲಿ ಭೇಟಿಯಾಗುತ್ತಾರೆ. ಈ ಸಭೆ ಒಂದು ಕ್ಷಣ ಪ್ರಾರ್ಥನೆಯೊಂದಿಗೆ ಮುಕ್ತಾಯವಾಯಿತು.
ಈ ಗುಂಪಿನೊಂದಿಗೆ ಅಪ್ರಾಪ್ತ ವಯಸ್ಕರ ರಕ್ಷಣೆಗಾಗಿನ ಪಾಂಟಿಫಿಕಲ್ ಆಯೋಗದ ಸದಸ್ಯರು ಇದ್ದರು, ಇದು ಬೆಲ್ಜಿಯಂನ ಚರ್ಚ್‌ನೊಂದಿಗೆ ಸುರಕ್ಷತಾ ವಿಷಯಗಳ ಕುರಿತು ನಿಕಟವಾಗಿ ಕೆಲಸ ಮಾಡುವುದನ್ನು ಮುಂದುವರೆಸಿದೆ.
ಕಳೆದ ಜುಲೈನಲ್ಲಿ ಆಯೋಗದ ನಿಯೋಗವು ಬೆಲ್ಜಿಯಂಗೆ ಭೇಟಿ ನೀಡಿದಾಗ ಪ್ರಾರಂಭವಾದ ಸಂವಾದವನ್ನು ಮುಂದುವರಿಸಲು ಆಯೋಗವು ಅದೇ ಗುಂಪಿನೊಂದಿಗೆ ಹಿಂದಿನ ದಿನ ಭೇಟಿಯಾಯಿತು.
ಪೋಪ್ ಅವರನ್ನು ಭೇಟಿಯಾದವರಲ್ಲಿ ಹೆಚ್ಚಿನವರು ಈ ಹಿಂದೆ ಸೆಪ್ಟೆಂಬರ್ 2024 ರಲ್ಲಿ ಪೋಪ್ ಫ್ರಾನ್ಸಿಸ್ ಅವರ ಬೆಲ್ಜಿಯಂಗೆ ಪ್ರೇಷಿತ ಪ್ರಯಾಣದ ಸಮಯದಲ್ಲಿ ಅವರೊಂದಿಗಿನ ಸಭೆಯಲ್ಲಿ ಭಾಗವಹಿಸಿದ್ದರು. ಬ್ರಸೆಲ್ಸ್‌ನ ಪ್ರೇಷಿತ ರಾಯಭಾರ ಕಚೇರಿಯಲ್ಲಿ ನಡೆದ ಆ ಹಿಂದಿನ ಸಭೆಯು, ದೌರ್ಜನ್ಯವನ್ನು ತಡೆಗಟ್ಟುವ ಮತ್ತು ಬದುಕುಳಿದವರನ್ನು ಬೆಂಬಲಿಸುವ ಧರ್ಮಸಭೆಯ ಬದ್ಧತೆಯ ಬಗ್ಗೆ ತಮ್ಮ ಅನುಭವಗಳನ್ನು ಮತ್ತು ಅವರ ಭರವಸೆಗಳನ್ನು ಹಂಚಿಕೊಳ್ಳಲು ಸಂತ್ರಸ್ಥರಿಗೆ ಅವಕಾಶವನ್ನು ನೀಡಿತು.
