ಜಗದ್ಗರುಗಳು ಲಾಸ್ ಏಂಜೆಲೆಸ್ ಧಾರ್ಮಿಕ ಶಿಕ್ಷಣ ಮಹಾಸಭೆಯನ್ನು ನಿಜವಾದ ಆತ್ಮೀಯ ಪುನರುಜ್ಜೀವನದ ಕಾಲವೆಂದು ಕೊಂಡಾಡಿದರು.
ವ್ಯಾಟಿಕನ್ ವರದಿ
ಸತ್ಯಸ್ವರೂಪನಾದ ಯೇಸುವಿನೊಂದಿಗೆ ನಿಮ್ಮ ಸಂಬಂಧವನ್ನು ಇನ್ನಷ್ಟು ಆಳಗೊಳಿಸಿ, ನಿಮ್ಮ ದೈನಂದಿನ ಜೀವನದಲ್ಲಿ ನಿಷ್ಠೆಯುತ ಮತ್ತು ಸಂತೋಷಭರಿತ ಶಿಷ್ಯರಾಗಿ ಮುಂದುವರಿಯುವ ಮೂಲಕ, ಶಿಕ್ಷಕರಾಗಿಯೂ ಧರ್ಮೋಪದೇಶ ನಾಯಕರಾಗಿಯೂ ಇರುವ ನಿಮ್ಮ ನಿಜಸ್ವಭಾವವು ಸುವಾರ್ತೆಯನ್ನು ಹೀಗೊಂದು ರೀತಿಯಲ್ಲಿ ಸಾರಲು ನಿಮಗೆ ಸಹಾಯಕವಾಗುತ್ತದೆ ಅದು ಪ್ರಭುವಿನೊಂದಿಗೆ ನಿಜವಾದ ಭೇಟಿಗೆ ದಾರಿ ಮಾಡಿಕೊಟ್ಟು, ದೀರ್ಘಕಾಲಿಕ ಮತ್ತು ಜೀವದಾಯಕ ಸಂಸ್ಕೃತಿಯನ್ನು ನಿರ್ಮಿಸಲು ಸಹಕಾರಿಯಾಗುತ್ತದೆ.
ಜಗದ್ಗುರು XIV ನೇ ಲಿಯೋರವರು ಅಮೇರಿಕಾದ ಕ್ಯಾಲಿಫೋರ್ನಿಯಾ ರಾಜ್ಯದ ಅನಾಹೈಮ್ ನಲ್ಲಿ ಫೆಬ್ರವರಿ 19–22, 2026ರಂದು ನಡೆದ 70ನೇ ಧಾರ್ಮಿಕ ಶಿಕ್ಷಣ ಮಹಾಸಭೆಯ ಸಂದರ್ಭದಲ್ಲಿ, ಜೋಸ್ ಎಚ್ ಗೊಮೆಜ್ ರವರಿಗೆ ಕಳುಹಿಸಿದ ಸಂದೇಶದಲ್ಲಿ ಈ ಮಾತುಗಳನ್ನು ವ್ಯಕ್ತಪಡಿಸಿದರು.
ಪ್ರತಿ ವರ್ಷ ನಾಲ್ಕು ದಿನಗಳ ಕಾಲ ನಡೆಯುವ ಈ ಕಥೋಲಿಕ ಸಮಾಗಮವು, ಈ ವರ್ಷ ಕರುಣೆಯಿಂದ ಸುತ್ತುವರಿಯಲ್ಪಟ್ಟಿದೆ, ಭರವಸೆ ನವೀಕರಿಸಲ್ಪಟ್ಟಿದೆ ಎಂಬ ಧ್ಯೇಯವಾಕ್ಯದೊಂದಿಗೆ ನಡೆಯಿತು. ಇದನ್ನು ಲಾಸ್ ಏಂಜಲೀಸ್‌ನ ಮಹಾಧಮ೯ಕ್ಷೇತ್ರ ಧಾರ್ಮಿಕ ಶಿಕ್ಷಣ ಕಚೇರಿ ಪ್ರಾಯೋಜಿಸಿತು.
ಈ ಮಹಾಸಭೆ ಅಮೇರಿಕಾದ ವಿವಿಧ ಭಾಗಗಳಿಂದ ಹಾಗೂ ಇತರ ದೇಶಗಳಿಂದ ಸಾವಿರಾರು ಭಕ್ತರು, ಶಿಕ್ಷಕರು ಮತ್ತು ಸೇವಾ ನಾಯಕರು ಭಾಗವಹಿಸುವಂತೆ ಆಕರ್ಷಿಸುತ್ತದೆ. ಕಾರ್ಯಾಗಾರಗಳು, ಪೂಜಾಕ್ರಮಗಳು, ಪ್ರದರ್ಶನಗಳು, ಮುಖ್ಯ ಭಾಷಣಗಳು ಮತ್ತು ಆಧ್ಯಾತ್ಮಿಕ ಆಚರಣೆಗಳ ಮೂಲಕ ಅವರು ತಮ್ಮ ನಂಬಿಕೆಯನ್ನು ಆಳಗೊಳಿಸುತ್ತಾರೆ. ಫೆಬ್ರವರಿ 19ರಂದು ಯುವಕರ ದಿನದೊಂದಿಗೆ ಮಹಾಸಭೆ ಪ್ರಾರಂಭವಾಗಿ, ವಯಸ್ಕರ ಕಾರ್ಯಕ್ರಮಗಳು ಫೆಬ್ರವರಿ 22ರವರೆಗೆ ಮುಂದುವರಿದವು.
ನಿಜವಾದ ಆತ್ಮೀಯ ನವೀಕರಣದ ಅವಕಾಶ
ಜಗದ್ಗರುಗಳ ಪರವಾಗಿ ಪಿಯೆತ್ರೋ ಪರೋಲಿನ್ ರವರು ಕಳುಹಿಸಿದ ಸಂದೇಶದಲ್ಲಿ, ಜಗದ್ಗುರುಗಳು ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸಿ, ಈ ಪ್ರಾರ್ಥನೆ, ದಾನ ಮತ್ತು ಉಪವಾಸದ ದಿನಗಳು ನಿಜವಾದ ಆತ್ಮೀಯ ನವೀಕರಣಕ್ಕೆ ಅವಕಾಶ ಒದಗಿಸಲಿ ಎಂದು ಆಶಿಸಿದರು.
ಧಾರ್ಮಿಕ ಶಿಕ್ಷಣದ ಕಾರ್ಯಕ್ಕೆ ತೊಡಗಿರುವ ಪುರುಷರು ಮತ್ತು ಮಹಿಳೆಯರಾಗಿ, “ನಿಜವಾದ ಶಿಕ್ಷಕನು ಸತ್ಯದ ಬಯಕೆಯನ್ನು ಉಂಟುಮಾಡುತ್ತಾನೆ ಎಂಬ ಅರಿವನ್ನು ಅವರು ಶ್ಲಾಘಿಸಿದರು.
ಯೇಸು ಸಾಂತ್ವನ ಮತ್ತು ಶಕ್ತಿಯನ್ನು ನೀಡುತ್ತಾನೆ
ಹಾಜರಿದ್ದ ಯುವಕರಿಗೆ ದೇವರ ಪ್ರೀತಿಗೆ ತಮ್ಮ ಹೃದಯಗಳನ್ನು ತೆರೆಯಿರಿ ಎಂದು ಜಗದ್ಗುರುಗಳು ಪ್ರೋತ್ಸಾಹಿಸಿದರು. ಆ ಪ್ರೀತಿಯೇ ಯೇಸುವನ್ನು ನಮಗಾಗಿ ಶಿಲುಬೆಯಲ್ಲಿ ತನ್ನನ್ನು ಅರ್ಪಿಸಲು ಪ್ರೇರೇಪಿಸಿತು ಅಲ್ಲದೆ ಅವರು ಧನ್ಯ ಸಂಸ್ಕಾರದಲ್ಲಿ ನಮ್ಮೊಂದಿಗೆ ಸದಾಕಾಲ ಇರುವಂತೆ ಮಾಡಿತು ಎಂದು ಅವರು ನೆನಪಿಸಿದರು.
ಈ ಸಂಬಂಧದಲ್ಲಿ, ಎಂದು ಜಗದ್ಗುರುಗಳು ಪ್ರಾರ್ಥಿಸಿದರು, ಸಮ್ಮೇಳನದಲ್ಲಿ ನಿಮ್ಮ ಅನುಭವವು ಜೀವನದ ಎಲ್ಲಾ ಪರಿಸ್ಥಿತಿಗಳಲ್ಲಿಯೂ ಸಾಂತ್ವನ ಮತ್ತು ಶಕ್ತಿಯ ಅಕ್ಷಯ ಮೂಲವಾದ ಯೇಸುವಿನ ಭೋಜನದ ಸಾನ್ನಿಧ್ಯವನ್ನು ನೀವು ಕಂಡುಹಿಡಿಯಲು ಸಹಾಯ ಮಾಡಲಿ.
ಕೊನೆಯಲ್ಲಿ, ಜಗದ್ಗುರು ಲಿಯೋ ರವರು ಎಲ್ಲಾ ಮಹಾಸಭೆ ಭಾಗವಹಿಸುವವರನ್ನು ದೇವಮಾತೆಯಾದ ದೇವದೂತರ ತಾಯಿ ಮರಿಯಮ್ಮನ ಮಾತೃ ಮಧ್ಯಸ್ಥಿಕೆಗೆ ಒಪ್ಪಿಸಿ, ತಮ್ಮ ಪ್ರೇಷಿತರ ಆಶೀರ್ವಾದವನ್ನು ನೀಡಿದರು.
