ಹುಡುಕಿ

Pray with the pope - april 2026 - cover

ಜಗದ್ಗುರುಗಳ ಏಪ್ರಿಲ್ ಪ್ರಾರ್ಥನಾ ಉದ್ದೇಶ: ‘ಸಂಕಷ್ಟದಲ್ಲಿರುವ ಯಾಜಕರಿಗಾಗಿ’

ಜಗದ್ಗುರು XIVನೇ ಲಿಯೋರವರು ಏಪ್ರಿಲ್ ತಿಂಗಳಿಗಾಗಿ ತಮ್ಮ ಪ್ರಾರ್ಥನಾ ಉದ್ದೇಶವನ್ನು ಪ್ರಕಟಿಸಿದ್ದು, ತಮ್ಮ ವೃತ್ತಿಯಲ್ಲಿ ವೈಯಕ್ತಿಕ ಸಂಕಷ್ಟವನ್ನು ಎದುರಿಸುತ್ತಿರುವ ಯಾಜಕರಿಗಾಗಿ ಪ್ರಾರ್ಥಿಸಲು ಕಥೋಲಿಕರನ್ನು ಆಹ್ವಾನಿಸುತ್ತಾರೆ

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಏಪ್ರಿಲ್ ತಿಂಗಳಲ್ಲಿ ಸಂಕಷ್ಟದಲ್ಲಿರುವ ಯಾಜಕರಿಗಾಗಿ ತಮ್ಮ ಜೊತೆಯಲ್ಲಿ ಪ್ರಾರ್ಥಿಸಲು ವಿಶ್ವದಾದ್ಯಂತದ ಕಥೋಲಿಕರನ್ನು ಆಹ್ವಾನಿಸಿದ್ದಾರೆ.

ಅವರು ಮಂಗಳವಾರ “ಜಗದ್ಗುರುಗಳ ಜೊತೆಗೆ ಪ್ರಾರ್ಥನೆ” ಎಂಬ ಮಾಸಿಕ ವಿಡಿಯೋವನ್ನು ಬಿಡುಗಡೆ ಮಾಡಿದರು. ಈ ವಿಡಿಯೋವನ್ನು ಜಗದ್ಗುರುಗಳ ವಿಶ್ವವ್ಯಾಪಿ ಪ್ರಾರ್ಥನಾ ಜಾಲವು ಸಿದ್ಧಪಡಿಸಿದೆ.

ತಮ್ಮ ಪ್ರಾರ್ಥನೆಯಲ್ಲಿ, ಜಗದ್ಗುರುಗಳು ಎಲ್ಲಾ ಯಾಜಕರನ್ನು ತಂದೆಯ ಕೈಗಳಲ್ಲಿ ಒಪ್ಪಿಸಿದರು, ವಿಶೇಷವಾಗಿ ಸಂಕಷ್ಟದ ಕ್ಷಣಗಳನ್ನು ಎದುರಿಸುತ್ತಿರುವವರನ್ನು“ಒಂಟಿತನವು ಭಾರವಾಗುವಾಗ, ಅನುಮಾನಗಳು ಅವರ ಹೃದಯಗಳನ್ನು ಮುಸುಕುವಾಗ, ಮತ್ತು ಆಯಾಸವು ನಿರೀಕ್ಷೆಗಿಂತ ಹೆಚ್ಚು ಬಲವಾಗಿರುವಂತೆ ಕಾಣುವಾಗ ಎಂದು ಪ್ರಾರ್ಥಿಸಿದರು.

ದೇವರು ಅವರ ಹೋರಾಟಗಳು ಮತ್ತು ಗಾಯಗಳನ್ನು ತಿಳಿದಿದ್ದಾನೆ ಎಂದು ಅವರು ಹೇಳಿದರು, ಮತ್ತು ಅವರು “ಸಾಮಾನ್ಯ ಅಧಿಕಾರಿಗಳು ಅಥವಾ ಒಂಟಿ ವೀರರು” ಆಗಿರದೆ “ವಿನಮ್ರ ಮತ್ತು ಪ್ರೀತಿಪಾತ್ರ ಶಿಷ್ಯರು” ಎಂಬಂತೆ ದೇವರ  ಪ್ರೀತಿಯನ್ನು ಸ್ವೀಕರಿಸಲು ಪ್ರಯತ್ನಿಸುತ್ತಿದ್ದಾರೆ.

“ಸದುತ್ತಮ ತಂದೆಯೇ, ನಮ್ಮ ಸಮುದಾಯವಾಗಿ ನಮ್ಮ ಯಾಜಕರನ್ನು ಹೇಗೆ ಕಾಳಜಿ ವಹಿಸಬೇಕು ಎಂಬುದನ್ನು ನಮಗೆ ಕಲಿಸು ತೀರ್ಪು ಕೊಡದೆ ಕೇಳಲು, ಪರಿಪೂರ್ಣತೆಯನ್ನು ಬೇಡದೆ ಕೃತಜ್ಞತೆಯನ್ನು ವ್ಯಕ್ತಪಡಿಸಲು, ವಾಕ್ಯ ಮತ್ತು ಕೃತಿಗಳ ಮೂಲಕ ರಾಜ್ಯವನ್ನು ಘೋಷಿಸುವ ದೀಕ್ಷಾಸ್ನಾನದ ಗುರಿಯಲ್ಲಿ ಅವರೊಂದಿಗೆ ಪಾಲುಗೊಳ್ಳಲು, ಮತ್ತು ಅವರೊಂದಿಗೆ ಸಮೀಪತೆ ಹಾಗೂ ಪ್ರಾಮಾಣಿಕ ಪ್ರಾರ್ಥನೆಯ ಮೂಲಕ ಸಾಗಲು,” ಎಂದು ಜಗದ್ಗುರುಗಳು ಪ್ರಾರ್ಥಿಸಿದರು.

ಅವರು “ನಮಗೆ ಸಹಾಯ ಮಾಡುವವರನ್ನು ನಾವು ಸಹಾಯಮಾಡೋಣ” ಎಂದು ಕಥೋಲಿಕರನ್ನು ಪ್ರೋತ್ಸಾಹಿಸಿದರು.

ಜಗದ್ಗುರು ಲಿಯೋರವರು ಪವಿತ್ರಾತ್ಮನು “ನಮ್ಮ ಯಾಜಕರಲ್ಲಿ ಸುವಾರ್ತೆಯ ಸಂತೋಷವನ್ನು ಮತ್ತೆ ಪ್ರಜ್ವಲಿಸಲಿ” ಎಂದು ಪ್ರಾರ್ಥಿಸಿದರು.

ಅವರಿಗೆ ಆರೋಗ್ಯಕರ ಸ್ನೇಹಗಳು, ಸಹೋದರತ್ವದ ಬೆಂಬಲದ ಜಾಲಗಳು, ನಿರೀಕ್ಷಿಸಿದಂತೆ ನಡೆದಾಗ ಹಾಸ್ಯಭಾವನೆ, ಮತ್ತು ತಮ್ಮ ವೃತ್ತಿಯ ಸೌಂದರ್ಯವನ್ನು ಸದಾ ಮರುಕಂಡುಕೊಳ್ಳುವ ಕೃಪೆಯನ್ನು ನೀಡು, ಎಂದು ಅವರು ಹೇಳಿದರು.

ಅವರು ನಿನ್ನ ಮೇಲಿನ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳದಿರಲಿ, ಎಂದು ಅವರು ಸಮಾಪಿಸಿದರು, “ಮತ್ತು ವಿನಮ್ರ ಹಾಗೂ ಉದಾರ ಹೃದಯದಿಂದ ನಿನ್ನ ಧರ್ಮ ಸಭೆಗೆ ಸೇವೆ ಸಲ್ಲಿಸುವ ಸಂತೋಷವನ್ನೂ ಕಳೆದುಕೊಳ್ಳದಿರಲಿ ಎಂದರು.

ನಮ್ಮ ವಿಶ್ವಾಸವನ್ನು ಬೆಂಬಲಿಸುವವರನ್ನು ಬೆಂಬಲಿಸುವುದು

ವಿಡಿಯೋಗೆ ಜೊತೆಯಾಗಿ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, ಜಗದ್ಗುರುಗಳ ವಿಶ್ವವ್ಯಾಪಿ ಪ್ರಾರ್ಥನಾ ಜಾಲದ ಅಂತಾರಾಷ್ಟ್ರೀಯ ನಿರ್ದೇಶಕರಾದ ವಂ.ಸ್ವಾಮಿ ಕ್ರಿಸ್ಟೋಬಲ್ ಫೋನ್ಸ್ ರವರು, ಯಾಜಕರಿಗಾಗಿ ಪ್ರಾರ್ಥಿಸುವ ಈ ಉದ್ದೇಶವು ಜಗದ್ಗುರು XIVನೇ ಲಿಯೋರವರ ಹೃದಯಕ್ಕೆ ಅತ್ಯಂತ ಹತ್ತಿರವಾಗಿದೆ ಎಂದು ಹೇಳಿದರು.

ಮಾನವೀಯ ಸಂಗಾತಿತ್ವ, ನಿಜವಾದ ಸ್ನೇಹ, ಮತ್ತು ಮುಖ್ಯವಾಗಿ ಪ್ರಾರ್ಥನೆಯ ಬೆಂಬಲವು ಎಷ್ಟು ಮಹತ್ವದ್ದೆಂಬುದನ್ನು ನೆನಪಿಟ್ಟುಕೊಳ್ಳುವುದು ಅಗತ್ಯ, ಎಂದು ಜಗದ್ಗುರುಗಳು ಹೇಳಿದರು. “ಯಾಜಕರು ಅವರು ಒಬ್ಬರಲ್ಲ ಎಂದು ತಿಳಿದುಕೊಳ್ಳಬೇಕು”ಎಂದರು.

ಪ್ರತಿ ವ್ಯಕ್ತಿಯಂತೆ, ಯಾಜಕರೂ ಸಹ ದೌರ್ಬಲ್ಯ ಹೊಂದಿರುವವರು ಅವರಿಗೆ ಕರುಣೆ, ಸಮೀಪತೆ ಮತ್ತು ಅರ್ಥಮಾಡಿಕೊಳ್ಳುವಿಕೆ ಅಗತ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.

ಸಮುದಾಯ ಜೀವನದ ಜೊತೆಗೆ, ಯಾಜಕರು ತಮ್ಮ ಸಮುದಾಯಗಳಿಂದ ಹಾಗೂ ಭಕ್ತರ ಪ್ರಾರ್ಥನೆಗಳಿಂದ ಬೆಂಬಲಿತವಾಗಿರುವುದನ್ನು ಅನುಭವಿಸಬೇಕು. ಏಪ್ರಿಲ್ ತಿಂಗಳ ಜಗದ್ಗುರುಗಳ ಪ್ರಾರ್ಥನಾ ಉದ್ದೇಶವು ಕಥೋಲಿಕರಿಗೆ ಆತ್ಮೀಯ ಬೆಂಬಲವನ್ನು ನೀಡುವ ಅವಕಾಶವನ್ನು ಒದಗಿಸುತ್ತದೆ.

ಜಗದ್ಗುರುಗಳ ಜೊತೆಗೆ ಪ್ರಾರ್ಥನೆ

ಪ್ರಭು ಯೇಸು, ಉತ್ತಮ ಕುರಿಗಾಹಿ ಮತ್ತು ನಮ್ಮ ಪ್ರಯಾಣದ ಸಂಗಾತಿ, ಇಂದು ನಾವು ಎಲ್ಲಾ ಯಾಜಕರನ್ನು ನಿನ್ನ ಕೈಗಳಲ್ಲಿ ಒಪ್ಪಿಸುತ್ತೇವೆ, ವಿಶೇಷವಾಗಿ ಸಂಕಷ್ಟದ ಕ್ಷಣಗಳನ್ನು ಎದುರಿಸುತ್ತಿರುವವರನ್ನು, ಒಂಟಿತನವು ಭಾರವಾಗುವಾಗ, ಅನುಮಾನಗಳು ಅವರ ಹೃದಯಗಳನ್ನು ಮುಸುಕುವಾಗ, ಮತ್ತು ಆಯಾಸವು ನಿರೀಕ್ಷೆಗಿಂತ ಬಲವಾಗಿರುವಂತೆ ಕಾಣುವಾಗ.

ಅವರ ಹೋರಾಟಗಳು ಮತ್ತು ಗಾಯಗಳನ್ನು ತಿಳಿದಿರುವ ನೀವು, ನಿಮ್ಮ  ಪ್ರೀತಿಯ ಖಚಿತತೆಯನ್ನು ಅವರಲ್ಲಿ ಪುನರುಜ್ಜೀವನಗೊಳಿಸಿರಿ. ಅವರು ಸಾಮಾನ್ಯ ಅಧಿಕಾರಿಗಳು ಅಥವಾ ಒಂಟಿ ವೀರರು ಅಲ್ಲ, ಆದರೆ ಪ್ರೀತಿಪಾತ್ರ ಪುತ್ರರು, ವಿನಮ್ರ ಮತ್ತು ಅಮೂಲ್ಯ ಶಿಷ್ಯರು, ಮತ್ತು ಜನರ ಪ್ರಾರ್ಥನೆಯಿಂದ ಬೆಂಬಲಿತ ಪ್ರೇಷಿತರು ಎಂಬುದನ್ನು ಅವರಿಗೆ ಅನುಭವಿಸಿಸು.

ಸದುತ್ತಮ ತಂದೆಯೇ, ನಮ್ಮ ಸಮುದಾಯವಾಗಿ ನಮ್ಮ ಯಾಜಕರನ್ನು ಕಾಳಜಿ ವಹಿಸಲು ನಮಗೆ ಕಲಿಸಿರಿ ತೀರ್ಪು ಕೊಡದೆ ಕೇಳಲು, ಪರಿಪೂರ್ಣತೆಯನ್ನು ಬೇಡದೆ ಕೃತಜ್ಞತೆಯನ್ನು ಸಲ್ಲಿಸಲು, ವಾಕ್ಯ ಮತ್ತು ಕೃತಿಗಳ ಮೂಲಕ ರಾಜ್ಯವನ್ನು ಘೋಷಿಸುವ ದೀಕ್ಷಾಸ್ನಾನದ ಮಿಷನ್‌ನಲ್ಲಿ ಅವರೊಂದಿಗೆ ಪಾಲುಗೊಳ್ಳಲು, ಮತ್ತು ಸಮೀಪತೆ ಹಾಗೂ ಪ್ರಾಮಾಣಿಕ ಪ್ರಾರ್ಥನೆಯೊಂದಿಗೆ  ಸಾಗಲು ನಮಗೆ ಸಹಾಯ ಮಾಡುವವರನ್ನು ನಾವು ಸಹ ಬೆಂಬಲಿಸೋಣ.

ಪವಿತ್ರಾತ್ಮನೇ, ನಮ್ಮ ಯಾಜಕರಲ್ಲಿ ಸುವಾರ್ತೆಯ ಸಂತೋಷವನ್ನು ಮತ್ತೆ ಪ್ರಜ್ವಲಿಸು. ಅವರಿಗೆ ಆರೋಗ್ಯಕರ ಸ್ನೇಹಗಳು, ಸಹೋದರತ್ವದ ಬೆಂಬಲದ ಜಾಲಗಳು, ನಿರೀಕ್ಷಿಸಿದಂತೆ ಆದಾಗ ಹಾಸ್ಯಭಾವನೆ, ಮತ್ತು ತಮ್ಮ ವೃತ್ತಿಯ ಸೌಂದರ್ಯವನ್ನು ಸದಾ ಮರುಕಂಡುಕೊಳ್ಳುವ ಕೃಪೆಯನ್ನು ನೀಡು. ಅವರು ನಿಮ್ಮ ಮೇಲಿನ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳದಿರಲಿ, ಮತ್ತು ವಿನಮ್ರ ಹಾಗೂ ಉದಾರ ಹೃದಯದಿಂದ ನಿನ್ನ ಧರ್ಮ ಸಭೆಗೆ ಸೇವೆ ಸಲ್ಲಿಸುವ ಸಂತೋಷವನ್ನೂ ಕಳೆದುಕೊಳ್ಳದಿರಲಿ.

ಆಮೆನ್.

31 ಮಾರ್ಚ್ 2026, 00:00