ಹುಡುಕಿ

ಸೆಪ್ಟೆಂಬರ್ 14, 2025 ರಂದು 21 ನೇ ಶತಮಾನದ ಹುತಾತ್ಮರ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಜಗದ್ಗುರು XIVನೇ ಲಿಯೋರವರು ಸೆಪ್ಟೆಂಬರ್ 14, 2025 ರಂದು 21 ನೇ ಶತಮಾನದ ಹುತಾತ್ಮರ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಜಗದ್ಗುರು XIVನೇ ಲಿಯೋರವರು  (AFP or licensors)

ಶಿಲುಬೆಯ ಹಾದಿಯ ಧ್ಯಾನಗಳು: ನಂಬಿಕೆ, ನಿರೀಕ್ಷೆ ಮತ್ತು ಪ್ರೀತಿ ನಿಜ ಜೀವನದಲ್ಲಿ ಅವತರಿಸಬೇಕು.

ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿ, ರೋಮಿನ ಕೊಲೊಸ್ಸಿಯಂನಲ್ಲಿ ನಡೆಯುವ ಶುಕ್ರವಾರದ ಶಿಲುಬೆ ಹಾದಿಯ ಧ್ಯಾನಗಳನ್ನು ಬಿಡುಗಡೆ ಮಾಡಿದೆ. ಈ ಧ್ಯಾನಗಳಲ್ಲಿ ವಂ.ಸ್ವಾಮಿ ಫ್ರಾನ್ಸೆಸ್ಕೊ ಪಟ್ಟನ್ ರವರು, ನಂಬಿಕೆ, ನಿರೀಕ್ಷೆ ಮತ್ತು ಪ್ರೀತಿ ಎಂಬ ಧಾರ್ಮಿಕ ಗುಣಗಳನ್ನು ಕ್ರೈಸ್ತರು ನೈಜ ಜೀವನದಲ್ಲಿ ಹೇಗೆ ಜೀವಂತವಾಗಿ ಅವತರಿಸಬಹುದು ಎಂಬುದಕ್ಕೆ ಸಂತ ಫ್ರಾನ್ಸಿಸ್ ರವರ ಉದಾಹರಣೆಯನ್ನು ವಿವರಿಸುತ್ತಾರೆ.

ವ್ಯಾಟಿಕನ್ ವರದಿ

ಪವಿತ್ರ ಶುಕ್ರವಾರ ಸಂಜೆ ಜಗದ್ಗುರು XIVನೇ ಲಿಯೋರವರು ಶಿಲುಬೆಯ ಹಾದಿಯನ್ನು ನಡೆಸುವಾಗ, ರೋಮಿನ ಕೊಲೊಸ್ಸಿಯಂನಲ್ಲಿ ಸೇರಿರುವ ಕ್ರೈಸ್ತರು ಮತ್ತು ವಿಶ್ವದಾದ್ಯಂತ ಹರಡಿರುವ ವಿಶ್ವಾಸಿಗಳು, ಪವಿತ್ರ ಭೂಮಿಯ ಮಾಜಿ ಕಸ್ಟೋಸ್ ಒಎಫ್ಎಂ  ಆದ ವಂ.ಸ್ವಾಮಿ  ಫ್ರಾನ್ಸೆಸ್ಕೊ ಪ್ಯಾಟನ್ ರವರ ಧ್ಯಾನಗಳ ಮೂಲಕ ಆತ್ಮೀಯವಾಗಿ ಮಾರ್ಗದರ್ಶನ ಪಡೆಯುತ್ತಾರೆ.

ಶಿಲುಬೆ ಹಾದಿಯ ಹದಿನಾಲ್ಕು ಸ್ಥಳಗಳ ಪ್ರತಿಯೊಂದರಲ್ಲಿಯೂ, ವಂ.ಸ್ವಾಮಿ ಪಟ್ಟನ್ ರವರ ಪದಗಳು ಸುವಾರ್ತೆಯ ವಾಚನಗಳು ಮತ್ತು ಅಸಿಸಿಯ ಸಂತ ಫ್ರಾನ್ಸಿಸ್ ರವರ ಬರಹಗಳಿಂದ ತೆಗೆದುಕೊಂಡ ಭಾಗಗಳ ಬೆಳಕಿನಲ್ಲಿ ಕ್ರೈಸ್ತ ಜೀವನದ ವಿವಿಧ ಅಂಶಗಳನ್ನು ಅನ್ವೇಷಿಸುತ್ತವೆ. ಧರ್ಮ ಸಭೆ ಅವರು ನಿಧನ ಹೊಂದಿದ 800 ವರ್ಷಗಳನ್ನು ಸ್ಮರಿಸುತ್ತಿರುವ ಸಂದರ್ಭದಲ್ಲಿ ಈ ಧ್ಯಾನಗಳು ನೀಡಲ್ಪಟ್ಟಿವೆ.

ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿ ಶುಕ್ರವಾರದಂದು ಪ್ರಕಟಿಸಿದ ಈ ಧ್ಯಾನಗಳಲ್ಲಿ, ವಂ.ಸ್ವಾಮಿ ಪಟ್ಟನ್ ರವರು ನಮ್ಮನ್ನು ಯೇಸುವಿನ ಮೂಲ ಮಾರ್ಗದಲ್ಲಿ ಜೆರೂಸಲೇಮಿನ ಇಳುವರಿ ಬೀದಿಗಳ ಮೂಲಕ, ಶಿಲುಬೆಗೇರಿಸಲ್ಪಟ್ಟು ಸಮಾಧಿಗೊಳಿಸಲ್ಪಟ್ಟು ಗೋಲ್ಗೊಥಾವರೆಗೆ—ಕರೆದೊಯ್ಯುತ್ತಾರೆ.

ಈ ಮಾರ್ಗವು ಭಕ್ತರಿಗೆ ಮಾತ್ರ ಅಥವಾ ಮೌನ ಪ್ರಾರ್ಥನೆಗಾಗಿ ಹುಡುಕುವವರಿಗೆ ಮಾತ್ರ ಮೀಸಲಾಗಿಲ್ಲ,ಎಂದು ಅವರು ಪರಿಚಯದಲ್ಲಿ ಹೇಳುತ್ತಾರೆ. ಬದಲಿಗೆ, ಯೇಸುವಿನ ಕಾಲದಲ್ಲಿದ್ದಂತೆಯೇ, ನಾವು ಗೊಂದಲಭರಿತ, ಗಮನಚಲಿಸುವ, ಶಬ್ದಭರಿತ ವಾತಾವರಣದಲ್ಲಿ ನಡೆಯುತ್ತೇವೆ. ನಮ್ಮ ವಿಶ್ವಾಸವನ್ನು ಹಂಚಿಕೊಳ್ಳುವವರ ಜೊತೆಗೆ, ಅವರನ್ನು ಹಾಸ್ಯ ಮಾಡುವವರೂ, ಅವಮಾನಿಸುವವರೂ ನಮ್ಮ ಸುತ್ತಲಿದ್ದಾರೆ. ಇದೇ ನಮ್ಮ ದೈನಂದಿನ ಜೀವನದ ವಾಸ್ತವಿಕತೆ.

ಶಿಲುಬೆಯ ಮಾರ್ಗವು ಪರಿಪೂರ್ಣ ಭಕ್ತಿಯ ಜೀವನವನ್ನು ನಡೆಸುವವರಿಗಾಗಿಯೇ ಅಲ್ಲ, ಅಥವಾ ತತ್ತ್ವಶಾಸ್ತ್ರೀಯವಾಗಿ ಮಾತ್ರ ಚಿಂತಿಸುವವರಿಗಾಗಿಯೇ ಅಲ್ಲ, ಎಂದು ವಂ.ಸ್ವಾಮಿ ಪಟ್ಟನ್ ರವರು ಹೇಳುತ್ತಾರೆ. ಇದು ನಂಬಿಕೆ, ನಿರೀಕ್ಷೆ ಮತ್ತು ಪ್ರೀತಿ ನೈಜ ಜೀವನದಲ್ಲಿ ಅವತರಿಸಬೇಕೆಂದು ಅರಿತಿರುವವರ ಅಭ್ಯಾಸವಾಗಿದೆ.

ಮೊದಲ ಸ್ಥಳದಲ್ಲಿ ಯೇಸು ಮರಣದಂಡನೆಗೆ ಗುರಿಯಾಗುವಾಗ, ನಾವು ಮಾನವೀಯ ಅಧಿಕಾರದ ಪ್ರತಿಯೊಂದು ಅಹಂಕಾರವನ್ನೂ ಮತ್ತು ದೇವರಿಂದ ನೀಡಲಾದ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಪ್ರಲೋಭನವನ್ನು ಅವರು ಬಯಲಿಗೆಳೆಯುವುದನ್ನು ನೋಡುತ್ತೇವೆ ಎಂದು ಅಸಿಸಿಯ ಸಂತ ಫ್ರಾನ್ಸಿಸ್ ರವರು ನಮಗೆ ನೆನಪಿಸುತ್ತಾರೆ,ಎಂದು ವಂ. ಸ್ವಾಮಿ ಪಟ್ಟನ್ ರವರು ಹೇಳುತ್ತಾರೆ, ಅಧಿಕಾರದಲ್ಲಿರುವ ಪ್ರತಿಯೊಬ್ಬರೂ ತಮ್ಮ ಅಧಿಕಾರವನ್ನು ಹೇಗೆ ಬಳಸುತ್ತಾರೆ ಎಂಬುದಕ್ಕೆ ದೇವರಿಗೆ ಉತ್ತರ ಕೊಡಬೇಕಾಗುತ್ತದೆ ಯುದ್ಧಗಳನ್ನು ಆರಂಭಿಸುವಾಗ ಅಥವಾ ಕೊನೆಗೊಳಿಸುವಾಗ, ತೀರ್ಪು ನೀಡುವಾಗ, ಆರ್ಥಿಕ ಚಟುವಟಿಕೆಗಳಲ್ಲಿ ತೊಡಗುವಾಗ, ಅಥವಾ ಮಾನವ ಗೌರವವನ್ನು ಉತ್ತೇಜಿಸುವಾಗ ಅಥವಾ ನಾಶಮಾಡುವಾಗ ಎಂದು ಹೇಳಿದರು.

ಎರಡನೇ ಸ್ಥಳದಲ್ಲಿ ಯೇಸು ತನ್ನ ಶಿಲುಬೆಯನ್ನು ಹೊರುವ ವೇಳೆ, ನಾವು ನೋವು ಅಥವಾ ಅವಮಾನದಿಂದ ತಪ್ಪಿಸಿಕೊಳ್ಳುವ ಆಸೆಯನ್ನು ಅನುಭವಿಸುತ್ತೇವೆ.

ಯೇಸುವೇ, ನಮ್ಮನ್ನು ಶಿಲುಬೆಯ ಭಯದಿಂದ ಮುಕ್ತಗೊಳಿಸು, ಎಂದು ವಂ.ಸ್ವಾಮಿ ಪಟ್ಟನ್ ರವರು ಪ್ರಾರ್ಥಿಸುತ್ತಾರೆ. “ನೀನು ನಡೆದ ದಾರಿಯನ್ನು ಅನುಸರಿಸಲು ಮತ್ತು ನಿನ್ನ ಶಿಲುಬೆಯಲ್ಲಿಯೇ ಮಹಿಮೆಯನ್ನು ಹುಡುಕಲು ನಮಗೆ ಕೃಪೆ ನೀಡಿರಿ ಎಂದರು.

ಮೂರನೇ ಸ್ಥಳದಲ್ಲಿ ಯೇಸು ಬೀಳುವಾಗ, ಯೇಸುವಿನ ಜೀವನವು ನಿರಂತರ ವಿನಯ ಮತ್ತು ತಗ್ಗುವಿಕೆಯ ಜೀವನವಾಗಿತ್ತು ಎಂಬುದನ್ನು ನಾವು ನೆನಪಿಸಿಕೊಳ್ಳುತ್ತೇವೆ, ಏಕೆಂದರೆ ಆತನು ತನ್ನ ಮಹಿಮೆಯನ್ನು ತ್ಯಜಿಸಿ ಮಾನವನಾಗಿ ಬಂದನು.

“ಈ ಬೀಳು ಇನ್ನೂ ಆಳವಾದ ಇಳಿಜಾರಿನ ಮುನ್ನುಡಿಯಾಗಿದೆ,” ಎಂದು ವಂ. ಸ್ವಾಮಿ ಪಟ್ಟನ್ ರವರು ಹೇಳುತ್ತಾರೆ: “ಸತ್ತವರು ಲೋಕಕ್ಕೆ ಇಳಿಯುವಿಕೆ ಮತ್ತು ಮರಣದ ರಹಸ್ಯಕ್ಕೆ ಶರಣಾಗುವಿಕೆ ಈ ಭೂಮಿಯ ಜೀವನದ ಕೊನೆಯಲ್ಲಿ ನಮ್ಮ ಪ್ರತಿಯೊಬ್ಬರಿಗೂ ಎದುರಾಗುವ ಬೀಳು ಎಂದು ಹೇಳಿದರು.

ನಾಲ್ಕನೇ ಸ್ಥಳದಲ್ಲಿ ಯೇಸು ತನ್ನ ತಾಯಿಯನ್ನು ಭೇಟಿಯಾಗುವಾಗ, ನಾವು ರೋಗ, ಅಪಘಾತ, ಹಿಂಸಾಚಾರ ಅಥವಾ ನಿರಾಶೆಯಿಂದ ತಮ್ಮ ಮಕ್ಕಳನ್ನು ಕಳೆದುಕೊಳ್ಳುವ ತಾಯಂದಿರ ಅಸಹಜ ಮತ್ತು ಕಲ್ಪಿಸಲಾಗದ ನೋವನ್ನು ಕಾಣುತ್ತೇವೆ.

ನಮಗೆ ತಾಯಿಯ ಹೃದಯವನ್ನು ನೀಡು,ಎಂದು ವಂ.ಸ್ವಾಮಿ ಪಟ್ಟನ್ ರವರು ಪ್ರಾರ್ಥಿಸುತ್ತಾರೆ, “ಇತರರ ನೋವನ್ನು ಅರ್ಥಮಾಡಿಕೊಳ್ಳಲು ಮತ್ತು ಹಂಚಿಕೊಳ್ಳಲು, ಹಾಗೆಯೇ ನಿಜವಾದ ಪ್ರೀತಿಯ ಅರ್ಥವನ್ನು ಕಲಿಯಲು ನಮಗೆ ಮಾರ್ಗದರ್ಶನ ನೀಡಿ ಎಂದು ಹೇಳಿದರು.

ಐದನೇ ಸ್ಥಳದಲ್ಲಿ ಸಿರೇನಿನದ ಸೀಮೋನ್ ಯೇಸುವಿಗೆ ಶಿಲುಬೆಯನ್ನು ಹೊರುವಲ್ಲಿ ಸಹಾಯ ಮಾಡುವಾಗ, ಆತನು ಸ್ವಯಂಪ್ರೇರಿತವಾಗಿ ಮಾಡದಿದ್ದರೂ, ಆ ಕೆಲವು ಹೆಜ್ಜೆಗಳು ಅವನ ಜೀವನವನ್ನು ಶಾಶ್ವತವಾಗಿ ಬದಲಾಯಿಸಿತು ಎಂಬುದನ್ನು ನಾವು ತಿಳಿದುಕೊಳ್ಳುತ್ತೇವೆ.

ಇಂದಿಗೂ ಅನೇಕರು ಇತರರಿಗಾಗಿ ಒಳ್ಳೆಯದನ್ನು ಮಾಡಲು ಆಯ್ಕೆ ಮಾಡುತ್ತಾರೆ,ಎಂದು ವಂ.ಸ್ವಾಮಿ ಪಟ್ಟನ್ ನೆನಪಿಸುತ್ತಾರೆ. ಅವರಲ್ಲಿ ಹಲವರು ನಿಮ್ಮಲ್ಲಿ ನಂಬಿಕೆ ಇರದವರೇ ಆಗಿರಬಹುದು, ಆದರೂ—ಅರಿವಿಲ್ಲದೆ—ನಿಮ್ಮ ಶಿಲುಬೆಯನ್ನು ಹೊರುವಲ್ಲಿ ಸಹಾಯ ಮಾಡುತ್ತಾರೆ ಎಂದರು.

ಆರನೇ ಸ್ಥಳದಲ್ಲಿ ವೆರೋನಿಕಾ ಯೇಸುವಿನ ಮುಖವನ್ನು ಒರೆಸುವಾಗ, ಅವಳ ಸರಳವಾದ  ಆಳವಾದ ದಯೆಯ ಕೃತ್ಯವನ್ನು ನಾವು ನೋಡುತ್ತೇವೆ.

ಇಂದಿಗೂ ನಿಮ್ಮ ಮುಖವನ್ನು ಒರೆಸಲು ನಮಗೆ ಸಾಮರ್ಥ್ಯವನ್ನು ನೀಡು, ಎಂದು ವಂ.ಸ್ವಾಮಿ ಪಟ್ಟನ್ ರವರು ಹೇಳುತ್ತಾರೆ, “ಧೂಳು ಮತ್ತು ರಕ್ತದಿಂದ ಆವರಿತವಾಗಿರುವ, ಮಾನವ ಗೌರವವನ್ನು ತುಳಿಯುವ ಪ್ರತಿಯೊಂದು ಕ್ರಿಯೆಯಿಂದ ವಿಕೃತಗೊಂಡಿರುವ ನಿನ್ನ ಮುಖವನ್ನು ಎಂದು ಹೇಳಿದರು.

ಏಳನೇ ಸ್ಥಳದಲ್ಲಿ ಯೇಸು ಎರಡನೇ ಬಾರಿ ಬೀಳುವಾಗ, ಮಹಾ ಪ್ರೀತಿ ಮರಣಕ್ಕಿಂತಲೂ ಶಕ್ತಿಶಾಲಿಯಾಗಿದೆ ಎಂಬುದನ್ನು ನಾವು ಅರಿಯುತ್ತೇವೆ.

ನೀವು ಬೀಳುವಾಗ, ಅನ್ಯಾಯ, ಸುಳ್ಳು, ಶೋಷಣೆ ಮತ್ತು ಹಿಂಸಾಚಾರದಿಂದ ಕುಗ್ಗಿಹೋದವರನ್ನು ಎತ್ತಲು ನೀವು  ಬೀಳುತ್ತೀಯೆ.ವಂ.ಸ್ವಾಮಿ ಪಟ್ಟನ್ ರವರು ಹೇಳುತ್ತಾರೆ

ಎಂಟನೇ ಸ್ಥಳದಲ್ಲಿ ಯೇಸು ಜೆರೂಸಲೇಮಿನ ಮಹಿಳೆಯರನ್ನು ಭೇಟಿಯಾಗುವಾಗ, ನೋವು ಇರುವ ಎಲ್ಲೆಡೆ ಮಹಿಳೆಯರು ಇದ್ದಾರೆ ಎಂಬುದನ್ನು ನಾವು ನೆನಪಿಸಿಕೊಳ್ಳುತ್ತೇವೆ.

ಪ್ರಭುವೇ, ಮತ್ತೆ ನಮಗೆ ಕಣ್ಣೀರು ಕೊಡು,ನಮ್ಮ ಮನಸ್ಸು ನಿರ್ಲಕ್ಷ್ಯದ ಮಂಜಿನಿಂದ ಎದ್ದೇಳುವಂತೆ ಎಂದು ವಂ.ಸ್ವಾಮಿ ಪಟ್ಟನ್ ರವರು ಪ್ರಾರ್ಥಿಸುತ್ತಾರೆ.

ಒಂಬತ್ತನೇ ಸ್ಥಳದಲ್ಲಿ ಯೇಸು ಮೂರನೇ ಬಾರಿ ಬೀಳುವಾಗ, ನಾವು ಎಷ್ಟೇ ಬಾರಿ ಬಿದ್ದರೂ, ಯೇಸು ನಮ್ಮನ್ನು ಎತ್ತಲು ಸದಾ ಇರುವನು ಎಂಬುದನ್ನು ಅರಿಯುತ್ತೇವೆ.

ಹತ್ತನೇ ಸ್ಥಳದಲ್ಲಿ ಯೇಸುವನ್ನು ವಸ್ತ್ರಗಳಿಂದ ವಂಚಿಸುವಾಗ, ಇಂದಿನ ಕಾಲದಲ್ಲಿಯೂ ಮಾನವ ಗೌರವವನ್ನು ಕಳೆದುಕೊಳ್ಳುವ ಘಟನೆಗಳನ್ನು ನಾವು ನೋಡುತ್ತೇವೆ.

ಹನ್ನೊಂದನೇ ಸ್ಥಳದಲ್ಲಿ ಯೇಸುವನ್ನು ಶಿಲುಬೆಗೆ ಹೊಡೆಯುವಾಗ, ನಿಜವಾದ ಶಕ್ತಿ ಪ್ರೀತಿಯಲ್ಲಿದೆ ಎಂಬುದನ್ನು ನಾವು ತಿಳಿಯುತ್ತೇವೆ.

ಹನ್ನೆರಡನೇ ಸ್ಥಳದಲ್ಲಿ ಯೇಸು ಸಾಯುವಾಗ, ಆತನು ತನ್ನ ಕಾರ್ಯವನ್ನು ಪೂರ್ಣಗೊಳಿಸಿ ತಂದೆಯ ಬಳಿಗೆ ಮರಳುತ್ತಾರೆ.

ಹದಿಮೂರನೇ ಸ್ಥಳದಲ್ಲಿ ಯೇಸುವಿನ ದೇಹವನ್ನು ಶಿಲುಬೆಯಿಂದ ಇಳಿಸುವಾಗ, ಆತನ ಮರಣವು ಫಲ ನೀಡಲು ಪ್ರಾರಂಭಿಸುತ್ತದೆ.

ಹದಿನಾಲ್ಕನೇ ಸ್ಥಳದಲ್ಲಿ ಯೇಸುವನ್ನು ಸಮಾಧಿಯಲ್ಲಿ ಇಡುವಾಗ, ಮರಣವನ್ನು ಜಯಿಸಲಾಗಿದೆ ಎಂಬ ಸುವಾರ್ತೆಯನ್ನು ನಾವು ಕೇಳುತ್ತೇವೆ.

ಶಿಲುಬೆಯ ಮಾರ್ಗದ ಕೊನೆಯಲ್ಲಿ, ಜಗದ್ಗುರು XIVನೇ ಲಿಯೋರವರು, ಅಸಿಸಿಯ ಸಂತ ಫ್ರಾನ್ಸಿಸ್. ರವರ ಆಹ್ವಾನಕ್ಕೆ ಪ್ರತಿಕ್ರಿಯಿಸಿ, ಪಿತ, ಸುತ ಮತ್ತು ಪವಿತ್ರಾತ್ಮರನ್ನು ಏಕೀಕರಿಸುವ ಪ್ರೀತಿಯ ಸಂಭಾಷಣೆಯಲ್ಲಿ ಭಾಗವಹಿಸುವ ಜೀವನವನ್ನು ನಡೆಸುವಂತೆ ಕ್ರೈಸ್ತರು ಪ್ರಾರ್ಥಿಸುತ್ತಾರೆ.

03 ಏಪ್ರಿಲ್ 2026, 14:59