ಬೈರೂತ್ ಸ್ಪೋಟ ಸ್ಥಳದಲ್ಲಿ ಸಂತ್ರಸ್ಥರ ಕುಟುಂಬಸ್ಥರೊಂದಿಗೆ ಪ್ರಾರ್ಥಿಸಿದ ಪೋಪ್ ಲಿಯೋ XIV
ವರದಿ: ವ್ಯಾಟಿಕನ್ ನ್ಯೂಸ್
ಲೆಬಾನನ್ ದೇಶಕ್ಕೆ ತಮ್ಮ ಪ್ರೇಷಿತ ಭೇಟಿಯ ಕೊನೆಯ ದಿನದಂದು ಪೋಪ್ ಲಿಯೋ XIV ಅವರು 2020 ರಲ್ಲಿ ಬೈರುತ್ ಬಂದರಿನಲ್ಲಿ 200 ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ ಸ್ಫೋಟದ ಸ್ಥಳದಲ್ಲಿ ಮೌನವಾಗಿ ಪ್ರಾರ್ಥಿಸಿದರು.
ಆ ದಿನ, ಲೆಬನಾನಿನ ರಾಜಧಾನಿ ಅವ್ಯವಸ್ಥೆಯಿಂದ ತುಂಬಿತ್ತು, ಒಂದು ಸ್ಫೋಟದಲ್ಲಿ 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು, 7,000 ಜನರು ಗಾಯಗೊಂಡರು ಮತ್ತು 300,000 ಜನರು ಮನೆಗಳಿಲ್ಲದೆ ಉಳಿದರು, ಇದು ಜನಸಂಖ್ಯೆಯ ಮೇಲೆ ಈಗಾಗಲೇ ಹೊರೆಯಾಗಿರುವ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟುಗಳನ್ನು ಇನ್ನಷ್ಟು ಹೆಚ್ಚಿಸಿದ ದುರಂತವಾಗಿತ್ತು.
ಇದಾದ ಸುಮಾರು ವರ್ಷಗಳ ನಂತರ ಪೋಪ್ ಲಿಯೋ ಅವರು ಇಲ್ಲಿಗೆ ಇಂದು ಭೇಟಿ ನೀಡಿದ ಸಂಧರ್ಭದಲ್ಲಿ ಅವರಿಗಾಗಿ ಮೇಣದಬತ್ತಿಯನ್ನು ಹಚ್ಚುತ್ತಾ ಪ್ರಾರ್ಥಿಸಿದರು.
ಪೋಪ್ ಮತ್ತು ಅವಶೇಷಗಳ ನಡುವೆ ಸ್ಫೋಟದಲ್ಲಿ ಬಲಿಯಾದವರ ಮತ್ತು ಬದುಕುಳಿದವರ ಕುಟುಂಬಗಳು ತಮ್ಮ ಪ್ರೀತಿಪಾತ್ರರ ಫೋಟೋಗಳನ್ನು ಹಿಡಿದುಕೊಂಡಿದ್ದರು.
ಪ್ರಾರ್ಥನೆ ಮಾಡಿದ ನಂತರ, ಪೋಪ್ ಅವರಲ್ಲಿ ಕೆಲವರನ್ನು ಸ್ವಾಗತಿಸಿದರು. ಸ್ಪೋಟ ನಡೆದ ಆರು ವರ್ಷಗಳ ನಂತರವೂ ಸಹ ಈ ಘಟನೆಗೆ ಕಾರಣರಾದವರನ್ನು ಬಂಧಿಸಿಲ್ಲ.
