ಪೋಪರ ನವೆಂಬರ್ ತಿಂಗಳ ಪ್ರಾರ್ಥನಾ ಕೋರಿಕೆ: ಆತ್ಮಹತ್ಯೆಗಳು ಕೊನೆಗೊಳ್ಳಲಿ
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಹದಿನಾಲ್ಕನೇ ಲಿಯೋ ಅವರು ನವೆಂಬರ್ ತಿಂಗಳೀನ ತಮ್ಮ ಪ್ರಾರ್ಥನಾ ಕೋರಿಕೆಯನ್ನು ವ್ಯಕ್ತಪಡಿಸಿದ್ದಾರೆ. ಆತ್ಮಹತ್ಯೆಗಳು ನಿಲ್ಲಲಿ ಎಂಬುದು ಈ ತಿಂಗಳ ಅವರ ಕೋರಿಕೆಯಾಗಿದೆ. ಎಲ್ಲರೂ ಈ ಕಾರಣಕ್ಕಾಗಿ ಪ್ರಾರ್ಥಿಸಲು ಕರೆ ನೀಡಿದ್ದಾರೆ.
ನಿರ್ದಿಷ್ಟವಾಗಿ ಹೇಳುವುದಾದರೆ, "ಆತ್ಮಹತ್ಯಾ ಆಲೋಚನೆಗಳೊಂದಿಗೆ ಹೋರಾಡುತ್ತಿರುವವರು ತಮ್ಮ ಸಮುದಾಯದಲ್ಲಿ ಅಗತ್ಯವಿರುವ ಬೆಂಬಲ, ಕಾಳಜಿ ಮತ್ತು ಪ್ರೀತಿಯನ್ನು ಕಂಡುಕೊಳ್ಳಲಿ ಮತ್ತು ಜೀವನದ ಸೌಂದರ್ಯಕ್ಕೆ ತೆರೆದುಕೊಳ್ಳಲಿ" ಎಂದು ಪ್ರಾರ್ಥಿಸಲು ಪೋಪ್ ಭಕ್ತಾಧಿಗಳನ್ನು ಆಹ್ವಾನಿಸುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ.
"ದಣಿದ ಮತ್ತು ಹೊರೆ ಹೊತ್ತವರನ್ನು" ತನ್ನ ಬಳಿಗೆ ಬರಲು ಮತ್ತು ತನ್ನ ಹೃದಯದಲ್ಲಿ ವಿಶ್ರಾಂತಿಯನ್ನು ಕಂಡುಕೊಳ್ಳಲು ಆಹ್ವಾನಿಸುವ ಭಗವಂತನನ್ನು, "ಕತ್ತಲೆ ಮತ್ತು ಹತಾಶೆಯಲ್ಲಿ ವಾಸಿಸುವ ಎಲ್ಲಾ ಜನರೊಂದಿಗೆ, ವಿಶೇಷವಾಗಿ ಆತ್ಮಹತ್ಯಾ ಆಲೋಚನೆಗಳೊಂದಿಗೆ ಹೋರಾಡುತ್ತಿರುವವರೊಂದಿಗೆ" ಜೊತೆಗೂಡಲು ಕೇಳಿಕೊಳ್ಳುವ ಮೂಲಕ ಪೋಪ್ ಲಿಯೋ ತನ್ನ ಪ್ರಾರ್ಥನೆಯನ್ನು ಪ್ರಾರಂಭಿಸುತ್ತಾರೆ.
