ಹುಡುಕಿ

ತ್ರಿಕಾಲ ಪ್ರಾಥ೯ನೆಯಲ್ಲಿ ಜಗದ್ಗುರು XIV ನೇ ಲಿಯೋರವರು ತ್ರಿಕಾಲ ಪ್ರಾಥ೯ನೆಯಲ್ಲಿ ಜಗದ್ಗುರು XIV ನೇ ಲಿಯೋರವರು  (ANSA)

ತ್ರಿಕಾಲ ಪ್ರಾರ್ಥನೆಯಲ್ಲಿ ಜಗದ್ಗುರುಗಳು: ದೇವರು ನಮ್ಮನ್ನು ಎಂದಿಗೂ ತ್ಯಜಿಸುವುದಿಲ್ಲ

ಯೇಸು ಹೇಳಿದ ಅಷ್ಟ ಭಾಗ್ಯಗಳ ಕುರಿತು ಚಿಂತನೆ ಮಾಡುತ್ತ, ಜಗದ್ಗುರು XIVನೇ ಲಿಯೋರವರು ಯೇಸುವನ್ನು ಭೇಟಿಯಾಗುವುದರಿಂದ ದಿನನಿತ್ಯದ ಜೀವನಕ್ಕೆ ನಿಜವಾದ ಆನಂದ, ರುಚಿ ಮತ್ತು ಬೆಳಕು ದೊರೆಯುತ್ತದೆ ಎಂದು ತಿಳಿಸಿದರು. ನಾವು ಮನೋನಿಂದನೆಗೊಳಗಾಗಿರುವ ಸಂದರ್ಭಗಳಲ್ಲಿಯೂ ಸಹ, ತಂದೆಯಾದ ದೇವರು ನಮ್ಮ ಹೆಸರುಗಳಿಗೂ ಮತ್ತು ನಮ್ಮ ವೈಶಿಷ್ಟ್ಯತೆಗೂ ಕಾಳಜಿ ವಹಿಸುತ್ತಾನೆ ಎಂದು ಅವರು ಒತ್ತಿ ಹೇಳಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಸಂತ ಪೇತ್ರರ ಚೌಕದಲ್ಲಿ ನಡೆದ ತ್ರಿಕಾಲ ಪ್ರಾರ್ಥನೆಯ ಸಂದರ್ಭದಲ್ಲಿ,ಅಷ್ಟ ಭಾಗ್ಯಗಳನ್ನು ಘೋಷಿಸಿದ ನಂತರ ಯೇಸು ಹೇಳಿದ ವಾಕ್ಯಗಳ ಕುರಿತು ಚಿಂತನೆ ನಡೆಸಿದರು. ಯೇಸು ಕೇವಲ ಅಷ್ಟ ಭಾಗ್ಯಗಳನ್ನು ಪಟ್ಟಿ ಮಾಡುವುದಷ್ಟೇ ಅಲ್ಲ, ಅವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವವರಿಗೆ ಉದ್ದೇಶಿಸಿ, ಅವುಗಳ ಮೂಲಕ ಭೂಮಿಯೂ ಮತ್ತು ಲೋಕವೂ ಇನ್ನು ಹಿಂದಿನಂತಿರಲಾರದು, ಅಂಧಕಾರದಲ್ಲಿರುವುದಿಲ್ಲ ಎಂದು ಘೋಷಿಸುತ್ತಾನೆ ಎಂದು ಜಗದ್ಗುರುಗಳು ವಿವರಿಸಿದರು.

ಜಗದ್ಗುರುಗಳ ಪ್ರಕಾರ, ನಿಜವಾದ ಆನಂದವು ಜೀವನದ ಕತ್ತಲೆಯ ಭಾಗಗಳಿಗೆ ರುಚಿ ಮತ್ತು ಬೆಳಕನ್ನು ನೀಡುತ್ತದೆ. ಈ ಆನಂದವು ನಿರ್ದಿಷ್ಟ ಜೀವನಶೈಲಿಯಿಂದ ಉದ್ಭವಿಸುತ್ತದೆ ಭೂಮಿಯಲ್ಲಿ ಹೇಗೆ ಬದುಕಬೇಕು, ಪರಸ್ಪರ ಹೇಗೆ ಜೀವನ ಹಂಚಿಕೊಳ್ಳಬೇಕು ಎಂಬುದನ್ನು ತಿಳಿಸುವ ಜೀವನಮಾರ್ಗ. ಈ ಹೊಸ ಜೀವನಪಥವು ಯೇಸುವಿನ ವ್ಯಕ್ತಿತ್ವದಲ್ಲೂ, ಅವರ ವಚನಗಳಲ್ಲೂ ಹಾಗೂ ಕಾರ್ಯಗಳಲ್ಲೂ ಪ್ರಕಾಶಮಾನವಾಗಿ ಕಾಣಿಸುತ್ತದೆ ಎಂದು ಅವರು ಹೇಳಿದರು.

ಯಾರೊಬ್ಬರು ಆತ್ಮದಲ್ಲಿ ದರಿದ್ರನಾಗಿರುವ, ವಿನಮ್ರನಾಗಿರುವ, ಹೃದಯದಲ್ಲಿ ಶುದ್ಧನಾಗಿರುವ ಮತ್ತು ನ್ಯಾಯಕ್ಕಾಗಿ ಹಾತೊರೆಯುವ ಯೇಸುವನ್ನು ಎದುರಿಸಿದಾಗ, ಅವರ ಜೀವನವು ನಿರಾಸಕ್ತ ಮತ್ತು ನಿರುತ್ಸಾಹದ ಜೀವನವಾಗಿಯೇ ಉಳಿಯುವುದಿಲ್ಲ ಎಂದು ಜಗದ್ಗುರುಗಳು ಹೇಳಿದರು. ಆ ಭೇಟಿ ಮೂಲಕ ಕರುಣೆ ಮತ್ತು ಶಾಂತಿ ಪರಿವರ್ತನೆ ಮತ್ತು ಸಮ್ಮಿಲನದ ಶಕ್ತಿಗಳಾಗಿ ಮುಕ್ತಗೊಳ್ಳುತ್ತವೆ ಎಂದು ಅವರು ಒತ್ತಿ ಹೇಳಿದರು.

ಪ್ರವಾದಿ ಯೆಶಾಯನ ಗ್ರಂಥವನ್ನು ಉಲ್ಲೇಖಿಸುತ್ತಾ, ಅನ್ಯಾಯವನ್ನು ಮೀರಿಸಿಕೊಳ್ಳಲು ಪ್ರಾಯೋಗಿಕ ಮಾರ್ಗಗಳನ್ನು ಜಗದ್ಗುರುಗಳು ವಿವರಿಸಿದರು. ಹಸಿದವರಿಗೆ ಆಹಾರ ಹಂಚುವುದು, ಬಡವರು ಮತ್ತು ಗೃಹರಹಿತರನ್ನು ಮನೆಯಲ್ಲಿ ಸ್ವೀಕರಿಸುವುದು, ನಿರ್ವಸ್ತ್ರರಿಗೆ ವಸ್ತ್ರ ನೀಡುವುದು ಮತ್ತು ನಮ್ಮ ಮನೆಗಳಲ್ಲಿಯೂ ಪಕ್ಕದವರಲ್ಲಿಯೂ ಇರುವವರನ್ನು ನಿರ್ಲಕ್ಷಿಸದೇ ನೋಡಿಕೊಳ್ಳುವುದು. ಇಂತಹ ಕಾರ್ಯಗಳ ನಂತರ, ನಿಮ್ಮ ಬೆಳಕು ಪ್ರಭಾವದಂತೆ ಪ್ರಕಾಶಿಸುವುದು, ನಿಮ್ಮ ಗಾಯಗಳು ಶೀಘ್ರವಾಗಿ ಗುಣವಾಗುವುದು ಎಂಬ ವಾಕ್ಯದ ಆಳವಾದ ಅರ್ಥವನ್ನು ಅವರು ವಿವರಿಸಿದರು.

ಜಗದ್ಗುರು XIVನೇ ಲಿಯೋರವರು, ಆನಂದ ಮತ್ತು ರುಚಿಯನ್ನು ಕಳೆದುಕೊಳ್ಳುವುದು ನೋವಿನ ಸಂಗತಿಯೇ ಆದರೆ, ಅನೇಕರು ನಾವು ಸ್ವತಃ ತಮ್ಮನ್ನು ಮೌಲ್ಯವಿಲ್ಲದವರಂತೆ  ಅನುಭವಿಸುತ್ತಾರೆ ಎಂದು ಹೇಳಿದರು. ಆದರೆ ಯೇಸು ಆಶಾವಾದದ ಘೋಷಣೆಯನ್ನು ನೀಡುತ್ತಾನೆ ದೇವರು ನಮಗೆಂದಿಗೂ ತ್ಯಜಿಸುವುದಿಲ್ಲ. ಆತ ನಮ್ಮ ಹೆಸರುಗಳನ್ನು ತಿಳಿದಿದ್ದಾನೆ ಮತ್ತು ನಮ್ಮ ವೈಶಿಷ್ಟ್ಯತೆಯನ್ನು ಪ್ರೀತಿಯಿಂದ ಕಾಳಜಿ ವಹಿಸುತ್ತಾನೆ ಎಂದು ಅವರು ಒತ್ತಿ ಹೇಳಿದರು.

ಇತರರತ್ತ ತೆರೆದ ಮನಸ್ಸಿನಿಂದ ಮತ್ತು ಗಮನದಿಂದ ನಡೆಸುವ ಸಣ್ಣ ಕಾರ್ಯಗಳೇ ಜೀವನದಲ್ಲಿ ಆನಂದವನ್ನು ಮರುಪ್ರಜ್ವಲಿಸಲು ಸಹಾಯ ಮಾಡುತ್ತವೆ ಎಂದು ಜಗದ್ಗುರುಗಳು ಹೇಳಿದರು. ಇವು ಸರಳವಾದರೂ ಲೋಕದ ಮೌಲ್ಯಗಳಿಗೆ ವಿರುದ್ಧವಾಗಬಹುದು. ಯೇಸು ಅರಣ್ಯದಲ್ಲಿ ವಿವಿಧ ಪ್ರಲೋಭನೆಗಳನ್ನು ತಿರಸ್ಕರಿಸಿದಂತೆ, ನಾವೂ ನಮ್ಮ ನಿಜವಾದ ರುಚಿಯನ್ನು ಕಳೆದುಕೊಳ್ಳದ ಮಾರ್ಗವನ್ನು ಆಯ್ಕೆ ಮಾಡಬೇಕು ಅದು ಪ್ರತೀ ಭಾನುವಾರ ಮುರಿಯಲ್ಪಡುವ ರೊಟ್ಟಿಯಲ್ಲಿ, ಮೌನ ಪ್ರೀತಿಯಾಗಿ ನೀಡಲ್ಪಡುವ ಜೀವನದಲ್ಲಿ ಕಾಣಿಸುತ್ತದೆ ಎಂದು ಅವರು ವಿವರಿಸಿದರು.

ಸಂದೇಶದ ಅಂತ್ಯದಲ್ಲಿ, ಯೇಸುವಿನೊಂದಿಗೆ ಏಕತ್ವದಿಂದ ಪೋಷಿತರಾಗಲು ಮತ್ತು ಪ್ರಕಾಶಮಾನರಾಗಲು ಜಗದ್ಗುರುಗಳು ಎಲ್ಲರನ್ನು ಆಹ್ವಾನಿಸಿದರು. ಆಗ ನಾವು ಹೆಮ್ಮೆಯಿಲ್ಲದೆ, ಪರ್ವತದ ಮೇಲಿರುವ ನಗರದಂತೆ ಕೇವಲ ಕಾಣಿಸುವುದಷ್ಟೇ ಅಲ್ಲ, ಆಹ್ವಾನಿಸುವ ಮತ್ತು ಸ್ವಾಗತಿಸುವ ನಗರವಾಗಿ ದೇವರ ನಗರವಾಗುತ್ತೇವೆ ಎಂದು ಹೇಳಿದರು. ಕೊನೆಯಲ್ಲಿ, ದೇವಮಾತೆ ಮರಿಯಮ್ಮನವರಿಗೆ ತಮ್ಮ ಪ್ರಾರ್ಥನೆಗಳನ್ನು ಒಪ್ಪಿಸಿ, ಅವರ ಪುತ್ರನ ಶಿಷ್ಯರಾಗಿ ಉಳಿಯಲು ಸಹಾಯ ಕೋರುವಂತೆ ಜಗದ್ಗುರುಗಳು ಮನವಿ ಮಾಡಿದರು.

08 ಫೆಬ್ರವರಿ 2026, 16:18