ಒಲಿಂಪಿಕ್ ಕ್ರೀಡಾಕೂಟಗಳು ಆರಂಭವಾಗುವ ಸಂದರ್ಭದಲ್ಲಿ ಕ್ರೀಡೆಯ ಮೌಲ್ಯದ ಕುರಿತು ಜಗದ್ಗುರು ಲಿಯೋರವರ ಪತ್ರ
ವ್ಯಾಟಿಕನ್ ವರದಿ
ಮಿಲಾನೋ–ಕೋರ್ಟಿನಾ ಚಳಾಗಾಲದ ಕ್ರೀಡಾಕೂಟಗಳ ಉದ್ಘಾಟನಾ ಸಮಾರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವ ಸಂದರ್ಭದಲ್ಲಿ, ವ್ಯಾಟಿಕನ್ ಕ್ರೀಡೆಯ ಮೌಲ್ಯದ ಕುರಿತು ಜಗದ್ಗುರು XIVನೇ ಲಿಯೋರವರ ‘ಸಮೃದ್ಧಿಯ ಜೀವನ’ ಎಂಬ ಪತ್ರವನ್ನು ಬಿಡುಗಡೆ ಮಾಡಿದೆ.
ಕ್ರೀಡೆಯ ಕುರಿತು ಜಗದ್ಗುರು ಲಿಯೋರವರ ಪತ್ರ
ಜಗದ್ಗುರುಗಳು ತಮ್ಮ ಪತ್ರದ ಆರಂಭದಲ್ಲೇ, ಫೆಬ್ರವರಿ 6ರಿಂದ 22ರವರೆಗೆ ನಡೆಯುವ XXV ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟಗಳು ಹಾಗೂ ಮಾರ್ಚ್ 6ರಿಂದ 15ರವರೆಗೆ ನಡೆಯುವ XIV ಪ್ಯಾರಾಲಿಂಪಿಕ್ ಕ್ರೀಡಾಕೂಟಗಳು ಎಂಬ ಸಂದರ್ಭದಲ್ಲಿ, ಈ ಕಾರ್ಯಕ್ರಮಗಳಲ್ಲಿ ನೇರವಾಗಿ ಭಾಗವಹಿಸುವ ಎಲ್ಲರಿಗೂ ತಮ್ಮ ಶುಭಾಶಯಗಳನ್ನು ತಿಳಿಸುವ ಜೊತೆಗೆ, ಎಲ್ಲರಿಗೂ ಒಂದು ಚಿಂತನೆ (ಪರಾವಲೋಕನ) ನೀಡಲು ತಾವು ಬಯಸಿದ್ದಾಗಿ ವ್ಯಕ್ತಪಡಿಸುತ್ತಾರೆ.
ಈ ಪತ್ರದಲ್ಲಿ ಜಗದ್ಗುರುಗಳು ಕ್ರೀಡೆಯನ್ನು ಪ್ರಶಂಸಿಸುತ್ತಾ, ಅದು ಮಾನವ ಸಹೋದರತ್ವವನ್ನು ಬೆಳೆಸುವ ಹಾಗೂ ವ್ಯಕ್ತಿಗಳು ಸತ್ಕಾರ್ಯ ಮತ್ತು ಪವಿತ್ರತೆಯತ್ತ ಪ್ರಯತ್ನಿಸಲು ಸಹಾಯ ಮಾಡುವ ಅನೇಕ ಮಾರ್ಗಗಳ ಬಗ್ಗೆ ಚಿಂತನೆ ಮಾಡುತ್ತಾರೆ.
ಹಿಂದಿನ ಒಲಿಂಪಿಕ್ ಕ್ರೀಡಾಕೂಟಗಳ ಸಂದರ್ಭಗಳಲ್ಲಿ, ತಮ್ಮ ಪೂರ್ವಾಧಿಕಾರಿಗಳು ಮಾನವಕುಲದ ಹಿತಕ್ಕಾಗಿ ವಿಶೇಷವಾಗಿ ಶಾಂತಿಯನ್ನು ಉತ್ತೇಜಿಸುವಲ್ಲಿ ಕ್ರೀಡೆ ವಹಿಸಬಹುದಾದ ಮಹತ್ವದ ಪಾತ್ರವನ್ನು ಎತ್ತಿ ಹಿಡಿದಿದ್ದುದನ್ನು ಜಗದ್ಗುರು ಲಿಯೋ ರವರು ಸ್ಮರಿಸುತ್ತಾರೆ.
ಇತ್ತೀಚಿನ ವರ್ಷಗಳಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಹಾಗೂ ಐಕ್ಯರಾಷ್ಟ್ರಗಳ ಸಾಮಾನ್ಯ ಸಭೆಯು ಒಲಿಂಪಿಕ್ ಯುದ್ಧ ವಿರಾಮವನ್ನು ಮತ್ತೆ ಪ್ರಸ್ತಾಪಿಸಿರುವುದಕ್ಕೆ ತಮ್ಮ ಮೆಚ್ಚುಗೆಯನ್ನು ಪುನಃ ವ್ಯಕ್ತಪಡಿಸುತ್ತಾರೆ.
ಶಾಂತಿಯ ಸಾಧನವಾಗಿ ಕ್ರೀಡೆ
“ಶಾಂತಿಗಾಗಿ ದಾಹಗೊಂಡಿರುವ ಜಗತ್ತಿನಲ್ಲಿ,” ಎಂದು ಪೋಪ್ ಲಿಯೋ ಹೇಳುತ್ತಾರೆ, ಅಧಿಕಾರದ ದುರುಪಯೋಗ, ಶಕ್ತಿಯ ಪ್ರದರ್ಶನಗಳು ಹಾಗೂ ಕಾನೂನಿನ ಆಡಳಿತದ ಮೇಲಿನ ನಿರ್ಲಕ್ಷ್ಯಕ್ಕೆ ಅಂತ್ಯ ತರುವಂತಹ ಸಾಧನಗಳು ನಮಗೆ ಅಗತ್ಯವಿದೆ ಎಂದರು.
ಮುಂಬರುವ ಚಳಿಗಾಲದ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟಗಳ ಸಂದರ್ಭದಲ್ಲಿ,” ಅವರು ಮುಂದುವರೆದು ಹೇಳುತ್ತಾರೆ, “ಹೊಂದಾಣಿಕೆಯಾದ ಜಗತ್ತಿನ ಸಂಕೇತವೂ ಭರವಸೆಯೂ ಆಗಿರುವ ಒಲಿಂಪಿಕ್ ಯುದ್ಧ ವಿರಾಮ ಎಂಬ ಈ ಆಶೆಯ ಸಾಧನವನ್ನು ಎಲ್ಲ ರಾಷ್ಟ್ರಗಳು ಪುನಃ ಕಂಡು ಗೌರವಿಸಬೇಕೆಂದು ನಾನು ಹೃದಯಪೂರ್ವಕವಾಗಿ ಉತ್ತೇಜಿಸುತ್ತೇನೆ ಎಂದರು
ಧರ್ಮಾಧಿಕಾರಿಗಳ ಸೇವೆ ನೀಡಲು ಧರ್ಮ ಸಭೆಗೆ ಕರೆ
ಕ್ರೀಡೆಯ ಕುರಿತು ಚಿಂತನೆ ಮಾಡುತ್ತಾ, ಜಗದ್ಗುರು XIVನೇ ಲಿಯೋರವರು ಧರ್ಮ ಸಭೆ ಕ್ರೀಡೆಯ ಕ್ಷೇತ್ರದಲ್ಲಿ ಧರ್ಮಾದಿಕಾರಿಗಳ ರೀತಿಯಲ್ಲಿ ಹಾಜರಿರಬೇಕೆಂದು ಹಾಗೂ ಮಾರ್ಗದರ್ಶನ, ವಿವೇಕ ಮತ್ತು ಭರವಸೆಯನ್ನು ನೀಡಬೇಕೆಂದು ಸ್ಮರಿಸುತ್ತಾರೆ. 2018ರಲ್ಲಿ ಸ್ಥಾಪಿತಗೊಂಡು ಸಂಸ್ಕೃತಿ ಮತ್ತು ಶಿಕ್ಷಣದ ಡಿಕಾಸ್ಟರಿಯ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುವ ಜಗದ್ಗುರುಗಳ ಅಧಿಕಾರ ಸ್ಥಳದ ಅಧಿಕೃತ ತಂಡವಾದ ಅಥ್ಲೆಟಿಕಾ ವ್ಯಾಟಿಕಾನಾ ವನ್ನು ಅವರು ಉದಾಹರಿಸಿ, ಕ್ರೀಡೆಯನ್ನು ಧರ್ಮ ಸಭೆಯ ಸೇವೆಯ ರೂಪದಲ್ಲಿಯೂ ಅನುಭವಿಸಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಹೇಳುತ್ತಾರೆ.
ಕ್ರೀಡೆ ನಿಜಕ್ಕೂ ಜೀವನದ ಪಾಠಶಾಲೆಯಾಗಬಹುದು. ಇಲ್ಲಿ ಯಾವುದೇ ಬೆಲೆಯಲ್ಲಾದರೂ ಗೆಲುವಿನಿಂದಲೇ ಸಮೃದ್ಧಿ ಸಿಗುವುದಿಲ್ಲ ಬದಲಾಗಿ ಹಂಚಿಕೆಯಿಂದ, ಇತರರನ್ನು ಗೌರವಿಸುವುದರಿಂದ ಹಾಗೂ ಒಟ್ಟಿಗೆ ನಡೆಯುವ ಸಂತೋಷದಿಂದ ಸಮೃದ್ಧಿ ಉಂಟಾಗುತ್ತದೆ ಎಂಬುದನ್ನು ಎಲ್ಲರೂ ಕಲಿಯಬಹುದು ಎಂದರು.
ಸಾಮೂಹಿಕ ಹಿತ ಮತ್ತು ವೈಯಕ್ತಿಕ ಬೆಳವಣಿಗೆಗೆ ಸೇವೆ ಮಾಡುವ ಕ್ರೀಡೆ
ವೃತ್ತಿಪರವಾಗಿ, ಉನ್ನತ ಮಟ್ಟದ ಸ್ಪರ್ಧೆಯಾಗಿ, ಯಶಸ್ಸಿನ ಅಥವಾ ಮಾಧ್ಯಮ ಗಮನದ ಅವಕಾಶವಾಗಿ ಕ್ರೀಡೆ ಆಡಲ್ಪಡುವಾಗಲೂ,ಎಂದು ಜಗದ್ಗುರುಗಳು ಗಮನಾರ್ಹವಾಗಿ ಹೇಳುತ್ತಾರೆ, ಧರ್ಮ ಸಭೆ ಕ್ರೀಡೆಯ ಲೋಕಕ್ಕೆ ಸಮೀಪವಾಗಿರಬೇಕಾಗಿದೆ. ಅದೇ ಸಮಯದಲ್ಲಿ, ಸಂಪನ್ಮೂಲಗಳ ಕೊರತೆಯಿದ್ದರೂ ಸಂಬಂಧಗಳಲ್ಲಿ ಶ್ರೀಮಂತವಾಗಿರುವ ತಳಮಟ್ಟದ ಕ್ರೀಡೆಗೆ ವಿಶೇಷ ಗಮನ ನೀಡಬೇಕು.
ಈ ಚಿಂತನೆಗಳಲ್ಲಿ, ಜಗದ್ಗುರು XIVನೇ ಲಿಯೋರವರು ಧರ್ಮ ಸಭೆಯು ಸ್ಪಷ್ಟವಾಗಿ ಹಾಜರಿದ್ದು ಮಾರ್ಗದರ್ಶನ, ವಿವೇಕ ಮತ್ತು ಭರವಸೆಯನ್ನು ನೀಡಬೇಕೆಂದು ಆಹ್ವಾನಿಸುತ್ತಾರೆ. ಈ ಮೂಲಕ, ಕ್ರೀಡೆ ನಿಜಕ್ಕೂ ಜೀವನದ ಪಾಠಶಾಲೆಯಾಗಬಹುದು ಇಲ್ಲಿ ಯಾವುದೇ ಬೆಲೆಯಲ್ಲಾದರೂ ಗೆಲುವಿನಿಂದ ಸಮೃದ್ಧಿ ದೊರೆಯುವುದಿಲ್ಲ, ಬದಲಾಗಿ ಹಂಚಿಕೆ, ಪರಸ್ಪರ ಗೌರವ ಮತ್ತು ಒಟ್ಟಿಗೆ ಸಾಗುವ ಸಂತೋಷದಿಂದ ಸಮೃದ್ಧಿ ಸಿಗುತ್ತದೆ ಎಂಬುದನ್ನು ಕಲಿಸುತ್ತದೆ ಎಂದು ಅವರು ಹೇಳುತ್ತಾರೆ.
ಕ್ರೀಡೆಯನ್ನು ಕೇವಲ ಪ್ರದರ್ಶನ ಅಥವಾ ಉತ್ಪನ್ನವಾಗಿ ಮಾರ್ಪಡಿಸುವಂತಹ ಸೀಮಿತ ಮನೋಭಾವಗಳಿಂದ ಮುಕ್ತಗೊಳಿಸಬೇಕೆಂದೂ ಅವರು ಕರೆ ನೀಡುತ್ತಾರೆ.
ಪತ್ರದಾದ್ಯಂತ, ಜಗದ್ಗುರು XIVನೇ ಲಿಯೋರವರು ರಾಜಕೀಯ ಅಥವಾ ಹಣಕಾಸಿನ ಲಾಭಕ್ಕಾಗಿ ಕ್ರೀಡೆಯನ್ನು ದುರುಪಯೋಗಪಡಿಸಿಕೊಳ್ಳುವ ಅಪಾಯದ ಬಗ್ಗೆ ಎಚ್ಚರಿಕೆ ನೀಡುತ್ತಾರೆ. ಬದಲಾಗಿ, ಕ್ರೀಡೆ ಮಾನವೀಯ ಬೆಳವಣಿಗೆ ಮತ್ತು ಸಾಮೂಹಿಕ ಹಿತಕ್ಕೆ ಸೇವೆ ಸಲ್ಲಿಸುವ ತನ್ನ ಮೂಲ ಧ್ಯೇಯಕ್ಕೆ ನಿಷ್ಠವಾಗಿರಬೇಕೆಂದು ಅವರು ಒತ್ತಿ ಹೇಳುತ್ತಾರೆ.
