ಹುಡುಕಿ

Il Papa alla Sapienza, 'chi studia e ricerca alla fine trova Dio'

ಜಗದ್ಗುರು XIVನೇ ಲಿಯೋರವರು ಕೃತಕ ಬುದ್ಧಿಮತ್ತೆ ಕುರಿತ ಅಂತರ್-ಡಿಕಾಸ್ಟೀರಿಯಲ್ ಆಯೋಗದ ಸ್ಥಾಪನೆಗೆ ಅನುಮೋದನೆ ನೀಡಿದ್ದಾರೆ.

ಕಾರ್ಡಿನಲ್ ಮೈಕೆಲ್ ಝೆರ್ನಿ ರವರು ಸಹಿ ಮಾಡಿದ ಅಧಿಕೃತ ಆದೇಶದಲ್ಲಿ, ಜಗದ್ಗುರು XIVನೇ ಲಿಯೋರವರು ಕೃತಕ ಬುದ್ಧಿಮತ್ತೆ ಕುರಿತ ಅಂತರ್-ಡಿಕಾಸ್ಟೀರಿಯಲ್ ಆಯೋಗದ ಸ್ಥಾಪನೆಗೆ ಅನುಮೋದನೆ ನೀಡಿದ್ದಾರೆ.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಕೃತಕ ಬುದ್ಧಿಮತ್ತೆ ಕುರಿತ ಅಂತರ್-ಡಿಕಾಸ್ಟೀರಿಯಲ್ ಆಯೋಗದ ಸ್ಥಾಪನೆಗೆ ಅನುಮೋದನೆ ನೀಡಿದ್ದಾರೆ. ಮೇ 12ರಂದು ದಿನಾಂಕಿತವಾಗಿದ್ದು, ಮೇ 16ರಂದು ಪ್ರಕಟಗೊಂಡ ಈ ಅಧಿಕೃತ ಆದೇಶಕ್ಕೆ, ಸಮಗ್ರ ಮಾನವ ಅಭಿವೃದ್ಧಿಯನ್ನು ಉತ್ತೇಜಿಸುವ ಡಿಕಾಸ್ಟರಿಯ ಪ್ರಿಫೆಕ್ಟ್ ಆಗಿರುವ ಕಾರ್ಡಿನಲ್ ಮೈಕೆಲ್ ಝೆರ್ನಿ ರವರು ಸಹಿ ಮಾಡಿದ್ದಾರೆ.

“ಇತ್ತೀಚಿನ ದಶಕಗಳಲ್ಲಿ ಕೃತಕ ಬುದ್ಧಿಮತ್ತೆ ಎಂಬ ಘಟನೆಯ ಅಭಿವೃದ್ಧಿ, ಅದರ ಬಳಕೆಯ ವೇಗವಾದ ವಿಸ್ತರಣೆ, ಮಾನವ ವ್ಯಕ್ತಿಗಳ ಮೇಲೂ ಮತ್ತು ಸಂಪೂರ್ಣ ಮಾನವಕುಲದ ಮೇಲೂ ಬೀರುವ ಸಾಧ್ಯ ಪರಿಣಾಮಗಳು, ಹಾಗೂ ಪ್ರತಿಯೊಬ್ಬ ಮಾನವನ ಗೌರವದ ಬಗ್ಗೆ ವಿಶೇಷವಾಗಿ ಅವರ ಸಮಗ್ರ ಅಭಿವೃದ್ಧಿಯ ಸಂಬಂಧದಲ್ಲಿ ಧರ್ಮ ಸಭೆಯ ಕಾಳಜಿಯನ್ನು ಪರಿಗಣಿಸಿ, ಜಗದ್ಗುರು XIVನೇ ಲಿಯೋರವರು ಕೃತಕ ಬುದ್ಧಿಮತ್ತೆ ಕುರಿತ ಅಂತರ್-ಡಿಕಾಸ್ಟೀರಿಯಲ್ ಆಯೋಗವನ್ನು ಸ್ಥಾಪಿಸಲು ಅನುಮೋದನೆ ನೀಡಿದ್ದಾರೆ” ಎಂದು ಪಠ್ಯದಲ್ಲಿ ಹೇಳಲಾಗಿದೆ.

ಮೇ 3ರಂದು ಕಾರ್ಡಿನಲ್ ಚೆರ್ನಿಯವರೊಂದಿಗೆ ನಡೆದ ಭೇಟಿಯ ಬಳಿಕ ಜಗದ್ಗುರುಗಳು ಈ ಸಂಸ್ಥೆಯ ರಚನೆಯನ್ನು ಅನುಮೋದಿಸಿದರು. ಮೊದಲ ವರ್ಷದ ಅವಧಿಗೆ ಸಮಗ್ರ ಮಾನವ ಅಭಿವೃದ್ಧಿಯನ್ನು ಉತ್ತೇಜಿಸುವ ಡಿಕಾಸ್ಟರಿ ಆಯೋಗದ ಕಾರ್ಯಗಳನ್ನು ಸಂಯೋಜಿಸಲಿದೆ.

ಹಲವಾರು ವ್ಯಾಟಿಕನ್ ಡಿಕಾಸ್ಟರಿಗಳ ಸಹಕಾರ

ಈ ಆಯೋಗದಲ್ಲಿ ವ್ಯಾಟಿಕನ್‌ನ ಏಳು ಸಂಸ್ಥೆಗಳ ಪ್ರತಿನಿಧಿಗಳು ಭಾಗಿಯಾಗಿರುವುದಾಗಿ ಪಠ್ಯ ವಿವರಿಸುತ್ತದೆ, ಸಮಗ್ರ ಮಾನವ ಅಭಿವೃದ್ಧಿಯನ್ನು ಉತ್ತೇಜಿಸುವ ಡಿಕಾಸ್ಟರಿ, ಧರ್ಮಸಿದ್ಧಾಂತಗಳ ಡಿಕಾಸ್ಟರಿ, ಸಂಸ್ಕೃತಿ ಮತ್ತು ಶಿಕ್ಷಣ ಡಿಕಾಸ್ಟರಿ, ಸಂವಹನ ಡಿಕಾಸ್ಟರಿ, ಜೀವಿತಕ್ಕಾಗಿ ಪಾಂಟಿಫಿಕಲ್ ಅಕಾಡೆಮಿ, ವಿಜ್ಞಾನಗಳ ಪಾಂಟಿಫಿಕಲ್ ಅಕಾಡೆಮಿ ಮತ್ತು ಸಾಮಾಜಿಕ ವಿಜ್ಞಾನಗಳ ಪಾಂಟಿಫಿಕಲ್ ಅಕಾಡೆಮಿ.

ಈ ಸಂಸ್ಥೆಗಳಲ್ಲಿ ಒಂದೊಂದು ಸಂಸ್ಥೆ ಒಂದು ವರ್ಷದ ಅವಧಿಗೆ ಆಯೋಗದ ಕಾರ್ಯಗಳನ್ನು ಸಂಯೋಜಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದೆ,ಆ ಅವಧಿಯನ್ನು ನವೀಕರಿಸಬಹುದಾಗಿದೆ. ನಂತರ ಮುಂದಿನ ಅವಧಿಗೆ ಯಾವ ಸಂಸ್ಥೆ ನೇತೃತ್ವ ವಹಿಸಬೇಕು ಎಂಬುದನ್ನು ಜಗದ್ಗುರುಗಳು ನಿರ್ಧರಿಸಲಿದ್ದಾರೆ.

“ಸಂಯೋಜನಾ ಸಂಸ್ಥೆಯ ಜವಾಬ್ದಾರಿ ಎಂದರೆ, ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದ ಚಟುವಟಿಕೆಗಳು ಮತ್ತು ಯೋಜನೆಗಳ ಕುರಿತು ಜಗದ್ಗುರುಗಳ ಅಧಿಕಾರ ಸ್ಥಳದೊಳಗಿನ ಅದರ ಬಳಕೆಯ ನೀತಿಗಳನ್ನು ಒಳಗೊಂಡಂತೆ ಗುಂಪಿನ ಸದಸ್ಯರ ನಡುವೆ ಸಹಕಾರ ಮತ್ತು ಮಾಹಿತಿಯ ವಿನಿಮಯವನ್ನು ಸುಗಮಗೊಳಿಸುವುದು; ಜೊತೆಗೆ ಸಂವಾದ, ಐಕ್ಯತೆ ಮತ್ತು ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವುದಾಗಿದೆ” ಎಂದು ಪಠ್ಯ ತಿಳಿಸುತ್ತದೆ.

ಕಾರ್ಡಿನಲ್ ಚೆರ್ನಿ ಈ ಆಯೋಗವನ್ನು ಪ್ರೇಷಿತರ ಸಂವಿಧಾನ ಪ್ರೆಡಿಕೇಟ್ ಇವಾಂಜೆಲಿಯಮ್ನಾ ಕಲಂ 28ರ ಪ್ರಕಾರ ಸ್ಥಾಪಿಸಿದ್ದಾರೆ. ಆ ನಿಯಮದಡಿ, ಹಲವು ಡಿಕಾಸ್ಟರಿಗಳ ಜವಾಬ್ದಾರಿಗಳನ್ನು ಸ್ಪರ್ಶಿಸುವ ಮತ್ತು “ಪರಸ್ಪರ ಹಾಗೂ ನಿರಂತರ ಸಲಹೆ-ಸಂವಾದ” ಅಗತ್ಯವಿರುವ ವಿಷಯಗಳನ್ನು ನಿರ್ವಹಿಸಲು ಡಿಕಾಸ್ಟರಿಯ ಮುಖ್ಯಸ್ಥರು ವಿಶೇಷ ಅಂತರ್-ಡಿಕಾಸ್ಟೀರಿಯಲ್ ಆಯೋಗವನ್ನು ರಚಿಸಬಹುದು.

ಜಗದ್ಗುರು XIVನೇ ಲಿಯೋರವರಿಗೆ ಪ್ರಿಯವಾದ ವಿಷಯ

ಈ ವಿಷಯದ ಬಗ್ಗೆ ಹಲವು ಡಿಕಾಸ್ಟರಿಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತಿರುವುದು ಇದೇ ಮೊದಲ ಬಾರಿ ಅಲ್ಲ. 2025ರ ಜನವರಿಯಲ್ಲಿ ಧರ್ಮಸಿದ್ಧಾಂತಗಳ ಡಿಕಾಸ್ಟರಿ ಮತ್ತು ಸಂಸ್ಕೃತಿ ಹಾಗೂ ಶಿಕ್ಷಣ ಡಿಕಾಸ್ಟರಿಗಳು ಸೇರಿ, ಕೃತಕ ಬುದ್ಧಿಮತ್ತೆ ಮತ್ತು ಮಾನವ ಬುದ್ಧಿಮತ್ತೆಯ ನಡುವಿನ ಸಂಬಂಧದ ಕುರಿತು ಆಂಟಿಕ್ವಾ ಮತ್ತು ನೋವಾ ಎಂಬ ಟಿಪ್ಪಣಿಯನ್ನು ಪ್ರಕಟಿಸಿದ್ದವು.

ಇದಲ್ಲದೆ, ಜಗದ್ಗುರು XIVನೇ ಲಿಯೋರವರ ಅಧಿಕಾರ ಅವಧಿಯಲ್ಲಿಯೂ  ಪ್ರಮುಖವಾಗಿಯೇ ಕಾಣಿಸಿಕೊಂಡಿದೆ. ಅವರು ಅನೇಕ ಬಾರಿ ಕೃತಕ ಬುದ್ಧಿಮತ್ತೆ ಮತ್ತು ಇತರ ತಾಂತ್ರಿಕ ಅಭಿವೃದ್ಧಿಗಳ ಬಗ್ಗೆ ಹಾಗೂ ಅವು ಸಮಾಜಕ್ಕೆ ಉಂಟುಮಾಡಬಹುದಾದ ಸವಾಲುಗಳ ಬಗ್ಗೆ ಮಾತನಾಡಿದ್ದಾರೆ.

2025ರ ಮೇ 10ರಂದು, ತಮ್ಮ ಆಯ್ಕೆಯ ಕೆಲವೇ ದಿನಗಳ ಬಳಿಕ ಕಾರ್ಡಿನಲ್‌ಗಳೊಂದಿಗೆ ನಡೆದ ಸಭೆಯಲ್ಲಿ, ಜಗದ್ಗುರುಗಳು ತಮ್ಮ ಜಗದ್ಗುರುಗಳ ಹೆಸರಿನ ಆಯ್ಕೆಗೆ ಪ್ರೇರಣೆ ನೀಡಿದ್ದು ಜಗದ್ಗುರು XIIIನೇ ಲಿಯೋರವರಿಂದ ಎಂದು ವಿವರಿಸಿದ್ದರು. ಕೈಗಾರಿಕಾ ಕ್ರಾಂತಿಯಿಂದ ಉಂಟಾದ ಸಮಸ್ಯೆಗಳ ಬಗ್ಗೆ ರೆರುಮ್ ನೋವರುಮ್ ಎಂಬ ಎನ್ಸೈಕ್ಲಿಕಲ್‌ನಲ್ಲಿ ಜಗದ್ಗುರು XIIIನೇ ಲಿಯೋರವರು ಪ್ರತಿಕ್ರಿಯೆ ನೀಡಿದ್ದರು.

ಅವರು ಮುಂದುವರಿದು, “ನಮ್ಮ ಕಾಲದಲ್ಲಿಯೂ ಧರ್ಮ ಸಭೆ ತನ್ನ ಸಾಮಾಜಿಕ ಬೋಧನೆಯ ಅಮೂಲ್ಯ ಸಂಪತ್ತನ್ನು ಎಲ್ಲರಿಗೂ ನೀಡುತ್ತಿದೆ. ಇದು ಮತ್ತೊಂದು ಕೈಗಾರಿಕಾ ಕ್ರಾಂತಿ ಹಾಗೂ ಕೃತಕ ಬುದ್ಧಿಮತ್ತೆ ಕ್ಷೇತ್ರದ ಬೆಳವಣಿಗೆಗಳಿಂದ ಉದ್ಭವಿಸುತ್ತಿರುವ ಮಾನವ ಗೌರವ, ನ್ಯಾಯ ಮತ್ತು ಕಾರ್ಮಿಕರ ರಕ್ಷಣೆಗೆ ಸಂಬಂಧಿಸಿದ ಹೊಸ ಸವಾಲುಗಳಿಗೆ ಪ್ರತಿಕ್ರಿಯೆಯಾಗಿದೆ” ಎಂದು ಹೇಳಿದರು.

16 ಮೇ 2026, 09:05