ಹುಡುಕಿ

ಪೆರುವಿಯನ್ ಬಿಷಪ್ ಗಳೊಂದಿಗೆ ಜಗದ್ಗುರು ಲಿಯೋರವರ ಅನಿರೀಕ್ಷಿತ ಸಭೆ. ಪೆರುವಿಯನ್ ಬಿಷಪ್ ಗಳೊಂದಿಗೆ ಜಗದ್ಗುರು ಲಿಯೋರವರ ಅನಿರೀಕ್ಷಿತ ಸಭೆ.  (ANSA)

ಜಗದ್ಗುರು ಲಿಯೋರವರು ಪೆರುದ ಧರ್ಮಾಧ್ಯಕ್ಷರೊಂದಿಗೆ ಅಪ್ರತೀಕ್ಷಿತ ಬೋಜನದಲ್ಲಿ ಭಾಗವಹಿಸಿದರು

ಪೆರುವಿನ ಧರ್ಮಾಧ್ಯಕ್ಷರು ರೋಮ್‌ನಲ್ಲಿ ನಡೆದ ಭೋಜನ ಸಮಾರಂಭದಲ್ಲಿ ಜಗದ್ಗುರು XIV ನೇ ಲಿಯೋರವರು ಅನಿರೀಕ್ಷಿತವಾಗಿ ಭಾಗವಹಿಸಿದುದನ್ನು “ಸನ್ನಿಹಿತತೆ ಮತ್ತು ಸಮಾಗಮದ ಒಂದು ಸಂಕೇತ” ಎಂದು ವರ್ಣಿಸಿದ್ದಾರೆ.

ವಾಟಿಕನ್ ನ್ಯೂಸ್

ರೋಮ್‌ನಲ್ಲಿ ಪೆರುದ ಧರ್ಮಾಧ್ಯಕ್ಷರು ಆಯೋಜಿಸಿದ್ದ ಸೌಹಾರ್ದಪೂರ್ಣ ಬೋಜನದಲ್ಲಿದ ಜಗದ್ಗುರು ಲಿಯೋರವರು ಅಪ್ರತೀಕ್ಷಿತವಾಗಿ ಭಾಗವಹಿಸಿದ್ದು, ಇದನ್ನು ಪೆರು ದೇಶದ ಧರ್ಮ ಸಭೆಯ ಧರ್ಮಾಧಿಕಾರಿಯ ಗುರಿಯನ್ನು ಬಲಪಡಿಸುವ ಸಮೀಪತೆ ಮತ್ತು ಸಮಾಗಮದ ಸಂಕೇತವೆಂದು ಪೆರು ಧರ್ಮಾಧ್ಯಕ್ಷರು ವರ್ಣಿಸಿದ್ದಾರೆ.

ಪೆರು ಧರ್ಮಾಧ್ಯಕ್ಷರ ಮಹಾಸಭೆಯ X (ಹಿಂದಿನ ಟ್ವಿಟರ್) ಖಾತೆಯ ಪ್ರಕಾರ, ಜಗದ್ಗುರು ಲಿಯೋರವರ ಭೇಟಿ ಧರ್ಮಸಭೆಯೊಳಗಿನ ಸಮೀಪತೆ ಮತ್ತು ಏಕತೆಯನ್ನು ವ್ಯಕ್ತಪಡಿಸುವ ಹೃದಯಸ್ಪರ್ಶಿ ಸಂಕೇತವಾಗಿತ್ತು.

ಪೆರುದ ಧರ್ಮಾಧ್ಯಕ್ಷರು ತಮ್ಮ ವಾರ್ಷಿಕ ಅದ್ ಲಿಮಿನಾ ಭೇಟಿ ನಿಮಿತ್ತ ಜನವರಿ 26ರಿಂದ 31ರವರೆಗೆ ರೋಮ್‌ನಲ್ಲಿ ಇದ್ದಾರೆ. ಈ ಸಮಾವೇಶದಲ್ಲಿ ದೇಶದ 46 ಧಾರ್ಮಿಕ ಪ್ರಾಂತ್ಯಗಳ ಧರ್ಮಾಧ್ಯಕ್ಷರು ಭಾಗವಹಿಸಿದ್ದರು. ಅವರು ಜನವರಿ 30ರಂದು ಜಗದ್ಗುರು XIVನೇ ಲಿಯೋರವರೊಂದಿಗೆ ಅಧಿಕೃತ ಭೇಟಿಗೆ ಹಾಜರಾಗಲಿದ್ದಾರೆ.

ಸಮೀಪತೆ ಮತ್ತು ಸಮಾಗಮದ ಸಂಕೇತ

ಈ ಭೋಜನವು ಸಮೀಪತೆ ಮತ್ತು ಸಮಾಗಮದ ಸಂಕೇತವಾಗಿದ್ದು, ಧರ್ಮಸಭೆಯೊಳಗಿನ ಸಹೋದರತ್ವ ಮತ್ತು ಏಕತೆಯನ್ನು ಇನ್ನಷ್ಟು ಗಟ್ಟಿಗೊಳಿಸಿದೆ ಎಂದು ಧರ್ಮಾಧ್ಯಕ್ಷರು ತಿಳಿಸಿದರು.

ಪೆರುದ ಭವಿಷ್ಯಕ್ಕಾಗಿ ಪ್ರಾರ್ಥನೆ

ಲುರಿನ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಮತ್ತು ಪೆರು ಧರ್ಮಾಧ್ಯಕ್ಷರ ಮಹಾಸಭೆಯ ಅಧ್ಯಕ್ಷರಾದ ಬಿಷಪ್ ಕಾರ್ಲೋಸ್ ಗಾರ್ಸಿಯಾ ಕಾಮಾಡರ್ ರವರು,

ನಾವು ಶಾಂತಿಗಾಗಿ ಮತ್ತು ಪೆರುದ ಭವಿಷ್ಯಕ್ಕಾಗಿ ಪ್ರಾರ್ಥಿಸಲು ಇಲ್ಲಿ ಸೇರಿದ್ದೇವೆ. ಈ ಭೇಟಿ ನಮ್ಮೆಲ್ಲರನ್ನೂ ಬಲಪಡಿಸಿ, ನಂಬಿಕೆಯಲ್ಲಿ ಉತ್ತೇಜಿಸಿ, ಇತರರನ್ನು ಉತ್ತಮವಾಗಿ  ಸಹಾಯ ಮಾಡಲಿ ಎಂದು ಹೇಳಿದರು.

ಮುಂದುವರೆದು ಅವರು,

ನಮ್ಮ ಭವಿಷ್ಯದ ನಾಯಕರು ದೇಶದ  ಸಾಮೂಹಿಕ ಹಿತವನ್ನು ಹುಡುಕುವ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ವಿಭಜನೆ ಮಾಡುವುದಕ್ಕಿಂತ ಏಕತೆಯನ್ನು ಬೆಳೆಸುವ, ಕಡಿಮೆ ಮಾಡುವುದಕ್ಕಿಂತ ಸೇರಿಸುವ ಉತ್ತಮ ಪುರುಷರು ಮತ್ತು ಮಹಿಳೆಯರಾಗಿರಲಿ ಎಂದು ನಾವು ಪ್ರಾರ್ಥಿಸುತ್ತೇವೆ ಎಂದು ಹೇಳಿದರು.

ಸಂತ ರೋಸ್ ಆಫ್ ಲಿಮಾ

ಈ ಸಂದರ್ಭದಲ್ಲೇ, ಪೆರು ಧರ್ಮಾಧ್ಯಕ್ಷರ ಮಹಾಸಭೆಯು ಜಗದ್ಗುರು ಲಿಯೋರವರಿಗೆ ಧನ್ಯ ಕನ್ಯಾ ಮರಿಯಮ್ಮನ ಕಲಾಕೃತಿ ಚಿತ್ರ ಮತ್ತು ಪೆರು ದೇಶದ ಪೋಷಕ ಸಂತೆಯಾದ ಸಂತ ರೋಸ್ ಆಫ್ ಲಿಮಾರವರ ಚಿತ್ರವನ್ನು ಸಮರ್ಪಿಸಿತು. ಇವುಗಳನ್ನು ಜನವರಿ 31ರ ಶನಿವಾರ ಜಗದ್ಗುರು ಆಶೀರ್ವದಿಸಿ ವ್ಯಾಟಿಕನ್ ಉದ್ಯಾನವನದಲ್ಲಿ ಸ್ಥಾಪಿಸಲಾಗುತ್ತದೆ.

29 ಜನವರಿ 2026, 00:00