ಹುಡುಕಿ

Pope Leo XIV celebrates the Angelus Prayer in Vatican

ತ್ರಿಕಾಲ ಪ್ರಾರ್ಥನೆಯಲ್ಲಿ ಜಗದ್ಗುರು XIVನೇ ಲಿಯೋರವರು: ನಿಜವಾದ ಸದಾಚಾರ ಮಹಾ ಪ್ರೀತಿಯನ್ನು ಬೇಡುತ್ತದೆ

ತ್ರಿಕಾಲ ಪ್ರಾರ್ಥನೆಯ ವೇಳೆ ಭಾನುವಾರದ ಸುವಾರ್ತೆಯ ಕುರಿತು ಮಾಡಿದ ಚಿಂತನೆಗಳಲ್ಲಿ, ಜಗದ್ಗುರು ಲಿಯೋರವರು ಸುವಾರ್ತೆಯು ನಿಜವಾದ ನೀತಿಮತ್ತೆಗಾಗಿ ನಾವು ಮಹಾ ಪ್ರೀತಿಯಿಂದ ಪ್ರೀತಿಸಬೇಕು ಎಂದು ಬೋಧಿಸುತ್ತದೆ ಎಂದು ವಿವರಿಸಿದರು.

ವ್ಯಾಟಿಕನ್ ವರದಿ

ತ್ರಿಕಾಲ ಪ್ರಾರ್ಥನೆಯನ್ನು ಮುನ್ನಡೆಸುವ ಮೊದಲು ಭಾನುವಾರದ ಸುವಾರ್ತೆಯ ವಾಚನದ ಕುರಿತು ತಮ್ಮ ರೂಢಿಯ ಚಿಂತನೆಗಳಲ್ಲಿ, ಜಗದ್ಗುರು ಲಿಯೋರವರು ಯೇಸು ದೇವರ ರಾಜ್ಯದ ಹೊಸತನದೊಳಗೆ ಪ್ರವೇಶಿಸಲು ನಮ್ಮನ್ನು ಆಹ್ವಾನಿಸುತ್ತಾರೆ ಎಂದು ವಿವರಿಸಿದರು. ಅವರು ಇಂದಿನ ಸುವಾರ್ತಾ ಭಾಗದಲ್ಲಿ ಧನ್ಯವಚನಗಳನ್ನು ಪ್ರಕಟಿಸಿದ ನಂತರ, ಯೇಸು ಮೋಶೆಯ ಧರ್ಮಶಾಸ್ತ್ರದ ವಿಧಿಗಳ ನಿಜವಾದ ಅರ್ಥವನ್ನು ಪ್ರಕಟಿಸುತ್ತಾನೆ ಎಂದು ಹೇಳಿದರು. ಆ ವಿಧಿಗಳು ನಮ್ಮನ್ನು ದೇವರೊಂದಿಗೆ ಹಾಗೂ ನಮ್ಮ ಸಹೋದರ-ಸಹೋದರಿಯರೊಂದಿಗೆ ಪ್ರೀತಿಯ ಸಂಬಂಧದೊಳಗೆ ಕರೆಸುತ್ತವೆ. ಆದ್ದರಿಂದಲೇ ಯೇಸು ತಾನು ಧರ್ಮಶಾಸ್ತ್ರವನ್ನು ರದ್ದುಗೊಳಿಸಲು ಬಂದಿಲ್ಲ, ಅದನ್ನು ಪರಿಪೂರ್ಣಗೊಳಿಸಲು ಬಂದಿದ್ದೇನೆ ಎಂದು ಹೇಳುತ್ತಾನೆ.

ಧರ್ಮಶಾಸ್ತ್ರವು ಪ್ರೀತಿಯಿಂದಲೇ ಪರಿಪೂರ್ಣಗೊಳ್ಳುತ್ತದೆ ಪ್ರೀತಿ ಅದರ ಆಳವಾದ ಅರ್ಥವನ್ನೂ ಅಂತಿಮ ಉದ್ದೇಶವನ್ನೂ ಸಂಪೂರ್ಣಗೊಳಿಸುತ್ತದೆ.

ಸದಾಚಾರ ಕೇವಲ ಆಜ್ಞೆಗಳನ್ನು ಪಾಲಿಸುವುದಕ್ಕೆ ಮಾತ್ರ ಸೀಮಿತವಲ್ಲ ಅದು ನಮ್ಮನ್ನು ಪ್ರೀತಿಯತ್ತ ತೆರೆಯುತ್ತದೆ ಮತ್ತು ಪ್ರೀತಿಸಲು ಪ್ರೇರೇಪಿಸುತ್ತದೆ ಎಂದು ಜಗದ್ಗುರುಗಳು ಒತ್ತಿಹೇಳಿದರು. ಬಳಿಕ ಯೇಸು ಧರ್ಮಶಾಸ್ತ್ರದ ಕೆಲವು ವಿಧಿಗಳನ್ನು ನಿರ್ದಿಷ್ಟ ಸಂದರ್ಭಗಳಿಗೆ ಸಂಬಂಧಿಸಿದವುಗಳನ್ನು ಪರಿಶೀಲಿಸಿ, ಕೇವಲ  ಧಾರ್ಮಿಕ ಸದಾಚಾರ ಮತ್ತು ದೇವರ ರಾಜ್ಯದ ನಿಜವಾದ ಸದಾಚಾರದ ನಡುವಿನ ವ್ಯತ್ಯಾಸವನ್ನು ತೋರಿಸುತ್ತಾನೆ. ಇದರಿಂದ ಮೋಶೆ ಮತ್ತು ಪ್ರವಾದಿಗಳಿಗೆ ನೀಡಲಾದ ಧರ್ಮಶಾಸ್ತ್ರವು ದೇವರನ್ನು ಮತ್ತು ನಮ್ಮ ಹಾಗೂ ಇತಿಹಾಸಕ್ಕಾಗಿ ಅವನ ಯೋಜನೆಯನ್ನು ತಿಳಿದುಕೊಳ್ಳುವ ಮಾರ್ಗವಾಗಿದೆ ಎಂಬುದನ್ನು ತಿಳಿಯಬಹುದು ಎಂದು ಜಗದ್ಗುರು ಲಿಯೋರವರು ವಿವರಿಸಿದರು.

“ಯೇಸುವಿನ ವ್ಯಕ್ತಿತ್ವದಲ್ಲಿ ದೇವರು ತಾನೇ ನಮ್ಮ ಮಧ್ಯೆ ಬಂದಿದ್ದಾನೆ; ಧರ್ಮಶಾಸ್ತ್ರವನ್ನು ಪರಿಪೂರ್ಣಗೊಳಿಸಿ, ನಮ್ಮನ್ನು ತಂದೆಯ ಮಕ್ಕಳನ್ನಾಗಿ ಮಾಡಿ, ಅವನೊಂದಿಗೆ ಮಕ್ಕಳಾಗಿಯೂ ಪರಸ್ಪರ ಸಹೋದರ-ಸಹೋದರಿಯರಾಗಿಯೂ ಸಂಬಂಧಕ್ಕೆ ಪ್ರವೇಶಿಸುವ ಕೃಪೆಯನ್ನು ನಮಗೆ ನೀಡಿದ್ದಾನೆ… ನಿಜವಾದ ಸದಾಚಾರ ಪ್ರೀತಿಯಲ್ಲಿದೆ ಎಂದು ಯೇಸು ಬೋಧಿಸುತ್ತಾನೆ ಧರ್ಮಶಾಸ್ತ್ರದ ಪ್ರತಿಯೊಂದು ವಿಧಿಯಲ್ಲಿಯೂ ಪ್ರೀತಿಗೆ ಕರೆಯುವ ಆಹ್ವಾನವನ್ನು ನಾವು ಗುರುತಿಸಲು ಕಲಿಯಬೇಕು.

ನಂತರ, ಕನಿಷ್ಠ ಮಟ್ಟದ ಸದಾಚಾರ ಸಾಕಾಗುವುದಿಲ್ಲ, ಮಹತ್ತರ ಪ್ರೀತಿ ಅಗತ್ಯ ಎಂದು ಯೇಸು ನೀಡಿದ ಉದಾಹರಣೆಗಳನ್ನು ಜಗದ್ಗುರುಗಳು ಸ್ಮರಿಸಿದರು ಅದು ದೇವರ ಶಕ್ತಿಯಿಂದ ಸಾಧ್ಯವಾಗುತ್ತದೆ. ಕೊನೆಗೆ, ಕನ್ಯಾ ಮರಿಯಮ್ಮನವರು ನಮಗಾಗಿ ಮಧ್ಯಸ್ಥಿಕೆ ವಹಿಸಲಿ ಹಾಗೂ ದೇವರ ರಾಜ್ಯವನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಮತ್ತು ಅದರ ಸದಾಚಾರ ಕರೆಯನ್ನು ಬದುಕಿನಲ್ಲಿ ನೆರವೇರಿಸಲು ನಮಗೆ ಸಹಾಯ ಮಾಡಲಿ ಎಂದು ಅವರು ಪ್ರಾರ್ಥಿಸಿದರು.

15 ಫೆಬ್ರವರಿ 2026, 15:36