ಜಗದ್ಗುರು XIVನೇ ಲಿಯೋರವರು ಆಗಸ್ಟ್ 22ರಂದು ಸ್ಯಾನ್ ಮರಿನೋ ಗಣರಾಜ್ಯಗೆ ಭೇಟಿ ನೀಡಲಿದ್ದಾರೆ.
ವ್ಯಾಟಿಕನ್ ವರದಿ
ಜಗದ್ಗುರು XIVನೇ ಲಿಯೋರವರು ಆಗಸ್ಟ್ 22ರ ಶನಿವಾರ ಬೆಳಿಗ್ಗೆ ಸ್ಯಾನ್ ಮರಿನೋ ಗಣರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದು ಮೇ 28ರ ಗುರುವಾರ ಪಾಪಲ್ ಹೌಸ್‌ಹೋಲ್ಡ್‌ನ ಪ್ರಿಫೆಕ್ಚರ್ ಪ್ರಕಟಿಸಿದೆ.
ಮುಂದಿನ ಕೆಲವು ತಿಂಗಳಲ್ಲಿ ಜಗದ್ಗುರು ಲಿಯೋರವರು ಇಟಲಿಯ ವಿವಿಧ ಭಾಗಗಳಿಗೆ ಹಲವು ಧರ್ಮಾಧ್ಯಕ್ಷೀಯ ದಿನದ ಭೇಟಿಗಳನ್ನು ಕೈಗೊಳ್ಳಲಿದ್ದಾರೆ. ಅದರ ಭಾಗವಾಗಿ, ಉತ್ತರ ಇಟಲಿಯ ಎಮಿಲಿಯಾ-ರೊಮಾಗ್ನಾ ಪ್ರದೇಶದ ರಿಮಿನಿ ನಗರದಲ್ಲಿ ನಡೆಯಲಿರುವ “ಜನಾಂಗಗಳ ನಡುವಿನ ಸ್ನೇಹದ 47ನೇ ಸಭೆ”ಯಲ್ಲಿ ಭಾಗವಹಿಸಲು ಅವರು ಆಗಸ್ಟ್ 22ರಂದು ಭೇಟಿ ನೀಡಲಿದ್ದಾರೆ.
ಆದ್ದರಿಂದ, ಜಗದ್ಗುರುಗಳು ಮಧ್ಯಾಹ್ನ ರಿಮಿನಿಗೆ ತೆರಳುವ ಮೊದಲು ಬೆಳಿಗ್ಗೆ ಸಾನ್ ಮರಿನೊದಲ್ಲಿ ತಂಗಲಿದ್ದಾರೆ.
ಪಾಪಲ್ ಹೌಸ್‌ಹೋಲ್ಡ್‌ನ ಪ್ರಿಫೆಕ್ಚರ್ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಸಾನ್ ಮರಿನೊ ಗಣರಾಜ್ಯದ ಹಿಂದಿನ ಕ್ಯಾಪ್ಟನ್ಸ್ ರೀಜೆಂಟ್‌ಗಳು ಅಂದರೆ ಆ ರಾಷ್ಟ್ರದ ಮುಖ್ಯಸ್ಥರಾದ ಮ್ಯಾಟಿಯೊ ರೊಸ್ಸಿ ಮತ್ತು ಲೊರೆಂಜೊ ಬುಗ್ಲಿ ನೀಡಿದ ಆಹ್ವಾನವನ್ನು ಜಗದ್ಗುರುಗಳು ಸ್ವೀಕರಿಸಿದ್ದಾರೆ.
