ಹುಡುಕಿ

ಜಗದ್ಗರು XIVನೇ ಲಿಯೋರವರು  "ಎಲ್ ಸೆಂಬ್ರಡಾರ್ ನ್ಯೂವಾ ಇವಾಂಜೆಲಿಜೇಶನ್" ದೂರದರ್ಶನದ ಸಂಸ್ಥಾಪಕರಾದ ಶ್ರೀ ನೋಯೆಲ್ ಡಯಾಸ್ ರವರನ್ನು ಸ್ವೀಕರಿಸುತ್ತಾರೆ ಜಗದ್ಗರು XIVನೇ ಲಿಯೋರವರು "ಎಲ್ ಸೆಂಬ್ರಡಾರ್ ನ್ಯೂವಾ ಇವಾಂಜೆಲಿಜೇಶನ್" ದೂರದರ್ಶನದ ಸಂಸ್ಥಾಪಕರಾದ ಶ್ರೀ ನೋಯೆಲ್ ಡಯಾಸ್ ರವರನ್ನು ಸ್ವೀಕರಿಸುತ್ತಾರೆ  (@Vatican Media)

ಜಗದ್ಗರು XIVನೇ ಲಿಯೋರವರು ಇಎಸ್ಎನ್ಇ ಟೆಲಿವಿಷನ್ ಸಂಸ್ಥಾಪಕರನ್ನು ಭೇಟಿ ಮಾಡಿದರು

ಗುರುವಾರ ಬೆಳಿಗ್ಗೆ, ಜಗದ್ಗುರುಗಳು ಇಎಸ್ಎನ್ಇ ಸಂಸ್ಥಾಪಕರನ್ನು ಭೇಟಿ ಮಾಡಿದರು. ಕ್ಯಾಲಿಫೋರ್ನಿಯಾದಲ್ಲಿ ಕೇಂದ್ರಿತವಾಗಿರುವ ಈ ಕಥೋಲಿಕ ಸೇವಾ ಸಂಸ್ಥೆ, ಲ್ಯಾಟಿನ್ ಅಮೆರಿಕಾ ಮತ್ತು ದೇಶಗಳಾದ್ಯಂತ ಪ್ರಸಾರವಾಗುವ ಒಂದು ಟೆಲಿವಿಷನ್ ಜಾಲವನ್ನು ನಡೆಸುತ್ತದೆ. ಜೊತೆಗೆ, ಇದು ಯುನೈಟೆಡ್ ಸ್ಟೇಟ್ಸ್ ಮತ್ತು ಮೆಕ್ಸಿಕೋ ದೇಶಗಳಾದ್ಯಂತ ವ್ಯಾಪಕವಾದ ರೇಡಿಯೋ ಕೇಂದ್ರಗಳ ಜಾಲವನ್ನೂ ಹೊಂದಿದೆ.

ವ್ಯಾಟಿಕನ್ ವರದಿ

ನೋಯೆಲ್ ಡಿಯಾಸ್ ಅವರಿಗೆ ಈ ಭೇಟಿ ಬಹುಕಾಲದ ನಿರೀಕ್ಷೆಯದ್ದಾಗಿತ್ತು. ಮೇ 8ರಂದು ಜಗದ್ಗುರು XIVನೇ ಲಿಯೋರವರು ಪೇತ್ರನ ಉತ್ತರಾಧಿಕಾರಿಯಾಗಿ ಆಯ್ಕೆಯಾದ ಬಳಿಕ ಅವರನ್ನು ಭೇಟಿಯಾಗುವ ಆಸೆ ಅವರಿಗೆ ಇತ್ತು. ಅಮೆರಿಕಾದಲ್ಲಿ ನೆಲೆಸಿರುವ ಮೆಕ್ಸಿಕನ್ ಮೂಲದ ಈ ಕಥೋಲಿಕ ಧರ್ಮಪ್ರಚಾರಕನ್ನು ಹಿಂದಿನಿಂದಲೇ ಜಗದ್ಗುರು ಫ್ರಾನ್ಸಿಸ್ ರವರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರು ಫ್ರಾನ್ಸಿಸ್ ರವರು ಹಲವಾರು ಬಾರಿ ಅವರ ಸೇವಾ ಕಾರ್ಯಗಳಿಗೆ ಆಶೀರ್ವಾದ ನೀಡಿದ್ದರು.

ಡಿಯಾಸ್ ನೇತೃತ್ವದ ಅಪೊಸ್ಟೊಲಾಡೊ ಎಲ್ ಸೆಂಬ್ರಾಡೋರ್ ನುವಾ ಇವಾಂಜೆಲಿಜಾಸಿಯಾನ್ ಕ್ಯಾಲಿಫೋರ್ನಿಯಾದಲ್ಲಿ ಆರಂಭಗೊಂಡು, ಅಲ್ಲಿ ಲ್ಯಾಟಿನ್ ಅಮೆರಿಕಾ ಮತ್ತು ಸ್ಪೇನ್ ದೇಶಗಳಿಗೆ ಕಥೋಲಿಕ ಟಿವಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ಜೊತೆಗೆ, ಈ ಧಾರ್ಮಿಕ ಮಾಧ್ಯಮ ಯೋಜನೆಯಡಿ ಅಮೆರಿಕಾ ಮತ್ತು ಮೆಕ್ಸಿಕೋ ದೇಶಗಳಾದ್ಯಂತ ವ್ಯಾಪಕವಾದ ರೇಡಿಯೋ ಜಾಲವೂ ಕಾರ್ಯನಿರ್ವಹಿಸುತ್ತದೆ. ಈ ಸೇವೆಯ ಉದ್ದೇಶಗಳಲ್ಲಿ ಒಂದು ಜಗದ್ಗುರುಗಳ ಧ್ವನಿಯನ್ನು ಹೆಚ್ಚು ಸ್ಪ್ಯಾನಿಷ್ ಮತ್ತು ಇಂಗ್ಲಿಷ್ ಭಾಷಿಕರಿಗೆ ತಲುಪಿಸುವುದಾಗಿದೆ.

ಫೆಬ್ರವರಿ 12ರಂದು ಜಗದ್ಗುರು XIVನೇ ಲಿಯೋರವರು ತಮ್ಮ ಕಚೇರಿಯಲ್ಲಿ ಡಿಯಾಸ್ ಅವರನ್ನು ಭೇಟಿಯಾದರು. ಅವರೊಂದಿಗೆ ಲಾಸ್ ಏಂಜಲೀಸ್‌ನ ಮಹಾಧಮ೯ಪ್ರಾಂತ್ಯದಿಂದ ಇಬ್ಬರು ಯಾಜಕರು ಮತ್ತು ಒಬ್ಬ ಸಾಮಾನ್ಯ ಪ್ರಜೆಯು ಇದ್ದರು. ಅವರು ಜಗದ್ಗುರುಗಳಿಗೆ ಹಲವು ಉಡುಗೊರೆಗಳನ್ನು ನೀಡಿದರು, ಅದರಲ್ಲೊಂದು “ಐ ಆಮ್ ದಿ 73” ಎಂಬ ಆತ್ಮಪರಿವರ್ತನೆ ಮಾರ್ಗದ ಚಿಹ್ನೆಯೂ ಸೇರಿತ್ತು.

ಅತ್ಯಂತ ಸ್ಪರ್ಶಕ ಉಡುಗೊರೆ ಎಂದರೆ, ಬಾಲ್ಯದಲ್ಲಿ ತನ್ನ ಜೀವನ ಸಾಗಿಸಲು ಬಳಸಿದ್ದ ಶೂ ಪೊಲಿಷ್ ಪೆಟ್ಟಿಗೆಯ ಪ್ರತಿಯನ್ನು ಡಿಯಾಸ್ ಜಗದ್ಗುರುಗಳಿಗೆ ನೀಡಿದುದು. ಅದೇ ರೀತಿಯ ಪೆಟ್ಟಿಗೆಯನ್ನು 2016ರಲ್ಲಿ ಜಗದ್ಗುರು ಫ್ರಾನ್ಸಿಸ್ ರವರಿಗೆ ನೀಡಿದ್ದು, ಆ ಸಂದರ್ಭದಲ್ಲೇ ಅವರ ಸ್ನೇಹ ಆರಂಭಗೊಂಡಿತ್ತು. ಈ ಅನುಭವವು ಅವರ ಜೀವನಯಾತ್ರೆಯಲ್ಲಿಯೂ, ಅವರ ಧರ್ಮಪ್ರಚಾರ ಕಾರ್ಯದಲ್ಲಿಯೂ ಪ್ರಮುಖ ಸಂಕೇತವಾಗಿದೆ.

ಸಂಭಾಷಣೆಯಲ್ಲಿ ಜಗದ್ಗುರುಗಳು ಮತ್ತು ಡಿಯಾಸ್ ಅಮೆರಿಕಾ ಸೇರಿದಂತೆ ವಿಶ್ವದ ವಲಸೆ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಜೊತೆಗೆ, ವಿಶ್ವಾಸಿಗಳಲ್ಲಿ ದೇವರ ವಾಕ್ಯದ ಜ್ಞಾನವನ್ನು ಹೆಚ್ಚಿಸುವ ಅಗತ್ಯವನ್ನು ಅವರು ಒತ್ತಿಹೇಳಿದರು. ಧರ್ಮಪ್ರಚಾರದಲ್ಲಿ ಮಾಧ್ಯಮಗಳ ಪಾತ್ರವೂ ಮಹತ್ವದ್ದು ಎಂಬುದನ್ನು ಅವರು ಗಮನಿಸಿದರು.

ಭೇಟಿಯ ನಂತರ ವ್ಯಾಟಿಕನ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, ಡಿಯಾಸ್ ಜಗದ್ಗುರುಗಳಿಗೆ ನೀಡಿದ ಪ್ರೇರಣೆ ಮತ್ತು ಸವಾಲುಗಳ ಬಗ್ಗೆ ಮಾತನಾಡಿದರು. ಸಾಮಾನ್ಯ ಪ್ರಜೆಗಳು ಹಾಗೂ ಸಮರ್ಪಿತ ಸದಸ್ಯರೂ ಸೇರಿ ನಡೆಸುವ ಈ ಧರ್ಮಪ್ರಚಾರ ಕಾರ್ಯವನ್ನು ಮುಂದುವರಿಸಲು ಅವರು ಹೊಸ ಉತ್ಸಾಹ ಪಡೆದಿದ್ದಾರೆ ಎಂದು ಹೇಳಿದರು.

13 ಫೆಬ್ರವರಿ 2026, 16:07