ಹುಡುಕಿ

“ರಾಜಕೀಯ ನವೀನತಾ ಹ್ಯಾಕಥಾನ್: ಒಂದೇ ಮಾನವಕುಲ, ಒಂದೇ ಗ್ರಹದಲ್ಲಿ ಭಾಗವಹಿಸಿದವರಿಗೆ ಜಗದ್ಗುರು ಲಿಯೋರವರ ಸಂದೇಶ “ರಾಜಕೀಯ ನವೀನತಾ ಹ್ಯಾಕಥಾನ್: ಒಂದೇ ಮಾನವಕುಲ, ಒಂದೇ ಗ್ರಹದಲ್ಲಿ ಭಾಗವಹಿಸಿದವರಿಗೆ ಜಗದ್ಗುರು ಲಿಯೋರವರ ಸಂದೇಶ  (ANSA)

ಜಗದ್ಗುರು ಲಿಯೋರವರು : ‘ಮಾನವಕುಲವೇ ತನ್ನ ವಿರುದ್ಧ ಯುದ್ಧ ನಡೆಸುತ್ತಿರುವಾಗ ಶಾಂತಿ ಸಾಧ್ಯವಿಲ್ಲ’

ಜಗದ್ಗುರು XIVನೇ ಲಿಯೋರವರು ಪಾಲಿಟಿಕಲ್ ಇನೋವೇಶನ್ ಹ್ಯಾಕಥಾನ್ ಆಯೋಜಿಸಿದ ‘ಒನ್ ಹ್ಯೂಮ್ಯಾನಿಟಿ, ಒನ್ ಪ್ಲಾನೆಟ್’ ಸಮ್ಮೇಳನದಲ್ಲಿ ಭಾಗವಹಿಸಿದ್ದ ಯುವಕರನ್ನು ಉದ್ದೇಶಿಸಿ ಮಾತನಾಡುತ್ತಾ, “ಮಾನವಕುಲವೇ ತನ್ನ ವಿರುದ್ಧ ಯುದ್ಧ ನಡೆಸುತ್ತಿರುವಾಗ ಶಾಂತಿ ಸಾಧ್ಯವಿಲ್ಲ” ಎಂದು ಹೇಳಿದರು. ಅದೇ ವೇಳೆ, ಗರ್ಭದಲ್ಲಿರುವ ಶಿಶುವಿಗೆ ಜೀವದ ವರವನ್ನು ನಿರಾಕರಿಸುವ ಯಾವುದೇ ನೀತಿ, ಅಥವಾ ಅಗತ್ಯದಲ್ಲಿರುವವರಿಗೆ ಬೆಂಬಲ ನೀಡಲು ನಿರ್ಲಕ್ಷ್ಯ ವಹಿಸುವ ಯಾವುದೇ ನೀತಿ, ಜನರ ಸೇವೆಯನ್ನು ನಿಜಾರ್ಥದಲ್ಲಿ ಮಾಡಲಾರದು ಎಂದು ಜಗದ್ಗುರುಗಳು ಎಚ್ಚರಿಸಿದರು

ವ್ಯಾಟಿಕನ್ ವರದಿ

 

ಜಗದ್ಗುರು XIVನೇ ಲಿಯೋರವರು ಶನಿವಾರ “ಪಾಲಿಟಿಕಲ್ ಇನೋವೇಶನ್ ಹ್ಯಾಕಥಾನ್: ಒನ್ ಹ್ಯೂಮ್ಯಾನಿಟಿ, ಒನ್ ಪ್ಲಾನೆಟ್” ಸಮ್ಮೇಳನದ ಭಾಗವಹಿಸುವವರನ್ನು ಉದ್ದೇಶಿಸಿ ಮಾತನಾಡುತ್ತಾ, “ಮಾನವಕುಲವೇ ತನ್ನ ವಿರುದ್ಧ ಯುದ್ಧ ನಡೆಸುತ್ತಿರುವಾಗ ಶಾಂತಿ ಸಾಧ್ಯವಿಲ್ಲ” ಎಂದು ದೃಢವಾಗಿ ಹೇಳಿದರು. ರಾಜಕೀಯ ತೊಡಗಿಸಿಕೊಳ್ಳುವಿಕೆಯ ಮೂಲಕ ಸಾಮೂಹಿಕ ಹಿತವನ್ನು ಉತ್ತೇಜಿಸಲು ಬದ್ಧರಾಗಿರುವ ಯುವಜನರನ್ನು ಸ್ವಾಗತಿಸುವಲ್ಲಿ ತಮಗೆ ಅಪಾರ ಸಂತೋಷವಿದೆ ಎಂದು ಅವರು ಹೇಳಿದರು.

ಭಿನ್ನ ರಾಷ್ಟ್ರಗಳು, ಸಂಸ್ಕೃತಿಗಳು ಮತ್ತು ಧಾರ್ಮಿಕ ಪರಂಪರೆಗಳಿಂದ ಬಂದಿದ್ದರೂ, ಅವರ ವೈವಿಧ್ಯತೆ ವಿಭಜನೆಗೆ ಕಾರಣವಾಗದೆ, ಬದಲಾಗಿ ಸಹಭಾಗಿತ್ವ ಮತ್ತು ಸಂಯುಕ್ತ ಪ್ರಯಾಣದ ಶೈಲಿಯಲ್ಲಿ ಬೆಳವಣಿಗೆಗೆ ಅವಕಾಶವಾಗಿರುವುದು ಶ್ಲಾಘನೀಯವೆಂದು ಜಗದ್ಗುರುಗಳು ಹೇಳಿದರು. ಈ ಹಿನ್ನೆಲೆಯಲ್ಲಿ, ಜಗದ್ಗುರು ಫ್ರಾನ್ಸಿಸ್ ರವರಿಂದ ಪ್ರೇರಿತವಾಗಿರುವ ಹಾಗೂ ಲ್ಯಾಟಿನ್ ಅಮೆರಿಕದ ಜಗದ್ಗುರುಗಳ ಆಯೋಗದಿಂದ ಉತ್ತೇಜಿಸಲ್ಪಟ್ಟ “ಫೋರ್ ಡ್ರೀಮ್ಸ್” ಯೋಜನೆ ಸೇರಿದಂತೆ ಯುವಕರು ಕೈಗೊಂಡ ಅನೇಕ ಉಪಕ್ರಮಗಳಿಗೆ ಅವರು ಕೃತಜ್ಞತೆ ಸಲ್ಲಿಸಿದರು.

 ಕ್ವೆರಿಡ ಅಮಾಜೊನಿಯಾ ಎಂಬ ಪ್ರೇಷಿತರ ಉಪದೇಶದಲ್ಲಿ ಜಗದ್ಗುರು ಫ್ರಾನ್ಸಿಸ್ ರವರು ಧಾರ್ಮಿಕ, ಪರಿಸರ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪುನರುಜ್ಜೀವನದ ಕನಸು ಕಂಡಿದ್ದನ್ನು ಸ್ಮರಿಸಿದ ಜಗದ್ಗುರು ಲಿಯೋರವರು, ಅನ್ಯಾಯ, ಹಿಂಸಾಚಾರ ಮತ್ತು ಯುದ್ಧಗಳಿಂದ ಕಲುಷಿತವಾಗಿರುವ ಈ ಕಾಲದಲ್ಲಿ, ಆ ಕನಸುಗಳಿಗೆ ನಮ್ಮ ಶ್ರೇಷ್ಠ ಪ್ರಯತ್ನಗಳನ್ನು ಅರ್ಪಿಸುವುದು ಅತ್ಯಂತ ತುರ್ತು ಎಂದು ಒತ್ತಿ ಹೇಳಿದರು.

ನಾಯಕತ್ವದ ಪಾತ್ರದಲ್ಲಿರುವ ನೀವು, ರಾಷ್ಟ್ರಗಳ ನಡುವೆ ಮಾತ್ರವಲ್ಲದೆ, ನಿಮ್ಮ ದೈನಂದಿನ ಜೀವನದಲ್ಲಿಯೂ ನೀವು ವಾಸಿಸುವ, ಅಧ್ಯಯನ ಮಾಡುವ ಮತ್ತು ಕೆಲಸ ಮಾಡುವ ಸ್ಥಳಗಳಲ್ಲಿ—ಶಾಂತಿಯನ್ನು ನಿರ್ಮಿಸುವ ಹೊಣೆಗಾರಿಕೆ ಹೊಂದಿದ್ದೀರಿ ಎಂದು ಜಗದ್ಗುರುಗಳು ನೆನಪಿಸಿದರು. ವಿಶ್ವವಿದ್ಯಾಲಯಗಳು, ಕೆಲಸದ ಸ್ಥಳಗಳು ಅಥವಾ ರಾಜಕೀಯ ಹಾಗೂ ನಾಗರಿಕ ಸಂಘಟನೆಗಳಲ್ಲಿ ಸೌಹಾರ್ದತೆಯನ್ನು ಬೆಳೆಸಲು ನಾವು ವಿಫಲರಾದರೆ, ಸಂಪೂರ್ಣ ಸಮಾಜದಲ್ಲಿ ಅಥವಾ ಜನಾಂಗಗಳು ಮತ್ತು ಖಂಡಗಳ ನಡುವೆ ಶಾಂತಿಯನ್ನು ಹೇಗೆ ನಿರ್ಮಿಸಬಹುದು ಎಂದು ಅವರು ಪ್ರಶ್ನಿಸಿದರು.

ಶಾಂತಿ ಮೊದಲು ದೇವರ ಕೊಡುಗೆಯಾದರೂ, ಅದು ನಮಗೆ ಪರಸ್ಪರ ಜವಾಬ್ದಾರಿಯನ್ನು ನೀಡುತ್ತದೆ ಎಂದು ಜಗದ್ಗುರುಗಳು ವಿವರಿಸಿದರು. ಅದು ಇರುವಲ್ಲಿ ಶಾಂತಿಯನ್ನು ಕಾಪಾಡಲು ಮತ್ತು ಇಲ್ಲದಿರುವಲ್ಲಿ ಅದನ್ನು ಹಂಬಲಿಸಲು ನಮ್ಮನ್ನು ಬದ್ಧಗೊಳಿಸುತ್ತದೆ. ಈ ಕಾರ್ಯದಲ್ಲಿ ರಾಜಕೀಯಕ್ಕೆ ಅನಿವಾರ್ಯ ಪಾತ್ರವಿದ್ದು, ಎಲ್ಲಾ ನಾಗರಿಕರು ಪುರುಷರು ಮತ್ತು ಮಹಿಳೆಯರು ರಾಷ್ಟ್ರಗಳ ಸಂಸ್ಥಾತ್ಮಕ ಜೀವನದಲ್ಲಿ ಭಾಗವಹಿಸುವಂತೆ ಮಾಡುವ ಮಾರ್ಗಗಳನ್ನು ಒಟ್ಟಾಗಿ ಅನ್ವೇಷಿಸಬೇಕು ಎಂದು ಅವರು ಹೇಳಿದರು.

ಅಂತಿಮವಾಗಿ, ಜಗದ್ಗುರು XIVನೇ ಲಿಯೋ ರವರು, ದುರ್ಬಲರನ್ನು ತಿರಸ್ಕರಿಸುವುದು, ಬಡವರನ್ನು ಹೊರತುಪಡಿಸುವುದು ಮತ್ತು ಶರಣಾರ್ಥಿಗಳು ಹಾಗೂ ಹಿಂಸಿತರೆಡೆಗೆ ನಿರ್ಲಕ್ಷ್ಯ ತೋರುವುದು—ಇವೆಲ್ಲವೂ ಮಾನವಕುಲ ತನ್ನ ವಿರುದ್ಧವೇ ನಡೆಸುವ ಯುದ್ಧಗಳಾಗಿವೆ ಎಂದು ಎಚ್ಚರಿಸಿದರು. ತಾಯಿ ತೆರೇಸಾರವರ ಮಾತುಗಳನ್ನು ಉಲ್ಲೇಖಿಸಿ, ಗರ್ಭದಲ್ಲಿರುವ ಶಿಶುವಿಗೆ ಜೀವದ ವರವನ್ನು ನಿರಾಕರಿಸುವ ಅಥವಾ ಅಗತ್ಯದಲ್ಲಿರುವವರನ್ನು ಬೆಂಬಲಿಸಲು ವಿಫಲವಾಗುವ ಯಾವುದೇ ನೀತಿ ಜನರ ನಿಜವಾದ ಸೇವೆಯಾಗಲಾರದು ಎಂದರು. “ಒಬ್ಬನೇ ದೇವರು” ಎಂಬ ಅರಿವಿನೊಂದಿಗೆ, ಎಲ್ಲ ಧಾರ್ಮಿಕ ಪರಂಪರೆಗಳು ಸಾಮೂಹಿಕ ಹಿತಕ್ಕೆ ಕೊಡುಗೆ ನೀಡುವಂತೆ ಆಹ್ವಾನಿಸಿ, ಅವರು ತಮ್ಮ ಪ್ರೇಷಿತರ ಆಶೀರ್ವಾದವನ್ನು ನೀಡಿದರು.

31 ಜನವರಿ 2026, 00:00