ಹುಡುಕಿ

ಮಹಿಳೆಯರ ಡೌನ್ ಹಿಲ್ ರೇಸ್ ನಲ್ಲಿ ಸ್ಪಧಿ೯ಸುತ್ತಿರುವ ಒಲಂಪಿಕ್ ಕ್ರೀಡಾಪಟು ಮಹಿಳೆಯರ ಡೌನ್ ಹಿಲ್ ರೇಸ್ ನಲ್ಲಿ ಸ್ಪಧಿ೯ಸುತ್ತಿರುವ ಒಲಂಪಿಕ್ ಕ್ರೀಡಾಪಟು  (AFP or licensors)

ಗೌರವ, ತಂಡಭಾವನೆ ಮತ್ತು ತ್ಯಾಗವನ್ನು ಉತ್ತೇಜಿಸಲು ಜಗದ್ಗುರು ಲಿಯೋರವರು ಒಲಿಂಪಿಕ್ ಕ್ರೀಡಾಪಟುಗಳಿಗೆ ಕರೆ ನೀಡಿದರು

ಮಿಲಾನ್ ಮತ್ತು ಕೋರ್ಟಿನಾದಲ್ಲಿ ನಡೆಯುತ್ತಿರುವ 25ನೇ ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳಿಗೆ ಜಗದ್ಗುರು XIVನೇ ಲಿಯೋರವರು ತಮ್ಮ ಪ್ರೋತ್ಸಾಹವನ್ನು ಕಳುಹಿಸಿದ್ದು, ಕ್ರೀಡೆಯ ನಿಜವಾದ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಅವರಿಗೆ ಆಹ್ವಾನ ನೀಡಿದ್ದಾರೆ.

ವ್ಯಾಟಿಕನ್ ವರದಿ

ಉತ್ತರ ಇಟಲಿಯ ಕೋಮೊ ನಗರದಲ್ಲಿ ಶುಕ್ರವಾರ ನಡೆದ ಪವಿತ್ರ ಬಲಿಪೂಜೆಯಲ್ಲಿ, ಒಲಿಂಪಿಕ್ ಕ್ರೀಡಾಪಟುಗಳು, ಸ್ವಯಂಸೇವಕರು ಹಾಗೂ ವಿವಿಧ ಕ್ರೀಡಾ ಸಂಘಟನೆಗಳ ಸದಸ್ಯರು ಭಾಗವಹಿಸಿದರು. ಅವರು 2026ರ ಮಿಲಾನೊ–ಕೋರ್ಟಿನಾ ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟಕ್ಕೆ ತಯಾರಾಗುತ್ತಿರುವ ಸಂದರ್ಭದಲ್ಲಿ ಈ ವಿಶೇಷ ಆರಾಧನೆ ನಡೆಯಿತು.

25ನೇ ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟವು ಮುಂದಿನ ವಾರ ಆರಂಭವಾಗಿ, ಫೆಬ್ರವರಿ 6ರಿಂದ 22ರವರೆಗೆ ಲೊಂಬಾರ್ಡಿ ಮತ್ತು ಉತ್ತರ–ಪೂರ್ವ ಇಟಲಿಯ ವಿವಿಧ ಸ್ಥಳಗಳಲ್ಲಿ ನಡೆಯಲಿದೆ.

ಈ ಸಂದರ್ಭದಲ್ಲಿ ಜಗದ್ಗುರು XIVನೇ ಲಿಯೋರವರು ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪಾರೊಲಿನ್ ಸಹಿ ಮಾಡಿರುವ ಸಂದೇಶವನ್ನು ಕೋಮೊ ಧರ್ಮಾಧ್ಯಕ್ಷರಾದ ಕಾರ್ಡಿನಲ್ ಆಸ್ಕರ್ ಕಾಂಟೋನಿರವರಿಗೆ ಕಳುಹಿಸಿದರು. ಆ ಸಂದೇಶವನ್ನು ಬಲಿ ಪೂಜೆಯ ಸಂದರ್ಭದಲ್ಲಿ ಓದಲಾಯಿತು.

ಜಗದ್ಗರುಗಳು ಬೊರ್ಮಿಯೊ ಪ್ರಾಂತ್ಯದ ಜನತೆಗೆ ಹಾಗೂ ಮಿಲಾನೊ–ಕೋರ್ಟಿನಾ ಒಲಿಂಪಿಕ್ಸ್‌ಗಾಗಿ ಶ್ರಮಿಸುತ್ತಿರುವ ಎಲ್ಲರಿಗೂ ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ಕಳುಹಿಸಿದರು. ನಾಲ್ಕು ವರ್ಷಕ್ಕೊಮ್ಮೆ ಜಗತ್ತಿನಾದ್ಯಂತದ ವೃತ್ತಿಪರ ಮತ್ತು ಹವ್ಯಾಸಿ ಕ್ರೀಡಾಪಟುಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಈ ಪುರಾತನ ಕ್ರೀಡೋತ್ಸವದ ಮಹತ್ವವನ್ನು ಅವರು ಪ್ರಶಂಸಿಸಿದರು.

ಈ ಕ್ರೀಡಾಕೂಟವು ನ್ಯಾಯಸಮ್ಮತ ಆಟ, ಪರಸ್ಪರ ಗೌರವ, ತಂಡಭಾವನೆ ಮತ್ತು ತ್ಯಾಗದಂತಹ ಕ್ರೀಡೆಯ ನಿಜವಾದ ಮೌಲ್ಯಗಳನ್ನು ಉತ್ತೇಜಿಸುವ ಉತ್ತಮ ಅವಕಾಶವಾಗಲಿ; ಜೊತೆಗೆ ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಭೇಟಿಯ ಆನಂದವನ್ನು ಬೆಳೆಸಲಿ ಎಂಬುದು ಜಗದ್ಗುರುಗಳ ಆಶಯವಾಗಿದೆ.

ಉತ್ತರ ಇಟಲಿಯ ಧರ್ಮ ಕೇಂದ್ರದ ಸಮುದಾಯಗಳು ಉದಾರ ಕ್ರೈಸ್ತ ಸಾಕ್ಷಿಯನ್ನು ನೀಡುವ ಮೂಲಕ, ಸಹೋದರತ್ವಕ್ಕೆ ಎಲ್ಲರನ್ನು ಕರೆಯುವ ಕ್ರಿಸ್ತನ ಸಾನ್ನಿಧ್ಯದ ಪ್ರಕಾಶಮಾನ ಚಿಹ್ನೆಗಳಾಗಬೇಕೆಂದು ಜಗದ್ಗುರುಗಳು ಆಹ್ವಾನಿಸಿದರು. ಅಂತಿಮವಾಗಿ, 2026ರ ಮಿಲಾನೊ–ಕೋರ್ಟಿನಾ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲರಿಗೂ ತಮ್ಮ ಪ್ರಾರ್ಥನೆಗಳ ಭರವಸೆಯನ್ನು ನೀಡುತ್ತಾ, ಸಮೃದ್ಧ ದೈವಿಕ ಅನುಗ್ರಹಗಳ ಸಂಕೇತವಾದ ತಮ್ಮ ಪ್ರೇಷಿತರ ಆಶೀರ್ವಾದವನ್ನು ಅವರು ನೀಡಿದರು.

30 ಜನವರಿ 2026, 20:22