ಹುಡುಕಿ

ಕ್ರಾಮಾಟೋರ್ಸ್ಕ್‌ನಲ್ಲಿ ರಷ್ಯಾದ ಮಿಲಿಟರಿ ಮುಷ್ಕರ ಕ್ರಾಮಾಟೋರ್ಸ್ಕ್‌ನಲ್ಲಿ ರಷ್ಯಾದ ಮಿಲಿಟರಿ ಮುಷ್ಕರ 

ಜಗದ್ಗುರು XIVನೇ ಲಿಯೋರವರು ಉಕ್ರೇನ್‌ನಲ್ಲಿ ಇತ್ತೀಚೆಗೆ ತೀವ್ರಗೊಂಡ ದಾಳಿಗಳನ್ನು ಖಂಡಿಸಿದರು.

ತಮ್ಮ ಬುಧವಾರದ ಸಾರ್ವಜನಿಕ ಭೇಟಿಯ ಸಂದರ್ಭದಲ್ಲಿ, ಉಕ್ರೇನ್‌ ಇತ್ತೀಚೆಗೆ ನಡೆದ ರಷ್ಯಾದ ದಾಳಿಗಳ ಬಳಿಕ ಜಗದ್ಗುರು XIVನೇ ಲಿಯೋರವರು ಶಾಂತಿಗಾಗಿ ಮನವಿ ಮಾಡಿದರು. ಯುದ್ಧವು ಸಮಸ್ಯೆಗಳಿಗೆ ಪರಿಹಾರ ನೀಡುವುದಿಲ್ಲ,ಬದಲಾಗಿ ಅವುಗಳನ್ನು ಇನ್ನಷ್ಟು ಗಂಭೀರಗೊಳಿಸುತ್ತದೆ ಎಂದು ಅವರು ಒತ್ತಿಹೇಳಿದರು. “ಕ್ಷಿಪಣಿಗಳು ಮತ್ತು ಡ್ರೋನ್‌ಗಳು ಎಲ್ಲೆಲ್ಲಿ ಬೀಳುತ್ತವೆಯೋ, ಅಲ್ಲಿ ಭರವಸೆಗಳೂ ಕುಸಿಯುತ್ತವೆ ಮನೆಗಳು ಮತ್ತು ಆರಾಧನಾ ಮಂದಿರಗಳು ನಾಶವಾಗುತ್ತವೆ, ಹಾಗೂ ನಿರಪರಾಧ ಜೀವಗಳು ಚೂರುಚೂರಾಗುತ್ತವೆ” ಎಂದು ಅವರು ಹೇಳಿದರು.

ವ್ಯಾಟಿಕನ್ ವರದಿ

“ಇತ್ತೀಚಿನ ದಿನಗಳಲ್ಲಿ ತೀವ್ರಗೊಂಡಿರುವ ಉಕ್ರೇನ್ ಯುದ್ಧವನ್ನು ನಾನು ಆತಂಕದಿಂದ ಗಮನಿಸುತ್ತಿದ್ದೇನೆ. ಇತ್ತೀಚಿನ ದಾಳಿಗಳಿಂದ, ವಿಶೇಷವಾಗಿ ನಾಗರಿಕರ ಮೇಲೆ ನಡೆದ ದಾಳಿಗಳಿಂದ ನೋವು ಅನುಭವಿಸುತ್ತಿರುವ ಎಲ್ಲರಿಗೂ ನನ್ನ ಆತ್ಮೀಯ ಸಮೀಪತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ.”

ಮೇ 27ರಂದು ನಡೆದ ಬುಧವಾರದ ಸಾರ್ವಜನಿಕ ಭೇಟಿಯ ಅಂತ್ಯದಲ್ಲಿ, ಉಕ್ರೇನ್ ಮೇಲೆ ರಷ್ಯಾ ನಡೆಸಿದ ಹೊಸ ದಾಳಿಗಳ ಬಳಿಕ ಜಗದ್ಗುರು XIVನೇ ಲಿಯೋರವರು ಈ ಭರವಸೆಯ ಮಾತುಗಳನ್ನು ಹೇಳಿದರು.

ಯುದ್ಧ “ಸಮಸ್ಯೆಗಳಿಗೆ ಪರಿಹಾರ ನೀಡುವುದಿಲ್ಲ ಬದಲಾಗಿ ಅವುಗಳನ್ನು ಇನ್ನಷ್ಟು ಗಂಭೀರಗೊಳಿಸುತ್ತದೆ. ಅದು ಭದ್ರತೆಯನ್ನು ನಿರ್ಮಿಸುವುದಿಲ್ಲ, ಬದಲಿಗೆ ನೋವು ಮತ್ತು ದ್ವೇಷವನ್ನು ಹೆಚ್ಚಿಸುತ್ತದೆ.”

“ಕ್ಷಿಪಣಿಗಳು ಮತ್ತು ಡ್ರೋನ್‌ಗಳು ಎಲ್ಲೆಲ್ಲಿ ಬೀಳುತ್ತವೆಯೋ, ಅಲ್ಲಿ ಭರವಸೆಗಳೂ ಕುಸಿಯುತ್ತವೆ ಮನೆಗಳು ಮತ್ತು ಆರಾಧನಾ ಮಂದಿರಗಳು ನಾಶವಾಗುತ್ತವೆ, ಹಾಗೂ ನಿರಪರಾಧ ಜೀವಗಳು ಚೂರುಚೂರಾಗುತ್ತವೆ,” ಎಂದು ಅವರು ಹೇಳಿದರು. ಯುದ್ಧದಿಂದ ಗಾಯಗೊಂಡಿರುವ ಎಲ್ಲಾ ಜನಾಂಗಗಳನ್ನು ಶಾಂತಿಯ ರಾಣಿಯಾದ ಕನ್ಯಾ ಮರಿಯಮ್ಮನ ರಕ್ಷಣೆಗೆ ಅವರು ಒಪ್ಪಿಸಿದರು.

ಲೆಬನಾನ್‌ನ ವಿಶ್ವಾಸಿಗಳಿಗೆ ಧೈರ್ಯ ಮತ್ತು ನಂಬಿಕೆಯ ಮಾತುಗಳು

ಲೆಬನಾನ್ ಮೇಲೂ ಹೊಸ ದಾಳಿಗಳು ಮುಂದುವರಿಯುತ್ತಿರುವ ಸಂದರ್ಭದಲ್ಲಿ, ಸಾರ್ವಜನಿಕ ಭೇಟಿಯಲ್ಲಿ ಅರೇಬಿಕ್ ಮತ್ತು ಫ್ರೆಂಚ್ ಭಾಷಿಕ ವಿಶ್ವಾಸಿಗಳನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರುಗಳು, ಲೆಬನಾನ್ ಯಾತ್ರಿಕರಿಗೆ ವಿಶೇಷ ಶುಭಾಶಯಗಳನ್ನು ತಿಳಿಸಿದರು.

“ನಮ್ಮ ತಾಯಿ ಮರಿಯಮ್ಮ,” ಎಂದು ಅವರು ಹೇಳಿದರು, “ಯಾವಾಗಲೂ ನಮ್ಮೊಂದಿಗಿದ್ದಾರೆ, ನಮಗಾಗಿ ಪ್ರಾರ್ಥಿಸುತ್ತಾರೆ ಮತ್ತು ತಾಯಿಯ ಪ್ರೀತಿಯಿಂದ ನಮ್ಮನ್ನು ಕಾಪಾಡಿಕೊಳ್ಳುತ್ತಾರೆ.”

ಪ್ರಭು, “ನಿಮ್ಮೆಲ್ಲರನ್ನು ಆಶೀರ್ವದಿಸಲಿ ಮತ್ತು ಪ್ರತಿಯೊಂದು ಕೆಡುಕಿನಿಂದ ಸದಾ ರಕ್ಷಿಸಲಿ!”ಎಂದು ಜಗದ್ಗುರು ಲಿಯೋರವರು ಹೇಳಿದರು,

ದೇವರನ್ನು ಪ್ರೀತಿಸಲು ಮಕ್ಕಳಿಗೆ ಬೋಧಿಸುವ ತಾಯಂದಿರಿಗೆ ಕೃತಜ್ಞತೆ

ಕೊನೆಗೆ, ಪೋಲ್ಯಾಂಡ್ ಯಾತ್ರಿಕರನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರು ಲಿಯೋರವರು, ನಿನ್ನೆ ಪೋಲ್ಯಾಂಡ್‌ನಲ್ಲಿ ತಾಯಂದಿರ ದಿನಾಚರಣೆ ನಡೆದಿದ್ದನ್ನು ಸ್ಮರಿಸಿ, ಎಲ್ಲಾ ತಾಯಂದಿರಿಗೆ ಧನ್ಯವಾದಗಳನ್ನು ಅರ್ಪಿಸಿದರು.

“ಜೀವನದ ವರವನ್ನು ಉದಾರವಾಗಿ ಹಂಚಿಕೊಂಡು, ತಮ್ಮ ಮಕ್ಕಳನ್ನು ಕಾಳಜಿಯಿಂದ ಬೆಳೆಸಿ, ದೇವರನ್ನೂ ನೆರೆಯವರನ್ನೂ ಪ್ರೀತಿಸಲು ಅವರಿಗೆ ಬೋಧಿಸಿದ ಎಲ್ಲಾ ತಾಯಂದಿರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ,” ಎಂದು ಅವರು ಹೇಳಿದರು.

ಪವಿತ್ರ ದೇವಮಾತೆಯವರಿಗಾಗಿ ಮಧ್ಯಸ್ಥಿಕೆ ವಹಿಸಲಿ, “ಯೇಸುವಿನೊಂದಿಗೆ ಶಾಶ್ವತ ಬಾಂಧವ್ಯ ಹೊಂದುವ ಕೃಪೆಯನ್ನು ಅವರು ಪಡೆಯಲಿ” ಎಂದು ಜಗದ್ಗುರುಗಳು ಪ್ರಾರ್ಥಿಸಿದರು.ಅವರ ಸಹಾಯದಿಂದ, ಪೋಲ್ಯಾಂಡ್ ಜನರನ್ನು ಉದ್ದೇಶಿಸಿ ಹೇಳಿದರು, “ಗರ್ಭಧಾರಣೆಯಿಂದ ಸಹಜ ಮರಣದವರೆಗೆ ಪ್ರತಿಯೊಬ್ಬ ಮಾನವ ಜೀವವನ್ನು ನಿಮ್ಮ ತಾಯ್ನಾಡಿನಲ್ಲಿ ರಕ್ಷಿಸಿ. ನಿಮ್ಮೆಲ್ಲರಿಗೂ ನನ್ನ ಆಶೀರ್ವಾದ!”ಎಂದರು.

27 ಮೇ 2026, 16:28