ಹುಡುಕಿ

Il Papa, mai pi� antisemitismo, fermare l'orrore del genocidio ovunque

ಸಭೆಯಲ್ಲಿ ಜಗದ್ಗುರುಗಳು: ದೇವರ ವಾಕ್ಯವೇ ನಮ್ಮ ಅಸ್ತಿತ್ವಕ್ಕೆ ಮಾರ್ಗದರ್ಶಿ

ಬುಧವಾರದ ಸಾಮಾನ್ಯ ಸಭೆಯಲ್ಲಿ, ಜಗದ್ಗುರು XIVನೇ ಲಿಯೋರವರು ದಿವ್ಯ ಪ್ರಕಟನೆ ಕುರಿತು ಇರುವ ಡಾಗ್ಮಾಟಿಕ್ ಸಂವಿಧಾನ ‘ದೆೈ ವೇರಬುಮ್’ ಕುರಿತು ತಮ್ಮ ಚಿಂತನೆಗಳನ್ನು ಮುಂದುವರಿಸಿದರು. ಅವರು ಪವಿತ್ರ ಗ್ರಂಥಗಳು (ಸೇಕ್ರೆಡ್ ಸ್ಕ್ರಿಪ್ಚರ್) ಮತ್ತು ಪರಂಪರೆಗಳ ನಡುವಿನ ಆಳವಾದ ಹಾಗೂ ಅಟುಟವಾದ ಸಂಬಂಧವನ್ನು ವಿಶೇಷವಾಗಿ ಒತ್ತಿಹೇಳಿದರು. ಜಗದ್ಗುರುಗಳು, ದೇವರ ವಾಕ್ಯವೇ ನಮ್ಮ ಜೀವನದ ದಿಕ್ಕನ್ನು ತೋರಿಸುವ ದೀಪವಾಗಿದ್ದು, ಕ್ರೈಸ್ತರ ಸಂಪೂರ್ಣ ಅಸ್ತಿತ್ವಕ್ಕೆ ಮಾರ್ಗದರ್ಶಿಯಾಗುತ್ತದೆ ಎಂದು ಹೇಳಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು 2026ರ ಜನವರಿ 28ರಂದು ನಡೆದ ಬುಧವಾರದ ಸಾಮಾನ್ಯ ಸಭೆಯಲ್ಲಿ, ದ್ವಿತೀಯ ವಾಟಿಕನ್ ಮಹಾಸಭೆಯ ದಾಖಲೆಗಳ ಕುರಿತು ತಮ್ಮ ಉಪದೇಶಮಾಲಿಕೆಯನ್ನು ಮುಂದುವರಿಸುತ್ತಾ, ದಿವ್ಯ ಪ್ರಕಟನೆ ಕುರಿತ ಡಾಗ್ಮಾಟಿಕ್ ಸಂವಿಧಾನ ‘ದೆೈ ವೇರಬುಮ್’  ಬಗ್ಗೆ ಮತ್ತೊಮ್ಮೆ ಚಿಂತನೆ ನಡೆಸಿದರು. ದೇವರ ವಾಕ್ಯದ “ಪವಿತ್ರ ಠೇವಣಿ”  ಇನ್ನೂ ಧರ್ಮ ಸಭೆಯ ಕೈಯಲ್ಲಿಯೇ ಇದೆ ಎಂದು ಅವರು ತಿಳಿಸಿ, ಇತಿಹಾಸ ಮತ್ತು ಮಾನವ ಅಸ್ತಿತ್ವದ ಸಂಕೀರ್ಣತೆಗಳಲ್ಲಿ ನಮ್ಮ ಪ್ರಯಾಣಕ್ಕೆ ದಿಕ್ಕು ತೋರಿಸುವ ನಕ್ಷತ್ರದಂತೆ ಅದನ್ನು ಸಮಗ್ರತೆಯಿಂದ ಸಂರಕ್ಷಿಸುವ ಜವಾಬ್ದಾರಿ ಧರ್ಮ ಸಭೆಗೂ, ಅದರ ಪ್ರತಿಯೊಬ್ಬ ಸದಸ್ಯನಿಗೂ ಸೇರಿದೆ ಎಂದು ಹೇಳಿದರು.

ಜಗದ್ಗರುಗಳು ಪವಿತ್ರ ಗ್ರಂಥ ಮತ್ತು ಪರಂಪರೆಯ ನಡುವಿನ ಅಗಮ್ಯ ಸಂಬಂಧವನ್ನು ಒತ್ತಿ ಹೇಳಿದರು. ದೇವರ ವಾಕ್ಯವು ಸ್ಥಿರವಾಗಿರುವ ಅಥವಾ ಜಡವಾಗಿರುವ ವಸ್ತುವಲ್ಲ ಅದು ಪವಿತ್ರಾತ್ಮನ ಕಾರ್ಯದಿಂದ ಪರಂಪರೆಯಲ್ಲಿ ಜೀವಂತವಾಗಿ ಬೆಳೆಯುವ ಮತ್ತು ವಿಕಸಿಸುವ ಸಜೀವ ವಾಸ್ತವಿಕತೆ ಎಂದು ಅವರು ವಿವರಿಸಿದರು. ಪವಿತ್ರಾತ್ಮನ ಸಹಾಯದಿಂದಲೇ ಧರ್ಮ ಸಭೆ ದೇವರ ವಾಕ್ಯವನ್ನು ಅದರ ಸಂಪೂರ್ಣ ಸತ್ಯದಲ್ಲಿ ಅರ್ಥಮಾಡಿಕೊಳ್ಳುತ್ತದೆ ಮತ್ತು ಇತಿಹಾಸದ ಬದಲಾವಣೆಯ ಸಂದರ್ಭಗಳಲ್ಲಿ ಅದನ್ನು ಜೀವಂತವಾಗಿ ಅಳವಡಿಸುತ್ತದೆ ಎಂದು ಜಗದ್ಗುರುಗಳು ಹೇಳಿದರು.

ಪವಿತ್ರ ಗ್ರಂಥ ಮತ್ತು ಪರಂಪರೆ ಎರಡೂ ಒಂದೇ ದೈವಿಕ ಮೂಲದಿಂದ ಉದ್ಭವಿಸಿದವು ಎಂದು ವಿವರಿಸಲು ಜಗದ್ಗುರುಗಳು ಯೇಸುವಿನ ಸುವಾರ್ತೆಯ ಎರಡು ಸಂದರ್ಭಗಳನ್ನು ಉಲ್ಲೇಖಿಸಿದರು. ಒಂದರಲ್ಲಿ, ಯೇಸು ತನ್ನ ಶಿಷ್ಯರಿಗೆ ಪವಿತ್ರಾತ್ಮನು ಅವರನ್ನು ಸಂಪೂರ್ಣ ಸತ್ಯದತ್ತ ಮುನ್ನಡೆಸುವನು ಎಂದು ಭರವಸೆ ನೀಡುತ್ತಾನೆ. ಇನ್ನೊಂದರಲ್ಲಿ, ಪುನರುತ್ಥಾನಗೊಂಡ ಕ್ರಿಸ್ತನು ಶಿಷ್ಯರನ್ನು ಎಲ್ಲಾ ಜನಾಂಗಗಳನ್ನು ತನ್ನ ಶಿಷ್ಯರನ್ನಾಗಿಸಲು ಮತ್ತು ತಾನು ಆಜ್ಞಾಪಿಸಿದ ಎಲ್ಲವನ್ನೂ ಪಾಲಿಸಲೆಂದು ಬೋಧಿಸಲು ಕಳುಹಿಸುತ್ತಾನೆ.

ದೆೈ ವೇರಬುಮ್ ಉಲ್ಲೇಖಿಸಿ, ಜಗದ್ಗುರುಗಳು ಪವಿತ್ರ ಗ್ರಂಥ ಮತ್ತು ಪರಂಪರೆಗಳು ಒಂದೇ ದೈವಿಕ ಜಲಸ್ರೋತದಿಂದ ಹರಿದುಬಂದು ಒಂದೇ ಗುರಿಯತ್ತ ದಾರಿ ಮಾಡಿಕೊಡುತ್ತವೆ ಎಂದು ಹೇಳಿದರು. ಧರ್ಮ ಸಭೆಯ ಮೂಲಕ ಇತಿಹಾಸದೊಳಗೆ ಪರಂಪರೆ ಶಾಖೆಗಳನ್ನು ಹರಡಿಕೊಳ್ಳುತ್ತದೆ ಧರ್ಮ ಸಭೆ ದೇವರ ವಾಕ್ಯವನ್ನು ಸಂರಕ್ಷಿಸಿ, ಅರ್ಥೈಸಿ, ಜೀವನದಲ್ಲಿ ಅಳವಡಿಸುತ್ತದೆ. ಪವಿತ್ರ ಗ್ರಂಥವು ಕೇವಲ ಬರಹಗಳಲ್ಲಿ ಮಾತ್ರವಲ್ಲ, ಮುಖ್ಯವಾಗಿ ಧರ್ಮ ಸಭೆಯ ಹೃದಯದಲ್ಲಿ ಬರೆಯಲ್ಪಟ್ಟಿದೆ ಎಂಬುದನ್ನು ಅವರು ನೆನಪಿಸಿದರು.

ಪರಂಪರೆ ಪ್ರೇಷಿತರಿಂದ ಬಂದಿದ್ದು, ಪವಿತ್ರಾತ್ಮನ ನೆರವಿನಿಂದ ಧರ್ಮ ಸಭೆಯಲ್ಲಿ ಬೆಳೆಯುತ್ತದೆ ಎಂದು ಜಗದ್ಗುರುಗಳು ವಿವರಿಸಿದರು. ನಂಬಿಗಸ್ತರ ಧ್ಯಾನ ಮತ್ತು ಅಧ್ಯಯನ, ಆಧ್ಯಾತ್ಮಿಕ ಅನುಭವಗಳ ಆಳವಾದ ಅರಿವು ಹಾಗೂ ಪ್ರೇಷಿತರ ಉತ್ತರಾಧಿಕಾರಿಗಳ ಉಪದೇಶಗಳ ಮೂಲಕ ಧರ್ಮ ಸಭೆ ತನ್ನ ನಂಬಿಕೆಯನ್ನು ಎಲ್ಲ ಪೀಳಿಗೆಗಳಿಗೆ ಹಸ್ತಾಂತರಿಸುತ್ತದೆ. ಧರ್ಮ ಸಭೆ ತನ್ನ ಬೋಧನೆ, ಜೀವನ ಮತ್ತು ಆರಾಧನೆಯ ಮೂಲಕ ತಾನೇ ಯಾರು ಮತ್ತು ಏನು ನಂಬುತ್ತದೆ ಎಂಬುದನ್ನು ನಿರಂತರವಾಗಿ ಮುಂದಿನ ಪೀಳಿಗೆಗಳಿಗೆ ಒಪ್ಪಿಸುತ್ತಿದೆ ಎಂದು ಅವರು ಹೇಳಿದರು.

ಸಭೆಯನ್ನು ಸಮಾಪನಗೊಳಿಸುತ್ತಾ, ಜಗದ್ಗುರು XIVನೇ ಲಿಯೋರವರು ಪವಿತ್ರ ಗ್ರಂಥ ಮತ್ತು ಪವಿತ್ರ ಪರಂಪರೆಗಳು ಸೇರಿ ದೇವರ ವಾಕ್ಯದ ಒಂದೇ ಪವಿತ್ರ ಠೇವಣಿಯಾಗಿವೆ ಎಂದು ನೆನಪಿಸಿದರು. ಇವುಗಳನ್ನು ಯೇಸು ಕ್ರಿಸ್ತನ ಹೆಸರಿನಲ್ಲಿ ಧರ್ಮ ಸಭೆಯ ಜೀವಂತ ಬೋಧನಾ ಅಧಿಕಾರ ಅರ್ಥೈಸುತ್ತದೆ. ಪವಿತ್ರ ಗ್ರಂಥವೂ ಪರಂಪರೆಯೂ ಪರಸ್ಪರ ಬೇರ್ಪಡಲಾಗದಂತೆ ಒಂದಕ್ಕೊಂದು ಸಂಬಂಧಪಟ್ಟಿದ್ದು, ಪವಿತ್ರಾತ್ಮನ ಕ್ರಿಯೆಯಿಂದ ಆತ್ಮಗಳ ರಕ್ಷಣೆಗೆ ಪರಿಣಾಮಕಾರಿಯಾಗಿ ಸೇವೆ ಸಲ್ಲಿಸುತ್ತವೆ ಎಂದು ಅವರು ಸ್ಪಷ್ಟಪಡಿಸಿದರು.

02 ಜನವರಿ 2026, 00:00