ಹುಡುಕಿ

“ಗಾಜಾದ ಪವಿತ್ರ ಕುಟುಂಬ ಕಥೋಲಿಕ ಧರ್ಮ ಸಭೆಯ ಧರ್ಮ ಕೇಂದ್ರದ ಗುರುಗಳಾದ ವಂ.ಸ್ವಾಮಿ ಗ್ಯಾಬ್ರಿಯೆಲ್ ರೋಮನೆಲ್ಲಿ” “ಗಾಜಾದ ಪವಿತ್ರ ಕುಟುಂಬ ಕಥೋಲಿಕ ಧರ್ಮ ಸಭೆಯ ಧರ್ಮ ಕೇಂದ್ರದ ಗುರುಗಳಾದ ವಂ.ಸ್ವಾಮಿ ಗ್ಯಾಬ್ರಿಯೆಲ್ ರೋಮನೆಲ್ಲಿ” 

'ಗಾಜಾದ ಧರ್ಮ ಕೇಂದ್ರದ ಗುರುಗಳು: ‘ಜಗದ್ಗುರು ಲಿಯೋರವರು ನಮಗೆ ಭರವಸೆಯನ್ನು ಹೊಂದಲು ಉತ್ತೇಜಿಸುತ್ತಾರೆ’.

ಗಾಜಾದ ಪವಿತ್ರ ಕುಟುಂಬ ಕಥೋಲಿಕ ಧರ್ಮ ಸಭೆಯ ಧರ್ಮ ಕೇಂದ್ರದ ಗುರುಗಳಾಗಿರುವ ವಂ.ಸ್ವಾಮಿ ಗ್ಯಾಬ್ರಿಯೆಲ್ ರೋಮನೆಲ್ಲಿ, ಜಗದ್ಗುರು XIVನೇ ಲಿಯೋರವರಿಂದ ಪಡೆದ ಸಮೀಪತೆ ಮತ್ತು ಆತ್ಮೀಯತೆಯ ಸಂದೇಶವನ್ನು ವಿವರಿಸುತ್ತಾರೆ. ಜಗದ್ಗುರುಗಳ ಮಾತುಗಳು ಸದಾ ಮುಂದೆ ಸಾಗುತ್ತಾ ಒಳ್ಳೆಯದನ್ನು ಮಾಡುತ್ತಿರಲು ಪ್ರೇರಣೆ ನೀಡುತ್ತವೆ ಎಂದು ಅವರು ವ್ಯಾಟಿಕನ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ನಿಜವಾದ ಶಾಂತಿಯ ಭರವಸೆಯನ್ನು ಗಾಜಾ ಪಟ್ಟಿಯ ಪವಿತ್ರ ಕುಟುಂಬ ಕಥೋಲಿಕ ಧರ್ಮ ಸಭೆಗೆ ಮೇ 4ರಂದು ಕಳುಹಿಸಿದ ಸಂದೇಶದಲ್ಲಿ ವ್ಯಕ್ತಪಡಿಸಿದರು. ಅವರು ಪ್ಯಾಲೆಸ್ಟೈನ್‌ಗೆ ಶಾಂತಿ, ಇಸ್ರೇಲ್‌ಗೆ ಶಾಂತಿ, ಪರಿವರ್ತನೆ ಮತ್ತು ಎಲ್ಲರಿಗೂ ಕೃಪೆ ದೊರಕಲೆಂದು ಪ್ರಾರ್ಥನೆ ಸಲ್ಲಿಸಿದ್ದಾರೆ.

ಈ ಸಂದೇಶವನ್ನು ಗಾಜಾದ ಧರ್ಮ ಕೇಂದ್ರದ ಗುರುಗಳಾದ ಶ್ರೀ.ಸ್ವಾಮಿ ಗ್ಯಾಬ್ರಿಯೆಲ್ ರೋಮನೆಲ್ಲಿರವರು ತಮ್ಮ ಇನ್‌ಸ್ಟಾಗ್ರಾಮ್ ವಿಡಿಯೋ ಮೂಲಕ ಹಂಚಿಕೊಂಡರು.

“ಜಗದ್ಗುರುಗಳು  ನಮಗೆ ಸಮೀಪತೆ, ಪ್ರಾರ್ಥನೆ ಮತ್ತು ಸಂಪೂರ್ಣ ಪರಿಸ್ಥಿತಿಯ ಬಗ್ಗೆ ಕಾಳಜಿಯನ್ನು ವ್ಯಕ್ತಪಡಿಸುವ ಸಂದೇಶವನ್ನು ಕಳುಹಿಸಿದ್ದಾರೆ,” ಎಂದು  ವೀಕ್.ಸ್ವಾಮಿ ರೋಮನೆಲ್ಲಿ ಹೇಳಿದರು. “ಗಾಜಾದ ಯುದ್ಧ ಅಂತ್ಯವಾಗಲೆಂದು, ಧರ್ಮ ಕೇಂದ್ರದ ಮತ್ತು ಸ್ಥಳೀಯ ಜನರಿಗಾಗಿ ಅವರು ಪ್ರತಿದಿನ ಪ್ರಾರ್ಥಿಸುತ್ತಿದ್ದಾರೆ. ಸಂತ ಪೇತ್ರನ ಉತ್ತರಾಧಿಕಾರಿ ಜಗದ್ಗುರು XIVನೇ ಲಿಯೋರವರು ಪ್ರಾರ್ಥನೆಗಳಂತೆ ಲೋಕಕ್ಕೆ ಶಾಂತಿ ದೊರಕಲೆಂದು ಅವರು ಬೇಡಿಕೊಳ್ಳುತ್ತಾರೆ ಪ್ಯಾಲೆಸ್ಟೈನ್‌ಗೆ ಶಾಂತಿ, ಇಸ್ರೇಲ್‌ಗೆ ಶಾಂತಿ, ಪರಿವರ್ತನೆ ಮತ್ತು ಎಲ್ಲರಿಗೂ ಕೃಪೆ.”

ವಿಕ.ಸ್ವಾಮಿ ರೋಮನೆಲ್ಲಿ ವ್ಯಾಟಿಕನ್ ಮಾಧ್ಯಮಕ್ಕೆ ಹೇಳುವುದೇನೆಂದರೆ, ಕಳೆದ ಸೋಮವಾರ ಜಗದ್ಗುರುಗಳು ನಮಗೆ ಬರಹ ರೂಪದಲ್ಲಿ ಸಂದೇಶ ಕಳುಹಿಸಿದರು, ಅದರಲ್ಲಿ ಅವರು ಪ್ಯಾಲೆಸ್ಟೈನಿನ ಜನರೊಂದಿಗೆ ತಮ್ಮ ಸಮೀಪತೆಯನ್ನು ವ್ಯಕ್ತಪಡಿಸಿದ್ದಾರೆ. ಮಾನವೀಯ ಸಹಾಯ ವಿತರಿಸುವಲ್ಲಿ ಎದುರಾಗುತ್ತಿರುವ ಅಡಚಣೆಗಳು ಧರ್ಮ ಕೇಂದ್ರದ ಜನರಿಗೆ ಮತ್ತು ಇನ್ನಿತರರಿಗೆ ನೋವುಂಟುಮಾಡುತ್ತಿವೆ ಎಂದು ಅವರು ಉಲ್ಲೇಖಿಸಿದ್ದಾರೆ.

ಗುರುಗಳು ಮುಂದುವರೆದು ಹೇಳಿದರು: “ಜಗದ್ಗುರುಗಳು ಸದಾ ನಮಗೆ ಆಶೀರ್ವಾದ ನೀಡುತ್ತಾರೆ ಮತ್ತು ಭರವಸೆಯನ್ನು ಕಳೆದುಕೊಳ್ಳಬಾರದೆಂದು ಉತ್ತೇಜಿಸುತ್ತಾರೆ. ಗಾಜಾ ಪಟ್ಟಿಯ ಪರಿಸ್ಥಿತಿ ಇನ್ನೂ ಅತೀ ಸೂಕ್ಷ್ಮವಾಗಿದೆ. ಆದ್ದರಿಂದ ಜಗದ್ಗುರುಗಳ ಮಾತುಗಳು, ಅವರ ಪ್ರಾರ್ಥನೆಗಳು ಮತ್ತು ಜಗತ್ತಿನಾದ್ಯಂತ ಶಾಂತಿಗಾಗಿ ಪ್ರಾರ್ಥಿಸುವ ಧರ್ಮ ಸಭೆ ಹಾಗೂ ಜನರ ಸಹಭಾಗಿತ್ವವು ನಮಗೆ ಮುಂದೆ ಸಾಗಲು ಮತ್ತು ಒಳ್ಳೆಯದನ್ನು ಮಾಡಲು ಸದಾ ಪ್ರೇರಣೆಯಾಗುತ್ತದೆ.”

ಗಾಜಾದ ಪರಿಸ್ಥಿತಿಯನ್ನು ವಿವರಿಸುತ್ತಾ, ವಂ.ಸ್ವಾಮಿ ರೋಮನೆಲ್ಲಿ ಹೇಳಿದರು: “ಅಕ್ಟೋಬರ್‌ನಲ್ಲಿ ಪ್ರಾರಂಭವಾದ ಯುದ್ಧ ವಿರಾಮವು ಕೆಲವು ಮಟ್ಟಿಗೆ ಪರಿಸ್ಥಿತಿಯನ್ನು ಸುಧಾರಿಸಿದೆ, ಏಕೆಂದರೆ ಸಾಮೂಹಿಕ ಬಾಂಬ್ ದಾಳಿ ಇಲ್ಲ ಆದರೆ ಜನರು ಇನ್ನೂ ಸಾವನ್ನಪ್ಪುತ್ತಿದ್ದಾರೆ.” ಇದುವರೆಗೆ 800 ಕ್ಕಿಂತ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದರು.

ಇದಲ್ಲದೆ, ಮಾನವೀಯ ಸಹಾಯ, ನೀರು, ವಿದ್ಯುತ್ ಮತ್ತು ಮೂಲಭೂತ ಅಗತ್ಯಗಳ ಕೊರತೆ ಇನ್ನೂ ಗಂಭೀರವಾಗಿದೆ. ಪರಿಸ್ಥಿತಿ ಸುಧಾರಿಸಬಹುದು ಎಂಬ ಆಶಯವೂ ಜನರಲ್ಲಿ ಕಡಿಮೆಯಾಗಿದೆ ಎಂದು ಅವರು ಹೇಳಿದರು.

ಈ ಗಂಭೀರ ಪರಿಸ್ಥಿತಿಯಲ್ಲಿ, “ಜಗದ್ಗುರುಗಳ  ಸಮೀಪತೆಗೆ ಮತ್ತು ಜಗತ್ತಿನಾದ್ಯಂತ ಶಾಂತಿಗಾಗಿ ಪ್ರಾರ್ಥಿಸುವ ಎಲ್ಲರಿಗೂ ನಾವು ಕೃತಜ್ಞರಾಗಿದ್ದೇವೆ,” ಎಂದು ವಂ.ಸ್ವಾಮಿ ರೋಮನೆಲ್ಲಿ ಹೇಳಿದರು. “ಪ್ಯಾಲೆಸ್ಟೈನ್ ಮತ್ತು ಇಸ್ರೇಲ್‌ಗೆ ಶಾಂತಿ ದೊರಕಲೆಂದು, ವಿಶೇಷವಾಗಿ ಗಾಜಾದಲ್ಲಿ ಯುದ್ಧ ಅಂತ್ಯವಾಗಲೆಂದು ನಾವು ಪ್ರಾರ್ಥಿಸುತ್ತೇವೆ.”

ಐಕ್ಯ ರಾಷ್ಟ್ರಗಳ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ (ಒಸಿಎಚ್ಎ) ಮೇ 1ರಂದು ನೀಡಿದ ವರದಿಯ ಪ್ರಕಾರ, 2026ರ ಮೊದಲ ನಾಲ್ಕು ತಿಂಗಳಲ್ಲಿ ಅಗತ್ಯವಿರುವ ಮಾನವೀಯ ಕಾರ್ಯಾಚರಣೆಗಳಿಗೆ ಬೇಕಾದ ನಿಧಿಯ ಕೇವಲ 10% ಮಾತ್ರ ಲಭ್ಯವಾಗಿದೆ.

ವರದಿಯ ಪ್ರಕಾರ, ಜನರೇಟರ್‌ಗಳು, ಎಂಜಿನ್ ಎಣ್ಣೆ ಮತ್ತು ಸ್ಪೇರ್ ಭಾಗಗಳ ಪ್ರವೇಶದ ಮೇಲೆ ಇರುವ ನಿರ್ಬಂಧಗಳು ಆರೋಗ್ಯ, ಸ್ವಚ್ಛತೆ, ಅವಶೇಷ ತೆರವು ಹಾಗೂ ಮಾನವೀಯ ತಂಡಗಳ ಚಲನವಲನಕ್ಕೆ ಗಂಭೀರ ಪರಿಣಾಮ ಬೀರುತ್ತಿವೆ.

ಗಾಜಾ ಪಟ್ಟಿಯ ಬಹುಪಾಲು ಜನರು ಇನ್ನೂ ಸ್ಥಳಚ್ಯುತರಾಗಿದ್ದು, ಅಸ್ಥಿರ ನಿವಾಸಗಳಲ್ಲಿ ವಾಸಿಸುತ್ತಿದ್ದಾರೆ. ಕೀಟಗಳು, ಇಲಿಗಳು ಹಾಗೂ ಆರೋಗ್ಯ ಸಂಬಂಧಿತ ಅಪಾಯಗಳು ಹೆಚ್ಚುತ್ತಿವೆ, ಜೊತೆಗೆ ದಾಳಿ, ಬಾಂಬ್ ಸ್ಫೋಟ ಮತ್ತು ಗುಂಡಿನ ದಾಳಿಗಳ ಭೀತಿ ಮುಂದುವರಿಯುತ್ತಿದೆ.

ಜನರು ಗಾಜಾದ ಅರ್ಧಕ್ಕಿಂತ ಕಡಿಮೆ ಪ್ರದೇಶದಲ್ಲೇ ಸೀಮಿತರಾಗಿದ್ದು, ಇತರ ಪ್ರದೇಶಗಳಿಗೆ ಅಥವಾ ವಿದೇಶಗಳಿಗೆ ಪ್ರಯಾಣ ಮಾಡಲು ಸಾಧ್ಯವಾಗುತ್ತಿಲ್ಲ. ವೈದ್ಯಕೀಯ ಚಿಕಿತ್ಸೆಗಾಗಿ ಕೆಲವರಿಗೆ ಮಾತ್ರ ಹೊರಹೋಗಲು ಅನುಮತಿ ಇದೆ.

 

06 ಮೇ 2026, 18:48