ಹುಡುಕಿ

ಆಚ್೯ಬಿಷಪ್ ಪಾವೊಲೊ ರುಡೆಲ್ಲಿ, ಆಚ್೯ಬಿಷಪ್ ಪೀಟರ್ ರಾಜಿಕ್,ಆಚ್೯ಬಿಷಪ್ ಎಡ್ಗರ್ ಪೆನಾ ಪರ್ರಾರವರು. ಆಚ್೯ಬಿಷಪ್ ಪಾವೊಲೊ ರುಡೆಲ್ಲಿ, ಆಚ್೯ಬಿಷಪ್ ಪೀಟರ್ ರಾಜಿಕ್,ಆಚ್೯ಬಿಷಪ್ ಎಡ್ಗರ್ ಪೆನಾ ಪರ್ರಾರವರು. 

ಜಗದ್ಗುರುಗಳು ಇಟಲಿ ಮತ್ತು ಪೋಪ್ ನ ಗೃಹ ಮುಖ್ಯಸ್ಥತೆಗೆ ನೂತನ ಪೋಪ್ ರಾಯಭಾರಿಗಳನ್ನು ನೇಮಕ ಮಾಡಿದ್ದಾರೆ

ಜಗದ್ಗುರು XIVನೇ ಲಿಯೋರವರು ಮೂರು ಪ್ರಮುಖ ನೇಮಕಾತಿಗಳನ್ನು ಮಾಡಿದರು. ಕೊಲಂಬಿಯಾಗೆ ಪ್ರೇಷಿತರ ರಾಯಭಾರಿಯಾಗಿರುವ ಆರ್ಚ್‌ಬಿಷಪ್ ಪಾವ್ಲೋ ರೂಡೆಲ್ಲಿರವರನ್ನು ಜನರಲ್ ಅಫೇರ್ಸ್ ವಿಭಾಗದ ಬದಲಿ ಸ್ಥಾನಕ್ಕೆ ನೇಮಿಸಲಾಗಿದೆ. ಪ್ರಸ್ತುತ ಆ ಸ್ಥಾನದಲ್ಲಿದ್ದ ಆರ್ಚ್‌ಬಿಷಪ್ ಎಡ್ಗರ್ ಪೆನಾ ಪರ್ರಾ ರವರನ್ನು ಇಟಲಿಗೆ ಪ್ರೆಷಿತರ ರಾಯಭಾರಿಯಾಗಿ ನೇಮಿಸಲಾಗಿದೆ. ಅವರು ಆರ್ಚ್‌ಬಿಷಪ್ ಪೆಟರ್ ರಾಜಿಕ್ ರವರ ಉತ್ತರಾಧಿಕಾರಿಯಾಗಿದ್ದಾರೆ ಪೆಟರ್ ರಾಜಿಕ್ ರವರನ್ನು ಜಗದ್ಗುರುಗಳ ಹೌಸ್‌ಹೋಲ್ಡ್‌ನ ಪ್ರಿಫೆಕ್ಟ್ ಆಗಿ ನೇಮಿಸಲಾಗಿದೆ.

ವ್ಯಾಟಿಕನ್ ವರದಿ

ಕೊಲಂಬಿಯಾದಿಂದ ಸ್ಟೇಟ್ ಕಾರ್ಯಾಲಯಕ್ಕೆ, ಸ್ಟೇಟ್ ಕಾರ್ಯಾಲಯದಿಂದ ಇಟಲಿಯ ರಾಯಭಾರಿಗೆ, ಮತ್ತು ಇಟಲಿಯ ರಾಯಭಾರಿಯಿಂದ ಜಗದ್ಗುರುಗಳ ಹೌಸ್‌ಹೋಲ್ಡ್ ಪ್ರಿಫೆಕ್ಚರ್‌ಗೆ  ಇಂದು ಜಗದ್ಗುರುಗಳ ಅಧಿಕಾರ ಸ್ಥಳದ ಒಳಗೆ ಹಲವು ನೇಮಕಾತಿಗಳ ಘೋಷಣೆ ನಡೆಯಿತು.

ಜಗದ್ಗುರು XIVನೇ ಲಿಯೋರವರು ಜುಲೈನಲ್ಲಿ 56 ವರ್ಷ ಪೂರೈಸಲಿರುವ ಆರ್ಚ್‌ಬಿಷಪ್ ಪಾವ್ಲೋ ರೂಡೆಲ್ಲಿರವರನ್ನು ಸ್ಟೇಟ್ ಕಾರ್ಯಾಲಯದ ಜನರಲ್ ಅಫೇರ್ಸ್ ವಿಭಾಗದ ಹೊಸ ಬದಲಿ (ಸಬ್‌ಸ್ಟಿಟ್ಯೂಟ್)  ಆಗಿ ಆಯ್ಕೆ ಮಾಡಿದ್ದಾರೆ. ಇದು ಸಂಪೂರ್ಣ ವ್ಯಾಟಿಕನ್ ವ್ಯವಸ್ಥೆಯ ಅತ್ಯಂತ ಮಹತ್ವದ ಮತ್ತು ಸಂವೇದನಾಶೀಲ ಹುದ್ದೆಗಳಲ್ಲಿ ಒಂದಾಗಿದ್ದು, ವ್ಯಾಟಿಕನ್ ಸಿಟಿ ರಾಜ್ಯದ “ಆಂತರಿಕ ವ್ಯವಹಾರಗಳ ಸಚಿವ”ನಂತೆ ಕಾರ್ಯನಿರ್ವಹಿಸುತ್ತದೆ.

1995ರಲ್ಲಿ ಯಾಜಕರಾಗಿ ಅಭಿಷೇಕಗೊಂಡು ಬೆರ್ಗಾಮೋಗೆ ಸೇರಿಸಲ್ಪಟ್ಟಿರುವ ಆರ್ಚ್‌ಬಿಷಪ್ ರೂಡೆಲ್ಲಿ, ನೈತಿಕ ತತ್ವಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ ಮತ್ತು ಇತ್ತೀಚೆಗೆ ಕೊಲಂಬಿಯಾಗೆ ಪ್ರೆಷಿತರ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. 2019ರಲ್ಲಿ ಜಗದ್ಗುರು ಫ್ರಾನ್ಸಿಸ್ ರವರು ಅವರನ್ನು ಬಿಷಪ್ ಆಗಿ ಅಭಿಷೇಕಿಸಿ, 2020ರ ಜನವರಿಯಲ್ಲಿ ಜಿಂಬಾಬ್ವೆಗೆ ತಮ್ಮ ಪ್ರತಿನಿಧಿಯಾಗಿ ಕಳುಹಿಸಿದ್ದರು. ಬಳಿಕ 2023ರಲ್ಲಿ ಅವರನ್ನು ಕೊಲಂಬಿಯಾಗೆ ರಾಯಭಾರಿಯಾಗಿ ನೇಮಿಸಲಾಯಿತು.

ಜಗದ್ಗುರುಗಳ ಅಧಿಕಾರ ಸ್ಥಳದ ಡಿಪ್ಲೊಮ್ಯಾಟಿಕ್ ಸೇವೆಯಲ್ಲಿ ಅವರ ಅನುಭವವು 2001ರಿಂದಲೇ ಆರಂಭವಾಗಿದ್ದು, ಈಕ್ವಡಾರ್ ಮತ್ತು ಪೋಲ್ಯಾಂಡ್‌ನ ಜಗದ್ಗುರುಗಳ ಪ್ರತಿನಿಧಿತ್ವಗಳಲ್ಲಿ ಹಾಗೂ ಸ್ಟೇಟ್ ಕಾರ್ಯಾಲಯದ ಜನರಲ್ ಅಫೇರ್ಸ್ ವಿಭಾಗದಲ್ಲಿ ವಿವಿಧ ಹೊಣೆಗಾರಿಕೆಗಳನ್ನು ನಿರ್ವಹಿಸಿದ್ದಾರೆ.

ಇಂದು ಜಗದ್ಗುರು XIVನೇ ಲಿಯೋರವರ ಇಚ್ಛೆಯಂತೆ ಅವರು ಆ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಇದು ಕಳೆದ ನವೆಂಬರ್‌ನಲ್ಲಿ ನೈಜೀರಿಯಾದ ತತ್ವಜ್ಞ ಮತ್ತು ಕ್ಯಾನನ್ ಕಾನೂನು ತಜ್ಞ ಆಂಥನಿ ಒನ್ಯೇಮುಚೆ ಎಕ್ಪೋ ರವರನ್ನು ಅಸೆಸರ್ ಆಗಿ ನೇಮಿಸಿದ ನಂತರ ಸ್ಟೇಟ್ ಕಾರ್ಯಾಲಯದಲ್ಲಿ ನಡೆದ ಮತ್ತೊಂದು ಪ್ರಮುಖ ನೇಮಕಾತಿಯಾಗಿದೆ.

‘ವಿಶ್ವಾಸದ ಸಂಕೇತ’

ಇಂದಿನ ಘೋಷಣೆಯ ನಂತರ ಹೊರಬಂದ ಹೇಳಿಕೆಯಲ್ಲಿ ಆರ್ಚ್‌ಬಿಷಪ್ ರೂಡೆಲ್ಲಿ ಹೇಳಿದರು. “ಜಗದ್ಗರು ಲಿಯೋರವರು ಮಹಾಪ್ರಭುವಿನಿಂದ ಸ್ಟೇಟ್ ಕಾರ್ಯಾಲಯದ ಬದಲಿ (ಸಬ್‌ಸ್ಟಿಟ್ಯೂಟ್) ಆಗಿ ಅವರ ಉನ್ನತ ಕಾರ್ಯದಲ್ಲಿ ಸಮೀಪವಾಗಿ ಸೇವೆ ಸಲ್ಲಿಸಲು ಬಂದ ಕರೆಯು, ನಾನು ಅರ್ಹನಲ್ಲದಿದ್ದರೂ ನನಗೆ ನೀಡಲಾದ ಮಹತ್ತರವಾದ ವಿಶ್ವಾಸದ ಸಂಕೇತವಾಗಿದೆ”ಎಂದರು.

ನಂಬಿಕೆಯಿಂದ ಪ್ರೇರಿತರಾಗಿ, ಅವರು ಹೇಳಿದರು, “ನಾನು ಈ ಸೇವೆಯನ್ನು ‘ಪ್ರೆಡಿಕಾಟೆ ಎವಾಂಜಿಲಿಯಮ್’ ಎಂಬ ಪ್ರೇಷಿತರ ಸಂವಿಧಾನದ ಆತ್ಮದಲ್ಲಿ ಸ್ವೀಕರಿಸುತ್ತೇನೆ.”ಎಂದು

ವ್ಯಾಟಿಕನ್ ಸ್ಟೇಟ್ ಕಾರ್ಯದರ್ಶಿ ಕಾರ್ಡಿನಲ್ ಪಿಯೆಟ್ರೋ ಪಾರೋಲಿನ್ ರವರ ಮಾರ್ಗದರ್ಶನ ಮತ್ತು ಅಸೆಸರ್ ಮೋನ್ಸಿನ್ಯೋರ್ ಆಂಥನಿ ಒನ್ಯೇಮುಚೆ ಎಕ್ಪೋ ಹಾಗೂ ಜನರಲ್ ಅಫೇರ್ಸ್ ವಿಭಾಗದ ಎಲ್ಲಾ ಸಿಬ್ಬಂದಿಗಳ ಸಹಕಾರದ ಮೇಲೆ ನಂಬಿಕೆ ಇಟ್ಟುಕೊಂಡಿರುವುದಾಗಿ ಅವರು ಹೇಳಿದರು.

ವಿಶೇಷವಾಗಿ, ಬೆರ್ಗಾಮೋದ ಮಹಾನ್ ವ್ಯಕ್ತಿಯಾದ ಜಗದ್ಗುರು XXIIIIನೇ ಸಂತ ಜಾನ್ ರವರ ಮಧ್ಯಸ್ಥಿಕೆಗೆ ಅವರು ತಮ್ಮ ಭರವಸೆ ಇಟ್ಟಿದ್ದಾರೆಂದು ತಿಳಿಸಿದ್ದಾರೆ.

ಆರ್ಚ್‌ಬಿಷಪ್ ಪೆನಾ ಪರ್ರಾ ಇಟಲಿಗೆ ರಾಯಭಾರಿ

ಆರ್ಚ್‌ಬಿಷಪ್ ರೂಡೆಲ್ಲಿ ರವರು ವೆನೆಜುವೆಲಾದ ಆರ್ಚ್‌ಬಿಷಪ್ ಎಡ್ಗರ್ ಪೆನಾ ಪರ್ರಾ ರವರನ್ನು ಉತ್ತರಾಧಿಕಾರಿಯಾಗಿ ಬದಲಿಸುತ್ತಾರೆ. ಜಗದ್ಗುರು XIVನೇ ಲಿಯೋರವರು ಇಂದು ಅವರನ್ನು ಇಟಲಿಗೆ  ಪ್ರೆಷಿತರ ರಾಯಭಾರಿಯಾಗಿ ಆಗಿ ನೇಮಿಸಿದ್ದಾರೆ.

ಜಗದ್ಗುರು ಫ್ರಾನ್ಸಿಸ್ ರವರು 2018 ಆಗಸ್ಟ್ 15ರಂದು ಪೆನಾ ಪರ್ರಾ ರವರನ್ನು ಮೊಜಾಂಬಿಕ್‌ನಿಂದ ವರ್ಗಾವಣೆ ಮಾಡಿ (ಸಬ್‌ಸ್ಟಿಟ್ಯೂಟ್) ಬದಲಿ ಆಗಿ ನೇಮಿಸಿದ್ದರು. 2015ರಿಂದ ಅವರು ಆ ಪೂರ್ವ ಆಫ್ರಿಕಾ ದೇಶದಲ್ಲಿ ಪ್ರೆಷಿತರ ರಾಯಭಾರಿಯಾಗಿ  ಮುಖ್ಯಸ್ಥರಾಗಿದ್ದು, ರಾಷ್ಟ್ರ ಸರ್ಕಾರ ಮತ್ತು ವಿರೋಧ ಪಕ್ಷದ ನಡುವೆ ಶಾಂತಿ ಸ್ಥಾಪಿಸಲು ಮಧ್ಯಸ್ಥಿಕೆಯ ಗುಂಪಿನಲ್ಲಿ ಸಹ ಭಾಗಿಯಾಗಿದ್ದರು.

1960ರಲ್ಲಿ ಜನಿಸಿದ ಅವರು ಕೆನ್ಯಾ, ಹಳೆಯ ಯುಗೋಸ್ಲಾವಿಯಾ, ಹೊಂಡುರಾಸ್ ಮತ್ತು ಮೆಕ್ಸಿಕೊಗಳಲ್ಲಿ ಸೇವೆ ಸಲ್ಲಿಸಿದ ಅನುಭವಸಂಪನ್ನ ರಾಜತಾಂತ್ರಿಕರಾಗಿದ್ದು, ನಂತರ ಪಾಕಿಸ್ತಾನದಲ್ಲಿ ಜಗದ್ಗುರುಗಳ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದರು. ಅರ್ಜೆಂಟಿನಾದ ಲಿಯೋನಾರ್ಡೋ ಸ್ಯಾಂಡ್ರಿ ನಂತರ ಈ ಹುದ್ದೆಯನ್ನು ವಹಿಸಿದ ಎರಡನೇ ಲ್ಯಾಟಿನ್ ಅಮೆರಿಕನ್ ಆಗಿದ್ದಾರೆ.

ಆರ್ಚ್‌ಬಿಷಪ್ ರಾಜಿಕ್ ಜಗದ್ಗುರುಗಳ ಹೌಸ್‌ಹೋಲ್ಡ್ ಪ್ರಿಫೆಕ್ಟ್

ಇಂದು ಆರ್ಚ್‌ಬಿಷಪ್ ಪೆಟರ್ ರಾಜಿಕ್ ರವರನ್ನು ಜಗದ್ಗುರುಗಳ ಹೌಸ್‌ಹೋಲ್ಡ್‌ನ ಪ್ರಿಫೆಕ್ಟ್ ಆಗಿ ನೇಮಿಸಲಾಗಿದೆ.

ಈ ಹುದ್ದೆ ಆರ್ಚ್‌ಬಿಷಪ್ ಜಾರ್ಜ್ ಗ್ಯಾನ್ಸ್‌ವೈನ್ ರವರು ಹುದ್ದೆ ತ್ಯಜಿಸಿದ ಬಳಿಕ ಆರು ವರ್ಷಗಳಿಗಿಂತ ಹೆಚ್ಚು ಕಾಲ ಖಾಲಿಯಾಗಿತ್ತು. ಅವರು ಈಗ ಲಾಟ್ವಿಯಾ, ಎಸ್ಟೋನಿಯಾ ಮತ್ತು ಲಿಥುವೇನಿಯಾದ ಬಾಲ್ಟಿಕ್ ರಾಷ್ಟ್ರಗಳಿಗೆ ಪ್ರೆಷಿತರ ರಾಯಭಾರಿಯಾಗಿ  ಸೇವೆ ಸಲ್ಲಿಸುತ್ತಿದ್ದಾರೆ.

ರಾಜಿಕ್ ರವರು 2019ರಿಂದ ಆ ದೇಶಗಳಿಗೆ  ರಾಯಭಾರಿಯಾಗಿ ಸೇವೆ ಸಲ್ಲಿಸಿ, 2024ರಲ್ಲಿ ಇಟಲಿಗೆ ಬಂದಿದ್ದರು.

ಪ್ರಿಫೆಕ್ಟ್ ಆಗಿ, ಅವರು ಜಗದ್ಗುರುಗಳ ದೈನಂದಿನ ಜೀವನದ ಒಳಾಂಗಣ ವ್ಯವಸ್ಥೆ ಮತ್ತು ನಿರ್ವಹಣೆಗೆ ಹೊಣೆಗಾರಿಯಾಗಿರುವ ಈ ಪ್ರಿಫೆಕ್ಚರ್‌ನ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ.

30 ಮಾರ್ಚ್ 2026, 21:29