ಹುಡುಕಿ

ಜಗದ್ಗುರು XIVನೇ ಲಿಯೋರವರು ಹೈಟಿಯ ಪ್ರಧಾನ ಮಂತ್ರಿ ಅಲಿಕ್ಸ್ ಡಿಡಿಯರ್ ಫಿಲ್ಸ್-ಐಮೆ ರವರನ್ನು ಬರಮಾಡಿಕೊಂಡರು ಜಗದ್ಗುರು XIVನೇ ಲಿಯೋರವರು ಹೈಟಿಯ ಪ್ರಧಾನ ಮಂತ್ರಿ ಅಲಿಕ್ಸ್ ಡಿಡಿಯರ್ ಫಿಲ್ಸ್-ಐಮೆ ರವರನ್ನು ಬರಮಾಡಿಕೊಂಡರು 

ಜಗದ್ಗುರು XIVನೇ ಲಿಯೋರವರು ಹೈಟಿ ಗಣರಾಜ್ಯದ ಪ್ರಧಾನಮಂತ್ರಿಯನ್ನು ಭೇಟಿ ಮಾಡಿದರು.

ಶನಿವಾರ ವ್ಯಾಟಿಕನ್‌ನಲ್ಲಿ ಜಗದ್ಗುರು XIVನೇ ಲಿಯೋರವರು ಅಲಿಕ್ಸ್ ಡಿಡಿಯರ್ ಫಿಲ್ಸ್-ಐಮೆ, ಹೈಟಿ ಗಣರಾಜ್ಯದ ಪ್ರಧಾನಮಂತ್ರಿಯನ್ನು ಭೇಟಿ ಮಾಡಿದರು.

ವ್ಯಾಟಿಕನ್ ವರದಿ

ಶನಿವಾರ ಬೆಳಿಗ್ಗೆ ವ್ಯಾಟಿಕನ್‌ನಲ್ಲಿ ಜಗದ್ಗುರು XIVನೇ ಲಿಯೋರವರು ಅಲಿಕ್ಸ್ ಡಿಡಿಯರ್ ಫಿಲ್ಸ್-ಐಮೆ, ಹೈಟಿ ಗಣರಾಜ್ಯದ ಪ್ರಧಾನಮಂತ್ರಿಯನ್ನು ಭೇಟಿ ಮಾಡಿದರು.

ನಂತರ ಪ್ರಧಾನಮಂತ್ರಿಗಳು ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಡಿ೯ನಲ್ ಪಿಯಾತ್ರೋ ಪಾರೋಲಿನ್ ರವರು ಹಾಗೂ ರಾಷ್ಟ್ರಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಂಬಂಧಗಳ ಕಾರ್ಯದರ್ಶಿಯಾದ ಆರ್ಚ್‌ಬಿಷಪ್ ಪಾಲ್ ರಿಚರ್ಡ್ ಗಲ್ಲಾಘರ್ ರವರನ್ನು ರಾಜ್ಯ ಕಾರ್ಯದರ್ಶಾಲಯದಲ್ಲಿ ಭೇಟಿಯಾದರು.

ಜಗದ್ಗುರುಗಳ ಅಧಿಕಾರ ಸ್ಥಳದ ಮಾಧ್ಯಮ ಕಚೇರಿ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ರಾಜ್ಯ ಕಾರ್ಯದರ್ಶಾಲಯದಲ್ಲಿ ನಡೆದ ಮಾತುಕತೆಗಳು ಆತ್ಮೀಯ ವಾತಾವರಣದಲ್ಲಿ ನಡೆದಿದ್ದು, ಜಗದ್ಗುರುಗಳ ಅಧಿಕಾರ ಸ್ಥಳ ಮತ್ತು ಹೈಟಿ ದೇಶದ ನಡುವೆ ಇರುವ ಉತ್ತಮ ಸಂಬಂಧಗಳನ್ನು ಗುರುತಿಸಲಾಯಿತು.

ಈ ಸಂದರ್ಭದಲ್ಲಿ, ಪ್ರಸ್ತುತ ಸಂಕಷ್ಟಕರ ಪರಿಸ್ಥಿತಿಯಲ್ಲಿ ಸಭೆಯು ದೇಶಕ್ಕೆ ನೀಡುತ್ತಿರುವ ಅಮೂಲ್ಯ ಸೇವೆಯ ಕುರಿತು ಚರ್ಚಿಸಲಾಯಿತು. ಜೊತೆಗೆ ಹೈಟಿಯ ಸಾಮಾಜಿಕ-ರಾಜಕೀಯ ಪರಿಸ್ಥಿತಿ, ಮಾನವೀಯ ನೆರವು, ವಲಸೆ ಮತ್ತು ಭದ್ರತಾ ಕ್ಷೇತ್ರಗಳಿಗೆ ಸಂಬಂಧಿಸಿದ ಸವಾಲುಗಳ ಕುರಿತೂ ಮಾತುಕತೆ ನಡೆಯಿತು.

ಕೊನೆಯಲ್ಲಿ, ಇಂದಿನ ಸಂಕಷ್ಟಗಳನ್ನು ಎದುರಿಸಲು ಅಂತರರಾಷ್ಟ್ರೀಯ ಸಮುದಾಯದ ಅಗತ್ಯ ಸಹಕಾರದ ಮಹತ್ವವನ್ನೂ ಪ್ರಕಟಣೆ ಉಲ್ಲೇಖಿಸಿತು.

09 ಮೇ 2026, 16:37