ಹುಡುಕಿ

ಸಾಮಾನ್ಯ ಸಭೆಯಲ್ಲಿ ಜಗದ್ಗುರು XIV ನೇ ಲಿಯೋರವರು ಸಾಮಾನ್ಯ ಸಭೆಯಲ್ಲಿ ಜಗದ್ಗುರು XIV ನೇ ಲಿಯೋರವರು  (ANSA)

ಜಗದ್ಗುರು ಲಿಯೋ: ಯಾವ ಜನರ ಮೇಲೂ ಸಂಹಾರದ ಭೀಕರತೆ ಮತ್ತೆಂದೂ ಮರುಕಳಿಸಬಾರದು

ಸಾಮಾನ್ಯ ಸಭೆಯ ಸಮಾರೋಪದಲ್ಲಿ, ಜಗದ್ಗುರು XIVನೇ ಲಿಯೋರವರು ಜನವರಿ 27ರಂದು ಆಚರಿಸಲಾದ ಅಂತರರಾಷ್ಟ್ರೀಯ ಹತ್ಯಾಕಾಂಡದ ಸ್ಮರಣಾ ದಿನವನ್ನು ಸ್ಮರಿಸಿದರು. ಯಾವುದೇ ಜನರ ಮೇಲೂ ಸಂಹಾರದ (ಜಿನೊಸೈಡ್) ಭೀಕರತೆ ಮತ್ತೆಂದೂ ಸಂಭವಿಸಬಾರದು ಎಂಬ ಗಾಢ ಆಶಯವನ್ನು ಅವರು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ, ಜಗದ್ಗುರುಗಳು ಯಹೂದಿ ವಿರೋಧವಿಲ್ಲದ ಲೋಕದ ವರವನ್ನು ದೇವರಿಂದ ಬೇಡಿದರು ಪೂರ್ವಾಗ್ರಹ, ದಮನ ಮತ್ತು ಹಿಂಸೆಯಿಂದ ಮುಕ್ತವಾಗಿರುವ, ಮತ್ತು ಪರಸ್ಪರ ಗೌರವ ಹಾಗೂ ಸಾಮೂಹಿಕ ಹಿತದ ಮೇಲೆ ಸ್ಥಾಪಿತವಾದ ವಿಶ್ವವನ್ನು ನಿರ್ಮಿಸುವಂತೆ ಅವರು ಆಹ್ವಾನಿಸಿದರು.

ವ್ಯಾಟಿಕನ್ ವರದಿ

ಜಗದ್ಗುರು XIV ನೇ ಲಿಯೋರವರು ವಾಟಿಕನ್‌ನಲ್ಲಿ ಬುಧವಾರ ಬೆಳಿಗ್ಗೆ ನಡೆದ ತಮ್ಮ ವಾರದ ಸಾಮಾನ್ಯ ಸಭೆಯಲ್ಲಿ ದ್ವೇಷದ ವಿರುದ್ಧ ಭಾವನಾತ್ಮಕ ಮನವಿಯನ್ನು ಸಲ್ಲಿಸಿದರು. ಅದರ ಹಿಂದಿನ ದಿನವು ಅಂತರರಾಷ್ಟ್ರೀಯ ಹತ್ಯಾಕಾಂಡದ ಸ್ಮರಣಾ ದಿನವಾಗಿದ್ದು, ಅದು ಲಕ್ಷಾಂತರ ಯಹೂದಿಯರು ಮತ್ತು ಇನ್ನೂ ಅನೇಕ ಜನರಿಗೆ ಮರಣವನ್ನು ತಂದಿತು ಎಂಬುದನ್ನು ಅವರು ಸ್ಮರಿಸಿದರು.

ಈ ನೋವಿನ ಸ್ಮರಣೆಯ ವಾರ್ಷಿಕ ಸಂದರ್ಭದಲ್ಲಿ, ಎಂದು ಜಗದ್ಗುರುಗಳು ಒತ್ತಿಹೇಳುತ್ತಾ ಹೇಳಿದರು, ಯಹೂದಿ ವಿರೋಧದಿಂದಲೂ, ಹಾಗೆಯೇ ಯಾವುದೇ ಮಾನವನ ವಿರುದ್ಧದ ಪೂರ್ವಾಗ್ರಹ, ದಮನ ಮತ್ತು ಹಿಂಸೆಯಿಂದಲೂ ಮುಕ್ತವಾಗಿರುವ ಲೋಕದ ವರವನ್ನು ನಾನು ಸರ್ವಶಕ್ತನಾದ ದೇವರಿಂದ ಬೇಡುತ್ತೇನೆ.

ಅವರು ಅಂತರರಾಷ್ಟ್ರೀಯ ಸಮುದಾಯಕ್ಕೆ ತಮ್ಮ ಮನವಿಯನ್ನು ಪುನರ್‌ನವೀಕರಿಸಿ, ಯಾವ ಜನರ ಮೇಲೂ ಸಂಹಾರದ (ಜಿನೊಸೈಡ್) ಭೀಕರತೆ ಮತ್ತೆಂದೂ ಹೇರಲಾಗದಂತೆ ಎಚ್ಚರಿಕೆಯಿಂದಿರಬೇಕು ಹಾಗೂ ಪರಸ್ಪರ ಗೌರವ ಮತ್ತು ಸಾಮೂಹಿಕ ಹಿತದ ಮೇಲೆ ಆಧಾರಿತ ಸಮಾಜವನ್ನು ನಿರ್ಮಿಸಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ, ಮಂಗಳವಾರ ಜಗದ್ಗುರು XIVನೇ ಲಿಯೋರವರು ತಮ್ಮ  ಖಾತೆಯ ಮೂಲಕವೂ ಅಂತರರಾಷ್ಟ್ರೀಯ ದಿನವನ್ನು ಸ್ಮರಿಸಿದರು. ಆ ಸಂದೇಶದಲ್ಲಿ, ಯಹೂದಿ ವಿರೋಧದ ಪ್ರತಿಯೊಂದು ರೂಪಕ್ಕೂ ವಿರುದ್ಧವಾಗಿ ‘ನೋಸ್ತ್ರಾ ಏತಾತೆ’ (Nostra Aetate) ಘೋಷಣೆಯಲ್ಲಿ ವ್ಯಕ್ತವಾದ ಅಚಲ ನಿಲುವಿಗೆ ಧರ್ಮ ಸಭೆ ಸದಾ ನಿಷ್ಠವಾಗಿಯೇ ಇದೆ ಎಂದು ಅವರು ತಿಳಿಸಿದರು. ಜನಾಂಗ, ಭಾಷೆ, ರಾಷ್ಟ್ರೀಯತೆ ಅಥವಾ ಧರ್ಮದ ಆಧಾರದ ಮೇಲೆ ನಡೆಯುವ ಯಾವುದೇ ವಿಧದ ಭೇದಭಾವ ಅಥವಾ ಕಿರುಕುಳವನ್ನು ಧರ್ಮಸಭೆ ತಿರಸ್ಕರಿಸುತ್ತದೆ ಎಂದು ಜಗದ್ಗುರುಗಳು ಸ್ಪಷ್ಟಪಡಿಸಿದರು.

28 ಜನವರಿ 2026, 00:00