ಹುಡುಕಿ

ಏಪ್ರಿಲ್ 8 ರಂದು ಲೆಬನಾನಿನ ಟೈರ್ ನಗರದ ಹೊರವಲಯದಲ್ಲಿ ಇಸ್ರೇಲಿ ವೈಮಾನಿಕ ದಾಳಿಯಿಂದ ಕಟ್ಟಡವೊಂದಕ್ಕೆ ಡಿಕ್ಕಿ ಹೊಡೆದ ನಂತರ ಹೊಗೆ ಮತ್ತು ಭಗ್ನಾವಶೇಷಗಳು ಏರುತ್ತಿವೆ. ಏಪ್ರಿಲ್ 8 ರಂದು ಲೆಬನಾನಿನ ಟೈರ್ ನಗರದ ಹೊರವಲಯದಲ್ಲಿ ಇಸ್ರೇಲಿ ವೈಮಾನಿಕ ದಾಳಿಯಿಂದ ಕಟ್ಟಡವೊಂದಕ್ಕೆ ಡಿಕ್ಕಿ ಹೊಡೆದ ನಂತರ ಹೊಗೆ ಮತ್ತು ಭಗ್ನಾವಶೇಷಗಳು ಏರುತ್ತಿವೆ.  (ANSA)

ಜಗದ್ಗುರು XIVನೇ ಲಿಯೋರವರು ಮಧ್ಯಪೂರ್ವದಲ್ಲಿ ನಡೆದ ಯುದ್ಧ ವಿರಾಮವನ್ನು ಸ್ವಾಗತಿಸಿ, ಸಂವಾದಕ್ಕೆ ಕರೆ ನೀಡುತ್ತಾರೆ.

ಜಗದ್ಗುರು XIVನೇ ಲಿಯೋರವರು ಮಧ್ಯಪೂರ್ವದಲ್ಲಿ ಯುದ್ಧ ವಿರಾಮದ ಸುದ್ದಿಯನ್ನು ಸ್ವಾಗತಿಸಿ, ಸಂಘರ್ಷಕ್ಕೆ ಅಂತ್ಯ ಕಂಡುಹಿಡಿಯಲು ಎಲ್ಲಾ ಪಕ್ಷಗಳು ದೀರ್ಘಕಾಲಿಕ ಸಂವಾದದಲ್ಲಿ ತೊಡಗಿಕೊಳ್ಳುವಂತೆ ಮನವಿ ಮಾಡಿದರು.

ವ್ಯಾಟಿಕನ್ ವರದಿ

ಏಪ್ರಿಲ್ 8 ಬುಧವಾರ ನಡೆದ ಸಾಮಾನ್ಯ ಸಭೆಯ ಅಂತ್ಯದಲ್ಲಿ, ಜಗದ್ಗುರು ಲಿಯೋರವರು ಮಧ್ಯಪೂರ್ವದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ವಾರಗಳ ಬಗ್ಗೆ ತಮ್ಮ ಗಮನವನ್ನು ಹರಿಸಿದರು. ಏಪ್ರಿಲ್ 7 ಸಂಜೆ ಘೋಷಿಸಲಾದ ಎರಡು ವಾರಗಳ ಯುದ್ಧ ವಿರಾಮದ ಬೆಳಕಿನಲ್ಲಿ, ಅವರು ಈ ಸುದ್ದಿಯನ್ನು “ತೃಪ್ತಿಯೊಂದಿಗೆ ಮತ್ತು ಆಳವಾದ ಭರವಸೆಯ  ಸಂಕೇತವಾಗಿ” ಸ್ವಾಗತಿಸುತ್ತೇನೆ ಎಂದು ಹೇಳಿದರು.

ಸಂತ ಪೇತ್ರರ ಚೌಕದಲ್ಲಿ ಸೇರಿದ್ದ ನಂಬಿಕಸ್ಥರನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರುಗಳು, ಮಾತುಕತೆಗಳ ಮೇಜಿನತ್ತ ಮರಳುವ ಮೂಲಕವೇ ನಾವು ಯುದ್ಧಕ್ಕೆ ಅಂತ್ಯ ತರಬಹುದು ಎಂದು ಒತ್ತಿ ಹೇಳಿದರು. ಈ ಸೂಕ್ಷ್ಮ ರಾಜತಾಂತ್ರಿಕ ಪ್ರಕ್ರಿಯೆಯ ಸಮಯದಲ್ಲಿ ಪ್ರಾರ್ಥನೆಯೊಂದಿಗೆ ಜೊತೆಯಾಗುವಂತೆ ಅವರು ಕರೆ ನೀಡಿದರು, ಸಂವಾದಕ್ಕೆ ತೊಡಗುವ ಮನಸ್ಸು ವಿಶ್ವದ ಇತರ ಸಂಘರ್ಷಗಳಿಗೂ ಪರಿಹಾರವಾಗಲಿ ಎಂಬ ಭರವಸೆಯನ್ನು  ವ್ಯಕ್ತಪಡಿಸಿದರು.

ಕೊನೆಗೆ, ಏಪ್ರಿಲ್ 11ರಂದು ಸಂತ ಪೇತ್ರರ ಬಸಿಲಿಕಾದಲ್ಲಿ ಶಾಂತಿಗಾಗಿ ಪ್ರಾರ್ಥನಾ ಜಾಗರಣೆಯು ನಡೆಯಲಿದೆ ಎಂದು ಜಗದ್ಗುರುಗಳು ನೆನಪಿಸಿದರು. ರೋಮಿನ ಸಮಯ ಸಂಜೆ 6 ಗಂಟೆಗೆ ನಡೆಯುವ ಈ ಕಾರ್ಯಕ್ರಮವನ್ನು ಜಗದ್ಗುರುಗಳೇ ಮುನ್ನಡೆಸಲಿದ್ದಾರೆ ಮತ್ತು ಎಲ್ಲರೂ ನೇರವಾಗಿ ಅಥವಾ ಮನೆಗಳಿಂದಲೂ ಭಾಗವಹಿಸಲು ಆಹ್ವಾನಿಸಲಾಗಿದೆ.

ಮಧ್ಯಪೂರ್ವವನ್ನು ತತ್ತರಗೊಳಿಸುತ್ತಿರುವ ಯುದ್ಧದ ನಡುವೆ, ಇರಾನ್, ಅಮೇರಿಕಾ ಮತ್ತು ಇಸ್ರೇಲ್ ದೇಶಗಳು ಎರಡು ವಾರಗಳ ಯುದ್ಧ ವಿರಾಮಕ್ಕೆ ಒಪ್ಪಂದಕ್ಕಾಗಿವೆ ಎಂದು ತಿಳಿಸಿವೆ. ಮಂಗಳವಾರ ಸಂಜೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರು ಇರಾನ್‌ನ ನಾಗರಿಕತೆಯನ್ನು ನಾಶಮಾಡುವೆವು ಎಂಬ ತಮ್ಮ ಬೆದರಿಕೆಯಿಂದ ಹಿಂದೆ ಸರಿದಿದ್ದಾರೆ.

ಬುಧವಾರ ಬೆಳಿಗ್ಗೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹುರವರು, ಟ್ರಂಪ್ ರವರ ಎರಡು ವಾರಗಳ ದಾಳಿಗಳನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಬೆಂಬಲಿಸುತ್ತೇವೆ ಎಂದರೂ, ಈ ಯುದ್ಧ ವಿರಾಮವು ಲೆಬನಾನ್‌ಗೆ ಅನ್ವಯಿಸುವುದಿಲ್ಲ ಎಂದು ತಿಳಿಸಿದ್ದಾರೆ. ಅಲ್ಲಿ ಈಗಾಗಲೇ 1,500 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

08 ಏಪ್ರಿಲ್ 2026, 18:31