ಹುಡುಕಿ

ಜಗದ್ಗುರುಗಳು ವೆನೆಜುವೆಲಾದ ನೋಬೆಲ್ ಪ್ರಶಸ್ತಿ ವಿಜೇತೆ ಮರಿಯಾ ಕೊರಿನಾ ಮಚಾಡೊರವರನ್ನು ಭೇಟಿಯಾದರು ಜಗದ್ಗುರುಗಳು ವೆನೆಜುವೆಲಾದ ನೋಬೆಲ್ ಪ್ರಶಸ್ತಿ ವಿಜೇತೆ ಮರಿಯಾ ಕೊರಿನಾ ಮಚಾಡೊರವರನ್ನು ಭೇಟಿಯಾದರು 

ಜಗದ್ಗುರುಗಳು ವೆನೆಜುವೆಲಾದ ನೋಬೆಲ್ ಪ್ರಶಸ್ತಿ ವಿಜೇತೆ ಮರಿಯಾ ಕೊರಿನಾ ಮಚಾಡೊರವರನ್ನು ಭೇಟಿಯಾದರು

ಜಗದ್ಗುರು ಲಿಯೋರವರು ವೆನೆಜುವೆಲಾದ ರಾಜಕಾರಣಿ ಹಾಗೂ ಹೋರಾಟಗಾರ್ತಿ ಮರಿಯಾ ಕೊರಿನಾ ಮಚಾಡೊರವರನ್ನು ವಾಟಿಕನ್‌ನ ಪ್ರೇಷಿತರ ಅರಮನೆಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.

ವ್ಯಾಟಿಕನ್ ವರದಿ

ವಾಟಿಕನ್‌ನ ಪ್ರೇಷಿತರ ಅರಮನೆಯಲ್ಲಿ  ನಡೆದ ಸಭೆಗಳೊಂದಿಗೆ  ಸೋಮವಾರದ ಬೆಳಿಗ್ಗೆಯ ಅಂತ್ಯದಲ್ಲಿ, ಜಗದ್ಗುರು XIVನೇ ಲಿಯೋರವರು ವೆನೆಜುವೆಲಾದ ಮಾಜಿ ರಾಷ್ಟ್ರೀಯ ಸಭಾ ಸದಸ್ಯೆ ಹಾಗೂ 2025ರ ಅಕ್ಟೋಬರ್‌ನಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಮರಿಯಾ ಕೊರಿನಾ ಮಚಾಡೊ ರವರನ್ನು ಭೇಟಿಯಾದರು. ಈ ಭೇಟಿ ವ್ಯಾಟಿಕನ್ ಮಟ್ಟದಲ್ಲಿ ವೆನೆಜುವೆಲಾದ ರಾಜಕೀಯ ಸ್ಥಿತಿಗತಿಗಳಿಗೆ ನೀಡುತ್ತಿರುವ ಮಹತ್ವವನ್ನು ಪ್ರತಿಬಿಂಬಿಸುತ್ತದೆ.

ಈ ಭೇಟಿ ಜನವರಿ 3ರಂದು ವೆನೆಜುವೆಲಾದ ರಾಜಧಾನಿ ಕರಾಕಾಸ್‌ನಲ್ಲಿ ನಡೆದ ಅಮೆರಿಕದ ಸೇನಾ ಕಾರ್ಯಾಚರಣೆ ಆಪರೇಶನ್ ಅಬ್ಸಲ್ಯೂಟ್ ರಿಸಾಲ್ವ್ ವೇಳೆ ಅಧ್ಯಕ್ಷ ನಿಕೊಲಾಸ್ ಮದುರೋ ಹಾಗೂ ಅವರ ಪತ್ನಿ ಸಿಲಿಯಾ ಫ್ಲೋರೆಸ್ ಬಂಧನಗೊಂಡು ಸುಮಾರು ಹತ್ತು ದಿನಗಳ ನಂತರ ನಡೆಯಿತು. ಮಾದಕ ದ್ರವ್ಯ ಸಾಗಣೆ ಮತ್ತು ನಾರ್ಕೋ-ಭಯೋತ್ಪಾದನೆ ಆರೋಪ ಎದುರಿಸುತ್ತಿರುವ ಮದುರೋ ಈಗ ಅಮೆರಿಕದ ಬ್ರೂಕ್ಲಿನ್‌ನ ಮೆಟ್ರೋಪಾಲಿಟನ್ ಡಿಟೆನ್ಶನ್ ಸೆಂಟರ್‌ನಲ್ಲಿ ಬಂಧನದಲ್ಲಿದ್ದಾರೆ.

ಮರಿಯಾ ಕೊರಿನಾ ಮಚಾಡೊರವರು ವೆನೆಜುವೆಲಾದ ಪ್ರಮುಖ ರಾಜಕಾರಣಿ ಮತ್ತು ಮಾನವ ಹಕ್ಕುಗಳ ಹೋರಾಟಗಾರ್ತಿ. ಅವರು ಮದುರೋ ಸರ್ಕಾರವನ್ನು ನಿರಂತರವಾಗಿ ವಿರೋಧಿಸಿದ "ವೆಂತೆ ವೆನೆಜುವೆಲಾ” ಎಂಬ ಲಿಬರಲ್–ಕನ್ಸರ್ವೇಟಿವ್ ಪಕ್ಷದ ನಾಯಕಿಯಾಗಿದ್ದಾರೆ. ದೇಶ ತೊರೆಯಲು ಬಲವಂತಗೊಳಿಸಲ್ಪಟ್ಟ ಅವರು, ಡಿಸೆಂಬರ್‌ನಲ್ಲಿ ಆಸ್ಲೋಗೆ ತೆರಳಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಮಧ್ಯೆ, ಡೆಲ್ಸಿ ರೋಡ್ರಿಗಸ್ ರವರ ನೇತೃತ್ವದಲ್ಲಿ ವೆನೆಜುವೆಲಾದಲ್ಲಿ ಮಧ್ಯಂತರ ಆಡಳಿತ ನಡೆಯುತ್ತಿದ್ದು, ಅಂತರರಾಷ್ಟ್ರೀಯ ಸಮುದಾಯದ ಬೆಂಬಲದೊಂದಿಗೆ ರಾಜಕೀಯ ಪರಿವರ್ತನೆಗೆ ಪ್ರಯತ್ನಗಳು ನಡೆಯುತ್ತಿವೆ.

ಜನವರಿ 4ರಂದು ನಡೆದ ತ್ರಿಕಾಲ ಪ್ರಾರ್ಥನೆಯ ವೇಳೆ, ಜಗದ್ಗುರು XIVನೇ ಲಿಯೋರವರು ವೆನೆಜುವೆಲಾದ ಬೆಳವಣಿಗೆಗಳನ್ನು ಆಳವಾದ ಕಳವಳದೊಂದಿಗೆ ಗಮನಿಸುತ್ತಿರುವುದಾಗಿ ಹೇಳಿದರು. ಹಿಂಸಾಚಾರವನ್ನು ತೊರೆದು ನ್ಯಾಯ ಮತ್ತು ಶಾಂತಿಯ ಮಾರ್ಗವನ್ನು ಅನುಸರಿಸಬೇಕು, ಹಾಗೂ ವೆನೆಜುವೆಲಾದ ಜನರ ಹಿತವೇ ಎಲ್ಲಕ್ಕಿಂತ ಮೇಲಿರಬೇಕು ಎಂದು ಅವರು ಒತ್ತಿಹೇಳಿದರು. ಜೊತೆಗೆ ಪ್ರತಿಯೊಬ್ಬರ ಮಾನವ ಮತ್ತು ನಾಗರಿಕ ಹಕ್ಕುಗಳನ್ನು ಗೌರವಿಸುವ ಅಗತ್ಯವಿದೆ ಎಂದು ಕರೆ ನೀಡಿದರು.

ಜನವರಿ 9ರಂದು ಪವಿತ್ರ ಸಿಂಹಾಸನದ ಬಳಿ ಮಾನ್ಯತೆ ಪಡೆದ ರಾಜತಾಂತ್ರಿಕ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿಯೂ ಜಗದ್ಗುರು ತಮ್ಮ ಮನವಿಯನ್ನು ಪುನರುಚ್ಚರಿಸಿದರು. ನ್ಯಾಯ, ಸತ್ಯ, ಸ್ವಾತಂತ್ರ್ಯ ಮತ್ತು ಸಹೋದರತ್ವದ ಮೇಲೆ ಆಧಾರಿತ ಸಮಾಜವನ್ನು ನಿರ್ಮಿಸುವ ಮೂಲಕ ವೆನೆಜುವೆಲಾ ತನ್ನ ದೀರ್ಘಕಾಲದ ಗಂಭೀರ ಸಂಕಷ್ಟದಿಂದ ಹೊರಬರಬೇಕು ಎಂದು ಅವರು ಹೇಳಿದರು. ವೆನೆಜುವೆಲಾದ ಜನರ ಇಚ್ಛೆಯನ್ನು ಗೌರವಿಸಿ, ಎಲ್ಲರ ಮಾನವ ಹಾಗೂ ನಾಗರಿಕ ಹಕ್ಕುಗಳನ್ನು ರಕ್ಷಿಸುವ ಮೂಲಕ ಸ್ಥಿರತೆ ಮತ್ತು ಸೌಹಾರ್ದತೆಯ ಭವಿಷ್ಯವನ್ನು ಖಚಿತಪಡಿಸಬೇಕೆಂದು ಜಗದ್ಗುರುಗಳು ಆಹ್ವಾನಿಸಿದರು.

12 ಜನವರಿ 2026, 22:26