ಹುಡುಕಿ

ನೈಜೀರಿಯಾ ಮತ್ತು ಕ್ಯಾಮರೂನ್‌ನಲ್ಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಪೋಪ್ ಲಿಯೋ ಕರೆ ನೀಡಿದ್ದಾರೆ

ಸೇಂಟ್ ಪೇತ್ರರ ಚೌಕದಲ್ಲಿ ಕ್ರಿಸ್ತ ರಾಜರ ಪವಿತ್ರ ದಿನದಂದು ಪ್ರಾರ್ಥನೆ ಸಲ್ಲಿಸಿದ ನಂತರ, ಪೋಪ್ ಲಿಯೋ ಅವರು ನೈಜೀರಿಯಾ ಮತ್ತು ಕ್ಯಾಮರೂನ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಅಪಹರಿಸಲ್ಪಟ್ಟ ವಿದ್ಯಾರ್ಥಿಗಳು ಮತ್ತು ಪುರೋಹಿತರನ್ನು ಬಿಡುಗಡೆ ಮಾಡುವಂತೆ ಹೃತ್ಪೂರ್ವಕ ಮನವಿ ಮಾಡುತ್ತಾರೆ.

ವರದಿ: ವ್ಯಾಟಿಕನ್ ನ್ಯೂಸ್

ನೈಜೀರಿಯಾದ ನೈಜರ್ ರಾಜ್ಯದ ಸೇಂಟ್ ಮೇರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಸುಮಾರು 315 ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಅಪಹರಿಸಲಾಗಿದೆ.

ಅದೇ ವಾರ, ಕ್ಯಾಮರೂನ್‌ನ ನ್ಡಾಪ್‌ನಲ್ಲಿ, ಬಮೆಂಡಾ ಮಹಾಧರ್ಮಕ್ಷೇತ್ರದ ಆರು ಕಥೋಲಿಕ ಗುರುಗಳನ್ನು ಅಪಹರಿಸಲಾಯಿತು. ಇದಲ್ಲದೆ, ಹತ್ತಿರದ ಬುಯಿ ವಿಭಾಗದ ಜಕಿರಿ ಪುರಸಭೆಯಲ್ಲಿ, ಬ್ಯಾಪ್ಟಿಸ್ಟ್ ಪಾದ್ರಿಯನ್ನು ಅಪಹರಿಸಲಾಯಿತು.

"ಅಪಹರಣಕ್ಕೊಳಗಾದ ಅನೇಕ ಹುಡುಗರು ಮತ್ತು ಹುಡುಗಿಯರಿಗಾಗಿ ಮತ್ತು ಅವರ ದುಃಖಿತ ಕುಟುಂಬಗಳಿಗಾಗಿ ನನಗೆ ತೀವ್ರ ದುಃಖವಾಗಿದೆ" ಎಂದು ಪೋಪ್ ಹೇಳಿದರು. ಒತ್ತೆಯಾಳುಗಳನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ನಾನು ಹೃತ್ಪೂರ್ವಕ ಮನವಿ ಮಾಡುತ್ತೇನೆ ಮತ್ತು ಅವರ ವಿಮೋಚನೆಯನ್ನು ಖಚಿತಪಡಿಸಿಕೊಳ್ಳಲು ಸೂಕ್ತ ಮತ್ತು ಸಮಯೋಚಿತ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ನಾನು ಸಮರ್ಥ ಅಧಿಕಾರಿಗಳನ್ನು ಒತ್ತಾಯಿಸುತ್ತೇನೆ" ಎಂದು ಹೇಳಿದರು.

25 ನವೆಂಬರ್ 2025, 15:29