ಕಾರ್ಡಿನಲ್ ಕ್ರಿಸ್ತೋಫ್ ಪಿಯರ್ ಅವರಿಗೆ 80ನೇ ಜನ್ಮದಿನದ ಶುಭಾಶಯಗಳನ್ನು ಕಳುಹಿಸಿದ ಜಗದ್ಗುರುಗಳು
ವಾಟಿಕನ್ ನ್ಯೂಸ್
ಶುಕ್ರವಾರ, ಜನವರಿ 30ರಂದು, ಅಮೆರಿಕದ ಪ್ರೇಷಿತರ ರಾಯಭಾರಿ ಆಗಿರುವ ಕಾರ್ಡಿನಲ್ ಕ್ರಿಸ್ತೋಫ್ ಪಿಯರ್ ರವರ 80ನೇ ಜನ್ಮದಿನವನ್ನು ಆಚರಿಸಲು ವಾಷಿಂಗ್ಟನ್‌ನ ಪ್ರೇಷಿತರ ರಾಯಭಾರಿಗಳಾದ ಆತ್ಮೀಯ ಹಾಗೂ ಸಹೋದರತ್ವಪೂರ್ಣ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಕಾರ್ಡಿನಲ್ ಪಿಯರ್ ರವರು ಪೂರ್ವಸಿದ್ಧತೆ ಇಲ್ಲದ ಚಿಕ್ಕ ಭಾಷಣವೊಂದನ್ನು ನೀಡಿ, ಹಾಜರಿದ್ದವರಿಗೆ ಧನ್ಯವಾದಗಳನ್ನು ಅರ್ಪಿಸಿ, ತಮ್ಮ ಸೇವಾ ಜೀವನದ ಕೆಲವು ಅನುಭವಗಳನ್ನು ಸ್ಮರಿಸಿದರು.
ರಾಜ್ಯ ಕಾರ್ಯದರ್ಶಾಲಯದ ಉಪ ಕಾರ್ಯದರ್ಶಿಯಾಗಿರುವ ಮಹಾಧರ್ಮಾಧ್ಯಕ್ಷ ಎಡ್ಗರ್ ಪೇನಿಯಾ ಪಾರ್ರಾ ರವರು, ಜಗದ್ಗುರು XIVನೇ ಲಿಯೋರವರು ಕಳುಹಿಸಿದ ಶುಭಾಶಯಗಳ ಟೆಲಿಗ್ರಾಮನ್ನು ಓದಿದರು. ಅದರಲ್ಲಿ, “ಸುವಾರ್ತೆಯ ಸೇವೆ ಮತ್ತು ಜಗದ್ಗುರುಗಳ ಅಧಿಕಾರ ಹುದ್ದೆಯಲ್ಲಿ” ತಮ್ಮ ದೀರ್ಘ ಸೇವಾಕಾಲದ ಅವಧಿಯಲ್ಲಿ ಕಾರ್ಡಿನಲ್ ಪಿಯರ್ ರವರು ತೋರಿದ ಸಮರ್ಪಣೆಗಾಗಿ ಜಗದ್ಗುರುಗಳು ತಮ್ಮ “ಆಭಾರವನ್ನು” ವ್ಯಕ್ತಪಡಿಸಿದ್ದಾರೆ. ಅದೇ ಸಂದರ್ಭದಲ್ಲಿ ಮಹಾಧರ್ಮಾಧ್ಯಕ್ಷ ಪಾರ್ರಾ ರವರು ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೇತ್ರೊ ಪ್ಯಾರೊಲಿನ್ ಹಾಗೂ ರಾಜ್ಯ ಕಾರ್ಯದರ್ಶಾಲಯದ ಅಧಿಕಾರಿಗಳ ಶುಭಾಶಯಗಳನ್ನು ಸಹ ಕೋರಿದರು.
ಈ ಸಮಾರಂಭದಲ್ಲಿ ಮಾತನಾಡಿದ ಅಮೆರಿಕದ ಕಥೋಲಿಕ ಬಿಷಪ್‌ಗಳ ಮಹಾಸಂಘದ ಅಧ್ಯಕ್ಷರಾದ ಒಕ್ಲಹೊಮಾ ಸಿಟಿಯ ಮಹಾಧರ್ಮಾಧ್ಯಕ್ಷ ಪಾಲ್ ಎಸ್. ಕೋಕ್ಲಿ ರವರು, ದೇಶದಲ್ಲಿ ಜಗದ್ಗುರುಗಳ ಪ್ರತಿನಿಧಿಯಾಗಿ ತಮ್ಮ ಸೇವೆಯನ್ನು ನಿರ್ವಹಿಸುತ್ತಿರುವುದಕ್ಕಾಗಿ ರಾಯಭಾರಿಗಳು ಅವರಿಗೆ ಕೃತಜ್ಞತೆ ಸಲ್ಲಿಸಿದರು. ಸಮಾರಂಭದ ಅಂತ್ಯದಲ್ಲಿ, ರಾಯಭಾರಿಗಳು ಸಿಬ್ಬಂದಿಯ ಸದಸ್ಯರಿಗೆ ಗೌರವಗಳನ್ನು ಪ್ರದಾನಿಸಲಾಯಿತು.
