ಹುಡುಕಿ

SCATTIDELGIORNO

ಜಗದ್ಗುರು XIVನೇ ಲಿಯೋರವರ ಅಚೆರ್ರಾ ಭೇಟಿಯ ಪ್ರಮುಖ ಕ್ಷಣಗಳು.

ಇಟಲಿಯ ದಕ್ಷಿಣ ಕ್ಯಾಂಪಾನಿಯಾ ಪ್ರದೇಶದಲ್ಲಿರುವ ಅಚೆರ್ರಾ ಜನರು, ತಮ್ಮ ನೋವಿನಿಂದ ಗಾಯಗೊಂಡ ನೆಲಕ್ಕೆ ಜಗದ್ಗುರು XIVನೇ ಲಿಯೋರವರು ನೀಡಿದ ಭೇಟಿಯಿಂದ ಅಪಾರ ಸಂತೋಷವನ್ನು ವ್ಯಕ್ತಪಡಿಸಿದರು. ಬೆಳಗಿನ ಜಾವ ಅವರು ಭೇಟಿ ನೀಡಿದ ಎಲ್ಲೆಡೆ ಧರ್ಮಗುರುಗಳು ಮತ್ತು ಸ್ಥಳೀಯ ನಿವಾಸಿಗಳು ಉಡುಗೊರೆಗಳು, ನಗುಮುಖಗಳು ಮತ್ತು ಸಂಗೀತದ ಮೂಲಕ ತಮ್ಮ ಹರ್ಷವನ್ನು ತೋರಿಸಿದರು.

ವ್ಯಾಟಿಕನ್ ವರದಿ

ಇಟಲಿಯ ಕ್ಯಾಂಪಾನಿಯಾ ಪ್ರದೇಶದಲ್ಲಿರುವ “ಲ್ಯಾಂಡ್ ಆಫ್ ಫೈರ್ಸ್” ಎಂದು ಕರೆಯಲ್ಪಡುವ ಅಚೆರ್ರಾಗೆ ಜಗದ್ಗುರು XIVನೇ ಲಿಯೋರವರು ಶನಿವಾರ ನೀಡಿದ ಭೇಟಿ ಎರಡು ಪ್ರಮುಖ ಕಾರ್ಯಕ್ರಮಗಳನ್ನು ಒಳಗೊಂಡಿತ್ತು. ಈ ಸಂದರ್ಭಗಳಲ್ಲಿ ಅವರು ಧರ್ಮಗುರುಗಳು, ಸಾಮಾನ್ಯ ವಿಶ್ವಾಸಿಗಳು ಹಾಗೂ ತಮ್ಮ ಆತ್ಮೀಯತೆ ಮತ್ತು ಕಾಳಜಿಗೆ ಕೃತಜ್ಞತೆ ಸಲ್ಲಿಸಲು ರಸ್ತೆಬದಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ನಾಗರಿಕರನ್ನು ಭೇಟಿಯಾದರು.

 ಅಚೆರ್ರಾ ಕ್ಯಾಥೆಡ್ರಲ್‌ನಲ್ಲಿ ಜಗದ್ಗುರುಗಳು ಧರ್ಮಗುರುಗಳು ಮತ್ತು ಪರಿಸರ ಮಾಲಿನ್ಯದಿಂದ ಬಲಿಯಾದವರ ಕುಟುಂಬ ಸದಸ್ಯರನ್ನು ಭೇಟಿಯಾದರು. ಮಾಲಿನ್ಯದಿಂದ ತಮ್ಮ ಪ್ರಿಯರನ್ನು ಕಳೆದುಕೊಂಡವರೊಂದಿಗೆ ಐಕ್ಯತೆಯನ್ನು ವ್ಯಕ್ತಪಡಿಸಲು ತಾವು ಬಂದಿದ್ದೇನೆ ಎಂದು ಹೇಳಿದ ಅವರು, ಸ್ಥಳೀಯ ಪರಿಸರ ವ್ಯವಸ್ಥೆಯನ್ನು ಹಾನಿಗೊಳಿಸಿದ ಅಪರಾಧಪರ ಹಿತಾಸಕ್ತಿಗಳು ಮತ್ತು ನಿರ್ಲಕ್ಷ್ಯವನ್ನು ತೀವ್ರವಾಗಿ ಖಂಡಿಸಿದರು.

ಆ ಬಳಿಕ ಜಗದ್ಗುರುಗಳು ತಮ್ಮ ವಾಹನದಲ್ಲಿ  ಅಚೆರ್ರಾ ನಗರದ ಬೀದಿಗಳಲ್ಲಿ ಸಂಚರಿಸಿ, ತಮ್ಮನ್ನು ಸ್ವಾಗತಿಸಲು ಮಾರ್ಗದ ಪಕ್ಕದಲ್ಲಿ ಗುಂಪುಗೂಡಿದ್ದ ಸ್ಥಳೀಯ ನಿವಾಸಿಗಳಿಗೆ ಆಶೀರ್ವಾದ ನೀಡಿ ಅಭಿನಂದಿಸಿದರು. ಜನರು ಅವರಿಗೆ ಉಡುಗೊರೆಗಳನ್ನು ನೀಡಿ ಕೃತಜ್ಞತೆ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಿದರು.

ನಂತರ ಅವರು ಪಿಯಾಜ್ಜಾ ನಿಕೋಲಾ ಕಾಲಿಪಾರಿ ಚೌಕಕ್ಕೆ ತಲುಪಿ, ಸಾರ್ವಜನಿಕರು ಮತ್ತು ನಾಗರಿಕ ನಾಯಕರೊಂದಿಗೆ ನಡೆದ ಎರಡನೇ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ವೇಳೆ, “ಸಾಮೂಹಿಕ ಹಿತವು ಖಾಸಗಿ ಲಾಭಕ್ಕಿಂತ ಮೇಲುಗೈ ಹೊಂದಿರಬೇಕು” ಎಂಬ ತಮ್ಮ ನಂಬಿಕೆಯನ್ನು ಪುನರುಚ್ಚರಿಸಿದ ಅವರು, ಸಮುದಾಯವು ಒಗ್ಗಟ್ಟಿನಿಂದ ನವೀಕರಣ ಮತ್ತು ಪುನರುತ್ಥಾನದ ದಾರಿಗೆ ಸಾಗಬೇಕೆಂದು ಪ್ರೋತ್ಸಾಹಿಸಿದರು.

23 ಮೇ 2026, 18:26