ಹುಡುಕಿ

2026ರ ಮೇ 7ರಂದು ಜಗದ್ಗುರು XIVನೇ ಲಿಯೋರವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊರವರೊಂದಿಗೆ ಹಸ್ತಲಾಘವ ಮಾಡಿದರು. 2026ರ ಮೇ 7ರಂದು ಜಗದ್ಗುರು XIVನೇ ಲಿಯೋರವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊರವರೊಂದಿಗೆ ಹಸ್ತಲಾಘವ ಮಾಡಿದರು.  (ANSA)

ಜಗದ್ಗುರು XIVನೇ ಲಿಯೋರವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊರವರನ್ನು ಭೇಟಿ ಮಾಡಿದರು.

ಜಗದ್ಗುರು XIVನೇ ಲಿಯೋರವರು ವ್ಯಾಟಿಕನ್‌ನಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊರವರೊಂದಿಗೆ ಭೇಟಿಯನ್ನು ನಡೆಸಿದರು. ಈ ಮಾತುಕತೆಯಲ್ಲಿ ಯುದ್ಧದಿಂದ ಸಂಕಷ್ಟಕ್ಕೊಳಗಾದ ದೇಶಗಳ ವಿಷಯವೂ ಚರ್ಚಿಸಲಾಯಿತು

ವ್ಯಾಟಿಕನ್ ವರದಿ

ಗುರುವಾರ ಇಟಲಿಗೆ ಆಗಮಿಸಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊರವರು ವ್ಯಾಟಿಕನ್‌ಗೆ ತೆರಳಿ, ಪ್ರೇಷಿತರ ಅರಮನೆಯಲ್ಲಿ ಜಗದ್ಗುರು ಲಿಯೋರವರನ್ನು ಭೇಟಿ ಮಾಡಿದರು.

ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿ ಪ್ರಕಟಿಸಿದ ಪ್ರಕಟಣೆಯ ಪ್ರಕಾರ, “ಆತ್ಮೀಯ ಮಾತುಕತೆಗಳು” ನಡೆದ ಈ ಭೇಟಿಯಲ್ಲಿ, ಜಗದ್ಗುರುಗಳ ಅಧಿಕಾರ ಸ್ಥಳವು ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳ ನಡುವಿನ ಉತ್ತಮ ದ್ವಿಪಕ್ಷೀಯ ಸಂಬಂಧಗಳನ್ನು ಬೆಳೆಸುವ ತಮ್ಮ ಪರಸ್ಪರ ಬದ್ಧತೆಯನ್ನು ಎರಡೂ ಪಕ್ಷಗಳು ಪುನರುಚ್ಚರಿಸಿವೆ.

ಈ ಭೇಟಿಯ ಸಂದರ್ಭದಲ್ಲಿ, ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಪರಿಸ್ಥಿತಿಗಳ ಕುರಿತು, ವಿಶೇಷವಾಗಿ ಯುದ್ಧ, ರಾಜಕೀಯ ಉದ್ವಿಗ್ನತೆ ಮತ್ತು ಸಂಕೀರ್ಣ ಮಾನವೀಯ ಪರಿಸ್ಥಿತಿಗಳಿಂದ ಬಳಲುತ್ತಿರುವ ದೇಶಗಳ ಬಗ್ಗೆ, ಹಾಗೆಯೇ ಶಾಂತಿಗಾಗಿ ನಿರಂತರವಾಗಿ ಕಾರ್ಯನಿರ್ವಹಿಸುವ ಅಗತ್ಯದ ಕುರಿತು ಪರಸ್ಪರ ಅಭಿಪ್ರಾಯ ವಿನಿಮಯ ನಡೆಯಿತು.

ಪ್ರತ್ಯೇಕವಾಗಿ, ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿ ತಿಳಿಸಿದಂತೆ, ಯುದ್ಧದಿಂದ ಸಂಕಷ್ಟ ಅನುಭವಿಸುತ್ತಿರುವ ಕೆಲವು ಆಫ್ರಿಕಾ ಮತ್ತು ಮಧ್ಯಪ್ರಾಚ್ಯದ ದೇಶಗಳಾದ ಲೆಬನಾನ್ ಮತ್ತು ಇರಾನ್ ಕುರಿತು ಸಹ ಚರ್ಚೆ ನಡೆಯಿತು.

ಇತ್ತೀಚೆಗೆ ಅಮೆರಿಕದೊಂದಿಗೆ ಹೆಚ್ಚಿದ ಉದ್ವಿಗ್ನತೆಯನ್ನು ಅನುಭವಿಸುತ್ತಿರುವ ಕ್ಯೂಬಾ ದೇಶದ ವಿಷಯವೂ ಅವರ ಮಾತುಕತೆಯಲ್ಲಿ ಪ್ರಸ್ತಾಪಿಸಲಾಯಿತು.

07 ಮೇ 2026, 18:42