ಹುಡುಕಿ

ಇಟಲಿಯ ಸ್ಯಾನ್ ಜಿಯೋವಾನಿ ರೊಟೊಂಡೊದಲ್ಲಿರುವ ದುಃಖ ಪರಿಹಾರ ಪ್ರತಿಷ್ಠಾನದ ಮನೆಯ ಮುಂಭಾಗ. ಇಟಲಿಯ ಸ್ಯಾನ್ ಜಿಯೋವಾನಿ ರೊಟೊಂಡೊದಲ್ಲಿರುವ ದುಃಖ ಪರಿಹಾರ ಪ್ರತಿಷ್ಠಾನದ ಮನೆಯ ಮುಂಭಾಗ. 

ಜಗದ್ಗುರುಗಳು ‘ದುಃಖ ನಿವಾರಣೆಯ ಗೃಹ’ವನ್ನು ಪುನರುಜ್ಜೀವನಗೊಳಿಸಲು ಆಯೋಗವನ್ನು ಸ್ಥಾಪಿಸಿದರು.

ಜಗದ್ಗುರು XIVನೇ ಲಿಯೋರವರು, ಸಂತ ಪಿಯೋ ಆಫ್ ಪಿಯೆಟ್ರೆಲ್ಚಿನಾ ರವರು ಇಟಲಿಯ ಸಾನ್ ಜಿಯೋವನ್ನಿ ರೊಟೊಂಡೊ ನಗರದಲ್ಲಿ ಸ್ಥಾಪಿಸಿದ್ದ “ಹೌಸ್ ಫಾರ್ ದ ರಿಲೀಫ್ ಆಫ್ ಸಫರಿಂಗ್” ಪ್ರತಿಷ್ಠಾನವನ್ನು ಪುನರುಜ್ಜೀವನಗೊಳಿಸಲು ಹೊಸ ಮಾರ್ಗದರ್ಶಕ ಆಯೋಗವನ್ನು ರಚಿಸುವ ಚಿರೋಗ್ರಾಫ್‌ಗೆ ಸಹಿ ಹಾಕಿದರು.

ವ್ಯಾಟಿಕನ್ ವರದಿ

ಇಟಲಿಯ ಸಾನ್ ಜಿಯೋವನ್ನಿ ರೊಟೊಂಡೊ ನಗರದಲ್ಲಿ ಸಂತ ಪಿಯೋ ಆಫ್ ಪಿಯೆಟ್ರೆಲ್ಚಿನಾ ರವರ ಕನಸಿನಿಂದ ಹುಟ್ಟಿಕೊಂಡ ಪ್ರಮುಖ ಆರೋಗ್ಯ ಸೇವಾ ಕೇಂದ್ರವಾದ ಕಾಸಾ ಸೊಲ್ಲಿವೊ ಡೆಲ್ಲಾ ಸೊಫೆರೆನ್ಜಾ (“ದುಃಖ ನಿವಾರಣೆಯ ಗೃಹ”) ಪ್ರತಿಷ್ಠಾನವು ಈಗ ನವೀಕರಣದ ಹೊಸ ಹಂತಕ್ಕೆ ಸಜ್ಜಾಗುತ್ತಿದೆ.

ಜಗದ್ಗುರು XIVನೇ ಲಿಯೋರವರು, ಈ ಪ್ರತಿಷ್ಠಾನದ ಕಾರ್ಯಕ್ಷಮತೆ, ಪರಿಣಾಮಕಾರಿತ್ವ ಮತ್ತು ದೀರ್ಘಕಾಲೀನ ಸ್ಥಿರತೆಯನ್ನು ಬಲಪಡಿಸಲು ಅತ್ಯುತ್ತಮ ಪರಿಹಾರಗಳನ್ನು ಕಂಡುಹಿಡಿಯುವ ಜವಾಬ್ದಾರಿಯೊಂದಿಗೆ “ನಿರ್ದೇಶನ ಮತ್ತು ಮೇಲ್ವಿಚಾರಣಾ ಆಯೋಗ”ವನ್ನು ಸ್ಥಾಪಿಸುವ ಚಿರೋಗ್ರಾಫ್‌ಗೆ ಸಹಿ ಹಾಕಿದ್ದಾರೆ.

ಈ ಹೊಸ ಮಾರ್ಗದರ್ಶಕ ಸಮಿತಿಗೆ ಆರ್ಥಿಕ ಕಾರ್ಯದರ್ಶಾಲಯದ ಪ್ರಿಫೆಕ್ಟ್ ಮ್ಯಾಕ್ಸಿಮಿನೊ ಕಬಾಲೆರೊ ಲೆಡೊ ಅಧ್ಯಕ್ಷರಾಗಿರುತ್ತಾರೆ. ಎಪಿಎಸ್ಎ ಯ ಕಾರ್ಯದರ್ಶಿಯಾದ ಫಾಬಿಯೊ ಗ್ಯಾಸ್ಪೆರಿನಿ ಇದರ ಸಂಯೋಜಕರಾಗಿರುತ್ತಾರೆ.

ರಾಜ್ಯ ಕಾರ್ಯದರ್ಶಾಲಯದ ಪ್ರತಿನಿಧಿಯಾದ ಆರ್ಚ್‌ಬಿಷಪ್ ಪಾವ್ಲೊ ರುಡೆಲ್ಲಿ, ಎಪಿಎಸ್ಎ ಅಧ್ಯಕ್ಷರಾದ ಆರ್ಚ್‌ಬಿಷಪ್ ಜಿಯೋರ್ಡಾನೊ ಪಿಚ್ಚಿನೊಟ್ಟಿ ಮತ್ತು ಫೊಜ್ಜಿಯಾ-ಬೊವಿನೊ ಮಹಾಧರ್ಮಪ್ರಾಂತ್ಯದ ಆರ್ಚ್‌ಬಿಷಪ್ ಜಿಯಾರ್ಜಿಯೋ ಫೆರೆಟ್ಟಿ ಈ ಸಮಿತಿಯ ಸದಸ್ಯರಾಗಿದ್ದಾರೆ.

ತಾಂತ್ರಿಕ ಸಮಿತಿಗೆ ಡಾ. ಬೆಂಜಮಿನ್ ಎಸ್ಟೇವೆಸ್ ಡೆ ಕೊಮಿಂಗ್ಸ್, ಡಾ. ಜಿನೊ ಗುಮಿರಾಟೊ ಮತ್ತು ವಕೀಲ ಅಲೆಸ್ಸಾಂದ್ರೊ ಎಲಾ ಒಯಾನಾರವರನ್ನು ಜಗದ್ಗುರುಗಳು ನೇಮಿಸಿದ್ದಾರೆ.

ದಾನಧರ್ಮದ ಕಾರ್ಯಗಳ ಮೇಲಿರುವ ಜಗದ್ಗುರುಗಳ ಅಧಿಕಾರ ಸ್ಥಳದ ಪ್ರೀತಿಯಿಂದ ಮತ್ತು ಮಹತ್ವದ ಸಂಸ್ಥೆಗಳು ತಮ್ಮ ಧ್ಯೇಯಕ್ಕೆ ನಿಷ್ಠವಾಗಿರಲು ಬದಲಾವಣೆಯ ಸವಾಲುಗಳನ್ನು ಎದುರಿಸಲು ಸಿದ್ಧವಾಗಿರಬೇಕು ಎಂಬ ಅರಿವಿನಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಕಾಲದ, ತಂತ್ರಜ್ಞಾನದ, ಕಾನೂನಿನ ಮತ್ತು ಆರ್ಥಿಕತೆಯ ಬೆಳವಣಿಗೆಗಳು,” ಎಂದು ಚಿರೋಗ್ರಾಫ್‌ನಲ್ಲಿ ಹೇಳಲಾಗಿದೆ, “ಧಮ೯ಸಭೆಯ ಧ್ಯೇಯವನ್ನು ನಿರಂತರ ನವೀಕರಣದ ಸವಾಲಿನ ಮುಂದೆ ನಿಲ್ಲಿಸುತ್ತವೆ,ವಿಶೇಷವಾಗಿ ಆರೋಗ್ಯ ಸೇವಾ ಕ್ಷೇತ್ರದಲ್ಲಿ, ಅಲ್ಲಿ ದೂರದೃಷ್ಟಿ, ಹೂಡಿಕೆ ಮತ್ತು ವಿವೇಕಪೂರ್ಣ ನಿರ್ವಹಣೆ ಅಗತ್ಯವಾಗಿದೆ.

ಈ ಸಂಸ್ಥೆಗಳಲ್ಲಿ ಒಂದಾಗಿರುವ “ದುಃಖ ನಿವಾರಣೆಯ ಗೃಹ”ವನ್ನು “ಅನಾರೋಗ್ಯ ಪೀಡಿತರು, ಯಾತ್ರಿಕರು ಮತ್ತು ಅವರ ಕುಟುಂಬಗಳಿಗೆ ಆತಿಥ್ಯ, ಸಹಾಯ ಮತ್ತು ಆರೈಕೆ ಒದಗಿಸುವ ಉದ್ದೇಶದಿಂದ, ಅದರ ಪವಿತ್ರ ಸ್ಥಾಪಕರ ಆಧ್ಯಾತ್ಮಿಕತೆ ಮತ್ತು ವ್ಯಕ್ತಿತ್ವದಿಂದ ಪ್ರೇರಿತವಾಗಿ” ಸ್ಥಾಪಿಸಲಾಯಿತು.

“ಈ ಸವಾಲನ್ನು ಎದುರಿಸಿ ಸ್ವೀಕರಿಸಲು,” ಜಗದ್ಗುರು XIVನೇ ಲಿಯೋರವರು  "'ಕಾಸಾ ಸೊಲ್ಲಿವೊ ಡೆಲ್ಲಾ ಸೊಫೆರೆನ್ಜಾ - ಪೀಟ್ರೆಲ್ಸಿನಾದ ಸಂತ ಪಿಯೊದ ಕೆಲಸ, ಒ.ಎಫ್.ಎಂ. ಕ್ಯಾಪ್.’ ಪ್ರತಿಷ್ಠಾನದ ನಿರ್ದೇಶನ ಮತ್ತು ಮೇಲ್ವಿಚಾರಣಾ ಆಯೋಗವನ್ನು” ಸ್ಥಾಪಿಸಲು ತೀರ್ಮಾನಿಸಿದ್ದಾರೆ. ಈ ಆಯೋಗವು ಪ್ರತಿಷ್ಠಾನದ ಇಂದಿನ ಪರಿಸ್ಥಿತಿಯನ್ನು ವಿಶ್ಲೇಷಿಸಿ, ಅದರ ಕಾರ್ಯ ಮತ್ತು ಧ್ಯೇಯದ ಇನ್ನಷ್ಟು ಕಾರ್ಯಕ್ಷಮತೆ, ಪರಿಣಾಮಕಾರಿತ್ವ ಮತ್ತು ದೀರ್ಘಕಾಲೀನ ಸ್ಥಿರತೆಯನ್ನು ಖಚಿತಪಡಿಸಲು ಸೂಕ್ತ ಪರಿಹಾರಗಳನ್ನು ಕಂಡುಹಿಡಿದು, ಅವುಗಳನ್ನು ಕಾರ್ಯರೂಪಕ್ಕೆ ತರಬೇಕಾಗಿದೆ.

ಆಯೋಗವು ಆರ್ಥಿಕ, ಆಸ್ತಿ ಮತ್ತು ಕಾರ್ಯನಿರ್ವಹಣೆಯ ಎಲ್ಲಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಲಿದೆ. ಸಾಮಾನ್ಯ ಮತ್ತು ವಿಶೇಷ ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಲು ಅದಕ್ಕೆ ಸಂಪೂರ್ಣ ಅಧಿಕಾರ ನೀಡಲಾಗಿದೆ.

ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ಹಾಗೂ ಪ್ರತಿಷ್ಠಾನದ ಆಸ್ತಿಗಳ ಮೇಲೆ ಮಹತ್ವದ ಪರಿಣಾಮ ಬೀರುವ ಅಥವಾ ಅದರ ನಿಯಮಾವಳಿಗಳನ್ನು ಬದಲಾಯಿಸುವ ಯಾವುದೇ ವಿಶೇಷ ಕ್ರಮಗಳನ್ನು ಅಂಗೀಕರಿಸುವ ಮೊದಲು, ಆಯೋಗವು ನೇರವಾಗಿ ಜಗದ್ಗುರುಗಳಿಗೆ ವರದಿ ಸಲ್ಲಿಸಬೇಕಾಗುತ್ತದೆ.

“ದುಃಖ ನಿವಾರಣೆಯ ಗೃಹ”ವು ಪಾದ್ರೆ ಪಿಯೋ ರವರ ಸ್ಪಷ್ಟವಾದ ನಂಬಿಕೆಯಿಂದ ಹುಟ್ಟಿಕೊಂಡಿತು. ದೇಹದ ಆರೈಕೆ ಮಾಡುವುದು ಕ್ರೈಸ್ತ ಧ್ಯೇಯದ ಅವಿಭಾಜ್ಯ ಅಂಗವೆಂದು ಅವರು ನಂಬಿದ್ದರು.

ದಶಕಗಳ ನಂತರವೂ ಆ ದೂರದೃಷ್ಟಿ ಅಚಲವಾಗಿದೆ. ಲಿಯೋರವರ ಚಿರೋಗ್ರಾಫಿ ಕೂಡ ಆರೈಕೆಯ ಒಂದು ಸಂಕೇತವಾಗಿದೆ. ಪಿಯೆಟ್ರೆಲ್ಚಿನಾದ ಸಂತರು ಯಾವುದೇ ಅನಾರೋಗ್ಯ ಪೀಡಿತ, ಯಾತ್ರಿಕ ಅಥವಾ ಕುಟುಂಬದ ಸದಸ್ಯರು ಆತಿಥ್ಯ ಮತ್ತು ಸಹಾಯವಿಲ್ಲದೆ ಉಳಿಯಬಾರದು ಎಂದು ಬಯಸಿದ ಅದೇ ಕಾಳಜಿಯ ಪ್ರತಿಫಲ ಇದಾಗಿದೆ.

“ದುಃಖ ನಿವಾರಣೆಯ ಗೃಹ”ದ ಪುನರುಜ್ಜೀವನವು ಅದರ ಸ್ಥಾಪಕರಿಗೆ, ಅದರ ಧ್ಯೇಯಕ್ಕೆ ಮತ್ತು ಪ್ರತಿದಿನ ಗುಣಮುಖತೆ ಮತ್ತು ನಿರೀಕ್ಷೆಗಾಗಿ ಅದರ ಬಾಗಿಲು ತಟ್ಟುವ ಎಲ್ಲರಿಗೂ ಸಲ್ಲಿಸುವ ನಿಷ್ಠೆಯ ಕಾರ್ಯವಾಗಿದೆ.

27 ಮೇ 2026, 16:35