ಹುಡುಕಿ

ಜಗದ್ಗುರು XIVನೇ ಲಿಯೋರವರು ರೋಮ್ ಡಯಾಸಿಸ್‌ನ ಯಾಜಕರನ್ನು ಭೇಟಿಯಾಗುತ್ತಾರೆ ಜಗದ್ಗುರು XIVನೇ ಲಿಯೋರವರು ರೋಮ್ ಡಯಾಸಿಸ್‌ನ ಯಾಜಕರನ್ನು ಭೇಟಿಯಾಗುತ್ತಾರೆ  (ANSA)

“ರೋಮ್‌ನ ಯಾಜಕರೊಂದಿಗೆ ಸಂವಾದ ನಡೆಸಿದ ಜಗದ್ಗುರುಗಳು: ಸ್ನೇಹಿತರಾಗಿರಿ, ಅಸೂಯೆಯನ್ನು ಮತ್ತು ಇಂಟರ್‌ನೆಟ್‌ನ ಅಪಾಯಗಳನ್ನು ಎಚ್ಚರಿಕೆಯಿಂದ ಗಮನಿಸಿ"ಎಂದರು

ಜಗದ್ಗುರು XIV ನೇ ಲಿಯೋರವರು ರೋಮ್ ಧರ್ಮಪ್ರಾಂತ್ಯದ ಯಾಜಕರು ಕೇಳಿದ ನಾಲ್ಕು ಪ್ರಶ್ನೆಗಳಿಗೆ ಉತ್ತರ ನೀಡುತ್ತಾ, ಆತ್ಮಿಕ ಮಾರ್ಗದರ್ಶನ, ಸೇವಾ ಕಾರ್ಯ ಹಾಗೂ ಧರ್ಮಾಧ್ಯಕ್ಷರ ಹೊಣೆಗಾರಿಕೆಗಳಿಗೆ ಸಂಬಂಧಿಸಿದ ಸೂಚನೆಗಳು, ಇಂಟರ್‌ನೆಟ್‌ನ ಪ್ರಭಾವ ಮತ್ತು ಇನ್ನಿತರ ವಿಷಯಗಳನ್ನು ಸ್ಪರ್ಶಿಸುವ ವಿಶಾಲ ಪ್ರತಿಕ್ರಿಯೆಗಳನ್ನು ನೀಡಿದರು.

ವ್ಯಾಟಿಕನ್ ವರದಿ

ಜಗದ್ಗುರು XIV ನೇ ಲಿಯೋರವರು ರೋಮ್ ಧರ್ಮಪ್ರಾಂತ್ಯದ ಯಾಜಕರೊಂದಿಗೆ ನಡೆಸಿದ ಸಂವಾದವು ತೆರೆಯಾದ ಮತ್ತು ಪ್ರಾಮಾಣಿಕವಾಗಿತ್ತು. ತಮ್ಮ ಭಾಷಣದ ನಂತರ ಅವರು ಪ್ರಶ್ನೋತ್ತರ ಅವಧಿಯಲ್ಲಿ ಭಾಗವಹಿಸಿದರು. ನಾಲ್ಕು ಪ್ರಶ್ನೆಗಳಿದ್ದರೂ, ಆತ್ಮಿಕ ಮಾರ್ಗದರ್ಶನ, ಧರ್ಮಾಧ್ಯಕ್ಷರ ಸೇವೆ, ಯುವಜನರೊಂದಿಗೆ ನಡೆದುಕೊಳ್ಳುವ ವಿಧಾನ, ಇಂಟರ್‌ನೆಟ್ ಮತ್ತು ಕೃತಕ ಬುದ್ಧಿಮತ್ತೆಯ ಬಳಕೆ ಸೇರಿದಂತೆ ಹಲವು ವಿಷಯಗಳನ್ನು ಅವರು ವಿಶ್ಲೇಷಿಸಿದರು. ವಿಶೇಷವಾಗಿ, ಉಪನ್ಯಾಸಗಳನ್ನು (ಹೋಮಿಲಿಗಳನ್ನು) ಕೃತಕ ಬುದ್ಧಿಮತ್ತೆಯಿಂದ ಸಿದ್ಧಪಡಿಸುವ ಪ್ರಲೋಭನದಿಂದ ದೂರವಿರಲು ಅವರು ಯಾಜಕರಿಗೆ ಎಚ್ಚರಿಕೆ ನೀಡಿದರು.

ಯುವಜನರ ಕುರಿತು ಮಾತನಾಡಿದ ಜಗದ್ಗುರುಗಳು, ಇಂದಿನ ಅನೇಕ ಯುವಕರು ಕುಟುಂಬ ಸಂಕಷ್ಟ, ವಿಚ್ಛೇದನ, ತೊರೆತಿರುವ ಅನುಭವ ಮತ್ತು ಏಕಾಂಗಿತನವನ್ನು ಎದುರಿಸುತ್ತಿದ್ದಾರೆ ಎಂದರು. ಯಾಜಕರು ಅವರ ಜೀವನದ ವಾಸ್ತವಿಕತೆಯನ್ನು ತಿಳಿದುಕೊಂಡು, ಅವರಿಗೆ ಸ್ನೇಹಪೂರ್ಣವಾಗಿ ಹತ್ತಿರವಾಗಬೇಕು ಆದರೆ ಕೇವಲ ಒಬ್ಬ ಯುವಕನಾಗಿ ಅಲ್ಲ, ಜೀವನದ ಮಾದರಿಯಾಗಿ ನಿಂತು ಮಾರ್ಗದರ್ಶನ ನೀಡಬೇಕು ಎಂದು ಅವರು ತಿಳಿಸಿದರು. ಕ್ರೀಡೆ, ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಯುವಕರನ್ನು ಸಂಪರ್ಕಿಸುವ ಅಗತ್ಯವನ್ನೂ ಒತ್ತಿಹೇಳಿದರು.

ಸ್ಮಾರ್ಟ್‌ಫೋನ್ ಮತ್ತು ಸಾಮಾಜಿಕ ಮಾಧ್ಯಮಗಳ ಪರಿಣಾಮದಿಂದ ಏಕಾಂಗಿತನ ಹೆಚ್ಚಾಗಿದೆ ಎಂದು ಜಗದ್ಗುರುಗಳು ಗಮನಿಸಿದರು. ನಿಜವಾದ ಮಾನವೀಯ ಸಂಬಂಧಗಳ ಸೌಂದರ್ಯವನ್ನು ಯುವಕರು ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿಂದು, ಯಾಜಕರು ಸ್ನೇಹ, ಹಂಚಿಕೆ ಮತ್ತು ಸಮಾಗಮದ ಹೊಸ ಅನುಭವಗಳನ್ನು ನೀಡಬೇಕು ಆ ಮೂಲಕ ಯೇಸು ಕ್ರಿಸ್ತನ ಪರಿಚಯಕ್ಕೆ ಅವರನ್ನು ಆಹ್ವಾನಿಸಬೇಕು ಎಂದರು. ಇದಕ್ಕೆ ಸಮಯ ಮತ್ತು ತ್ಯಾಗ ಅಗತ್ಯವೆಂದು ಅವರು ಹೇಳಿದರು.

ಧರ್ಮಾದ್ಯಕ್ಷರ ಸೇವೆಯಲ್ಲಿ ಪರಿಣಾಮಕಾರಿಯಾಗಲು, ಸೇವೆ ಮಾಡುವ ಸಮುದಾಯವನ್ನು ಆಳವಾಗಿ ತಿಳಿದುಕೊಳ್ಳುವುದು ಮುಖ್ಯವೆಂದು ಜಗದ್ಗುರುಗಳು ಹೇಳಿದರು. ಕೃತಕ ಬುದ್ಧಿಮತ್ತೆ ಮತ್ತು ಇಂಟರ್‌ನೆಟ್ ಬಳಕೆಯ ವಿಷಯದಲ್ಲಿ ಎಚ್ಚರಿಕೆಯಿಂದಿರಲು ಅವರು ಸೂಚಿಸಿದರು. “ನಿಜವಾದ ಉಪನ್ಯಾಸವೆಂದರೆ ನಂಬಿಕೆಯನ್ನು ಹಂಚಿಕೊಳ್ಳುವುದು ಅದನ್ನು ಕೃತಕ ಬುದ್ಧಿಮತ್ತೆ ಎಂದಿಗೂ ಮಾಡಲಾರದು ಎಂದು ಅವರು ಸ್ಪಷ್ಟಪಡಿಸಿದರು. ಪ್ರಾರ್ಥನೆಯ ಜೀವನವೇ ನಿಜವಾದ ಸೇವೆಯ ಆಧಾರವೆಂದು ಅವರು ಹೇಳಿದರು.

ಯಾಜಕರುಗಳ ನಡುವೆ ಸ್ನೇಹ ಮತ್ತು ಭ್ರಾತೃತ್ವವನ್ನು ಬೆಳೆಸಲು ಅವರು ಕರೆ ನೀಡಿದರು.ಇನ್ವಿಡಿಯಾ ಕ್ಲೆರಿಕಾಲಿಸ್ ಎಂದು ಕರೆಯಲ್ಪಡುವ ಯಾಜಕರು ಅಸೂಯೆಯು ಒಂದು ಮಹಾಮಾರಿಗೆ ಸಮಾನವೆಂದು ಎಚ್ಚರಿಸಿದರು. ಒಬ್ಬರನ್ನೊಬ್ಬರು ಬೆಂಬಲಿಸಿ, ಸ್ನೇಹದ ಸೇತುವೆಗಳನ್ನು ನಿರ್ಮಿಸಬೇಕು ಎಂದರು. ನಿರಂತರ ಅಧ್ಯಯನ ಮತ್ತು ಆತ್ಮಿಕ ಬೆಳವಣಿಗೆಯೂ ಅಗತ್ಯವೆಂದು ಅವರು ಹೇಳಿದರು.

ಮಗುವಾಗಿ, ವೃದ್ಧಾಪ್ಯ, ರೋಗ ಮತ್ತು ಏಕಾಂಗಿತನದ ವಿಷಯವನ್ನೂ ಅವರು ಸ್ಪರ್ಶಿಸಿದರು. ಜೀವನದ ಮೌಲ್ಯವನ್ನು ಸಾಕ್ಷಿಯಾಗಿರಬೇಕು ಎಂದು ಜಗದ್ಗುರುಗಳು ಹೇಳಿದರು. ರೋಗಿಗಳಿಗೆ ಭೇಟಿ ನೀಡುವುದು, ಪವಿತ್ರ ಸಮಾಗಮವು ಯಾಜಕರ ಕರ್ತವ್ಯವೆಂದು ಅವರು ನೆನಪಿಸಿದರು. ವೃದ್ಧ ಯಾಜಕರ ಪ್ರಾರ್ಥನೆಯೂ ಮಹತ್ತರವಾದ ಸೇವೆಯೆಂದು ಅವರು ಒತ್ತಿಹೇಳಿದರು.

20 ಫೆಬ್ರವರಿ 2026, 10:39