ಹುಡುಕಿ

ಅಕ್ಟೋಬರ್ 2025 ರಲ್ಲಿ ಜಗದ್ಗುರು ಲಿಯೋರವರು ಮತ್ತು ಸಿಸ್ಟರ್ ನೀನಾ ಕ್ರಾಪಿಕ್ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ ಅಕ್ಟೋಬರ್ 2025 ರಲ್ಲಿ ಜಗದ್ಗುರು ಲಿಯೋರವರು ಮತ್ತು ಸಿಸ್ಟರ್ ನೀನಾ ಕ್ರಾಪಿಕ್ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ 

ಜಗದ್ಗರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯ ಉಪನಿರ್ದೇಶಕರಾಗಿ ಸಿಸ್ಟರ್ ನಿನಾ ಕ್ರಾಪಿಕ್ ನೇಮಕ

ಜಗದ್ಗುರುಗಳು ವಿಝೆಡ್, ರವರನ್ನು ಜಗದ್ಗುರುಗಳ ಅಧಿಕಾರ ಸ್ಥಳದ ಸಂವಹನ ದಿಕಾಸ್ಟೇರಿಯ ಅಧಿಕಾರಿಯಾಗಿರುವ ಅವರು, ಜಗದ್ಗುರುಗಳ ಅಧಿಕಾರ ಸ್ಥಳದ ಹೊಸ ಉಪನಿರ್ದೇಶಕರಾಗಿ ನೇಮಿಸಿದ್ದಾರೆ. ಈ ಹುದ್ದೆಯಲ್ಲಿ ಅವರು ಜುಲೈ 2019ರಿಂದ ಕಾರ್ಯನಿರ್ವಹಿಸುತ್ತಿದ್ದ ಅವರ ಸ್ಥಾನವನ್ನು ಭರಿಸಲಿದ್ದಾರೆ. ಕ್ರಿಸ್ಟಿಯಾನೆ ಮರೆರವರು ತಮ್ಮ ಹುದ್ದೆಯಿಂದ ರಾಜೀನಾಮೆ ನೀಡಿದ್ದಾರೆ. ಸಿಸ್ಟರ್ ನಿನಾ ಕ್ರಾಪಿಕ್ ರವರು ಈಗಾಗಲೇ ಸೇವೆ ಸಲ್ಲಿಸುತ್ತಿದ್ದು, ಅವರ ಅನುಭವ ಮತ್ತು ಸೇವಾಭಾವನೆ ಈ ಹೊಸ ಜವಾಬ್ದಾರಿಯಲ್ಲಿ ಮಹತ್ವದ ಪಾತ್ರ ವಹಿಸಲಿದೆ.

ವ್ಯಾಟಿಕನ್ ವರದಿ

ಶುಕ್ರವಾರ  ಅವರು ಸಿಸ್ಟರ್ , ಎಂವಿಝೆಡ್ ರವರನ್ನು  ಜಗದ್ಗುರುಗಳ ಅಧಿಕಾರ ಸ್ಥಳದ  ಉಪನಿರ್ದೇಶಕರಾಗಿ ನೇಮಿಸಿದ್ದಾರೆ.

ಅವರು ಜುಲೈ 2019ರಿಂದ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ  ಅವರ ಸ್ಥಾನವನ್ನು ಭರಿಸಲಿದ್ದಾರೆ. ಕ್ರಿಸ್ಟಿಯಾನೆ ಮರೆ ರವರು ತಮ್ಮ ಹುದ್ದೆಯಿಂದ ನಿವೃತ್ತರಾಗುತ್ತಿದ್ದಾರೆ ಮತ್ತು ಶುಕ್ರವಾರ ಬೆಳಿಗ್ಗೆ ಜಗದ್ಗುರುಗಳು ಅವರನ್ನು ಭೇಟಿಯಾಗಿ ಪ್ರತ್ಯೇಕವಾಗಿ ಸ್ವೀಕಾರ ಪಡೆದರು. ಈ ನೇಮಕಾತಿಯನ್ನು ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯ ದೈನಂದಿನ ಪ್ರಕಟಣೆಯಲ್ಲಿ ಘೋಷಿಸಲಾಯಿತು.

ಕ್ರೊಯೇಷ್ಯಾದ ಈ ಧಾರ್ಮಿಕ ಸನ್ಯಾಸಿನಿ, ಇದುವರೆಗೆ  ಜಗದ್ಗುರುಗಳ ಅಧಿಕಾರ ಸ್ಥಳದ ಸಂವಹನ ದಿಕಾಸ್ಟೇರಿಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ಅವರು ತಮ್ಮ ಹೊಸ ಜವಾಬ್ದಾರಿಯನ್ನು 1 ಮಾರ್ಚ್ 2026ರಿಂದ ಸ್ವೀಕರಿಸಲಿದ್ದಾರೆ.

ಸಿಸ್ಟರ್ ಕ್ರಾಪಿಕ್ ರವರು 7 ಜೂನ್ 1989ರಂದು ರಿಯೇಕಾದಲ್ಲಿ ಜನಿಸಿದರು. ಅವರು 2015ರಲ್ಲಿ ರಿಜೆಕಾ ವಿಶ್ವವಿದ್ಯಾಲಯದಿಂದ ಕಾನೂನು ಪದವಿಯನ್ನು ಪಡೆದರು ಮತ್ತು ನಂತರ 2023ರಲ್ಲಿ ಜಾಗ್ರೆಬ್ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ವಿಶೇಷ ಅಧ್ಯಯನ ಮಾಡಿದರು.

ಅವರು ಆಗಸ್ಟ್ 13, 2023 ರಂದು ಸೇಂಟ್ ವಿನ್ಸೆಂಟ್ ಡಿ ಪಾಲ್ ಅವರ ಸಿಸ್ಟರ್ಸ್ ಆಫ್ ಚಾರಿಟಿ ಸಭೆಯಲ್ಲಿ ತಮ್ಮ ಶಾಶ್ವತ ಪ್ರತಿಜ್ಞೆ ಮಾಡಿದರು. ಅವರು ಪತ್ರಕರ್ತೆಯಾಗಿ ಕಾರ್ಯನಿರ್ವಹಿಸಿದ್ದು, ಗೃಹ ಹಿಂಸೆಗೆ ಒಳಗಾದ ಮಹಿಳೆಯರು ಮತ್ತು ಸಮಾಜದ ಅಂಚಿನಲ್ಲಿರುವ ಇತರ ವ್ಯಕ್ತಿಗಳಿಗೆ ಕಾನೂನು ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ, ರಿಯೇಕಾ ಮಹಾಧರ್ಮಕ್ಷೇತ್ರದ  ಸಂವಹನ ವಿಭಾಗದ ಮುಖ್ಯಸ್ಥೆಯಾಗಿಯೂ ಕೆಲಸ ಮಾಡಿದ್ದಾರೆ.

2023ರಿಂದ ಅವರು ಜಗದ್ಗುರುಗಳ ಅಧಿಕಾರ ಸ್ಥಳದ ಸಂವಹನ ದಿಕಾಸ್ಟೇರಿಯಲ್ಲಿ ಅಧಿಕಾರಿಯಾಗಿದ್ದು ಪ್ರಸ್ತುತ ರೋಮ್‌ನಲ್ಲಿರುವ ಪಾಂಟಿಫಿಕಲ್ ಗ್ರೆಗೋರಿಯನ್ ವಿಶ್ವವಿದ್ಯಾಲಯದ ಕೊಲಿಜಿಯಂ ಮ್ಯಾಕ್ಸಿಮಮ್‌ನಲ್ಲಿ ಸಮಾಜ ವಿಜ್ಞಾನದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆಯುತ್ತಿದ್ದಾರೆ.

“ಕ್ರಿಸ್ಟಿಯಾನೆ ಮರೆರವರು ತಮ್ಮ ಸೇವೆಯನ್ನು ಸಮರ್ಪಣೆ ಮತ್ತು ವೃತ್ತಿಪರತೆಯಿಂದ ನೆರವೇರಿಸಿದಕ್ಕಾಗಿ ಅವರಿಗೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ, ಎಂದುಜಗದ್ಗುರುಗಳ ಅಧಿಕಾರ ಸ್ಥಳದ ಸಂವಹನ ದಿಕಾಸ್ಟೇರಿಯ ಪ್ರಿಫೆಕ್ಟ್  ಹೇಳಿದರು. ಅದೇ ಮನೋಭಾವದಲ್ಲಿ, ಸಿಸ್ಟರ್ ನಿನಾ ಬೆನೆಡಿಕ್ಟಾ ಕ್ರಾಪಿಕ್ ರವರಿಗೆ ಫಲಪ್ರದ ಸೇವೆಗಾಗಿ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ ಅವರ ಉನ್ನತ ವೃತ್ತಿಪರ ಹಾಗೂ ಮಾನವೀಯ ಗುಣಗಳಲ್ಲಿ ನನಗೆ ಸಂಪೂರ್ಣ ವಿಶ್ವಾಸವಿದೆ ಎಂದರು.

13 ಫೆಬ್ರವರಿ 2026, 17:43