ಹುಡುಕಿ

ಬ್ಯೂನಸ್ ಐರಿಸ್‌ನಲ್ಲಿ ಬಸ್‌ನಲ್ಲಿ ಜಾರ್ಜ್ ಮಾರಿಯೋ ಬರ್ಗೊಗ್ಲಿಯೊ ಬ್ಯೂನಸ್ ಐರಿಸ್‌ನಲ್ಲಿ ಬಸ್‌ನಲ್ಲಿ ಜಾರ್ಜ್ ಮಾರಿಯೋ ಬರ್ಗೊಗ್ಲಿಯೊ 

“ಫ್ರಾನ್ಸಿಸ್ ರವರ ಅರ್ಜೆಂಟಿನಾ” — ಜಾರ್ಜ್ ಮಾರಿಯೋ ಬೆರ್ಗೊಲಿಯೋರವರ ಹೆಜ್ಜೆಗುರುತುಗಳನ್ನು ಹಿಂಬಾಲಿಸುವ ಒಂದು ಡಾಕ್ಯುಮೆಂಟರಿ.

ಸ್ಮೃತಿ ಮತ್ತು ಭವಿಷ್ಯನೋಟದ ದೃಷ್ಟಿ ಈ ಡಾಕ್ಯುಮೆಂಟರಿಯಲ್ಲಿ ಒಂದಾಗಿವೆ. ಇದನ್ನು ವಾಟಿಕನ್ ಫಿಲ್ಮ್ ಗ್ರಂಥಾಲಯದಲ್ಲಿ ಅಧಿಕೃತವಾಗಿ ಪರಿಚಯಿಸಿ ಪ್ರದರ್ಶಿಸಲಾಗುವುದು. ನಂತರ, ಏಪ್ರಿಲ್ 10ರಂದು ಮೆಡಿಟರೇನಿಯನ್ ಸಮುದ್ರವನ್ನು ದಾಟುವ ವಲಸಿಗರಿಗೆ ಪ್ರಮುಖ ಇಳಿಯುವ ಕೇಂದ್ರವಾಗಿರುವ ದಕ್ಷಿಣ ಇಟಲಿಯ ಲಾಂಪೆಡುಸಾ ದ್ವೀಪದಲ್ಲಿಯೂ ಇದನ್ನು ಪ್ರದರ್ಶಿಸಲಾಗುತ್ತದೆ.

ವ್ಯಾಟಿಕನ್ ವರದಿ

ಉತ್ತರ ಇಟಲಿಯ ಅಸ್ತಿ ಪಟ್ಟಣ, ವ್ಯಾಟಿಕನ್ ನಗರ ಮತ್ತು ದಕ್ಷಿಣದ ಲಾಂಪೆಡುಸಾ ದ್ವೀಪವು ಭೌಗೋಳಿಕವಾಗಿ ದೂರದಲ್ಲಿದ್ದರೂ, ಅವುಗಳನ್ನು ಒಂದು ಸಾಮಾನ್ಯ ತಂತು ಒಂದಾಗಿಸುತ್ತದೆ  ಜಗದ್ಗುರು ಫ್ರಾನ್ಸಿಸ್ ರವರ ಸ್ಮರಣೆ, ಅವರ ಬೇರುಗಳು ಮತ್ತು ಸುವಾರ್ತೆಯ ದೃಷ್ಟಿಯಿಂದ ಧರ್ಮ ಸಭೆಯ ಭವಿಷ್ಯವನ್ನು ನೋಡಲು ಮಾಡಿದ ಅವರ ನಿರಂತರ ಪ್ರೇರಣೆಯಾಗಿದೆ.

“ಫ್ರಾನ್ಸಿಸ್ ಅವರ ಅರ್ಜೆಂಟಿನಾ” ಎಂಬ ಡಾಕ್ಯುಮೆಂಟರಿ ಈ ಕಾಲ ಮತ್ತು ಸ್ಥಳಗಳ ಪಯಣವನ್ನು ಸಾಕ್ಷ್ಯಗಳು ಮತ್ತು ಆರ್ಕೈವ್ ದೃಶ್ಯಗಳ ಮೂಲಕ ಅನ್ವೇಷಿಸುತ್ತದೆ. ಇದನ್ನು ಕಥೋಲಿಕ ಟಿವಿ ಕೇಂದ್ರ ಟೆಲಿಪಾಚೆ ವ್ಯಾಟಿಕನ್ ನ್ಯೂಸ್ ಸಹಯೋಗದಲ್ಲಿ ನಿರ್ಮಿಸಿದೆ.

ಬುಧವಾರ, ಏಪ್ರಿಲ್ 8ರಂದು ಬೆಳಿಗ್ಗೆ ವ್ಯಾಟಿಕನ್ ಫಿಲ್ಮ್ ಗ್ರಂಥಾಲಯದಲ್ಲಿ ಪ್ರದರ್ಶನ ನಡೆಯಲಿದೆ. ಅದೇ ದಿನ ಮಧ್ಯಾಹ್ನದಲ್ಲಿ, ಜಗದ್ಗುರು ಫ್ರಾನ್ಸಿಸ್ ರವರ ಕುಟುಂಬ ಮೂಲವಾಗಿರುವ ಉತ್ತರ ಇಟಲಿಯ ಅಸ್ತಿ ಪಟ್ಟಣದಲ್ಲಿ ಅಧಿಕೃತ ಪರಿಚಯ ಕಾರ್ಯಕ್ರಮ ನಿಗದಿಯಾಗಿದೆ. ಅಸ್ತಿ ಪಟ್ಟಣದ ಪಾಸ್ತ್ರೋನೆ ಸಭಾಂಗಣದಲ್ಲಿ ನಡೆಯುವ ಈ ಪ್ರದರ್ಶನದಲ್ಲಿ ಜಾರ್ಜ್ ಮಾರಿಯೋ ಬೆರ್ಗೊಲಿಯೋರವರ ಸಂಬಂಧಿಕರು ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ.

“ಬೆಳಿಗ್ಗೆ ನಾನು ಎದ್ದ ಮೇಲೆ ‘ಜಿಯಾರ್ಜಿಯೋ’ ಅವರಿಂದ ಬರುವ ಆ ಫೋನ್ ಕರೆಗಾಗಿ ಕಾಯುತ್ತೇನೆ, ಆದರೆ ಅದು ಈಗ ಬರುತ್ತಿಲ್ಲ, ಎಂದು ಜಗದ್ಗುರು ಫ್ರಾನ್ಸಿಸ್ ರವರ ತಮ್ಮ ಕಾರ್ಲಾ ರಬೆಜ್ಜಾನಾ ಹೇಳುತ್ತಾರೆ. 2022ರ ನವೆಂಬರ್‌ನಲ್ಲಿ ಅಸ್ತಿಗೆ ಅವರು ಭೇಟಿ ನೀಡಿದಾಗ, ಪೋರ್ಟಾಕೊಮಾರೋ ಪ್ರದೇಶದಲ್ಲಿರುವ ತನ್ನ ಮನೆಯಲ್ಲಿ ಅವರಿಗೆ ಊಟಕ್ಕೆ ಆತಿಥ್ಯ ನೀಡಿದ್ದರು.

ಅವರು ನನ್ನನ್ನು ಭೇಟಿ ಮಾಡಲು ಮನಸ್ಸಿನಲ್ಲಿ ಬಯಕೆ ಹೊಂದಿದ್ದರು, ಎಂದು ಕುನಿಯೋ ಪ್ರಾಂತ್ಯದ ಪೇವೆರಾಗ್ನೋದಲ್ಲಿ ವಾಸಿಸುವ ಮತ್ತೊಬ್ಬ ಸಂಬಂಧಿ ನೆಲ್ಲಾ ಬೆರ್ಗೊಲಿಯೋ ಸೇರಿಸಿ ಹೇಳುತ್ತಾರೆ. ಅವರ ಸರಳತೆ, ಅವರ ನಂಬಿಕೆ, ಜನರೊಂದಿಗೆ ಸಂವಹನ ಮಾಡುವ ಅವರ ರೀತಿಯು  ಮತ್ತು ಹೇಳುವುದಾದರೆ, ಅವರ ಸೂಕ್ತಿಗಳೂ  ನನಗೆ ತುಂಬಾ ನೆನಪಾಗುತ್ತವೆ ಎಂದರು.

ಫ್ರಾನ್ಸಿಸ್ ರವರನ್ನು ಸ್ಮರಿಸುವುದು

ಅಸ್ತಿ ಪಟ್ಟಣದ ನಮ್ಮ ಎಲ್ಲರನ್ನೂ ಅವರು ಬಹಳ ಪ್ರೀತಿಸುತ್ತಿದ್ದರು, ಎಂದು ಬುಯನೋಸ್ ಐರಿಸ್‌ನಲ್ಲಿ ಚಿತ್ರೀಕರಿಸಲಾದ ಈ ಡಾಕ್ಯುಮೆಂಟರಿಗಾಗಿ ತಾಂತ್ರಿಕ ಸಲಹೆ ಮತ್ತು ಸಂಘಟನಾ ಬೆಂಬಲ ನೀಡಿದ ಓರ್ಸೋಲಾ ಅಪ್ಪೆಂಡಿನೋ ಹೇಳುತ್ತಾರೆ.

“ಕೊನೆಯ ಬಾರಿ ನಾನು ಅವರನ್ನು 2024ರ ಡಿಸೆಂಬರ್ 12ರಂದು ಸಂತ ಪೇತ್ರರ ಬಸಿಲಿಕಾದಲ್ಲಿ, ಗೌದಾಲೂಪೆಯ ಮಾತೆಯ ಹಬ್ಬದ ಆಚರಣೆಯ ಅಂತ್ಯದಲ್ಲಿ ಭೇಟಿಯಾದೆ. ಆಗಲೂ ಅವರು ನನ್ನ ಬಳಿಗೆ ಬಂದು, ಪಿಯೆಮೋಂಟೀಸ್ ಭಾಷೆಯಲ್ಲಿ ‘ಚೆರಿಯಾ!’ ಎಂದು ಸ್ಪಷ್ಟವಾಗಿ ಮತ್ತು ಜೋರಾಗಿ ವಂದಿಸಿದರು,” ಎಂದು ಅವರು ಮುಂದುವರಿಸುತ್ತಾರೆ, ಅಲ್ಲಿ ಹಾಜರಿದ್ದ ಕೆಲ ಭಕ್ತರು ದಾಖಲಿಸಿದ ವಿಡಿಯೋವನ್ನು ತೋರಿಸುತ್ತಾ ಹೇಳಿದರು.

ಚಿತ್ರದಲ್ಲಿ ಕಾಣುವ ಅನೇಕ ಕ್ಷಣಗಳು ವಿಶ್ವದ ಜನರ ಮನಸ್ಸು ಮತ್ತು ಹೃದಯಗಳಲ್ಲಿ ಅಚ್ಚಳಿಯದೆ ಉಳಿದಿವೆ. ಈ ಭಾವನೆ ಲಾಂಪೆಡುಸಾ ನಿವಾಸಿಗಳಲ್ಲಿಯೂ ಸ್ಪಷ್ಟವಾಗಿ ಕಾಣುತ್ತದೆ  ಇದು ಮೆಡಿಟರೇನಿಯನ್ ಸಮುದ್ರದಲ್ಲಿರುವ ಇಟಲಿಯ ಒಂದು ದ್ವೀಪವಾಗಿದ್ದು, ಜಗದ್ಗುರು ಫ್ರಾನ್ಸಿಸ್ ರವರ ಮೊದಲ ಜಗದ್ಗುರುಗಳ ಭೇಟಿಯ ಸ್ಥಳವಾಗಿದೆ  ಇಲ್ಲಿ ಏಪ್ರಿಲ್ 10ರಂದು ಸಂತ ಜೆರ್ಲಾಂಡೊ ಧರ್ಮ ಕೇಂದ್ರದಲ್ಲಿ ಈ ಡಾಕ್ಯುಮೆಂಟರಿಯನ್ನು ಪ್ರದರ್ಶಿಸಲಾಗುತ್ತದೆ.

“ಈ ದ್ವೀಪವು ಫ್ರಾನ್ಸಿಸ್ ರವರನ್ನು ನೆನಪಿಸಿಕೊಳ್ಳುತ್ತದೆ ಮತ್ತು ಲಿಯೋರವರನ್ನು ನಿರೀಕ್ಷಿಸುತ್ತದೆ,” ಎಂದು ಧರ್ಮ ಕೇಂದ್ರದ ಗುರುಗಳಾದ ವಂ.ಸ್ವಾಮಿ  ಕಾರ್ಮೆಲೋ ರಿಜ್ಜೋ ಹೇಳುತ್ತಾರೆ. 2013ರಲ್ಲಿ ಜಗದ್ಗುರು ಫ್ರಾನ್ಸಿಸ್ ರವರ ಈ ದ್ವೀಪಕ್ಕೆ ಮಾಡಿದ ಭೇಟಿಯ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿಯೇ, ಜುಲೈನಲ್ಲಿ ಜಗದ್ಗುರು ಲಿಯೋರವರ ಭೇಟಿಯನ್ನು ನಿರೀಕ್ಷಿಸುತ್ತಿದ್ದಾರೆ.

“ಧರ್ಮಸಭೆಯ ಗುರಿಯನ್ನು ನಾವು ನೋಡುವ ಮತ್ತು ಬದುಕುವ ರೀತಿಯಲ್ಲಿಯೂ ನಾವು ಜಗದ್ಗುರು ಫ್ರಾನ್ಸಿಸ್ ರವರಿಗೆ ಬಹಳಷ್ಟು ಋಣಿಯಾಗಿದ್ದೇವೆ. ಈ ಡಾಕ್ಯುಮೆಂಟರಿ, ಇತರರ ಬಳಿಗೆ ಸಮೀಪವಾಗಲು ತಿಳಿದಿದ್ದ ಒಬ್ಬ ಜಗದ್ಗುರುವನ್ನು ಒಟ್ಟಾಗಿ ಅಪ್ಪಿಕೊಳ್ಳುವ ಅವಕಾಶವಷ್ಟೇ ಅಲ್ಲ, ಅವರ ನಿರೀಕ್ಷೆ ಮತ್ತು ಸ್ವಾಗತದ ಸಂದೇಶವನ್ನು ಮರುಸ್ಮರಿಸುವ ಅವಕಾಶವೂ ಆಗಿದೆ.”

07 ಏಪ್ರಿಲ್ 2026, 15:57