ಜಗದ್ಗುರು XIVನೇ ಲಿಯೋರವರ ಮೊದಲ ಎನ್‌ಸೈಕ್ಲಿಕಲ್ ಮ್ಯಾಗ್ನಿಫಿಕಾ ಹ್ಯುಮಾನಿಟಾಸ್ ಮೇ 25ರಂದು ಪ್ರಕಟವಾಗಲಿದೆ.
ವ್ಯಾಟಿಕನ್ ವರದಿ
ಜಗದ್ಗುರು XIVನೇ ಲಿಯೋರವರ ಮೊದಲ ಎನ್‌ಸೈಕ್ಲಿಕಲ್ ಪತ್ರ ಮ್ಯಾಗ್ನಿಫಿಕಾ ಹ್ಯುಮಾನಿಟಾಸ್, ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಮಾನವ ವ್ಯಕ್ತಿತ್ವದ ಸಂರಕ್ಷಣೆಯನ್ನು ಕೇಂದ್ರವಾಗಿಟ್ಟುಕೊಂಡ ಈ ಪತ್ರ, 2026ರ ಮೇ 25ರಂದು ಪ್ರಕಟವಾಗಲಿದೆ.
ಈ ಎನ್‌ಸೈಕ್ಲಿಕಲ್‌ನಲ್ಲಿ ಜಗದ್ಗುರುಗಳ ಸಹಿ ಮೇ 15ರ ದಿನಾಂಕದೊಂದಿಗೆ ಇದೆ. ಆ ದಿನವು ಜಗದ್ಗುರು XIIIನೇ ಲಿಯೋರವರ ಪ್ರಸಿದ್ಧ ಎನ್‌ಸೈಕ್ಲಿಕಲ್ ರೆರುಮ್ ನೋವರುಮ್ ಪ್ರಕಟಗೊಂಡ 135ನೇ ವಾರ್ಷಿಕೋತ್ಸವವೂ ಆಗಿದೆ.
ಮ್ಯಾಗ್ನಿಫಿಕಾ ಹ್ಯುಮಾನಿಟಾಸ್ ಪ್ರಕಟವಾಗುವ ದಿನವೇ ಬೆಳಿಗ್ಗೆ 11:30ಕ್ಕೆ ವ್ಯಾಟಿಕನ್‌ನ ಸಿನೋಡ್ ಸಭಾಂಗಣದಲ್ಲಿ ಇದರ ಅಧಿಕೃತ ಪರಿಚಯ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಜಗದ್ಗುರುಗಳೊಂದಿಗೆ ಹಲವರು ಭಾಷಣಕಾರರಾಗಿ ಭಾಗವಹಿಸಲಿದ್ದಾರೆ. ಕಾರ್ಡಿನಲ್ ವಿಕ್ಟರ್ ಮ್ಯಾನುಯೆಲ್ ಫೆರ್ನಾಂಡಿಸ್, ವಿಶ್ವಾಸ ಸಿದ್ಧಾಂತ ವಿಭಾಗದ ಪ್ರಿಫೆಕ್ಟ್, ಕಾರ್ಡಿನಲ್ ಮೈಕೆಲ್ ಝೆರ್ನಿ, ಸಮಗ್ರ ಮಾನವ ಅಭಿವೃದ್ಧಿ ಪ್ರೋತ್ಸಾಹ ವಿಭಾಗದ ಪ್ರಿಫೆಕ್ಟ್,ಅನ್ನಾ ರೋಲ್ಯಾಂಡ್ಸ್, ಯುನೈಟೆಡ್ ಕಿಂಗ್‌ಡಮ್‌ನ ಡರ್ಹಮ್ ವಿಶ್ವವಿದ್ಯಾಲಯದ ಧರ್ಮಶಾಸ್ತ್ರಜ್ಞೆ ಮತ್ತು ಪ್ರಾಧ್ಯಾಪಕಿ, ಕ್ರಿಸ್ಟೋಫರ್ ಓಲಾಹ್, ಅಮೆರಿಕದ ಆಂತ್ರೋಪಿಕ್ ಸಂಸ್ಥೆಯ ಸಹ-ಸ್ಥಾಪಕರೂ ಹಾಗೂ ಕೃತಕ ಬುದ್ಧಿಮತ್ತೆಯ ವ್ಯಾಖ್ಯಾನಾತ್ಮಕ ಸಂಶೋಧನಾ ಮುಖ್ಯಸ್ಥರೂ, ಮತ್ತು ಲಿಯೋಕಾಡಿ ಲುಶಂಬೊ, ಕ್ಯಾಲಿಫೋರ್ನಿಯಾದ ಸಾಂತಾ ಕ್ಲಾರಾ ವಿಶ್ವವಿದ್ಯಾಲಯದ ಜೆಸೂಯಿಟ್ ಧರ್ಮಶಾಸ್ತ್ರ ಶಾಲೆಯ ರಾಜಕೀಯ ಧರ್ಮಶಾಸ್ತ್ರ ಮತ್ತು ಕಥೋಲಿಕ ಸಾಮಾಜಿಕ ಚಿಂತನೆಯ ಪ್ರಾಧ್ಯಾಪಕಿ.
ಕಾರ್ಯಕ್ರಮದ ಸಮಾರೋಪ ಭಾಷಣವನ್ನು ಪಿಯಾತ್ರೋ ಪಾರೋಲಿನ್ ರವರು ನೀಡಲಿದ್ದು, ನಂತರ ಜಗದ್ಗುರು ಲಿಯೋರವರ ಸಂದೇಶ ಮತ್ತು ಆಶೀರ್ವಾದ ನಡೆಯಲಿದೆ.
