ಹುಡುಕಿ

ಜಗದ್ಗುರು XIV ನೇ ಲಿಯೋರವರು  ರೆಗ್ನಮ್ ಕ್ರಿಸ್ಟಿಯ ಅಪೋಸ್ಟೋಲಿಕ್ ಲೈಫ್ ಸೊಸೈಟೀಸ್ ಸದಸ್ಯರನ್ನು ಭೇಟಿಯಾಗುತ್ತಾರೆ ಜಗದ್ಗುರು XIV ನೇ ಲಿಯೋರವರು ರೆಗ್ನಮ್ ಕ್ರಿಸ್ಟಿಯ ಅಪೋಸ್ಟೋಲಿಕ್ ಲೈಫ್ ಸೊಸೈಟೀಸ್ ಸದಸ್ಯರನ್ನು ಭೇಟಿಯಾಗುತ್ತಾರೆ  (ANSA)

ಜಗದ್ಗುರುಗಳು: ಲೀನವಾಗದೆ, ಒಂದೇ ರೂಪಕ್ಕೆ ಸೇರುವುದಿಲ್ಲದೆ ಸಂವಾದದಲ್ಲಿ ತೊಡಗಿಸಿಕೊಳ್ಳಿ

ರೆಗ್ನಮ್ ಕ್ರಿಸ್ತಿಯ ಪ್ರೇಷಿತರ ಜೀವನ ಸಮಾಜಗಳನ್ನು ಉದ್ದೇಶಿಸಿ ನೀಡಿದ ಭಾಷಣದಲ್ಲಿ, ಜಗದ್ಗುರು XIVನೇ ಲಿಯೋರವರು ವರದಾನ, ಆಡಳಿತ ಮತ್ತು ಸಮಾಗಮದ ಮಹತ್ವದ ಬಗ್ಗೆ ಚಿಂತನೆ ನಡೆಸಿದರು.

ವ್ಯಾಟಿಕನ್ ವರದಿ

ವ್ಯಾಟಿಕನ್‌ನಲ್ಲಿ ಜನವರಿ 29ರಂದು ನಡೆದ ರೆಗ್ನಮ್ ಕ್ರಿಸ್ತಿಯ ಪ್ರೇಷಿತರ  ಜೀವನ ಸಮಾಜಗಳ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರುXIV ನೇ ಲಿಯೋರವರು, ಅವರ ಗುರಿಯಲ್ಲಿ ಧೈರ್ಯದಿಂದ ಮುಂದುವರಿಯಲು ಪ್ರೇರೇಪಿಸಿದರು. ಈ ಸಂದರ್ಭದಲ್ಲಿ ಅವರು ವರದಾನ, ಆಡಳಿತ ಮತ್ತು ಸಮಾಗಮಗಳ ಮಹತ್ವವನ್ನು ಒತ್ತಿಹೇಳಿದರು. ಸಮಾಜದೊಂದಿಗೆ ಸತ್ಯಸಂಧ ಸಂವಾದದಲ್ಲಿ ತೊಡಗಿಸಿಕೊಳ್ಳಲು, ಲೀನವಾಗದೆ ಅಥವಾ ಒಂದೇ ರೂಪಕ್ಕೆ ಸೇರುವುದಿಲ್ಲದೆ, ಮೊದಲು ನಾವು ಯಾರು ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳುವುದು ಅಗತ್ಯವೆಂದು ಅವರು ಹೇಳಿದರು.

ರೆಗ್ನಮ್ ಕ್ರಿಸ್ತಿಯು ಒಂದು ಅಂತರರಾಷ್ಟ್ರೀಯ ಕಥೋಲಿಕ ಒಕ್ಕೂಟವಾಗಿದ್ದು, ಇದರಲ್ಲಿ ಕ್ರಿಸ್ತನ ಲೆಜಿಯನರೀಸ್ ಎಂಬ ಧಾರ್ಮಿಕ ಸಂಘಟನೆ ಹಾಗೂ ಸಮರ್ಪಿತ ಮಹಿಳೆಯರ ಮತ್ತು  ಸಮರ್ಪಿತ ಪುರುಷರಿಗಾಗಿ ಇರುವ ಎರಡು ಪ್ರೇಷಿತರ ಜೀವನ ಸಮಾಜಗಳು ಸೇರಿವೆ. ಸಾಮಾನ್ಯ ಸಭೆಯಲ್ಲಿ, ಈ ಘಟಕಗಳ ವರದಾನ ಕುರಿತು ಚಿಂತನೆ ಮತ್ತು ಚರ್ಚೆ ನಡೆಸಿದ ರೀತಿಯನ್ನು ಜಗದ್ಗುರುಗಳು ಪ್ರಶಂಸಿಸಿದರು. ಪವಿತ್ರಾತ್ಮನ ವರವು ಸಂಸ್ಥೆಗೆ ಜೀವಂತಿಕೆ ನೀಡುವುದರ ಜೊತೆಗೆ, ಅದಕ್ಕೆ ವಿಶಿಷ್ಟ ಗುರುತನ್ನು ನೀಡುತ್ತದೆ ಇದರಿಂದ ಧರ್ಮಸಭೆ ಮತ್ತು ಜಗತ್ತಿನಲ್ಲಿ ಅವರ ಹಾಜರಾತಿ ಸ್ಪಷ್ಟವಾಗಿ ಗುರುತಿಸಬಹುದು ಎಂದು ಅವರು ಹೇಳಿದರು.

ತಮ್ಮ ವಾಸಸ್ಥಳಗಳಲ್ಲಿಯೇ ಸುವಾರ್ತೆಯನ್ನು ಸಾರುವುದು ಅವರ ಕರೆಯ ವಿಶೇಷ ಉದ್ದೇಶವಾಗಿರುವುದರಿಂದ, ತಮ್ಮ ಗುರುತನ್ನು ಇನ್ನಷ್ಟು ಸ್ಪಷ್ಟವಾಗಿ ರೂಪಿಸಿಕೊಳ್ಳುವುದು ಅತ್ಯಾವಶ್ಯಕ ಎಂದು ಜಗದ್ಗುರು ಲಿಯೋರವರು ತಿಳಿಸಿದರು. ವರದಾನವನ್ನು ಸ್ವೀಕರಿಸುವ ಪ್ರತಿಯೊಬ್ಬ ಸಹೋದರ ಮತ್ತು ಸಹೋದರಿಯು ಅದನ್ನು ಜೀವಂತ ಶಕ್ತಿಯಾಗಿ ಪರಿವರ್ತಿಸಿ, ತಮ್ಮ ಗುರಿಗೆ ಪ್ರಾಣ ತುಂಬುವಂತೆ ಹಾಗೂ ಭವಿಷ್ಯದ ಪೀಳಿಗೆಗಳಿಗೆ ಪ್ರೇರಣೆಯಾಗುವಂತೆ ಮಾಡುವ ಕರೆಯಿದೆ ಎಂದರು.

ಆಡಳಿತದ ವಿಷಯಕ್ಕೆ ಬಂದಾಗ, ಅದು ಪ್ರೇಷಿತರ ಜೀವನ ಸಮಾಜಗಳಲ್ಲಿ ಅಗತ್ಯ ಸೇವೆಯಾಗಿದ್ದು, ಕ್ರಿಸ್ತನನ್ನು ಅನುಸರಿಸುವಲ್ಲಿ ಸದಸ್ಯರನ್ನು ಜಾಗೃತ, ಸ್ವತಂತ್ರ ಮತ್ತು ಜವಾಬ್ದಾರಿಯುತ ನಿಷ್ಠೆಯತ್ತ ನಡೆಸುವ ಸೇವೆಯಾಗಿದೆ ಎಂದು ಜಗದ್ಗುರುಗಳು ವಿವರಿಸಿದರು. ಪ್ರತಿಯೊಂದು ಸಂಸ್ಥೆಯೂ ತನ್ನ ವರದಾನ ಮತ್ತು ಆಧ್ಯಾತ್ಮಿಕತೆಗೆ ಹೊಂದಿಕೆಯಾಗುವ ಆಡಳಿತ ಶೈಲಿಯನ್ನು ಕಂಡುಹಿಡಿಯಬೇಕೆಂದು ಅವರು ಹೇಳಿದರು. ಹೊಸ ಆಡಳಿತ ಮಾದರಿಗಳನ್ನು ಪ್ರಯತ್ನಿಸಲು ಭಯಪಡಬೇಡಿ ಎಂದು ಜಗದ್ಗುರುಗಳು ಪ್ರೋತ್ಸಾಹಿಸಿದರು.

ಕೊನೆಯಲ್ಲಿ, ರೆಗ್ನಮ್ ಕ್ರಿಸ್ತಿಯ ಕುಟುಂಬದೊಳಗೆ ಸಮಾಗಮವನ್ನು ಉತ್ತೇಜಿಸುವ ಮಹತ್ವವನ್ನು ಜಗದ್ಗುರುಗಳು ಒತ್ತಿಹೇಳಿದರು. ಬಾಪ್ಟಿಸ್ಮದ ಘನತೆಯಲ್ಲಿ ಏಕತೆ ಮತ್ತು ಕರೆಯ ವೈವಿಧ್ಯ ಪರಸ್ಪರ ವಿರೋಧಿಯಾಗಿಲ್ಲ, ಬದಲಾಗಿ ಒಂದನ್ನೊಂದು ಬೆಳಗಿಸುತ್ತವೆ ಎಂದರು. ಪವಿತ್ರಾತ್ಮನು ಪ್ರತಿಯೊಂದು ಕರೆಯನ್ನು ಇತರರ ಸೇವೆಯಾಗಿ ರೂಪಿಸಿ, ಇತಿಹಾಸದ ಮಧ್ಯೆ ಕ್ರಿಸ್ತನ ದೇಹ ಬೆಳೆಯಲು ಮತ್ತು ಜಗತ್ತಿನಲ್ಲಿ ತನ್ನ ಗುರಿ ನೆರವೇರಿಸಲು ಸಹಾಯ ಮಾಡುತ್ತಾನೆ ಎಂದು ಅವರು ಹೇಳಿದರು.

ಜಗದ್ಗುರು XIVನೇ ಲಿಯೋರವರು, ದೇವರು ಇನ್ನೂ ನಮಗೆ ಅಚ್ಚರಿಯನ್ನು ಉಂಟುಮಾಡುತ್ತಾನೆ ಮತ್ತು ನಮ್ಮ ಮಾರ್ಗಗಳಲ್ಲದ ದಾರಿಗಳ ಮೂಲಕವೂ ತನ್ನನ್ನು ಕಂಡುಕೊಳ್ಳಲು ಅವಕಾಶ ನೀಡುತ್ತಾನೆ ಆದ್ದರಿಂದ ಅವನ ನಿಷ್ಠೆ ಸದಾ ನಮಗೆ ಆಶ್ಚರ್ಯ ಉಂಟುಮಾಡುತ್ತದೆ ಎಂದು ಹೇಳಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

29 ಜನವರಿ 2026, 00:00