ಹುಡುಕಿ

ವ್ಯಾಟಿಕನ್ ನಗರಕ್ಕೆ ಇಟಲಿಯ ಸಾವ೯ಜನಿಕ ಸುರಕ್ಷತಾ ತನಿಕಾಧಿಕಾರಿಗಳ ಸದಸ್ಯರನ್ನು ಜಗದ್ಗುರುಗಳು ಸ್ವಾಗತಿಸಿದರು. ವ್ಯಾಟಿಕನ್ ನಗರಕ್ಕೆ ಇಟಲಿಯ ಸಾವ೯ಜನಿಕ ಸುರಕ್ಷತಾ ತನಿಕಾಧಿಕಾರಿಗಳ ಸದಸ್ಯರನ್ನು ಜಗದ್ಗುರುಗಳು ಸ್ವಾಗತಿಸಿದರು.  (ANSA)

ವ್ಯಾಟಿಕನ್ ಸಿಟಿಯ ಸಾರ್ವಜನಿಕ ಭದ್ರತೆಗಾಗಿ ತನಿಖಾಧಿಕಾರಿಗಳಿಗೆ ಜಗದ್ಗುರುಗಳು ಕೃತಜ್ಞತೆ ವ್ಯಕ್ತಪಡಿಸಿದರು

ವ್ಯಾಟಿಕನ್ ಸಿಟಿಯ ಸುತ್ತಮುತ್ತ ಭಕ್ತರು ಹಾಗೂ ಯಾತ್ರಿಕರ ಭದ್ರತೆಯನ್ನು ಖಚಿತಪಡಿಸಲು ಮಾಡಿದ ಸೇವೆಗೆ ಇಟಲಿಯ ವ್ಯಾಟಿಕನ್ ಸಿಟಿಗಾಗಿ ಕಾರ್ಯನಿರ್ವಹಿಸುವ ಸಾರ್ವಜನಿಕ ಭದ್ರತಾ ತನಿಖಾಧಿಕಾರಿಗಳಿಗೆ ನಿರ್ದೇಶಕರು ಮತ್ತು ಪೊಲೀಸ್ ಅಧಿಕಾರಿಗಳಿಗೆ ಜಗದ್ಗುರು XIVನೇ ಲಿಯೋರವರು ಕೃತಜ್ಞತೆ ಸಲ್ಲಿಸಿದರು. ಜುಬಿಲಿ ಆಚರಣೆ, ಜಗದ್ಗುರು ಫ್ರಾನ್ಸಿಸ್ ರವರ ಅಂತ್ಯಕ್ರಿಯೆ ಹಾಗೂ ಕಾಂಕ್ಲೇವ್ ನಡೆದಂತಹ ಅತ್ಯಂತ ಗಾಢ ಮತ್ತು ಮಹತ್ವದ ವರ್ಷದಲ್ಲಿ ಅವರು ವಹಿಸಿದ ಜವಾಬ್ದಾರಿಯುತ ಮತ್ತು ನಿಷ್ಠಾವಂತ ಕಾರ್ಯವನ್ನು ಜಗದ್ಗುರುಗಳು ವಿಶೇಷವಾಗಿ ಪ್ರಶಂಶಿಸಿದರು.

ವ್ಯಾಟಿಕನ್ ವರದಿ

ಜಗದ್ಗುರು XIV ನೇ ಲಿಯೋರವರು ವ್ಯಾಟಿಕನ್ ಸಿಟಿಗಾಗಿ ಇಟಲಿಯ ಸಾರ್ವಜನಿಕ ಭದ್ರತಾ ತನಿಖಾದಿಕಾರಿಗಳ  ಸದಸ್ಯರನ್ನು ಸ್ವೀಕರಿಸಿ, ತಮ್ಮ ಹಾಗೂ ತಮ್ಮ ಸಹಕಾರಿಗಳು, ಹಾಗೆಯೇ ಸಂತ ಪೇತ್ರರ ಬಸಿಲಿಕಾ ಮತ್ತು ವ್ಯಾಟಿಕನ್‌ಗೆ ಭೇಟಿ ನೀಡುವ ಅನೇಕ ಯಾತ್ರಿಕರು ಮತ್ತು ಪ್ರವಾಸಿಗರ ಭದ್ರತೆಯನ್ನು ಖಚಿತಪಡಿಸುವಲ್ಲಿ ಅವರು ಸಲ್ಲಿಸುತ್ತಿರುವ ಅಮೂಲ್ಯ ಸೇವೆಗೆ ಹೃತ್ಪೂರ್ವಕ ಕೃತಜ್ಞತೆ ವ್ಯಕ್ತಪಡಿಸಿದರು. ಸಂತ ಪೀಟರ್ ಚೌಕ ಮತ್ತು ಅದರ ಸುತ್ತಮುತ್ತ ಸಾರ್ವಜನಿಕ ಸುವ್ಯವಸ್ಥೆ ಮತ್ತು ಭದ್ರತೆಯನ್ನು ಕಾಪಾಡುವುದು ಈ ತನಿಖಾಧಿಕಾರಿಗಳ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಜಗದ್ಗರುಗಳು ನೆನಪಿಸಿದರು.

ಇತ್ತೀಚೆಗೆ ಮುಕ್ತಾಯಗೊಂಡ ಜುಬಿಲಿ ವರ್ಷ, ಜಗದ್ಗುರು ಫ್ರಾನ್ಸಿಸ್ ರವರ ನಿಧನ, ಅವರ ಅಂತ್ಯಕ್ರಿಯೆ ಹಾಗೂ ಕಾಂಕ್ಲೇವ್‌ನಂತಹ ಅತ್ಯಂತ ಗಾಢ ಸಂದರ್ಭಗಳಲ್ಲಿ ಅಧಿಕಾರಿಗಳು ತೋರಿದ ನಿಷ್ಠಾವಂತ ಸೇವೆಯನ್ನು ಜಗದ್ಗುರುಗಳು ವಿಶೇಷವಾಗಿ ಪ್ರಶಂಶಿಸಿದರು. ಯೋಜಿತವಾಗಿಯೂ ಅಪ್ರತೀಕ್ಷಿತವಾಗಿಯೂ ಸಂಭವಿಸಿದ ವೇಗದ ಘಟನೆಗಳ ನಡುವೆ, ಶಿಸ್ತು, ವೃತ್ತಿಪರತೆ, ಮತ್ತು ವಿವೇಕದಿಂದ ಕಾರ್ಯನಿರ್ವಹಿಸಿ ಎಲ್ಲವೂ ಸುವ್ಯವಸ್ಥಿತವಾಗಿ ನಡೆಯುವಂತೆ ಮಾಡಿದುದನ್ನು ಅವರು ಮೆಚ್ಚಿದರು.

ಕಳೆದ ಕೆಲವು ತಿಂಗಳಲ್ಲಿ 33 ಮಿಲಿಯನ್‌ಕ್ಕಿಂತ ಹೆಚ್ಚು ಯಾತ್ರಿಕರು ರೋಮ್ ಮತ್ತು ಜುಬಿಲಿ ಸ್ಥಳಗಳಿಗೆ ಭೇಟಿ ನೀಡಿದ್ದು, ವಿಶೇಷವಾಗಿ ವ್ಯಾಟಿಕನ್ ಬಸಿಲಿಕಾ ಮತ್ತು ಅದರ ಸುತ್ತಲಿನ ಪ್ರದೇಶಗಳಲ್ಲಿ ಅಪಾರ ಜನಸಂದಣಿಯನ್ನು ನಿರ್ವಹಿಸುವುದು ದೊಡ್ಡ ಸವಾಲಾಗಿತ್ತು ಎಂದು ಜಗದ್ಗರುಗಳು ಹೇಳಿದರು. ಕಠಿಣ ಹವಾಮಾನ, ದೀರ್ಘ ಸಮಯದ ಕರ್ತವ್ಯಗಳು ಮತ್ತು ಅಸೌಕರ್ಯದ ವೇಳಾಪಟ್ಟಿಗಳ ನಡುವೆಯೂ ಅಧಿಕಾರಿಗಳು ಭದ್ರತೆಯನ್ನು ಕಾಪಾಡಿದ ರೀತಿ ಶ್ಲಾಘನೀಯವೆಂದು ಅವರು ಹೇಳಿದರು.

ಈ ಸೇವೆಯ ಹಿಂದೆ ನಿಂತಿರುವ ಅಧಿಕಾರಿಗಳ ಕುಟುಂಬಸ್ಥರಿಗೂ ಜಗದ್ಗುರುಗಳು ಕೃತಜ್ಞತೆ ಸಲ್ಲಿಸಿದರು. ತಮ್ಮ ಪ್ರಿಯಜನರ ಸಮಯವನ್ನು ತ್ಯಾಗ ಮಾಡಿ, ಅಸಾಧಾರಣ ಕೆಲಸದ ಒತ್ತಡ ಮತ್ತು ಬದಲಾದ ಸಮಯಗಳಿಗೆ ಹೊಂದಿಕೊಂಡು, ಪರೋಕ್ಷವಾಗಿ ಈ ಸೇವೆಯಲ್ಲಿ ಪಾಲುಗೊಂಡ ಕುಟುಂಬಗಳ ಸಹನೆಯನ್ನು ಅವರು ಗೌರವದಿಂದ ಸ್ಮರಿಸಿದರು.

ಭಾಷಣದ ಅಂತ್ಯದಲ್ಲಿ, ಶಿಸ್ತು ಮತ್ತು ಭದ್ರತೆ ಎಲ್ಲರ ಹಿತಕ್ಕಾಗಿ ತ್ಯಾಗವನ್ನು ಬೇಡುವ ಮಹತ್ವದ ಕೊಡುಗೆಗಳೆಂದು ಜಗದ್ಗುರುಗಳು ತಿಳಿಸಿದರು. ರಾಜ್ಯ ಪೊಲೀಸ್‌ರ ಪೋಷಕ ಸಂತ ಮೈಕೆಲ್ ಮಹಾದೂತರ ಮಧ್ಯಸ್ಥಿಕೆಗೆ ತಿರುಗಿಕೊಳ್ಳುವಂತೆ ಪ್ರೋತ್ಸಾಹಿಸಿ, ಧನ್ಯ ಮಾತೆ ಮರಿಯಮ್ಮನವರ ಹಾಗೂ ಸಂತ ಮೈಕೆಲ್ ರವರ ರಕ್ಷಣೆಗೆ ಅಧಿಕಾರಿಗಳು ಮತ್ತು ಅವರ ಸೇವೆಯನ್ನು ಒಪ್ಪಿಸಿದರು.

19 ಜನವರಿ 2026, 00:00