ಹುಡುಕಿ

ಜೂನ್ 26, 2018 ರಂದು ಸೇಂಟ್ ಜಾನ್ ಲ್ಯಾಟೆರನ್ ಬೆಸಿಲಿಕಾದಲ್ಲಿ ವ್ಯಾಟಿಕನ್‌ಗೆ ಮೊದಲ ಭೇಟಿ ನೀಡಿದ ಅಧ್ಯಕ್ಷ ಮ್ಯಾಕ್ರನ್ ರವರ ಚಿತ್ರಪಟ. ಜೂನ್ 26, 2018 ರಂದು ಸೇಂಟ್ ಜಾನ್ ಲ್ಯಾಟೆರನ್ ಬೆಸಿಲಿಕಾದಲ್ಲಿ ವ್ಯಾಟಿಕನ್‌ಗೆ ಮೊದಲ ಭೇಟಿ ನೀಡಿದ ಅಧ್ಯಕ್ಷ ಮ್ಯಾಕ್ರನ್ ರವರ ಚಿತ್ರಪಟ. 

ಜಗದ್ಗುರು ಲಿಯೋರವರು ಫ್ರಾನ್ಸ್ ಅಧ್ಯಕ್ಷ ಎಮ್ಮಾನುಯೆಲ್ ಮ್ಯಾಕ್ರೋನ್ ರವರನ್ನು ವ್ಯಾಟಿಕನ್‌ನಲ್ಲಿ ಸ್ವಾಗತಿಸಲಿದ್ದಾರೆ.

ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯ ನಿರ್ದೇಶಕರು ದೃಢಪಡಿಸಿದಂತೆ, ಜಗದ್ಗುರು XIVನೇ ಲಿಯೋರವರು ಏಪ್ರಿಲ್ 10ರಂದು ವ್ಯಾಟಿಕನ್‌ನಲ್ಲಿ ಫ್ರಾನ್ಸ್ ಅಧ್ಯಕ್ಷ ಎಮ್ಮಾನುಯೆಲ್ ಮ್ಯಾಕ್ರೋನ್ ರವರನ್ನು ಸ್ವೀಕರಿಸಲಿದ್ದಾರೆ.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಮತ್ತು ಫ್ರಾನ್ಸ್ ಅಧ್ಯಕ್ಷ ಎಮ್ಮಾನುಯೆಲ್ ಮ್ಯಾಕ್ರೋನ್ ರವರು ಏಪ್ರಿಲ್ 10ರಂದು ವ್ಯಾಟಿಕನ್‌ನಲ್ಲಿ ಭೇಟಿಯಾಗಲಿದ್ದಾರೆ. ಈ ಭೇಟಿ ಪುನರುತ್ಥಾನದ ಹಬ್ಬ ಮತ್ತು ಜಗದ್ಗುರುಗಳ “ಉರ್ಬಿ ಎತ್ ಓರ್ಬಿ” ಆಶೀರ್ವಾದದ ಕೆಲವೇ ದಿನಗಳ ನಂತರ ನಡೆಯುತ್ತದೆ. ಜೊತೆಗೆ, ಏಪ್ರಿಲ್ 13ರಿಂದ 23ರವರೆಗೆ ನಡೆಯಲಿರುವ ಜಗದ್ಗುರುಗಳ ಆಫ್ರಿಕಾ ಖಂಡದ ಮೊದಲ ಪ್ರೇಷಿರ ಪ್ರಯಾಣದ ಪ್ರಾರಂಭದ ಮೂರು ದಿನಗಳ ಮೊದಲು ಈ ಭೇಟಿ ನಡೆಯಲಿದೆ ಈ ಪ್ರಯಾಣದ ಮೊದಲ ಗುರಿ ಅಲ್ಜೀರಿಯಾ ಆಗಿದೆ.

ಈಗಾಗಲೇ ಎಲೀಸೆ ಅರಮನೆ ಪ್ರಕಟಿಸಿದ್ದ ಈ ಭೇಟಿಯನ್ನು ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯ ನಿರ್ದೇಶಕರು ಬುಧವಾರ ಸಂಜೆ ದೃಢಪಡಿಸಿದರು. ಜಗದ್ಗುರುಗಳು ಫ್ರೆಂಚ್ ಅಧ್ಯಕ್ಷರನ್ನು ಖಾಸಗಿ ಸಭೆಯಲ್ಲಿ ಸ್ವೀಕರಿಸಲಿದ್ದು, ಅವರೊಂದಿಗೆ ಅವರ ಪತ್ನಿಯೂ ಇರಲಿದ್ದಾರೆ ಎಂದು ಮ್ಯಾಟಿಯೋ ಬ್ರೂನಿ ತಿಳಿಸಿದ್ದಾರೆ.

ಇವರಿಬ್ಬರೂ ಹಿಂದೆ ಹಲವು ಸಂದರ್ಭಗಳಲ್ಲಿ ಭೇಟಿಯಾಗಿದ್ದಾರೆ ವಿಶೇಷವಾಗಿ ಜಗದ್ಗುರು ಫ್ರಾನ್ಸಿಸ್ ರವರ ಫ್ರಾನ್ಸ್ ಪ್ರವಾಸಗಳಾದ ಮಾರ್ಸೇ ಮತ್ತು ಅಜಾಚಿಯೋ ವೇಳೆ. ಆದರೆ, ಜಗದ್ಗುರು XIVನೇ ಲಿಯೋರವರು ಪೀಟರ್‌ನ ಸಿಂಹಾಸನಕ್ಕೆ ಆಯ್ಕೆಯಾದ ನಂತರ ಮ್ಯಾಕ್ರೋನ್ ರವರೊಂದಿಗೆ ನಡೆಯುತ್ತಿರುವ ಇದು ಮೊದಲ ಅಧಿಕೃತ ಭೇಟಿ ಆಗಿದೆ.

ಜಗದ್ಗುರು XIVನೇ ಲಿಯೋರವರ ಪಾಂಟಿಫಿಕೇಟ್ ಪ್ರಾರಂಭದ ಬಲಿ ಪೂಜೆಯಲ್ಲಿ ಫ್ರಾನ್ಸ್ ಪರವಾಗಿ ಪ್ರಸ್ತುತ ಪ್ರಧಾನಮಂತ್ರಿ ಫ್ರಾಂಸೊಯ್ ಬೈರು ಪ್ರತಿನಿಧಿಸಿದ್ದರು. ಫ್ರೆಂಚ್ ಅಧ್ಯಕ್ಷರಿಗೆ ಜಗದ್ಗುರುಗಳು ಸಭೆಗಳ ಪ್ರೋಟೋಕಾಲ್ ಪರಿಚಿತವಾಗಿದ್ದು, ಸಾಮಾನ್ಯವಾಗಿ ಈ ಸಭೆಗಳು ಪ್ರೇಷಿತರ ಅರಮನೆಯ ಗ್ರಂಥಾಲಯದಲ್ಲಿ ನಡೆಯುತ್ತವೆ. ನಂತರ ರಾಜ್ಯ ಕಾರ್ಯದರ್ಶಿ ಹಾಗೂ ರಾಷ್ಟ್ರಗಳೊಂದಿಗೆ ಸಂಬಂಧಗಳ ಕಾರ್ಯದರ್ಶಿಗಳೊಂದಿಗೆ ಸಭೆಗಳು ನಡೆಯುತ್ತವೆ.

2017ರಲ್ಲಿ ಅಧಿಕಾರಕ್ಕೆ ಬಂದ ನಂತರ, ಎಮ್ಮಾನುಯೆಲ್ ಮ್ಯಾಕ್ರೋನ್ ಹಲವು ಬಾರಿ ವ್ಯಾಟಿಕನ್‌ಗೆ ಭೇಟಿ ನೀಡಿದ್ದಾರೆ. 2018, 2021 ಮತ್ತು 2022ರಲ್ಲಿ ಜಗದ್ಗುರು ಫ್ರಾನ್ಸಿಸ್ ರವರನ್ನು ಭೇಟಿ ಮಾಡಿದ್ದು, 2023ರ ಸೆಪ್ಟೆಂಬರ್‌ನಲ್ಲಿ ಮಾರ್ಸೇಯಲ್ಲಿ, 2024ರ ಜೂನ್‌ನಲ್ಲಿ ಬೊರ್ಗೋ ಎಗ್ನಾಜಿಯಾ ಜಿ7 ಶೃಂಗಸಭೆಯಲ್ಲಿ, ಮತ್ತು 2024ರ ಡಿಸೆಂಬರ್‌ನಲ್ಲಿ ಅಜಾಚಿಯೋದಲ್ಲಿ ಮತ್ತೆ ಭೇಟಿಯಾದರು.

ಏಪ್ರಿಲ್ 10ರಂದು ನಡೆಯಲಿರುವ ಈ ಸಭೆಯಲ್ಲಿ ಚರ್ಚೆಗೆ ಹಲವಾರು ವಿಷಯಗಳು ಇರುತ್ತವೆ. ಮಧ್ಯಪ್ರಾಚ್ಯದಲ್ಲಿನ ಯುದ್ಧ ಪರಿಸ್ಥಿತಿ, ಜೆರೂಸಲೇಮಿನಲ್ಲಿ ಆರಾಧನೆಯ ಸ್ವಾತಂತ್ರ್ಯ, ಲೆಬನಾನ್‌ನ ಭವಿಷ್ಯ ಇತ್ಯಾದಿ ವಿಷಯಗಳನ್ನು ಜಗದ್ಗುರುಗಳ ಅಧಿಕಾರ ಸ್ಥಳ ಮತ್ತು ಫ್ರಾನ್ಸ್ ಸಮೀಪದಿಂದ ಗಮನಿಸುತ್ತಿವೆ. ಶಾಂತಿಯ ಸಂರಕ್ಷಣೆ, ಅಂತರರಾಷ್ಟ್ರೀಯ ಕಾನೂನಿನ ಗೌರವ ಮತ್ತು ಹವಾಮಾನ ಬದಲಾವಣೆಯ ವಿರುದ್ಧ ಹೋರಾಟವು ಎರಡೂ ಪಕ್ಷಗಳ ಸಾಮಾನ್ಯ ಆಸಕ್ತಿಯ ಕ್ಷೇತ್ರಗಳಾಗಿವೆ.

ಆದರೆ, ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳೂ ಇವೆ ವಿಶೇಷವಾಗಿ ಗರ್ಭಧಾರಣೆಯಿಂದ ಪ್ರಾಕೃತಿಕ ಮರಣದವರೆಗೆ ಜೀವದ ಗೌರವಕ್ಕೆ ಸಂಬಂಧಿಸಿದ ವಿಷಯಗಳಲ್ಲಿ. ಫ್ರಾನ್ಸ್ ಸಂವಿಧಾನದಲ್ಲಿ “ಗರ್ಭಪಾತದ ಹಕ್ಕು” ಸೇರಿಸಿರುವುದು ಹಾಗೂ ಜೀವನದ ಅಂತ್ಯದ ಕುರಿತು ನಡೆಯುತ್ತಿರುವ ಚರ್ಚೆಗಳು ಈ ಭಿನ್ನಾಭಿಪ್ರಾಯಗಳ ಉದಾಹರಣೆಗಳಾಗಿವೆ.

02 ಏಪ್ರಿಲ್ 2026, 18:08