“ಯಾರಾದರೂ ಸುವಾರ್ತೆಯನ್ನು ಪ್ರಕಟಿಸುತ್ತಿರುವುದಕ್ಕಾಗಿ ನನ್ನನ್ನು ಟೀಕಿಸಿದರೆ, ಅವರು ಅದನ್ನು ಸತ್ಯವಾಗಿ ಮಾಡಲಿ.”
ವ್ಯಾಟಿಕನ್ ವರದಿ
ಮಂಗಳವಾರ ಸಂಜೆ ಕಾಸ್ಟೆಲ್ ಗಾಂಡೋಲ್ಫೊದಿಂದ ರೋಮಿಗೆ ಮರಳುವ ಮೊದಲು, ಜಗದ್ಗುರು XIVನೇ ಲಿಯೋರವರು ವರದಿಗಾರರೊಂದಿಗೆ ಸ್ವಲ್ಪ ಸಮಯ ಮಾತನಾಡಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರಿಂದ ತಮ್ಮ ಬಗ್ಗೆ ಇತ್ತೀಚೆಗೆ ಮಾಡಲಾದ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದರು.
“ಧಮ೯ಸಭೆಯ ಧ್ಯೇಯವು ಸುವಾರ್ತೆಯನ್ನು ಪ್ರಕಟಿಸುವುದು, ಶಾಂತಿಯನ್ನು ಬೋಧಿಸುವುದಾಗಿದೆ,” ಎಂದು ಅವರು ಹೇಳಿದರು. “ಯಾರಾದರೂ ಸುವಾರ್ತೆಯನ್ನು ಪ್ರಕಟಿಸುತ್ತಿರುವುದಕ್ಕಾಗಿ ನನ್ನನ್ನು ಟೀಕಿಸಲು ಬಯಸಿದರೆ, ಅವರು ಅದನ್ನು ಸತ್ಯವಾಗಿ ಮಾಡಲಿ.”
ಕಾಸ್ಟೆಲ್ ಗಾಂಡೋಲ್ಫೊದಲ್ಲಿರುವ ತಮ್ಮ ನಿವಾಸ ವಿಲ್ಲಾ ಬರ್ಬೆರಿನಿ ಹೊರಗೆ ಮಾತನಾಡಿದ ಜಗದ್ಗುರು ಲಿಯೋರವರು, ಧರ್ಮ ಸಭೆ ಸದಾ ಅಣ್ವಸ್ತ್ರಗಳ ವಿರುದ್ಧ ಧ್ವನಿ ಎತ್ತುತ್ತಲೇ ಬಂದಿದೆ ಎಂದು ನೆನಪಿಸಿದರು.
“ಅನೇಕ ವರ್ಷಗಳಿಂದ ಧರ್ಮ ಸಭೆ ಎಲ್ಲಾ ಅಣ್ವಸ್ತ್ರಗಳ ವಿರುದ್ಧವಾಗಿ ಮಾತನಾಡುತ್ತಲೇ ಬಂದಿದೆ, ಆದ್ದರಿಂದ ಆ ವಿಷಯದಲ್ಲಿ ಯಾವುದೇ ಅನುಮಾನವಿಲ್ಲ,” ಎಂದು ಜಗದ್ಗುರುಗಳು ಹೇಳಿದರು. ಇದು, ಇರಾನ್ ಅಣ್ವಸ್ತ್ರಗಳನ್ನು ಹೊಂದಿರುವುದು ಸ್ವೀಕಾರಾರ್ಹವೆಂದು ಜಗದ್ಗುರುಗಳು ಭಾವಿಸುತ್ತಾರೆ ಎಂದು ಹೇಳಿದ ಅಧ್ಯಕ್ಷ ಟ್ರಂಪ್ ರವರ ಆರೋಪಕ್ಕೆ ಉತ್ತರವಾಗಿ ಹೇಳಿದರು, ಏಕೆಂದರೆ ಅದರಿಂದ ಎಲ್ಲಾ ಕಥೋಲಿಕರು ಅಪಾಯದಲ್ಲಿರುತ್ತಾರೆ ಎಂಬುದು ಅವರ ಅಭಿಪ್ರಾಯವಾಗಿತ್ತು.
“ದೇವರ ವಾಕ್ಯದ ಮೌಲ್ಯದ ಕಾರಣದಿಂದ ನನ್ನ ಮಾತುಗಳನ್ನು ಕೇಳಲಾಗಲಿ ಎಂಬುದೇ ನನ್ನ ಸರಳ ಆಶಯ,” ಎಂದು ಜಗದ್ಗುರು ಲಿಯೋರವರು ಒತ್ತಿಹೇಳಿದರು. “ನಾನು ಆಯ್ಕೆಯಾಗಿದ ಮೊದಲ ಕ್ಷಣದಿಂದಲೇ ಸ್ಪಷ್ಟವಾಗಿ ಮಾತನಾಡಿದ್ದೇನೆ, ಈಗ ನಾವು ವಾರ್ಷಿಕೋತ್ಸವದ ಸಮೀಪದಲ್ಲಿದ್ದೇವೆ. ನಾನು ಹೇಳಿದ್ದೇನೆಂದರೆ: ‘ನಿಮಗೆ ಶಾಂತಿ ಇರಲಿ”ಎಂದರು.
ಮೇ 7ರಂದು ಗುರುವಾರ ನಡೆಯಲಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋರವರೊಂದಿಗೆ ನಡೆಯುವ ಭೇಟಿಯ ಕುರಿತು, ಅದು “ಒಳ್ಳೆಯ ಸಂಭಾಷಣೆ” ಆಗಲಿ ಎಂದು ಜಗದ್ಗುರುಗಳು ತಮ್ಮ ಆಶಯವನ್ನು ವ್ಯಕ್ತಪಡಿಸಿದರು. ಅದು “ನಂಬಿಕೆ ಮತ್ತು ತೆರೆದ ಮನಸ್ಸಿನಿಂದ” ನಡೆಯಲಿ, ಹಾಗಾಗಿ ನಾವು ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿ ಎಂದು ಹೇಳಿದರು.
ಅವರು ಬರುವ ವಿಷಯಗಳು ಇಂದಿನ ಸಮಸ್ಯೆಗಳಷ್ಟೇ ಅಲ್ಲವೆಂದು ನಾನು ಭಾವಿಸುತ್ತೇನೆ. ನೋಡೋಣ,ಎಂದು ಜಗದ್ಗುರು ಲಿಯೋರವರು ಮತ್ತೆ ಅಮೆರಿಕದ ಅಧ್ಯಕ್ಷರ ಹೇಳಿಕೆಗಳನ್ನು ಉಲ್ಲೇಖಿಸುತ್ತಾ ಹೇಳಿದರು.
