ಹುಡುಕಿ

ಜಗದ್ಗುರು XIVನೇ ಲಿಯೋರವರು'ಫ್ರೀ ಅಂಡರ್ ಗ್ರೇಸ್' ಪುಸ್ತಕದ ಪುಟಗಳನ್ನು ಓದುತ್ತಿದ್ದಾರೆ. ಜಗದ್ಗುರು XIVನೇ ಲಿಯೋರವರು'ಫ್ರೀ ಅಂಡರ್ ಗ್ರೇಸ್' ಪುಸ್ತಕದ ಪುಟಗಳನ್ನು ಓದುತ್ತಿದ್ದಾರೆ. 

ಜಗದ್ಗುರು ಲಿಯೋರವರು: ಸಾಹಿತ್ಯವು “ಸಹೋದರತ್ವ ಮತ್ತು ಶಾಂತಿಯ ಶಾಲೆ” ಆಗಿರಬೇಕು.

ಉತ್ತರ ಇಟಲಿಯ ಟುರಿನ್ ನಗರದಲ್ಲಿ ಈ ವಾರ ನಡೆಯುತ್ತಿರುವ ಅಂತರರಾಷ್ಟ್ರೀಯ ಪುಸ್ತಕ ಮೇಳದ ಅಂಗವಾಗಿ ಕಳುಹಿಸಿದ ಸಂದೇಶದಲ್ಲಿ, ಜಗದ್ಗುರು XIVನೇ ಲಿಯೋರವರು ಸಾಹಿತ್ಯವು ಮಾನವ ಗೌರವ, ಶಾಂತಿ ಮತ್ತು ಸಹೋದರತ್ವವನ್ನು ಉತ್ತೇಜಿಸಬೇಕು ಎಂದು ಪುನರುಚ್ಚರಿಸಿದರು. ಜೊತೆಗೆ, ವಿಶೇಷವಾಗಿ “ಯುದ್ಧದ ಭೀಕರತೆ” ಮತ್ತು “ನಿರ್ಲಕ್ಷ್ಯದ ಶೀತಲತೆ” ನಡುವೆ ಬದುಕುತ್ತಿರುವ ಮಕ್ಕಳು ಜಗತ್ತಿಗೆ ಭರವಸೆಯ ಕಿರಣವಾಗಿದ್ದಾರೆ ಎಂದು ಅವರು ಒತ್ತಿಹೇಳಿದರು.

ವ್ಯಾಟಿಕನ್ ವರದಿ

ಪ್ರತಿಯೊಬ್ಬ ಮಾನವನ ಗೌರವವನ್ನು, ವಿಶೇಷವಾಗಿ ಅತಿ ದುರ್ಬಲರ ಗೌರವವನ್ನು ಗುರುತಿಸಲು ಸಹಾಯ ಮಾಡುವ ಸಾಹಿತ್ಯದ ಅಗತ್ಯವಿದೆ. ಸಾಹಿತ್ಯವು ಹೆಚ್ಚಾಗಿ ಸಹೋದರತ್ವ ಮತ್ತು ಶಾಂತಿಯ ಶಾಲೆಯಾಗಬೇಕು ಎಂದು ಜಗದ್ಗುರು ಲಿಯೋರವರು ಹೇಳಿದರು.

ಮೇ 14ರಿಂದ 18ರವರೆಗೆ ಇಟಲಿಯ ಟುರಿನ್ ನಗರದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಪುಸ್ತಕ ಮೇಳದ ಅಂಗವಾಗಿ ಕಳುಹಿಸಿದ ತಮ್ಮ ಸಂದೇಶದಲ್ಲಿ ಜಗದ್ಗುರುಗಳು ಈ ಮಾತುಗಳನ್ನು ವ್ಯಕ್ತಪಡಿಸಿದರು.

ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೋ ಪಾರೋಲಿನ್ ರವರ ಮೂಲಕ ಜಗದ್ಗುರುಗಳ ಪರವಾಗಿ ಕಳುಹಿಸಲಾದ ಈ ಸಂದೇಶವನ್ನು ಟುರಿನ್ ಮಹಾಧರ್ಮಾಧ್ಯಕ್ಷ ಕಾರ್ಡಿನಲ್ ರೊಬೆರ್ಟೋ ರೆಪೋಲೆರವರಿಗೆ ಉದ್ದೇಶಿಸಲಾಗಿತ್ತು ಮತ್ತು ಮೇಳದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಸಮರ್ಪಿಸಲಾಗಿತ್ತು. ಗುರುವಾರ ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮೇಳದ ನಿರ್ದೇಶಕರು ಈ ಸಂದೇಶವನ್ನು ವಾಚಿಸಿದರು.

ಈ ವರ್ಷದ ಮೇಳದ ಶೀರ್ಷಿಕೆ, ಲೇಖಕಿ ಎಲ್ಸಾ ಮೊರಾಂತೆ ಅವರ ಮಕ್ಕಳಿಂದ ಉಳಿಸಲ್ಪಟ್ಟ ಜಗತ್ತು ಕೃತಿಯಿಂದ ಪ್ರೇರಿತವಾಗಿರುವುದನ್ನು ಜಗದ್ಗುರುಗಳು“ಅತ್ಯಂತ ಅರ್ಥಪೂರ್ಣ ಮತ್ತು ಸಮಕಾಲೀನ” ಎಂದು ವಿವರಿಸಿದರು.

“ಯುದ್ಧದ ಭೀಕರತೆ ಮತ್ತು ನಿರ್ಲಕ್ಷ್ಯದ ಶೀತಲತೆಯಿಂದ ಉಸಿರುಗಟ್ಟುತ್ತಿರುವಂತಿರುವ ಈ ಕಾಲದಲ್ಲಿ, ಮಕ್ಕಳು ತಮ್ಮ ಸಹಜವಾದ ಹೊಸ ದೃಷ್ಟಿಯಿಂದ ಜಗತ್ತನ್ನು ನೋಡುವ ಸಾಮರ್ಥ್ಯದ ಮೂಲಕ ಸಮಾಜದಲ್ಲಿ ಭಲವಸೆಯ ಬೆಳಕನ್ನು ಹೊತ್ತಿಸುತ್ತಾರೆ” ಎಂದು ಜಗದ್ಗುರುಗಳು ಹೇಳಿದರು.

ಸಂಸ್ಕೃತಿ ಸಂವಾದ ಮತ್ತು ಸೌಹಾರ್ದತೆಯನ್ನು ಉತ್ತೇಜಿಸುವಲ್ಲಿ ಎಷ್ಟು ಮಹತ್ವದ್ದಾಗಿದೆ ಎಂಬುದರ ಬಗ್ಗೆ ಈ ಕಾರ್ಯಕ್ರಮವು ಹೊಸ ಅರಿವು ಮೂಡಿಸಲಿ ಎಂದು ಜಗದ್ಗುರುಗಳು ತಮ್ಮ ಸಂದೇಶದ ಕೊನೆಯಲ್ಲಿ ಆಶಿಸಿದರು.

ಜಗದ್ಗುರು ಲಿಯೋರವರ ಈ ಸಂದೇಶವು, ಈ ತಿಂಗಳ ಆರಂಭದಲ್ಲಿ ವ್ಯಾಟಿಕನ್ ಪ್ರಕಾಶನ ಸಂಸ್ಥೆಯ ಪ್ರತಿನಿಧಿಗಳಿಗೆ ಅವರು ನೀಡಿದ ಸಂದೇಶದ ಪ್ರತಿಧ್ವನಿಯಾಗಿದೆ. ಟುರಿನ್ ಮೇಳದಲ್ಲಿ ಭಾಗವಹಿಸುತ್ತಿರುವ ಆ ಸಂಸ್ಥೆಯ ಸ್ಥಾಪನೆಯ ಶತಮಾನೋತ್ಸವದ ಅಂಗವಾಗಿ ಅವರು ಮಾತನಾಡಿದ್ದರು‌.

ಆ ಸಂದರ್ಭದಲ್ಲಿ, “ಓದು ಮನಸ್ಸಿಗೆ ಪೋಷಣೆಯನ್ನು ನೀಡುತ್ತದೆ. ಜಾಗೃತ ಮತ್ತು ಸಮತೋಲನಗೊಂಡ ವಿಮರ್ಶಾತ್ಮಕ ಚಿಂತನೆಯನ್ನು ಬೆಳೆಸಲು ಸಹಾಯ ಮಾಡುತ್ತದೆ, ಮತ್ತು ಮೂಲಭೂತವಾದ ಹಾಗೂ ಸಿದ್ಧಾಂತಾಧಾರಿತ ಸೀಮಿತ ದೃಷ್ಟಿಕೋನಗಳಿಂದ ನಮ್ಮನ್ನು ಕಾಪಾಡುತ್ತದೆ” ಎಂದು ಜಗದ್ಗುರುಗಳು ಹೇಳಿದರು.

ಅವರು ಮತ್ತಷ್ಟು ಹೇಳಿದ್ದು, “ಕಟ್ಟುಕಥೆಗಳಂತೆ ಕಠಿಣ ಮನೋಭಾವ ಮತ್ತು ವಾಸ್ತವದ ಸೀಮಿತ ಅರ್ಥೈಸಿಕೆಯಲ್ಲಿ ವ್ಯಕ್ತವಾಗುವ ಸಂಕುಚಿತ ಮನೋಭಾವಕ್ಕೆ ಪ್ರತಿವಿಷವಾಗಿ ಪ್ರತಿಯೊಬ್ಬರೂ ಪುಸ್ತಕಗಳನ್ನು ಓದಬೇಕು” ಎಂದು ಪ್ರೋತ್ಸಾಹಿಸಿದರು.

14 ಮೇ 2026, 16:39