ಹುಡುಕಿ

ಜಗದ್ಗುರು XIV ನೇ ಲಿಯೋರವರು ಜಗದ್ಗುರು XIV ನೇ ಲಿಯೋರವರು   (ANSA)

ಇಟಾಲಿಯನ್ ಪತ್ರಿಕೆಗೆ ಜಗದ್ಗುರುಗಳು: ಸಂವಾದವನ್ನು ಉತ್ತೇಜಿಸಿ, ಧ್ರುವೀಕರಣಕ್ಕೆ ಪ್ರತಿರೋಧ ವಹಿಸಿ

ಇಟಾಲಿಯನ್ ಪತ್ರಿಕೆ “ಇಲ್ ಫೊಲಿಯೋ” (Il Foglio) ಸ್ಥಾಪನೆಯ 30ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನೀಡಿದ ಸಂದೇಶದಲ್ಲಿ, ಜಗದ್ಗುರು XIVನೇ ಲಿಯೋರವರು ವಾಸ್ತವಿಕತೆಯನ್ನು ತನ್ನದೇ ವ್ಯಂಗ್ಯ ರೂಪಕ್ಕೆ ಇಳಿಸುವಂತಹ ಅತಿರೇಕ ಮತ್ತು ತಪ್ಪುಮಾರ್ಗದ ಧ್ರುವೀಕರಣಕ್ಕೆ ಪ್ರತಿರೋಧ ವಹಿಸುವ ಜವಾಬ್ದಾರಿಯನ್ನು ಮಾಧ್ಯಮಗಳಿಗೆ ನೆನಪಿಸಿದರು.

ವ್ಯಾಟಿಕನ್ ನ್ಯೂಸ್

 

ಸ್ವತಂತ್ರ ಪತ್ರಿಕೆಗಳು ಮತ್ತು ಸಾಮಾನ್ಯವಾಗಿ ಎಲ್ಲ ಮಾಧ್ಯಮಗಳಿಗೂ ಒಂದು ವಿಶಿಷ್ಟ ಕರ್ತವ್ಯವಿದೆ ಮಾಹಿತಿ ನೀಡುವ ಮೂಲಕ ಶಿಕ್ಷಣ ನೀಡುವುದು, ಹಾಗೆಯೇ ಹೆಚ್ಚು ನ್ಯಾಯಸಮ್ಮತ ಮತ್ತು ಶಾಂತಿಪೂರ್ಣ ಜಗತ್ತಿನ ನಿರ್ಮಾಣಕ್ಕೆ ಕೊಡುಗೆ ನೀಡುವುದು ಎಂದು ಜಗದ್ಗುರುಗಳು ಹೇಳಿದರು.

ಇಟಾಲಿಯನ್ ಪತ್ರಿಕೆ ಇಲ್ ಫೊಲಿಯೋ ಸಂಪಾದಕರಾದ ಕ್ಲಾಡಿಯೋ ಚೆರಾಸರವರಿಗೆ ಉದ್ದೇಶಿಸಿ ಬರೆದ ಪತ್ರದಲ್ಲಿ ಜಗದ್ಗುರುಗಳು ಈ ಮಾತುಗಳನ್ನು ಉಲ್ಲೇಖಿಸಿದರು. ಈ ಸಂದೇಶವನ್ನು ಜನವರಿ 23ರಂದು ದಿನಾಂಕಿತಗೊಳಿಸಿ, ಶನಿವಾರ ಜನವರಿ 31ರಂದು ಪ್ರಕಟಿಸಲಾಯಿತು.

ಇಂತಹ ಆಳವಾದ ಬದಲಾವಣೆಯ ವರ್ಷಗಳಲ್ಲಿ, ಎಂದು ಜಗದ್ಗುರುಗಳು ಬರೆದಿದ್ದಾರೆ, ಮಾಹಿತಿಯ ಕ್ಷೇತ್ರದಲ್ಲಿ ಬಹುಸ್ವರೂಪದ  ಕೊಡುಗೆಯ ಕಾರ್ಯದ ಮೂಲಕ ನೀವು ನೀಡಿರುವುದು ಸ್ವಾತಂತ್ರ್ಯದ ಭದ್ರತೆಯಾಗಿ ಕಾರ್ಯನಿರ್ವಹಿಸಿದೆ ಮತ್ತು ಮುಂದುವರಿಯುತ್ತದೆ.

ಇದಿಲ್ಲದೆ ಇದ್ದರೆ, ಚಿಂತನೆಯ ಸ್ವಾತಂತ್ರ್ಯ ಇರುವುದಿಲ್ಲ ಬದಲಾಗಿ ಪ್ರತಿಯೊಬ್ಬ ಮಾನವನ ಘನತೆ ಮತ್ತು ಅವನ ಅಥವಾ ಅವಳಿಗೆ ಯೋಚಿಸುವ ಹಕ್ಕಿನ ನಿರಾಕರಣೆ ಉಂಟಾಗುತ್ತದೆ ಎಂದು ಜಗದ್ಗುರುಗಳು ಎಚ್ಚರಿಸಿದರು.

ಜಗದ್ಗರು XIVನೇ ಲಿಯೋರವರು ಸ್ವತಂತ್ರ ಪತ್ರಿಕೆಗಳನ್ನು, ವಾಸ್ತವಿಕತೆಯನ್ನು ತನ್ನದೇ ವ್ಯಂಗ್ಯ ರೂಪಕ್ಕೆ ಇಳಿಸುವಂತಹ ಅತಿರೇಕ ಮತ್ತು ತಪ್ಪು ದಾರಿ ತೋರಿಸುವ ಧ್ರುವೀಕರಣಕ್ಕೆ ಎದುರಾಗಿ ನಿಲ್ಲಲು ಪ್ರೋತ್ಸಾಹಿಸಿದರು. ಈ ರೀತಿಯ ಧ್ರುವೀಕರಣದಲ್ಲಿ ಸಾಂಸ್ಕೃತಿಕ ಮತ್ತು ಧಾರ್ಮಿಕ ಬೇರುಗಳನ್ನು ಕೇವಲ ಲೇಬಲ್‌ಗಳಿಗೆ ಇಳಿಸಲಾಗುತ್ತದೆ ಮತ್ತು ಚಿಂತನೆ ಸರಳ ಲೆಕ್ಕಾಚಾರವಾಗಿ ಮಾರ್ಪಡುತ್ತದೆ ಎಂದು ಅವರು ಹೇಳಿದರು.

ಅಂತಿಮವಾಗಿ, ಪತ್ರಕರ್ತರು ವಾಸ್ತವಗಳ ವಸ್ತುನಿಷ್ಠ ವರದಿಯನ್ನು ಅಭಿಪ್ರಾಯಗಳ ಪ್ರದರ್ಶನದಿಂದ ಸ್ಪಷ್ಟವಾಗಿ ಬೇರ್ಪಡಿಸಬೇಕು ಎಂದು ಜಗದ್ಗುರುಗಳು ಒತ್ತಿ ಹೇಳಿದರು. ಅಭಿಪ್ರಾಯಗಳು ಯಾವಾಗಲೂ ಸಂವಾದಕ್ಕೆ ತೆರೆಯಲ್ಪಟ್ಟಿರಬೇಕು ಎಂದರು.

ಇಲ್ ಫೊಲಿಯೋ ಪತ್ರಿಕೆ “ಸಂಘರ್ಷಗಳಲ್ಲ, ಭೇಟಿಗಳಿಂದ ನಿರ್ಮಿತ ಭವಿಷ್ಯವನ್ನು ಕಟ್ಟುವ ಮತ್ತು ನಮ್ಮ ಜೀವನದ ಸೌಂದರ್ಯವನ್ನು ರಕ್ಷಿಸುವ ಆಸೆಯಿಂದ ಸದಾ ಪ್ರೇರಿತವಾಗಿರಲಿ ಎಂಬ ಆಶಯವನ್ನು ಜಗದ್ಗುರುಗಳು ವ್ಯಕ್ತಪಡಿಸಿದರು.

31 ಜನವರಿ 2026, 00:00