ಹುಡುಕಿ

ಮಂಗಳವಾರ, ಮೇ 19ರಂದು ಜಗದ್ಗುರು XIVನೇ ಲಿಯೋರವರು ವ್ಯಾಟಿಕನ್ ವೀಕ್ಷಣಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ. ಮಂಗಳವಾರ, ಮೇ 19ರಂದು ಜಗದ್ಗುರು XIVನೇ ಲಿಯೋರವರು ವ್ಯಾಟಿಕನ್ ವೀಕ್ಷಣಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ.  (ANSA)

ಜಗದ್ಗುರು XIVನೇ ಲಿಯೋರವರು ವ್ಯಾಟಿಕನ್ ವೀಕ್ಷಣಾಲಯಕ್ಕೆ ಭೇಟಿ ನೀಡಿದರು.

ಮಂಗಳವಾರ, ಮೇ 19ರಂದು, ಜಗದ್ಗುರು XIVನೇ ಲಿಯೋರವರು ಕಾಸ್ಟೆಲ್ ಗಾಂಡೋಲ್ಫೋದಲ್ಲಿರುವ ವ್ಯಾಟಿಕನ್ ವೀಕ್ಷಣಾಲಯಕ್ಕೆ ಭೇಟಿ ನೀಡಿ, ಅಲ್ಲಿ ಹಾಜರಿದ್ದ ಧಾರ್ಮಿಕರು, ಕ್ರೈಸ್ತರು ಹಾಗೂ ವೈಜ್ಞಾನಿಕ ಸಿಬ್ಬಂದಿಯನ್ನು ಅಭಿನಂದಿಸಿದರು.

ವ್ಯಾಟಿಕನ್ ವರದಿ

ಮೇ 19ರ ಮಂಗಳವಾರ ಮಧ್ಯಾಹ್ನ, ಜಗದ್ಗುರು XIVನೇ ಲಿಯೋರವರು ರೋಮ್ ನಗರದ ಹೊರವಲಯದಲ್ಲಿರುವ ಕಾಸ್ಟೆಲ್ ಗಾಂಡೋಲ್ಫೋದಲ್ಲಿನ ವ್ಯಾಟಿಕನ್ ವೀಕ್ಷಣಾಲಯಕ್ಕೆ ಭೇಟಿ ನೀಡಿದರು.

ಇದು ಜಗದ್ಗುರುಗಳ ಮೊದಲ ಭೇಟಿಯಲ್ಲ, 2025ರ ಜುಲೈ 20ರಂದು ಚಂದ್ರನಿಳಿಯುವಿಕೆಯ 56ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅವರು ಇದೇ ವೀಕ್ಷಣಾಲಯಕ್ಕೆ ಭೇಟಿ ನೀಡಿದ್ದರು.

ಈ ಖಗೋಳ ವೀಕ್ಷಣಾಲಯವು ಕಾಸ್ಟೆಲ್ ಗಾಂಡೋಲ್ಫೋದಲ್ಲಿ ಇದೆ. ರೋಮಿನ ಸಮೀಪದ ಈ ಪಟ್ಟಣದಲ್ಲಿ ಜಗದ್ಗುರುಗಳು ಸಾಮಾನ್ಯವಾಗಿ ಮಾಡುವಂತೆ, ಮಂಗಳವಾರ ತಮ್ಮ ಕೆಲಸ ಮತ್ತು ವಿಶ್ರಾಂತಿಯನ್ನು ಕಳೆದರು.

ಜಗದ್ಗುರುಗಳನ್ನು ವ್ಯಾಟಿಕನ್ ನಗರ ರಾಜ್ಯದ ಗವರ್ನರೇಟ್‌ನ ಅಧ್ಯಕ್ಷೆ ಸಿಸ್ಟರ್ ರಫಾಯೆಲ್ಲಾ ಪೆಟ್ರಿನಿ ರವರು, ಪ್ರಧಾನ ಕಾರ್ಯದರ್ಶಿಗಳಾದ ಆರ್ಚ್‌ಬಿಷಪ್ ಎಮಿಲಿಯೊ ನಪ್ಪಾ ಮತ್ತು ಜ್ಯೂಸೆಪ್ಪೆ ಪುಗ್ಲಿಸಿ-ಅಲಿಬ್ರಾಂದಿರವರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಇತರರೊಂದಿಗೆ ವೀಕ್ಷಣಾಲಯದ ನಿರ್ದೇಶಕರಾದ ಜೆಸುಯಿಟ್ ಗುರುಗಳು ರಿಚರ್ಡ್ ಆಂಥನಿ ಡಿ’ಸೂಝಾ ಹಾಗೂ ಅವರ ಪೂರ್ವಾಧಿಕಾರಿ ಮತ್ತು ಪ್ರಸ್ತುತ ವ್ಯಾಟಿಕನ್ ವೀಕ್ಷಣಾಲಯ ಪ್ರತಿಷ್ಠಾನದ ಅಧ್ಯಕ್ಷರಾಗಿರುವ ಜೆಸುಯಿಟ್ ಬ್ರದರ್ ಗೈ ಕಾಂಸೊಲ್ಮಾನ್ಯೊ ಕೂಡ ಉಪಸ್ಥಿತರಿದ್ದರು.

ನಂತರ, ವೀಕ್ಷಣಾಲಯದ ಪ್ರಾರ್ಥನಾ ಮಂದಿರದಲ್ಲಿ ಸ್ವಲ್ಪ ಸಮಯ ಪ್ರಾರ್ಥನೆ ಸಲ್ಲಿಸಿದ ಜಗದ್ಗುರುಗಳು, ಅಲ್ಲಿನ ಧಾರ್ಮಿಕರು, ವಿಜ್ಞಾನಿಗಳು ಮತ್ತು ಲೌಕಿಕ ಸಿಬ್ಬಂದಿಯನ್ನು ಭೇಟಿ ಮಾಡಿ ಶುಭಾಶಯ ಕೋರಿದರು.

20 ಮೇ 2026, 21:03