ಹುಡುಕಿ

ಕಾರ್ಡಿನಲ್ ಪೊಲಿಕಾರ್ಪ್ ಪೆಂಗೋ ಕಾರ್ಡಿನಲ್ ಪೊಲಿಕಾರ್ಪ್ ಪೆಂಗೋ 

ಜಗದ್ಗುರು ಲಿಯೋ ರವರು ಅಗಲಿದ ಕಾರ್ಡಿನಲ್ ಪೊಲಿಕಾರ್ಪ್ ಪೆಂಗೋ ರವರನ್ನು “ಜ್ಞಾನಿ ಮತ್ತು ಸೌಮ್ಯ ಕುರಿಗಾಹಿ” ಎಂದು ಸ್ಮರಿಸಿದರು

ಒಂದು ಶೋಕ ಸಂದೇಶ (ಟೆಲಿಗ್ರಾಂ) ಮೂಲಕ ಜಗದ್ಗುರು XIVನೇ ಲಿಯೋರವರು ಟಾಂಜಾನಿಯಾದ ದಾರ್ ಎಸ್ ಸಲಾಂ ಮಹಾಧರ್ಮಪ್ರಾಂತ್ಯದ ನಿವೃತ್ತ ಮಹಾಧರ್ಮಾಧ್ಯಕ್ಷರಾದ ಪೊಲಿಕಾರ್ಪ್ ಪೆಂಗೋರವರ ಅಗಲಿಕೆಗೆ ತಮ್ಮ ಆಳವಾದ ಸಂತಾಪವನ್ನು ವ್ಯಕ್ತಪಡಿಸಿದರು.

ವ್ಯಾಟಿಕನ್ ವರದಿ

 

ಫೆಬ್ರವರಿ 21ರ ಶನಿವಾರ ಪ್ರಕಟಗೊಂಡ ಟೆಲಿಗ್ರಾಂ ಸಂದೇಶದಲ್ಲಿ, ಜಗದ್ಗುರು XIVನೇ ಲಿಯೋರವರು  ಟಾಂಜಾನಿಯಾದ ದಾರ್ ಎಸ್ ಸಲಾಂ ಮಹಾಧರ್ಮಪ್ರಾಂತ್ಯದ ನಿವೃತ್ತ ಮಹಾಧರ್ಮಾಧ್ಯಕ್ಷರಾದ ಪೊಲಿಕಾರ್ಪ್ ಪೆಂಗೋರವರ ಅಗಲಿಕೆಯ ಸುದ್ದಿ ತಿಳಿದು, ಅಲ್ಲಿ ಇರುವ ಪಾದ್ರಿಗಳು, ಧಾರ್ಮಿಕರು ಮತ್ತು ಸಾಮಾನ್ಯ ಕ್ರೈಸ್ತರು ತಮ್ಮ ಹೃದಯಪೂರ್ವಕ ಸಂತಾಪವನ್ನು ವ್ಯಕ್ತಪಡಿಸಿದರು.

ಅನೇಕ ವರ್ಷಗಳ ಕಾಲ ವಿವಿಧ ಸ್ಥಳೀಯ ಧರ್ಮ ಸಭೆಗಳಿಗೆ ಅವರು ಸಲ್ಲಿಸಿದ ಸಮರ್ಪಿತ ಮಹಾಧರ್ಮಾಧ್ಯಕ್ಷೀಯ ಸೇವೆಗಾಗಿ—ವಿಶೇಷವಾಗಿ ಯಾಜಕರ ರೂಪುಗೊಳಿಸುವಿಕೆಗೆ ನೀಡಿದ ಸಮರ್ಪಣೆಗಾಗಿ ಹಾಗೂ ಆಫ್ರಿಕಾ ಮತ್ತು ಮಡಗಾಸ್ಕರ್‌ನ ಮಹಾಧರ್ಮಾಧ್ಯಕ್ಷರ ಸಭೆಗೆ ಮತ್ತು ಮುಖ್ಯವಾಗಿ ಪವಿತ್ರ ಪೀಠಕ್ಕೆ ಸಲ್ಲಿಸಿದ ಸೇವೆಗಾಗಿ ಕೃತಜ್ಞತೆಯಿಂದ, ಈ ಜ್ಞಾನಿ ಮತ್ತು ಸೌಮ್ಯ ಕುರಿಗಾಹಿಯ ಆತ್ಮವನ್ನು ಒಳ್ಳೆಯ ಕುರಿಗಾಹಿಯಾದ ಕ್ರಿಸ್ತನ ಕರುಣೆಗೆ ಒಪ್ಪಿಸುತ್ತಾ, ನಾನು ನಿಮ್ಮೊಂದಿಗೇ ಸೇರುತ್ತೇನೆ,” ಎಂದು ಅವರು ದಾರ್ ಎಸ್ ಸಲಾಂನ ಪ್ರಸ್ತುತ ಮಹಾಧರ್ಮಾಧ್ಯಕ್ಷರಾದ ಜೂಡ್ ಥಡ್ಡಾಯಿಯಸ್ ರುವಾ’ಇಚಿರವರಿಗೆ ಉದ್ದೇಶಿಸಿ ಬರೆದ ಟೆಲಿಗ್ರಾಂನಲ್ಲಿ ತಿಳಿಸಿದ್ದಾರೆ.

ಜಗದ್ಗುರು ಲಿಯೋರವರು  “ಪುನರುತ್ಥಾನದ ಖಚಿತ ನಿರೀಕ್ಷೆಯಲ್ಲಿ ಅವರ ಅಗಲಿಕೆಗೆ ಶೋಕಿಸುತ್ತಿರುವ” ಎಲ್ಲರಿಗೂ “ಪ್ರಭುವಿನಲ್ಲಿ ಸಾಂತ್ವನ ಮತ್ತು ಶಾಂತಿಯ ಸಂಕೇತವಾಗಿ” ತಮ್ಮ ಪ್ರೇಷಿತರ ಆಶೀರ್ವಾದವನ್ನು ನೀಡಿದರು.

ಕಾರ್ಡಿನಲ್ ಪೆಂಗೋರವರು ಫೆಬ್ರವರಿ 19ರ ಗುರುವಾರ, ದಾರ್ ಎಸ್ ಸಲಾಂನ ವಿಶೇಷ ಹೃದಯ ಸಂಬಂಧಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ, 81ನೇ ವಯಸ್ಸಿನಲ್ಲಿ ವಿಧಿವಶರಾದರು. 1944ರ ಆಗಸ್ಟ್ 5ರಂದು ಜನಿಸಿದ ಅವರು, 1998ರಲ್ಲಿ ಜಗದ್ಗುರು ದ್ವಿತೀಯ ಜಾನ್ ಪಾಲ್ ರವರಿಂದ ಕಾರ್ಡಿನಲ್ ಪದವಿಗೆ ಏರಿಸಲ್ಪಟ್ಟರು; ಈ ಮೂಲಕ ಅವರು ಕಾರ್ಡಿನಲ್‌ಗಳ ಕಾಲೇಜಿಗೆ ಆಯ್ಕೆಯಾದ ಎರಡನೇ ಟಾಂಜಾನಿಯನ್ನಾದರು. 1992ರಿಂದ 2019ರಲ್ಲಿ ನಿವೃತ್ತಿ ಪಡೆಯುವವರೆಗೆ ಅವರು ದಾರ್ ಎಸ್ ಸಲಾಂ ಮಹಾಧರ್ಮಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

21 ಫೆಬ್ರವರಿ 2026, 16:06