ಹುಡುಕಿ

BRAZIL-CITY-RIO DE JANEIRO-FAVELA-FEATURE

ಜಗದ್ಗುರು XIV ನೇ ಲಿಯೋರವರು : ಅಗತ್ಯವಿರುವವರಿಗೆ ಮನೆ ಒದಗಿಸಲು ನಾವು ಒಂದಾಗಿ ಕೆಲಸ ಮಾಡೋಣ

ಬ್ರೆಜಿಲ್‌ನಲ್ಲಿ ತಪಸ್ಸುಕಾಲದ ಸಂದರ್ಭದಲ್ಲಿ ನಡೆಯುವ ಸಹೋದರತ್ವ ಅಭಿಯಾನಕ್ಕಾಗಿ ನೀಡಿದ ತಮ್ಮ ಸಂದೇಶದಲ್ಲಿ, ಜಗದ್ಗುರು XIVನೇ ಲಿಯೋರವರು ಮನೆ ಇಲ್ಲದವರಿಗೆ ಗೌರವಯುತ ವಾಸಸ್ಥಳ ಒದಗಿಸಲು ದೃಢ ಮತ್ತು ಕಾರ್ಯಾತ್ಮಕ ಬದ್ಧತೆಯನ್ನು ಕೈಗೊಳ್ಳುವಂತೆ ಕರೆ ನೀಡಿದ್ದಾರೆ.

ವ್ಯಾಟಿಕನ್ ವರದಿ

ತಪಸ್ಸು ಕಾಲವು ಒಂದು ಪವಿತ್ರ ಸಮಯವಾಗಿದೆ, ಎಂದು ಸಂತ ಅಗಸ್ಟಿನ್ ಬರೆಯುತ್ತಾರೆ ಈ ಅವಧಿಯಲ್ಲಿ ನಿಜವಾದ ಪರಿವರ್ತನೆಗಾಗಿ ದೇವರಿಂದ ವಿಶೇಷ ಕರೆಯು ದೊರೆಯುತ್ತದೆ.

ಬ್ರೆಜಿಲ್‌ನಲ್ಲಿ 60 ವರ್ಷಗಳಿಗೂ ಹೆಚ್ಚು ಕಾಲ ಸ್ಥಳೀಯ ಬಿಷಪ್‌ಗಳ ಪರಿಷತ್ತಿಂದ ಆಯೋಜಿಸಲಾಗುತ್ತಿರುವ ಸಹೋದರತ್ವ ಅಭಿಯಾನಕ್ಕಾಗಿ ಫೆಬ್ರವರಿ 11ರಂದು ದಿನಾಂಕಿತ ಸಂದೇಶದಲ್ಲಿ ಜಗದ್ಗುರು XIVನೇ ಲಿಯೋರವರು ಈ ಮಾತುಗಳನ್ನು ಬರೆದಿದ್ದಾರೆ. ಈ ವರ್ಷದ ಅಭಿಯಾನವು ಗೌರವಯುತ ವಾಸಸ್ಥಳದ ಕೊರತೆಯಿಂದ ಬಳಲುವವರಿಗೆ ಸಮರ್ಪಿತವಾಗಿದೆ.

ಜಗದ್ಗರುಗಳು ತಮ್ಮ ಸಂದೇಶದಲ್ಲಿ ತೀವ್ರ ಪ್ರಾರ್ಥನೆಯ ಈ ಸಮಯದಲ್ಲಿ ಕ್ರಿಸ್ತನೇ ತನ್ನನ್ನು ತಾನು ಒಂದಾಗಿಸಿಕೊಂಡಿರುವ ಅತ್ಯಂತ ಬಡವರು ಮತ್ತು ಅಗತ್ಯವಿರುವವರ ಕಡೆಗೆ ನಮ್ಮ ಬದ್ಧತೆಯನ್ನು ನವೀಕರಿಸುವ ಅಗತ್ಯವಿದೆ ಎಂದು ನೆನಪಿಸುತ್ತಾರೆ.

ವಾಸ್ತವವಾಗಿ, ಅವರು ನಮ್ಮ ಆದ್ಯತೆಯ ಪ್ರೀತಿಯ ನಿಜವಾದ ಸ್ವೀಕರಿಸುವವರು ಎಂದು ಜಗದ್ಗುರುಗಳು ತಮ್ಮ ಪ್ರೇಷಿತರ ಪ್ರೇರಣಾಪತ್ರಿಕೆ ಡಿಲೆಕ್ಸಿ ತೇ ಯಲ್ಲಿ ಒತ್ತಿಹೇಳುತ್ತಾರೆ ಈ ಪತ್ರಿಕೆ ದಾರಿದ್ರ್ಯದ ಮೂಲಭೂತ ಕಾರಣಗಳನ್ನು ಪರಿಹರಿಸುವ ಅಗತ್ಯವನ್ನು ಕರೆ ನೀಡುತ್ತದೆ.

ವಾಸಸ್ಥಳದ ಕೊರತೆಯ ಗಂಭೀರ ಪರಿಣಾಮಗಳು

2026ರ ಸಹೋದರತ್ವ ಅಭಿಯಾನದ ವಿಷಯವು ಯೋಹಾನ ಸುವಾರ್ತೆಯ ಅವನು ನಮ್ಮ ನಡುವೆ ವಾಸಮಾಡಲು ಬಂದನು ಎಂಬ ವಚನದಿಂದ ಪ್ರೇರಿತವಾಗಿದೆ ಮತ್ತು ಈ ದುಃಖದ ವಾಸ್ತವಿಕತೆಯನ್ನು ಗಮನಿಸಲು ಜನರನ್ನು ಆಹ್ವಾನಿಸುತ್ತದೆ.

ಜಗದ್ಗುರು IIನೇ ಜಾನ್ ಪಾಲ್ ರವರು ವಾಸಸ್ಥಳದ ಸಂಕಷ್ಟವನ್ನು ಗಂಭೀರ ಸಮಸ್ಯೆ ಎಂದು ವಿವರಿಸಿ, ಅದು ವ್ಯಕ್ತಿ, ಕುಟುಂಬ ಮತ್ತು ಸಮಾಜದ ಮಟ್ಟಗಳಲ್ಲಿ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ಹೇಳಿದ್ದಾರೆ.

ತಮ್ಮ ಎನ್ಸಿಕ್ಲಿಕಲ್ ಪತ್ರ ಸೊಲಿಚಿತುದೋ ರೇಯಿ ಸೋಚಯಲಿಸ್ (ಸಾಮಾಜಿಕ ಕಾಳಜಿ)ಯಲ್ಲಿ ಅವರು ಹೀಗೆ ಬರೆದಿದ್ದಾರೆ.ವಾಸಸ್ಥಳದ ಕೊರತೆಯನ್ನು ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಅಥವಾ ಸರಳವಾಗಿ ಮಾನವೀಯ ದೋಷಗಳ ಸಮಗ್ರ ಸಂಕೇತ ಮತ್ತು ಸಾರಾಂಶವೆಂದು ಪರಿಗಣಿಸಬೇಕು.

ನಿರಂತರ ಮನೋಭಾವ

ಜಗದ್ಗುರು XIVನೇ ಲಿಯೋರವರು ಆಹ್ವಾನವೇನಂದರೆ, ಈ ಚಿಂತನೆ ಕೇವಲ ಕೆಲವೇ ಕ್ರಮಗಳಿಗೆ ಸೀಮಿತವಾಗದೆ, ನಿಜವಾದ ಅಂತಃಕರಣದ ಜಾಗೃತಿಯನ್ನು ಉಂಟುಮಾಡಬೇಕು.

ಪ್ರಭುವು ನಮಗೆ ಉದಾರವಾಗಿ ನೀಡುವ ವರಗಳನ್ನು ಹಂಚಿಕೊಳ್ಳುವುದು ವರ್ಷದಲ್ಲಿ ಒಂದು ಅವಧಿಗೆ, ಒಂದು ಅಭಿಯಾನಕ್ಕೆ ಅಥವಾ ಕೆಲವೊಮ್ಮೆ ನಡೆಯುವ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿರದೆ, ವಾಸಿಸಲು ಸ್ಥಳವಿಲ್ಲದವರಲ್ಲಿ ಉಪಸ್ಥಿತನಾಗಿರುವ ಕ್ರಿಸ್ತನನ್ನು ಭೇಟಿಯಾಗುವ ಬದ್ಧತೆಯೊಂದಿಗೆ ಸದಾ ಇರುವ ಮನೋಭಾವವಾಗಿರಲಿ ಎಂದು ಅವರು ಪ್ರಾರ್ಥಿಸಿದರು.

ವಾಸಸ್ಥಳ ನೀತಿಗಳು

ಸಹೋದರತ್ವ ಅಭಿಯಾನದಿಂದ ಹುಟ್ಟುವ ಉಪಕ್ರಮಗಳು ದೀರ್ಘಕಾಲಿಕ ಫಲವನ್ನು ತರುತ್ತವೆ ಎಂಬ ಆಶಯವನ್ನು ಜಗದ್ಗುರುಗಳು ವ್ಯಕ್ತಪಡಿಸಿದರು. ಒಟ್ಟಾಗಿ ಕೆಲಸ ಮಾಡುವ ಮೂಲಕ ಅತ್ಯಂತ ಅಗತ್ಯವಿರುವ ಜನರಿಗೆ ವಾಸಸ್ಥಳದ ಪರಿಸ್ಥಿತಿಯಲ್ಲಿ ಮಹತ್ವದ ಸುಧಾರಣೆಗಳನ್ನು ಒದಗಿಸಲು ಸಾರ್ವಜನಿಕ ನೀತಿಗಳನ್ನು ಉತ್ತೇಜಿಸಲು ಸರ್ಕಾರದ ಅಧಿಕಾರಿಗಳಿಗೆ ಪ್ರೇರಣೆ ದೊರಕಲಿ ಎಂದು ಅವರು ಪ್ರಾರ್ಥಿಸಿದರು.

ಅಂತಿಮವಾಗಿ, ಜಗದ್ಗುರು XIVನೇ ಲಿಯೋರವರು ಪ್ರತಿಯೊಬ್ಬರಿಗೂ ಗೌರವಯುತ ವಾಸಸ್ಥಳ ದೊರಕಲಿ ಎಂದು ಪರಿಶ್ರಮಿಸುವ ಎಲ್ಲರಿಗೂ ಆಶೀರ್ವಾದ ನೀಡುವ ಮೊದಲು, ಈ ಭರವಸೆಯನ್ನು ಬ್ರೆಜಿಲ್‌ನ ರಕ್ಷಕಿಯಾಗಿ ಗೌರವಿಸಲ್ಪಡುವ ದಶ೯ನ ಮಾತೆಗೆ ಒಪ್ಪಿಸಿದರು.

18 ಫೆಬ್ರವರಿ 2026, 17:24