ಜಗದ್ಗುರು ಲಿಯೋರವರು ಧಾರ್ಮಿಕ ಸಂಘಗಳ ಸದಸ್ಯರಿಗೆ: ಲೋಕದಲ್ಲಿ ದೇವರ ಪ್ರೀತಿಯ ಪ್ರತಿಬಿಂಬವಾಗಿರಿ
ವ್ಯಾಟಿಕನ್ ವರದಿ
ಎರಡು ಧಾರ್ಮಿಕ ಸಂಘಗಳಿಗೆ ನೀಡಿದ ಭಾಷಣದಲ್ಲಿ, ಜಗದ್ಗುರು XIVನೇ ಲಿಯೋರವರು ಜಗತ್ತಿನ ಕಠಿಣ ಪ್ರದೇಶಗಳಲ್ಲಿ ಮತ್ತು ಅತಿ ಬಡವರ ನಡುವೆ ತಮ್ಮ ಮಿಷನ್ ಕಾರ್ಯವನ್ನು ಮುಂದುವರಿಸಲು ಪ್ರೋತ್ಸಾಹಿಸಿದರು. ತಮ್ಮ ಸಮುದಾಯಗಳಲ್ಲಿ ಕುಟುಂಬಾತ್ಮಕ ಆತ್ಮವನ್ನು ಬೆಳೆಸಿಕೊಳ್ಳಬೇಕೆಂದು ಅವರು ವಿನಂತಿಸಿದರು.
ಅರ್ಪಿತ ಜೀವನ ನಡೆಸುವ ಪುರುಷರು ಮತ್ತು ಮಹಿಳೆಯರಿಗೂ, ಹಾಗೆಯೇ ನಿಜವಾದ ಬದ್ಧತೆಯ ಕ್ರೈಸ್ತ ಪ್ರಜೆಗಳಿಗೂ, ಈ ಕುಟುಂಬಾತ್ಮಕ ಆತ್ಮವು ಮೊದಲನೆಯದಾಗಿ ದೇವರೊಂದಿಗೆ ಇರುವ ಭೇಟಿಯಿಂದ—ಯುಖರಿಸ್ತಿಯಿಂದ, ಪ್ರಾರ್ಥನೆಯಿಂದ, ಆರಾಧನೆಯಿಂದ, ವಾಕ್ಯದ ಆಲಿಸುವಿಕೆಯಿಂದ ಮತ್ತು ಸಂಸ್ಕಾರಗಳ ಆಚರಣೆಯಿಂದ ಉದ್ಭವಿಸುತ್ತದೆ, ಎಂದು ಅವರು ಫೆಬ್ರವರಿ 21ರ ಶನಿವಾರ ಮಿಷನರಿ ಒಬ್ಲೇಟ್ಸ್ ಆಫ್ ಮೇರಿ ಇಮ್ಮಾಕ್ಯುಲೇಟ್ ಮತ್ತು ಅವರ್ ಲೇಡಿ ಆಫ್ ಅಪೋಸ್ತಲ್ಸ್ ಸಿಸ್ಟರ್ಸ್ ಸದಸ್ಯರನ್ನು ಉದ್ದೇಶಿಸಿ ಹೇಳಿದರು.
ದಿವ್ಯಬಲಿಪೀಠ ಮತ್ತು ಪರಮ ಪ್ರಸಾದದ ಸಂಪುಟದಿಂದ ನಮ್ಮೊಳಗೆ ಐಕ್ಯತೆಯ ಮತ್ತು ಸ್ನೇಹದ ಭಾವನೆಗಳನ್ನು, ಕಾಳಜಿ ಮತ್ತು ಸಹನೆಯ ಸಮೀಪತೆಯನ್ನು ನಮ್ಮ ಈ ಆತ್ಮದಲ್ಲಿ ಮತ್ತು ನಮ್ಮ ಹೃದಯಗಳಲ್ಲಿ ಬೆಳೆಯುತ್ತದೆ; ಇವು ಯಾವಾಗಲೂ ನಮ್ಮನ್ನು ವಿಭಿನ್ನಗೊಳಿಸಬೇಕಾದ ಗುಣಗಳು; ಮತ್ತು ಇವುಗಳ ಮೂಲಕ ನಾವು ಲೋಕದಲ್ಲಿ ದೇವರ ಪ್ರೀತಿಯ ಪ್ರತಿಬಿಂಬವಾಗುತ್ತೇವೆ,” ಎಂದು ಅವರು ಮುಂದುವರಿಸಿದರು.
ಮಿಷನರಿ ಒಬ್ಲೇಟ್ಸ್ ಆಫ್ ಮೇರಿ ಇಮ್ಮಾಕ್ಯುಲೇಟ್ ಸಂಘದ ನಿಯಮಗಳು ಮತ್ತು ಸಂವಿಧಾನಗಳಿಗೆ ಜಗದ್ಗುರುಗಳ ಅನುಮೋದನೆ ದೊರೆತ 200ನೇ ವರ್ಷದ ಸಂಭ್ರಮ ಹಾಗೂ ಸಿಸ್ಟರ್ಸ್ ಆಫ್ ಅವರ್ ಲೇಡಿ ಆಫ್ ಅಪೋಸ್ತಲ್ಸ್ ಸಂಸ್ಥಾಪನೆಯ 150ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಜಗದ್ಗುರುಗಳು ವ್ಯಾಟಿಕನ್‌ನಲ್ಲಿ ಈ ಎರಡು ಗುಂಪುಗಳನ್ನು ಭೇಟಿಯಾದರು.
ಈ ಎರಡು ಸಂಘಗಳ ಇತಿಹಾಸ ವಿಭಿನ್ನವಾದರೂ, ಅವುಗಳ ಸ್ಥಾಪನೆಯ ಕಾಲಘಟ್ಟ, ಫ್ರಾನ್ಸ್‌ನಲ್ಲಿ ಅವುಗಳ ಉದ್ಭವ ಮತ್ತು ಮುಖ್ಯವಾಗಿ ಮಿಷನರಿ ಕರೆಯು ಎಂಬ ಸಾಮಾನ್ಯ ಅಂಶಗಳನ್ನು ಅವರು ಉಲ್ಲೇಖಿಸಿದರು.
ನಮ್ಮೊಳಗಿನ ಅತಿ ಚಿಕ್ಕವರತ್ತ ವಿಶೇಷ ತೆರೆದ ಮನಸ್ಸು
ಮೊದಲು ಮಿಷನರಿ ಒಬ್ಲೇಟ್ಸ್ ಆಫ್ ಮೇರಿ ಇಮ್ಮಾಕ್ಯುಲೇಟ್ ಸಂಘವನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರುಗಳು, ಸಂಸ್ಥಾಪಕ ಯುಜೀನ್ ಡಿ ಮಜೆನೋಡ್ ರವರು ಯುರೋಪ್ ಗಂಭೀರ ಮತ್ತು ಸಂಕೀರ್ಣ ಘಟನೆಗಳಿಂದ ಕದಡಲ್ಪಟ್ಟ ಕಾಲದಲ್ಲಿ, ಅತಿ ಅಗತ್ಯವಿರುವವರ ಸುವಾರ್ತೆ ಪ್ರಸಾರಕ್ಕೆ ಒತ್ತು ನೀಡಲು ನಿರ್ಧರಿಸಿದ್ದನ್ನು ಸ್ಮರಿಸಿದರು.
ಅವರು ಬಡವರು, ಕಾರ್ಮಿಕರು ಮತ್ತು ರೈತರು—ಅವರ ಆಳವಾದ ಮಾನವೀಯ ಅಗತ್ಯಗಳನ್ನು ಕಡೆಗಣಿಸಿ ಕೇವಲ ಕೆಲಸದ ಶಕ್ತಿಯಾಗಿ ದುರುಪಯೋಗಪಡಿಸಿಕೊಳ್ಳಲ್ಪಟ್ಟವರ ಗೌರವದ ರಕ್ಷಣೆಗೆ ಶಕ್ತಿಯಾಗಿ ಮಾತಾಡಿದರು ಮತ್ತು ಕಾರ್ಯನಿರ್ವಹಿಸಿದರು,ಎಂದು ಜಗದ್ಗುರುಗಳು ಹೇಳಿದರು.
ಇನ್ನೂ ಅವರು, ಯುಜೆನ್ ಡಿ ಮಾಸೆನೋಡ್ ರವರು ಕೆನಡಾ, ಯುರೋಪ್, ಆಫ್ರಿಕಾ ಮತ್ತು ಏಷ್ಯಾಕ್ಕೆ ಧಾರ್ಮಿಕರನ್ನು ಕಳುಹಿಸಿದ್ದು, ಅದರಿಂದ “ಮಿಷನರಿ ಕರೆಯ ಒಂದು ಅದ್ಭುತ ಪುಷ್ಪಿತಾವಸ್ಥೆ” ಉಂಟಾಯಿತು ಎಂದು ಹೇಳಿದರು.
ಇಂದು 70 ದೇಶಗಳಲ್ಲಿ 3,000ಕ್ಕೂ ಹೆಚ್ಚು ಧಾರ್ಮಿಕರು ಸೇವೆ ಸಲ್ಲಿಸುತ್ತಿರುವ ಈ ಸಂಘ, ನಮ್ಮೊಳಗಿನ ಅತಿ ಚಿಕ್ಕವರತ್ತ ಇರುವ ಅದೇ ವಿಶೇಷ ತೆರೆದ ಮನಸ್ಸಿನಿಂದ ತಮ್ಮ ಸೇವೆಯನ್ನು ಮುಂದುವರಿಸುತ್ತಿದೆ ವಿಶಾಲವಾದ ಕುಟುಂಬದ ಅಮೂಲ್ಯ ಕೊಡುಗೆ ಮತ್ತು ವೈಯಕ್ತಿಕ ಸಂಸ್ಕೃತಿಗಳ ಹೆಚ್ಚುತ್ತಿರುವ ಮೆಚ್ಚುಗೆಯಿಂದ ಸಮೃದ್ಧವಾಗಿದೆ, ಎಂದು ಜಗದ್ಗುರುಗಳು ಒತ್ತಿಹೇಳಿದರು.
“ಈ ಚೈತನ್ಯವನ್ನು ನೀವು ಒಂದು ವರವಾಗಿಯೂ, ನಿಮ್ಮ ಮೂಲಾತ್ಮವನ್ನು ಕಾಪಾಡಿ ನವೀಕರಿಸಲು ಪ್ರೇರೇಪಿಸುವ ಸಂಕೇತವಾಗಿಯೂ ಸ್ವೀಕರಿಸಿರಿ, ಎಂದು ಅವರು ಪ್ರೋತ್ಸಾಹಿಸಿದರು.
ಕಷ್ಟಕರ ಸ್ಥಳಗಳಲ್ಲಿ ನಿಮ್ಮ ಮಿಷನ್ ಮುಂದುವರಿಸಿ, ಶಾಂತಿಯ ಸಾಕ್ಷಿಗಳಾಗಿರಿ
ನಂತರ 21 ದೇಶಗಳಲ್ಲಿ 600ಕ್ಕೂ ಹೆಚ್ಚು ಸಹೋದರಿಯರನ್ನು ಹೊಂದಿರುವ ಸಿಸ್ಟರ್ಸ್ ಆಫ್ ಅವರ್ ಲೇಡಿ ಆಫ್ ಅಪೋಸ್ತಲ್ಸ್ ರವರನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರುಗಳು, ಸಂಸ್ಥಾಪಕ ಆಗಸ್ಟೀನ್ ಪ್ಲ್ಯಾಂಕ್ ರವರು “ಯೇಸುವಿನ ತಾಯಿಯಾದ ಮರಿಯಳೊಂದಿಗೆ” ಎಂಬ ಅಪೊಸ್ತಲರ ಕಾಯಿದೆಗಳು ಗ್ರಂಥದ ವಾಕ್ಯವನ್ನು ಸಂಘದ ಧ್ಯೇಯವಾಕ್ಯವಾಗಿ ಆಯ್ದುಕೊಂಡಿದ್ದನ್ನು ನೆನಪಿಸಿದರು.
ಮರಿಯಳು ಪ್ರೇಷಿತರೊಂದಿಗೆ ಮೇಲ್ಮನೆಯಲ್ಲೂ ಮತ್ತು ಪ್ರಥಮ ಕ್ರೈಸ್ತ ಸಮುದಾಯದಲ್ಲೂ ಇದ್ದಿದ್ದನ್ನು ಸ್ಮರಿಸುವ ಈ ವಾಕ್ಯದ ಮೂಲಕ, “ಆಫ್ರಿಕಾ ಮಿಷನ್ ಸಮಾಜದ ಕಾರ್ಯದಲ್ಲಿ ಮಹಿಳೆಯರ ಅವಿಭಾಜ್ಯ ಹಾಜರಾತಿಯನ್ನು ಖಚಿತಪಡಿಸಲು ಅವರು ನಿಮ್ಮ ಸಂಘವನ್ನು ಸ್ಥಾಪಿಸಿದರು,ಎಂದು ಜಗದ್ಗುರುಗಳು ವಿವರಿಸಿದರು.
ಫ್ರಾನ್ಸ್ ಮತ್ತು ಇತರ ದೇಶಗಳಿಂದ ಅನೇಕ ಮಹಿಳೆಯರು ಮರಿಯಳಂತೆ ಇರಲು ಮತ್ತು ಕ್ರಿಸ್ತನ ಸಾಕ್ಷಿಯಾಗಲು ಈ ಆಹ್ವಾನಕ್ಕೆ ಸ್ಪಂದಿಸಿದರು ಎಂದು ಅವರು ಹೇಳಿದರು. “ಅವರಲ್ಲಿ ಅನೇಕರಿಗೆ ಆ ‘ಹೌದು’ ಎಂಬ ಉತ್ತರವೇ ಜೀವದ ಬೆಲೆಯನ್ನು ಕಟ್ಟಿಸಿತು; ಮಿಷನರಿ ಸೇವೆಯ ಕಠಿಣತೆ, ರೋಗಗಳಿಗೆ ಒಳಗಾಗುವ ಅಪಾಯ ಮತ್ತು ಇತ್ತೀಚಿನ ಕಾಲದಲ್ಲಿ ಕಾರಣವಾಯಿತು,” ಎಂದು ಜಗದ್ಗುರುಗಳು ಹೇಳಿದರು.
ಇಂದಿಗೂ ನೀವು ಕಷ್ಟಕರ ಪರಿಸ್ಥಿತಿಗಳಲ್ಲಿ ಹಾಜರಿದ್ದು, ಎಲ್ಲರ ಮೇಲೂ ನಂಬಿಕೆ ಮತ್ತು ಗೌರವದೊಂದಿಗೆ ನಿಮ್ಮ ಸೇವೆಯನ್ನು ಸಲ್ಲಿಸುತ್ತಿದ್ದೀರಿ, ಎಂದು ಅವರು ತಿಳಿಸಿ, ನೀವು ಎಲ್ಲಿದ್ದರೂ ಈ ಮಿಷನ್ ಮುಂದುವರಿಸಿ, ಸಹೋದರತ್ವ ಮತ್ತು ಶಾಂತಿಯ ನಿಜವಾದ ಸಾಕ್ಷಿಗಳಾಗಿರಿ,ಎಂದು ಪ್ರೋತ್ಸಾಹಿಸಿದರು
