ಹುಡುಕಿ

ಜಗದ್ಗುರು XIVನೇ ಲಿಯೋರವರು ತಮ್ಮ ಮಾನ್ಯಪತ್ರಗಳನ್ನು ಸಲ್ಲಿಸುವ ಸಂದರ್ಭದಲ್ಲಿ ಜಗದ್ಗುರುಗಳ ಅಧಿಕಾರ ಸ್ಥಳವು ನಿಯೋಜಿತವಾಗಿರುವ ಅನಿವಾಸಿ ರಾಯಭಾರಿಗಳ ಸಮೂಹವನ್ನುದ್ದೇಶಿಸಿ ಭಾಷಣ ಮಾಡಿದರು. ಜಗದ್ಗುರು XIVನೇ ಲಿಯೋರವರು ತಮ್ಮ ಮಾನ್ಯಪತ್ರಗಳನ್ನು ಸಲ್ಲಿಸುವ ಸಂದರ್ಭದಲ್ಲಿ ಜಗದ್ಗುರುಗಳ ಅಧಿಕಾರ ಸ್ಥಳವು ನಿಯೋಜಿತವಾಗಿರುವ ಅನಿವಾಸಿ ರಾಯಭಾರಿಗಳ ಸಮೂಹವನ್ನುದ್ದೇಶಿಸಿ ಭಾಷಣ ಮಾಡಿದರು.  (ANSA)

“ಬಹಳ ಅಗತ್ಯವಿರುವ ಶಾಂತಿಗಾಗಿ ತಮ್ಮ ಕೊಡುಗೆಯನ್ನು ನೀಡುವಂತೆ ಜಗದ್ಗುರುಗಳು ಹೊಸ ರಾಯಭಾರಿಗಳನ್ನು ಕರೆನೀಡಿದರು.”

ಜಗದ್ಗುರು XIVನೇ ಲಿಯೋರವರು ಜಗದ್ಗುರುಗಳ ಅಧಿಕಾರ ಸ್ಥಳ ನಿಯೋಜಿತವಾಗಿರುವ ಅನಿವಾಸಿ ರಾಯಭಾರಿಗಳ ಸಮೂಹವನ್ನುದ್ದೇಶಿಸಿ ಮಾತನಾಡಿ, ಅವರ ಕಾರ್ಯವು “ಸಂವಾದವನ್ನು ಬಲಪಡಿಸಲಿ, ಪರಸ್ಪರ ಅರ್ಥೈಸಿಕೊಳ್ಳುವಿಕೆಯನ್ನು ಗಾಢಗೊಳಿಸಲಿ ಮತ್ತು ನಮ್ಮ ಲೋಕಕ್ಕೆ ಅತ್ಯಂತ ಅಗತ್ಯವಿರುವ ಶಾಂತಿಗೆ ಕೊಡುಗೆ ನೀಡಲಿ” ಎಂಬ ತಮ್ಮ ಆಶಯವನ್ನು ವ್ಯಕ್ತಪಡಿಸಿದರು.

ವ್ಯಾಟಿಕನ್ ವರದಿ

ಜಗದ್ಗುರುಗಳ ಅಧಿಕಾರ ಸ್ಥಳದ ಮಾನ್ಯತೆ ಪಡೆದ ಸಿಯೆರಾ ಲಿಯೋನ್, ಬಾಂಗ್ಲಾದೇಶ, ಯೆಮನ್, ರುವಾಂಡಾ, ನಮೀಬಿಯಾ, ಮೌರಿಷಿಯಸ್, ಚಾಡ್ ಮತ್ತು ಶ್ರೀಲಂಕಾದ ಹೊಸ ಅನಿವಾಸಿ ರಾಯಭಾರಿಗಳನ್ನು ವಾಟಿಕನ್‌ನಲ್ಲಿ ಸ್ವಾಗತಿಸಿದ ಸಂದರ್ಭದಲ್ಲಿ, ಜಗದ್ಗುರು XIVನೇ ಲಿಯೋರವರು ಮಾನವೀಯತೆ, ನ್ಯಾಯ ಮತ್ತು ಶಾಂತಿಯ ಮಹತ್ವವನ್ನು ಒತ್ತಿಹೇಳಿದರು. ಕೇವಲ ಅಧಿಕಾರ ಮತ್ತು ಸಮೃದ್ಧಿಯನ್ನು ಆಧಾರವಾಗಿಸಿಕೊಂಡು, ಅಂಚಿನಲ್ಲಿರುವ ಬಡವರನ್ನು ಹಾಗೂ ದುರ್ಬಲರನ್ನು ನಿರ್ಲಕ್ಷಿಸುವ ಯಾವುದೇ ರಾಷ್ಟ್ರ ಅಥವಾ ಸಮಾಜವನ್ನು ನಿಜವಾದ ನ್ಯಾಯಸಮ್ಮತ ಮತ್ತು ಮಾನವೀಯ ಸಮಾಜವೆಂದು ಕರೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಕ್ರಿಸ್ತನ ಪ್ರೀತಿ ವಿಶೇಷವಾಗಿ ಮರೆತವರ ಮತ್ತು ಅತೀ ಚಿಕ್ಕವರ ಕಡೆ ಇರುವುದನ್ನು ನೆನಪಿಸಿದ ಜಗದ್ಗುರುಗಳು, ಬಡವರನ್ನು ಕಾಣದವರಂತೆ ಮಾಡುವ ಸ್ವಾರ್ಥದ ಎಲ್ಲ ರೂಪಗಳನ್ನು ತಿರಸ್ಕರಿಸಬೇಕೆಂದು ಕರೆ ನೀಡಿದರು. ಮಾನವ ಗೌರವ ಮತ್ತು ಪರಸ್ಪರ ಕಾಳಜಿ ಪ್ರತಿಯೊಂದು ರಾಷ್ಟ್ರದ ರಾಜತಾಂತ್ರಿಕ ಕಾರ್ಯಗಳ ಕೇಂದ್ರಬಿಂದುವಾಗಿರಬೇಕು ಎಂದು ಅವರು ಹೇಳಿದರು.

ಪವಿತ್ರಾತ್ಮರ ಹಬ್ಬದ ಮುನ್ನ ರಾಯಭಾರಿಗಳನ್ನು ಭೇಟಿಯಾದ ಸಂದರ್ಭದಲ್ಲಿ, ಪವಿತ್ರಾತ್ಮನು ಶಿಷ್ಯರಲ್ಲಿ ಭಯವನ್ನು ಧೈರ್ಯವಾಗಿ ಮತ್ತು ವಿಭಜನೆಗಳನ್ನು ಏಕತೆಯಾಗಿ ಪರಿವರ್ತಿಸಿದ ಘಟನೆಯನ್ನು ಜಗದ್ಗುರುಗಳು ಸ್ಮರಿಸಿದರು. ಅದೇ ರೀತಿಯಲ್ಲಿ, ರಾಷ್ಟ್ರಗಳ ನಡುವಿನ ನೈಜ ಸಂವಾದ, ಪರಸ್ಪರ ಗೌರವ ಮತ್ತು ಜವಾಬ್ದಾರಿತನವು ಇಂದಿನ ರಾಜತಾಂತ್ರಿಕ ಜಗತ್ತಿಗೆ ದಾರಿದೀಪವಾಗಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಇಂದಿನ ಜಗತ್ತಿನಲ್ಲಿ ಶಾಂತಿಯನ್ನು ಶಸ್ತ್ರಾಸ್ತ್ರಗಳ ಮೂಲಕ ಸಾಧಿಸಲು ಯತ್ನಿಸಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ ಪೋಪ್, ಸಂವಾದ ಮತ್ತು ಒಪ್ಪಂದವನ್ನು ಉತ್ತೇಜಿಸುವ ರಾಜತಾಂತ್ರಿಕತೆಯತ್ತ ಮರಳಬೇಕಾದ ಅಗತ್ಯವನ್ನು ಒತ್ತಿಹೇಳಿದರು. ನಿಷ್ಠಾವಂತ ಸಂವಾದದ ಮೂಲಕವೇ ತಪ್ಪುಅರ್ಥಗಳನ್ನು ನಿವಾರಿಸಿ, ರಾಷ್ಟ್ರಗಳ ನಡುವಿನ ವಿಶ್ವಾಸವನ್ನು ಪುನಃ ನಿರ್ಮಿಸಲು ಸಾಧ್ಯವೆಂದು ಅವರು ಹೇಳಿದರು.

ಸಂವಾದವು ಕೇವಲ ಸೌಜನ್ಯಪೂರ್ಣ ಮಾತುಗಳಷ್ಟೇ ಅಲ್ಲ, ಹೃದಯದ ಪರಿವರ್ತನೆಯನ್ನೂ ಬೇಡುತ್ತದೆ ಎಂದು ಪೋಪ್ ತಿಳಿಸಿದರು. ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು, ಸಾಮೂಹಿಕ ಹಿತಕ್ಕಾಗಿ ಕೆಲಸ ಮಾಡುವ ಮನೋಭಾವವೇ ನಿಜವಾದ ಶಾಂತಿ ಮತ್ತು ಏಕತೆಯ ಮೂಲವಾಗಿದೆ ಎಂದು ಅವರು ಹೇಳಿದರು. ಇದೇ ಮನೋಭಾವ ಅಂತರರಾಷ್ಟ್ರೀಯ ಸಂಸ್ಥೆಗಳನ್ನು ಬಲಪಡಿಸಿ, ಸಹಕಾರ ಮತ್ತು ಮಧ್ಯಸ್ಥಿಕೆಗೆ ಅವಕಾಶ ಕಲ್ಪಿಸಬೇಕು ಎಂದು ತಿಳಿಸಿದರು.

ಕೊನೆಯಲ್ಲಿ, ರಾಯಭಾರಿಗಳ ಸೇವೆಯನ್ನು “ವಿಶ್ವಾಸ ಮತ್ತು ಸಹಕಾರದ ಅಮೂಲ್ಯ ಸೇತುವೆ” ಎಂದು ಕೊಂಡಾಡಿದ ಜಗದ್ಗುರು XIVನೇ ಲಿಯೋರವರು, ಅವರ ಕಾರ್ಯವು ಸಂವಾದವನ್ನು ಬಲಪಡಿಸಿ, ಪರಸ್ಪರ ಅರ್ಥೈಸಿಕೊಳ್ಳುವಿಕೆಯನ್ನು ಗಾಢಗೊಳಿಸಿ, ಜಗತ್ತಿಗೆ ಅತ್ಯಂತ ಅಗತ್ಯವಿರುವ ಶಾಂತಿಗೆ ಕೊಡುಗೆ ನೀಡಲಿ ಎಂದು ಆಶೀರ್ವದಿಸಿದರು.

21 ಮೇ 2026, 17:45